ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಸುಶೀಲೇಂದ್ರ | ಚರಣವಾರಿಜ ಯುಗ್ಮ ಸ್ಮರಿಸುವ ನರರು ಶ್ರೀಹರಿದಾಸರು ಪ ಹರಿವರ ಸುಮಚಾಬ್ಧಿ | ಹರಿಣಾಂಕರೆನಿಸಿದ ವರಸುವೃತೀಂದ್ರರ ತೀರ್ಥರ ಕರಕಮಲಜ ಅ.ಪ ಮಾಸ ತ್ರಯದಿ ಸಡಗರದಲಿ ಮಹ ಸಭೆ ನಿರ್ಮಿಸಿ ಪೊಡವಿಯೊಳಿದ್ದ ಭೂಸರರಾಜ್ಞ ಪತ್ರ ಬರಮಾಡಿ ವಿದ್ವಾಂಸರ ಒಡಗೂಡಿ | ಮಧ್ವಾಗಮನವನು ನೋಡಿ ಬೆಲೆಯುಳ್ಳವೆಗ್ಗಳ ಒಡವೆ ಉಡುಪಗಳನು ಕರುಣಿಸಿ ಮೃಷ್ಟಾನ್ನ ದ್ವಿಜರಿಗೆ ಕಡು ಸುಪ್ರೇಮದಿ ಸಲಿಸಿ | ಮುದ ಬಡಿಸಿ ಜಡಕುಮಾಯ್ಗಳ | ಗಡಣ ಜಡಧಿಗೆ ವಡೆಯ ತಾನೆನಿಸಿ ಕ್ರೋಢ ಜಾಸ್ಥಿತ | ಒಡೆಯ ಶ್ರೀಗುರು ರಾಘವೇಂದ್ರರ ಅಡಿಗಳಾಬ್ಜಕಾ ರಡಿಯಂತೊಪ್ಪುತ | ಬಿಡದೆ ಸಂತತ ಧೃಢದಿ ಸೇವಿಸಿ ಜಡಜ ಜಾಂಡದಿ ಮೆರೆದ ಅಸ್ಮದ್ 1 ತರಣಿ ಕುಲೇಂದ್ರನ ಕರುಣವೆಷ್ಟಿವರೊಳು ಅರುಹಲಾರೆ ವರಕಾಪ್ಯಾಸನ ಪುರಕೆ ಎರಡಾರು ಯತಿಗಳ ವತಿಯಿಂದ ತಮ್ಮಯ ಶಿಷ್ಯ ತತಿಯಿಂದ ಬಹುವಿಧ ಬಿರುದಾವಳಿಯಿಂದ ತೆರಳಿ ಶಶಿರವಿವರ ಸುವಾದ್ಯಧ್ವಾನ ಮೊಳಗಿಸುತ ‌ಘನ ಭಕ್ತಿ ಪರವಶರಾಗಿ ಸುರಚಿರ ಕನಕಮಣಿ ಧನ ತನುಮನ ತ್ವರಿತ ತೃಣ ಬಗೆಯ ದೇವಕಿ ತರಳ ರುಕ್ಮಿಣಿ ವರ ಮುರಾಂತಕÀ ಚರಣಗರ್ಪಿಸುತ | ಆನಂದಪಡುತ ಸರ್ವಮುನಿ ಜನಗಳಿಗೆ ಬಲು ಉಪಚರಿಸಿ | ಮನ್ನಣೆ ಧರಿಸಿ ಹರುಷದಿ ವರ ಸುಧೀಂದ್ರರ ಕರಜರನು ನೆರೆಸ್ಥಾಪಿಸಿ ಆಶ್ಚÀರ್ಯ ಚರಿತ 2 ಪತಿ ಶೃತಿ ಶಾಸ್ತ್ರಾರ್ಥ ಚತುರ ತನದಿ ಪಡೆದು ವಿತತ ಮಹಿಮನಾದ ಪತಿತ ಪಾವನ ಶಾಮಸುಂದರನ ಸ್ತುತಿಸುತಲಯ ಚಿಂತನೆ ಗೈಯುತ ಶ್ರೀಯುತ ಸಂಸ್ಥಾನಮತಿ ವಿಶಾರದರಾದವರ ಸುವೃತೀಂದ್ರ ತೀರ್ಥರಿಗೆ ಹಿತದಿಂದ ಒಪ್ಪಿಸಿ | ಯತಿ ಧೀರೇಂದ್ರರ ಚಾರುಸ್ಥಳದೊಳಗೆ ತನುವಿತ್ತು | ಹರಿಪುರಪಥವ ಪಿಡಿದೈದಿದರು ಚನ್ನಾಗಿ | ಸೇವಿಪ ಜನರಿಗೆ ಅತಿದಯದಿ ಮನೋರಥವ ನೀಡುತ ಸತತ ಮಾಣದೆ ಪರಮ ಭಕುತಿಲಿ ಪೃಥ್ವಿ ಸುರಕರ ಶತಪತ್ರಗಳಿಂದ ನುತಿಸಿಕೊಳುತಲರ್ಚನೆಗೊಂಬ 3
--------------
ಶಾಮಸುಂದರ ವಿಠಲ
ಭೀಮಾ ಭವಭಯಕತಿದೂರಾ ಭೀಮಾಶಂಕರನವತಾರಾ |ಭೀಮಾತೀರದಲಿಹ ವಾಯುಕುಮಾರಾ ಸಮರಂಗಣಧೀರಾ 1 ಮಾಯಾ ಮಾಯಾ ಪಾಶದ ಸಂಗಮವನು ಬಿಟ್ಟಾ |ಲಂಕಾಪುರಿ ಸುಟ್ಟಾ 2 ಶರಣಾಗತ ಭಕ್ತರ ಕಾವಾ | ಶರಣ ಜನರಂತರ್ಭಾವಾ | ಶರಣಾ ಬ್ರಹ್ಮಾದಿಗಳಿಗೆ ಮಹದೇವಾ ಸಂಜೀವನ ತಾವಾ 3 ಕರ್ತಾ ನೆಲವಿಗಿ ಪುರದೊಳಗೆ | ಕರ್ತಾ ರಾಮರ ಸ್ಥಳದೊಳಗೆ | ಕರ್ತಾನುಷ್ಠಾನಿಕ ಸೇವಕರಿಗೆ | ಭಾವನ ಇದ್ಧಾಂಗೆ 4 ರಾಮಾ ಲಕ್ಷ್ಮಣನ ಬಂಧೂ | ರಾಮನ ಸೇವಕನೆಂದೂ |ರಾಮಾಶಂಕರ ಭೇದಿಲ್ಲೆಂದೂ | ತಿಳಿದವ ಸುಖಸಿಂಧೂ 5
--------------
ಭೀಮಾಶಂಕರ
ಶ್ರೀ ಶೇಷ ಚಂದ್ರಿಕಾರಾಯರ ಸಂಕ್ಷಿಪ್ತ ಚರಿತ್ರೆ (ವಾರ್ಧಿಕ ಷಟ್ಪದಿ) ರಘುನಾಥರಂ ಸೇವಿಸೀ |ರಘುನಾಥ ತೀರ್ಥರಂ ಮಿಗಿಲಾಗಿ ಸೇವಿಸುವಅಘಗಳನು ನೀಗಿ ಶ್ರೀ ರಘುವರನ ಪ್ರೀತಿಯನುಮಿಗೆ ಪೊಂದಿ ಭವದಾಟಿ ನಗಧರನ ಲೋಕದೊಳು ಬಗೆ ಬಗೆಯ ಸುಖದಿ ಬಾಳ್ವ ಪ ಏಕಮೇವನ ಚರಣ | ತೋಕರೆಂದೆನಿಸಿ ಸಾತ್ವೀಕರೆನಿಪ ತಾಯ್ತಂದೆಗಾಕುವರನೆನಿಸುತಏಕಋಷಿ ಶೌನಕ ಸುಗೋತ್ರದೊಳುವೆಂಕಟವರಮೃಗಾಭಿದನು ಎನಿಸೀ ||ನೂಕಿ ಪಂಚಾಬ್ದಗಳನಾ ಕುವರಗಾಗುಪನಯನಕೈಗೊಂಡು ಗುರು ಚರಣನೇಕ ವಿಧ ಸೇವಿಸುತವಾಕಾದಿ ಶಾಸ್ತ್ರಗಳ ಸಾಕಷ್ಟು ಅಭ್ಯಸಿಸಿ ಸ್ವೀಕರಿಸಿ ದ್ವಿತೀಯಾಶ್ರಮಾ 1 ಅನುಜ ಅಂಭ್ರಣಿಯ ರಮಣಪದಅಂಭುಜಗಳಂ ಭಜಿಸಿ ಸಂಭ್ರಮದಿ ಸತಿವೆರಸಿ ಉಂಬುಡುವ ಸರ್ವವೆಲ್ಲ |ಬಿಂಬನಲಿ ಅನ್ವಯಿಸಿ ಇಂಬುಗೊಂಡವರಾಗಿಸಂಭ್ರಮದ ಸಂತಾನದಂಬಲನೆ ತಾ ತೊರೆದುಹಂಬಲಿಸಿ ಹರಿಪಾದ ಗುಂಭದಿಂದಲಿ ಭಜಿಸಿ ಇಂಬಿಟ್ಟ ಸನ್ಯಾಸದೀ 2 ಹತ್ತು ಮೂರ್ಮತ್ತೈದು ವತ್ಸರದಿ ವಿಠಲ ಪದವರ್ತಿ ಲಕುಮಿನರೆಯಣ ತೀರ್ಥರಿಂ ಸನ್ಯಾಸದುತ್ತ ಮಾಶ್ರಮ ಪೊಂದಿ ಭೃತ್ಯರಿಗೆ ಶ್ರೀಮಧ್ವ ಶಾಸ್ತ್ರಗಳ ಬಿತ್ತರಿಸುತಾ |ಮತ್ತೆ ಬದರಿಯ ಸೇತು ಉತ್ತಮ ಕ್ಷೇತ್ರ ತ್ರೈರಾವರ್ತಿ ಸಂಚರಿಸಿ ಬಲು ಮತ್ತ ಮಾಯ್ಗಳನಳಿದುಕೃತ್ತಿ ವಾಸನ ತಾತ ಉತ್ತಮೋತ್ತಮನೆಂದು ವತ್ತಿ ಪೇಳ್ದರು ಸುಜನಕೇ 3 ಶೇಷನಾವೇಷದಿಂ ವ್ಯಾಸಾಭಿದಾನ ಸ ನ್ಯಾಸಿ ಎನಿಸುತಲಿ ದೀನೇಶನಂಶಜರಿಂದವಾಸಿಸುತ ಹಂಪೆಯಲಿ ಲೇಸು ಸುತ್ಸೂತ್ರಗಳ ಭಾಷ್ಯಾವ್ಯಾಖ್ಯಾ ಚಂದ್ರಿಕಾವ್ಯಾಸ ತ್ರಯಗಳು ಎಂದು ಭಾಸುರದ ಕೀರ್ತಿಯಲಿಕಾಶಿ ಗಧದರ ಮಿಶ್ರ ಏಸು ಮಾಯ್ಗಳ ಜಯಕೆಲೇಸು ಕಾರಣವೆನಿಪ ಆಸಿ ಗ್ರಂಥಗಳ್ರಚನೆ ಬೇಸರದೆ ನೆಡೆಯುತಿರಲೂ 4 ವರಶಿಷ್ಯರಿಂವರೆಸಿ ಇರುತಿರಲು ದಿನ ಒಂದುಅರೆವಾಸಿಯಾದಂಥವರ ಚಂದ್ರಿಕಾಗ್ರಂಥಎರಡು ಅಧ್ಯಾಯಗಳು ಪೂರಣವು ಯಾರಿಂದ ಒರೆವುದೆಂದೆನೆ ಪ್ರಾರ್ಥಿಸೀ ||ವರನರರ ಸಲಹುದಕೆ ಹರಿಯಾಜ್ಞೆಯಿಂ ಮತ್ತೆಎರಡು ಮೂರ್ಜನ್ಮಗಳ ಧರಿಸುವೆವು ನಾವು ಎರಡೈ-ದರಿಲ್ಲಿಂದ ನರಜನ್ಮದೊಳು ಗ್ರಂಥ ಪೂರಣವು ಆಹುದೆಂದರು 5 ಉಕ್ತಿಗನು ರಘುನಾಥ ತೀರ್ಥರೆಂದುರೆ ಮರೆದುಗ್ರಂಥ ಶೇಷವ ರಚಿಸಿ ತತ್ತರಭಿಧರು ಎನಿಸಿತತ್ವ ಕಣಿಕಾಖ್ಯವನು ತಂತ್ರಸಾರದ ವ್ಯಾಖ್ಯಮತ್ತಿತರ ಗ್ರಂಥಗಳನು ||ಬಿತ್ತರಿಸಿ ಹರಿಯನ್ನು ತೃಪ್ತಿಸುತ ಪೂರ್ವದಲಿಛಾತ್ರರಂ ಪಡೆದಂತೆ ಮತ್ತೆ ಈ ಜನ್ಮದಲಿಉತ್ತಮರು ಶಿಷ್ಯ ಸಂಪತ್ತಿನಿಂ ಮೆರೆದಿಹರು ತತ್ವಕೋವಿದರು 6 ತೈಜಸ ಪೇಳಿದ 7 ಮಹಿಷಿ ಕ್ಷೇತ್ರದೊಳುಸಿರಿ ಕೃಷ್ಣನಂ ನಿಲಿಸಿ ಹರಿರಥೋತ್ಸವ ಪೂಜೆವರುಷ ವರುಷದಿ ಗೈಯ್ಯೆವರ ಭೂಮಿ ಕಾಣೆ ಭೂಸುರರಿಗಿತ್ತಿಹರು ಅಯ್ಯಾ 8 ಆಷಾಢ ಸಿತ ತೃತಿಯ ಭಾಸಿಸುವ ಮಧ್ಯಾಹ್ನಕಾಶೀಗೇ ಮಿಗಿಲೆನಿಪ ತ್ರಿಮಕೂಟಗಾಗಮಿಸಿಭೂಸುರರಿಗೇ ತಮ್ಮ ಆಶ್ವಾಸ ತಿಳಿಸುತ್ತ ಲೇಸು ಸಂಗಮವೀಯತಾ ||ಶೇಷ ಚಂದ್ರಿಕಾಚಾರ್ಯ ಶ್ರೀಶನರ್ಚಿಸಿ ಕಾಯರಮೇಶ ಚರಣದಲೀಯ ಲೋಸುಗದಿ ಮನಮಾಡಿಆಸುಸತ್ತಿಥಿ ಚೌತಿ ಲೇಸೆನಿಸಿ ಉದಿಸುತಿರಲೀ ಶರೀರವನು ಅರ್ಪಿಸಿದರು 9 ಇವರ ವೃಂದಾವನವು ಅಶ್ವತ್ಥ ನರೆಯಣನಪವಿತರದ ಪದ ಧ್ರುವಕೆ ಬೀಳುವ ಸ್ಥಳದೊಳಗೆ ಸ್ಥಾಯವದು ಮಠಬಿರಿದುಗಳು ಅಶ್ವತ್ಥತರುಛಾಯವೇ ಛತ್ರಿಯೆನಿಸುತಿಹುದೂ ||ಕವೇರ ಕನ್ಯೆಯು ಕಪಿಲ ದಿವ ದೀವಟಿಗೆ ಸಮವುಇವರಿರುವ ಕ್ಷೇತ್ರವೇ ಪ್ರವರ ಗಯಪ್ರಯಾಗವಿಶ್ವೇಶ ಸನ್ನಿಧಿಯು ಇವರ ಗುಣ ಸ್ಥವನವೇಶಶ್ವದಾನಂದ ಸಂದೋಹವು 10 ವತ್ಸರವು ನೂರೆರಡು ಸತ್ಸಿದ್ದಿಗೇ ಪೊತ್ತಸತ್ಸರೀರವ ತ್ಯಜಿಸಿ ಮತ್ಸರಾದ್ವಿರಹಿತರುವತ್ಸಾರಿ ಸಿರಿಕೃಷ್ಣ ವತ್ಸರೆಂದೆನಿಸುತ್ತ ಸತ್ವ್ಸಭಾವದಿ ಮೆರೆಯುತಾ ||ಹೃತ್ಸರೋಜದಿ ಪವನ ಹೃತ್ಸರೂಜದಿ ಶಿರೀವತ್ಸಲಾಂಛನ ಗುರುಗೋವಿಂದ ವಿಠಲಪದಸತ್ಸರೋಜದ ಧ್ಯಾನ ಉತ್ಸುಕದಿ ಗೈದು ತನವತ್ಸರ್ಗ ಬೀಷ್ಟಗಳಗರೆವಾ 11
--------------
ಗುರುಗೋವಿಂದವಿಠಲರು