ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ದೇವ, ಗುರುಸ್ತುತಿ ಅವತಾರತ್ರಯ ಪ್ರಾಣಪತಿ ಕಾಯೊ ನೀ ಜಾಣ ಜಗತ್ರಾಣಾ ಕಾಣದೆ ನಿನ್ನ ಮಹಿಮೆ ಧ್ಯಾನಿಸದೆ ಮರುಳಾದೆ ಪ ಸೂತ್ರ ನಾಮಕ ನೀನು ಛತ್ರಪುರದೊಳು ನೆಲೆಶಿ ಶತ್ರು ಪುಂಜವ ನಿಮಿಷ ಮಾತ್ರದಲಿ ತುಳಿದಿ ಗಾತ್ರದಲಿ ನೀ ಲಾಲಿಸು ಪಾತ್ರನೆಂದೆನಿಸೆನ್ನ ಕೃತ್ರಿಮದ್ವಿಜ ಸ್ತೋತ್ರ ಪಾತ್ರ ಕೃಷ್ಣನ ದಾಸ 1 ಕಾಮನೃಷನು ಹಿಂದೆ ರಾಮನಾಜ್ಞವ ತರಿಸಿ ಆ ಮಹಾಸುರರೇ ಮಧಾಮವನು ಸಾರೆ ಈ ಮಹಿಯೊಳಗೆ ನಿಸ್ಸೀಮನೊಬ್ಬನೆ ಯೆಂದು ಭೂಮಿಯಲಿ ನಿನ್ನ ಗುಣ ಸ್ತೋಮವನು ತೋರಿಸಿದೆ 2 ಅವತಾರ ತ್ರಯಗಳಲಿ ಸ್ವವಶವ್ಯಾಪಿ ಲಕ್ಷ್ಮೀ - ಧವನ ಮನವರಿತು ನೀ ಅವತರಿಸಿದೆ ಯುವತಿ ವೇಷದಿ ಗೌರೀಧವನ ಮೋಹಸಿದಂಥ ಶ್ರೀವತ್ಸಾಂಕಿತನಾದ ಅವನಿಗೊಡೆಯನ ದಾಸ 3
--------------
ಸಿರಿವತ್ಸಾಂಕಿತರು
ಜಯಮಂಗಳಂ ಶುಭೋದಯ ಮಂಗಳಂ ಜಯ ಕಕುದ್ಗಿರಿ ಗಂಗಾಧರ ಲಿಂಗಗೆ ಪ ಜಡೆಯುಡುಪತಿಯು ಗಂಗೆಯೊಡಗೂಡ್ದ ಮಸ್ತಕಕೆ ಮಡುಹಿ ಮಾರನ ಭಸಿತದಾಳ್ದ ಪಣೆಗೆ ಪೆಡೆಯೆತ್ತಿ ಗಾನಗೈವಹಿ ಕುಂಡಲಂಗಳಿಗೆ ದೃಢಭಕತರಿಷ್ಟದಾಯಕ ಶಿವನಿಗೆ 1 ಸೋಮಸೂರ್ಯಾಗ್ನಿ ಲೋಚನೆಗೆ ವಿಷದಾಳಿ ಸುರ ಸ್ತೋಮವನು ಕಾಯ್ದ ಶೋಭನ ಕಂಠಕೆ ಭೀಮನಿಗೆ ಭಯಹರಗೆ ಪರಶುಮೃಗ ಹಸ್ತನಿಗೆ ಕಾಮಿತಾರ್ಥದ ವರಾಭಯ ಕರನಿಗೆ 2 ನಾಗಕಂಕಣಧರಗೆ ನಾಗೋತ್ತರೀಯನಿಗೆ ನಾಗಯಜ್ಞೋಪವೀತವ ತಾಳ್ದಗೆ ನಾಗಚರ್ಮಾಂಬರಗೆ ನಗರಾಜ ಚಾಪನಿಗೆ ಗಮನ ಬಾಣಗೆ ಶಿವನಿಗೆ 3 ಗಿರಿಜೆಗರ್ಧಾಂಗವನ್ನಿತ್ತ ಶುಭವಿಗ್ರಹಗೆ ವರ ವೃಷಭವನ್ನೇರಿ ಸಂಚರಿಪಗೆ ಬರೆದುಂಗುಟದಿ ಹೊಳೆದ ಚಕ್ರದಿಂ ದೈತ್ಯಕುಲ ಹರಣ ವರದಾಯಕಗೆ ಸರ್ವೆಶಗೆ 4 ತಿರುಪತಿಯ ವಾಸವನು ದೃಢಗೈದು ಕಕುದ್ಗಿರಿಯ ಪರಮ ಕ್ಷೇತ್ರದಿ ಮಹಿಮೆಗಳ ತೋರ್ಪಗೆ ವರದ ವೆಂಕಟಪತಿಗೆ ಗಂಗಾಧರೇಶ್ವರಗೆ ಶರಣಾಗತರ ಕಾಯ್ವ ಸಾಂಬಶಿವಗೆ 5
--------------
ತಿಮ್ಮಪ್ಪದಾಸರು
ಬಿಡೆನು ನಿನ್ನಯ ಪಾದವಾ ಮುಖ್ಯ ಪ್ರಾಣ ಬಿಡೆನು ನಿನ್ನ ಪಾದಾ ಕಡಲ ಹಾರಿದೆನೆಂಬ ಸಡಗರದಿಂದೆನ್ನ ಕಡೆಹಾಯಿಸದೆ ಬೇಗ ಪ. ಹದಿನಾಲ್ಕು ಲೋಕದೊಳು ವ್ಯಾಪಕವಾಗಿ ಮುದದಿಂದ ಹಂಸ ಮಂತ್ರವ ಜಪಿಸುತ ಮಧುವೈರಿಯನು ಒಲಿಸಿ ಕಡೆಗೆ ಅಜ- ಪದವನೈದುವಿ ಸುಖದಿ ವಿಧುಕಳಾಧರ ವಾಸವಾದ್ಯರ ಮುದದಿ ರಕ್ಷಿಸಿ ದೈತ್ಯ ಪುಂಜವ ವಿಬುಧ ಗಣಾರ್ಚಿತ 1 ಮತಿವಂತನಾದಮ್ಯಾಲೆ ತ್ವತ್ಪಾದವೇ ಗತಿಯೆಂದು ನಂಬಿಹೆನು ನೀ- ನಿತ್ತ ಶಕುತಿಯಿಂದ ಪೂಜೆಯನು ಮಾ- ಡುತ ನಿನ್ನ ಪ್ರತಿಮೆಯ ನಮಿಸುವೆನು ವಿತತ ಮಹಿಮನೆ ಪೂರ್ವಭವ ದುಷ್ಕøತಗಳೆನ್ನನು ಪತನಗೊಳಿಪದನತುಳ ನೀ ನೋಡುತ್ತ ಎನ್ನನು ಜತನಮಾಡದೆ ವಿತಥ ಮಾಳ್ಪರೆ 2 ಹಿಂದೆ ತ್ರೇತಾಯುಗದಿ ಈ ಧರಣಿಗೆ ಬಂದು ನೀ ಕಪಿರೂಪದಿ ಅರ- ವಿಂದ ಬಾಂಧವನನು ಸೇರಿದಿ ಇಂದ್ರ ನಂದನನಿಂಗೆ ರಾಜ್ಯವ ಇಂದಿರೇಶನ ದಯದಿ ಕೊಡಿಸಿ ಪು- ರಂದರಗೆ ವರವಿತ್ತ ಬಲದಶ ಕಂಧರನ ಜವದಿಂದ ಗೆಲಿದನೆ 3 ಭೀಮನನೆನಿಸಿ ಕೀಚಕರ ನಿ- ರ್ನಾಮ ಗೊಳಿಸಿ ಜಯಿಸಿ ಕಿಮ್ಮೀರ ಬಕಮಾಗಧರ ಸೀಳಿಸಿ ಸಾಮಗಾಯನ ಲೋಲಕೃಷ್ಣನ ಪ್ರೇಮ ರಸಪೂರ್ಣೈಕ ಪಾತ್ರನಿ- ರಾಮಯನೆ ಧೃತರಾಷ್ಟ್ರತನಯಸ್ತೋಮವನು ತರಿದಮಲರೂಪ 4 ಕಡೆಯಲಿ ಕಲಿಯುಗದಿ ನೀ ಯತಿಯಾಗಿ ಮೃಡನ ತರ್ಕವ ಖಂಡಿಸಿ ಜ್ಞಾನಾ ನಂದಕದಲಿ ಕೃಷ್ಣನ ಸ್ಥಾಪಿಸಿ ಮಾಯಿಗಳನ್ನು ಬಡಿದು ದೂರದಲೋಡಿಸಿ ಪೊಡವಿಗಧಿಪತಿ ಪಾವನಾತ್ಮಕ ಒಡೆಯ ಶೇಷಾಚಲನಿವಾಸನ ಮೆರದನೆ ತಡವ ಮಾಡದಲು 5
--------------
ತುಪಾಕಿ ವೆಂಕಟರಮಣಾಚಾರ್ಯ
ಶರಧಿ ಗಂ ಭೀರ ದಯಾಸಾರ ವಾರಿಜಾಕ್ಷ ಮುರಹರ ಸಖನಾಗಿಹ ಚಾರುಮಹಿಮ ನಿಟಿಲಾಂಬಕ ಪರಶಿವ ಪ ಸಿಂಧು ಮಥನದೊಳಗೆ ಕೈಲಾಸ ದಿಂದ ಬಂದನಿಳೆಗೆ ನಂದಿವಾಹನ ಗರಳವನೆಲ್ಲ ಭುಂಜಿಸಿ ಮಾರ 1 ವ್ಯೋಮಕೇಶ ದೇವಾ ಸುಜನರ ಸ್ತೋಮವನು ಕಾವಾ ಕಾಮಿತಾರ್ಥ ವರಗಳನಿತ್ತು ಸಲಹುವ ಸೋಮಶೇಖರ ಕರ್ಪೂರಧಲಾಂಗಾ 2 ಸುರನರೋರಗ ಪಾಲಾ ಸಜ್ಜನ ಪೊರೆವ ಪುಣ್ಯಶೀಲಾ ಗುರುವಿಮಲಾನಂದ ಭರಿತ ಕುಶಸ್ಥಳ ಪುರನಿವಾಸ ಶ್ರೀ ಮಹಾಂಗಿರೀಶ ಮಹಾರುದ್ರ 3
--------------
ಭಟಕಳ ಅಪ್ಪಯ್ಯ