ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಕಾಶರೂಪಿ ವಿಠಲಾ ತೋಕನ್ನ ಸಲಹೋ ಪ ಅಕಳಂಕ ಚಾರಿತ್ರ | ನಿಖಿಲಾಗಮಸುವೇದ್ಯಪ್ರಕಟಿಸಿವನಲಿ ಜ್ಞಾನದಂಕುರವ ಹರಿಯೇ ಅ.ಪ. ಮಧ್ವಮತದಲಿ ದೀಕ್ಷೆ | ಶುದ್ಧ ಭಕುತಿ ಜ್ಞಾನಸಿದ್ದಿಸುವುದಿವನಲ್ಲಿ | ಮಧ್ವಾಂತರಾತ್ಮಾವಿದ್ಯೆಸಂಪದದಲ್ಲಿ | ಸ್ಪರ್ಧಿಸುವ ಮನಕಾಗಿಬುದ್ಧಿ ಪ್ರೇರಿಸು ಹರಿಯೆ ಸಿದ್ಧಮುನಿವಂದ್ಯಾ 1 ಕಾಮಾದಿ ಷಡ್ವೈರಿ | ಸ್ತೋಮವನೆ ಕಳೆಯುತ್ತನೇಮನಿಷ್ಠೆಯಲಿ ಮನ | ಕಾಮನೆಯ ಕೊಟ್ಟೂಪ್ರೇಮದಲಿ ಹರಿಗುರೂ | ಸ್ವಾಮಿ ಕಾರ್ಯವಗೈಸಿಕಾಮಿತಾರ್ಥದನಾಗೊ | ಕಾಮ ಪಿತ ಹರಿಯೇ 2 ಅಂಶದಲಿ ತನುವ್ಯಾಪ್ತಿ | ಸಾಂಶದೇವಾದಿಗಳುಸಂಸಾರ ನಿರ್ವಹಣೆ ಮಾಡಿಮಾಡಿಸುತಾಕಂಸಾರಿ ಪೂಜೆ ಎನೆ | ಶಂಸಿಸುತ ಯೋಗ್ಯರಲಿವಂಶ ಉದ್ಧರವೆಂಬ | ಅಂಶವನೆ ತಿಳಿಸೋ 3 ಕಾಕು ಜನಗಳ ಸಂಗ | ಓಕರಿಸುವಂತೆಸಗಿನೀಕೊಟ್ಟು ಸತ್ಸಂಗ | ಪ್ರಾಕ್ಕರ್ಮ ಕಳೆಯೋಲೌಕಿಕದಿ ಸತ್ಕೀರ್ತಿ | ನೀ ಕರುಣಿಸಿವನಲ್ಲಿಏಕಮೇವನೆ ಇದನೆ | ನಾ ಕೇಳ್ವೆ ಹರಿಯೇ 4 ಜೀವರಂತರ್ಯಾಮಿ | ಜೀವಕರ್ಮವವೆಸಗಿಆವಫಲ ದ್ವಂದ್ವಗಳ | ಜೀವಕರುಣಿಸುವನೇಭಾವುಕರ ಪಾಲಗುರು | ಗೋವಿಂದ ವಿಠ್ಠಲನೆಕಾವುದಿವನನು ಎಂಬ | ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ಪ್ರಹ್ಲಾದ ವರದ ವಿಠಲ | ಕಾಪಾಡೊ ಇವಳಾ ಪ ಆಹ್ಲಾದವನೆ ಕೊಟ್ಟು | ಸಂತೈಸೊ ಹರಿಯೇ ಅ.ಪ. ಮಣಿ | ಉಪದೇಶ ಬೇಡುವಳೋಬೋಧಿಸಿಹೆ ಅಂಕಿತವ | ಶೀದ ಪೊರೆ ಇವಳಾ 1 ಕಾಮ ಮದ ಮಾತ್ಸರ್ಯ | ಸ್ತೋಮವನೆ ಕಳೆದುಸತ್‍ಕಾಮಗಳ ಪೂರೈಸು | ಸೋಮಧರವಂದ್ಯಾ |ಕಾಮ ಜನಕನೆ ತಾರ | ತಮ್ಯವನೆ ತಿಳಿಸುತ್ತನೇಮದಿಂ ಭೇದಗಳ ಪ್ರೇಮದಲಿ ತಿಳಿಸೋ 2 ಭಕ್ತ ಭಕ್ತರ ಅಸದ್ | ಭಕ್ತಿ ಮಾಡಲಿ ಇವಳುಮುಕ್ತಿ ಮಾರ್ಗದ ಹಾದಿ | ಯುಕ್ತಿಯಲಿ ಅರಿತೂಗೋಪ ಗುರು ಗೋವಿಂದ | ವಿಠ್ಠಲನ ಕೀರ್ತಿಸುತೆಉತ್ತರಿಸಲೀ ಭವವ | ಉತ್ತಮೋತ್ತಮನೇ3
--------------
ಗುರುಗೋವಿಂದವಿಠಲರು
ರಾಜೀವದಳನೇತ್ರ ರಾಮಚಂದ್ರನೆ ಶುಭ- ನಾಮಧೇಯನೆ ನಿನಗಾನಮಿಸುವೆನು ಪ ರಾಮರಾಕ್ಷಸಕುಲ ಭಯಂಕರ ರಾಮದಶರಥ ಪುತ್ರನೆ ವರ ಸಾಮಗಾನ ವಿಲೋಲ ಶ್ರೀವರ ರಾಮ ಭರತ ಶತ್ರುಘ್ನ ಪಾಲಕ ಅ.ಪ ಸುರರೆಲ್ಲ ನೆರೆದು ಋಷಿವರರೆಲ್ಲ ಒಂದಾಗಿ ವರ ಕ್ಷೀರಾಂಬುಧಿಯ ಸಾರುತ ವೇಗದಿ ಪರಮಾತ್ಮ ನಿನ ಕಂಡು ಪರಿಪರಿ ಸ್ಮರಿಸುತ ನೆರೆದರು ದೇವ ಗಂಧರ್ವ ನಾರದರೆಲ್ಲ ಗರುಡ ಗಮನನೆ ಉರಗಶಯನನೆ ಪರಮ ಪುರುಷನೆ ಪುಣ್ಯಚರಿತನೆ ತ್ವರದಿ ಎಮ್ಮಯ ಮೊರೆಯ ಕೇಳೆಂದು ಭರದಿ ಪ್ರಾರ್ಥನೆ ಮಾಡುತಿಹರು 1 ಖೂಳ ದೈತ್ಯರು ನಮ್ಮ ಬಾಳಗೊಡರೊ ದೇವ ಭಾಳ ವ್ಯಾಕುಲರಾಗಿ ದು:ಖಿಪೆವು ಕೇಳಿ ತಡಮಾಡದೆ ಪಾಲಿಸಿ ಸಲಹಯ್ಯ ಶ್ರೀಲೋಲ ಶ್ರೀವರ ಶ್ರೀವತ್ಸಲಾಂಛನ ಶ್ರೀಶ ಶ್ರೀ ಭೂದೇವಿ ರಮಣನೆ ಮಾತುಳಾಂತಕ ಮದನಜನಕನೆ ವಾಸುದೇವನೆ ಭಜಿಪ ಭಕ್ತರ ಸೋಸಿನಲಿ ರಕ್ಷಿಸುತ ಪೊರೆಯುವೆ 2 ಭಕ್ತವತ್ಸಲ ಸ್ವಾಮಿ ಭಕ್ತರ ಸುರಧೇನು ಯುಕ್ತ ಮಾತುಗಳಾಡಿ ಸಂತಯಿಸಿ ಸತ್ಯ ಸಂಕಲ್ಪನು ಮತ್ತವರನು ಕಳುಹಿ ಸತ್ಯಸಂಧನ ದಶರಥನುದರದಿ ಪುಟ್ಟಿ ಮತ್ತೆ ವಿಶ್ವಾಮಿತ್ರ ಬರಲು ಅರ್ಥಿಯಲಿ ಯಾಗವನೆ ನಡೆಸಲು ಸುತ್ತಿ ಬರುವ ಸುರರನೆ ಸದೆದು ಮತ್ತೆ ಯಾಗ ನಿರ್ವಿಘ್ನ ಮಾಡಿದ 3 ಸೀತಾಸ್ವಯಂವರಕ್ಕಾಗಿ ಬರುತಿರಲಾಗವರು ಗೌತಮ ಸತಿಯ ಶಾಪಹರಿಸಿ ಪಾತಕಿ ತಾಟಕಿಯನು ಕೊಂದು ಹರುಷದಿ ನಿ- ರ್ಭೀತನಾಗಿ ಮಿಥಿಲಾಪುರಕೆ ಸೇರಲು ಬಂದು ಆತ ಲಕ್ಷ್ಮಣನೊಡನೆ ಶಿವಧನು ನೀತಿಯಿಂದೆತ್ತುತಲಿ ಸೀತೆಯು ಪ್ರೀತಿಯಲಿ ವನಮಾಲೆ ಹಾಕಲು ಆಕೆಯ ಕೈಪಿಡಿದ ರಾಮನೆ 4 ರಾಮಲಕ್ಷ್ಮಣ ಭರತ ಶತ್ರುಘ್ನರಿಗೆ ಲಗ್ನ ನೇಮದಿಂದಲಿ ಮಾಡಿ ಕಳುಹಲಾಗ ಸಾಮಜವರ ಅಯೋಧ್ಯಾಪುರದಿ ಭಕ್ತ- ಸ್ತೋಮವನೆರಹಿ ರಾಜ್ಯಾಭಿಷೇಕವ ನಡಸೆ ಆ ಮಹಾಮುನಿ ಸ್ತೋಮ ಸುರಗಣ ರಾಮನಿಗೆ ಪಟ್ಟವೆನುತ ಹರುಷಿಸೆ ಆ ಮಹಾಕೈಕೆ ವರವ ಬೇಡುತ ರಾಮನಿಗೆ ವನವಾಸವೆನಲು 5 ವನವನ ಚರಿಸುತ ಘನರಕ್ಕಸರ ಕೊಂದು ವನಜಾಕ್ಷಿ ಮಾಯಾಮೃಗವೆ ಬೇಡಲು ವನಮೃಗ ಬೆನ್ನಟ್ಟಿ ತರುವೆನೆನುತ ಪೋಗಿ ಬಣಗು ರಾವಣ ಸೀತಾಹರಣವ ಮಾಡಲು ಕುರುಹು ಕಾಣದೆ ಸೀತೆಯ ವನವನದಿ ಚರಿಸುವ ಸಮಯದಲಿ ಕಪಿ ವರರ ಸೈನ್ಯವ ಕಳುಹಿ ಮುದ್ರಿಕೆ ಇತ್ತು ಜನಕ ಜಾತೆಯ ನೋಡಿ ಬರಲು 6 ಕಡಲ ಕಟ್ಟುತ ಸೈನ್ಯ ನಡಿಸಿ ಯುದ್ಧವ ಮಾಡೆ ಬಿಡದೆ ರಾವಣ ಸಹಿತೆಲ್ಲರನು ಕೊಂದು ಕಡು ಭಕ್ತನಿಗೆ ಲಂಕಾಪುರದಲಿ ಪಟ್ಟವ ಕಟ್ಟಿ ಮಡದಿ ಸಹಿತ ಪುಷ್ಪಕವನೇರಿ ಬರುತಿರೆ ಸಡಗರದಿ ಹನುಮಂತ ಭರತಗೆ ಒಡೆಯ ಬರುತಿಹನೆಂದು ಪೇಳಲು ಕಡುಹರುಷದಿ ಅಯೋಧ್ಯೆಯನಾಳಿದ ಕಡಲೊಡೆಯ ಕಮಲನಾಭ ವಿಠ್ಠಲನೆ 7 ಬಂದ ಶ್ರೀರಾಮಚಂದ್ರ ಭಾಗವತರ ಕೂಡಿಇಂದಿರೆ ಜಾನಕಿ ಸೌಮಿತ್ರಿ ಸಹಿತದಿ
--------------
ನಿಡಗುರುಕಿ ಜೀವೂಬಾಯಿ