ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

3ಕಾಯೇ ಕಮಲಾಲಯೇ ಮಧು ಮಥನ ಸತಿಯೆ ಪ ಕಾಯಜಾತನ ತಾಯೆನಮಿಸುವೆ ಕಾಯೆ ತ್ರಿಜಗಕೆ ತೋಯ ಜಾಂಬಕಿ ಅ.ಪ ತೋಯಜಾಸನ ಮುಖ್ಯ ತ್ರಿದಶ ನಿ ಕಾಯ ಸಂಶೇವಿತಳೆ ಬೇಡುವೆ ಹೇಯ ವಿಷಯವ ಮರಸಿ ಹರಿಪದ ತೋಯಜಕೆ ಮನವೆರಗುವಂದದಿ 1 ಘೋರತರ ಸಂಸಾರ ಶ್ರಮ ಪರಿ ಹಾರ ಮಾಳ್ಪ ಸಮೀರ ಸಮಯದಿ ಸಾರವನು ಸುಜನರಿಗೆ ಬೋಧಿಪ ಸೂರಿಗಳ ಸಹವಾಸ ಪಾಲಿಸಿ 2 ಭಾರ್ಗವಿಯೆ ಕಾಮಾದಿ ಷಡ್ರಿಪು ವರ್ಗವನು ಗೆಲುವದಕೆ ಗುರುಗಳ- ನು ಗ್ರಹಿಸಿ ಸುಜ್ಞಾನ ಭಕುತಿ ವೈ ರಾಗ್ಯ ವೆಂಬುವ ಭಾಗ್ಯ ಒದಗಿಸಿ 3 ರಾಮನರಸಿಯೆ ನಿಮ್ಮ ಶುಭಪದ ತಾಮರಸವನು ಬಿಡದೆ ಪೂಜಿಪ ಕಾಮಿನೀ ಜನ ಸ್ತೋಮಕನುದಿನ ಕಾಮಿತಾರ್ಥಗಳಿತ್ತು ಕರುಣದಿ 4 ಮಂಗಳಪ್ರದ ಕೃಷ್ಣವೇಣಿ ತ- ರಂಗ ಶೋಭಿತ ಕಾರ್ಪರಾಲಯ ವಿಹಂಗ ರಾಜ ತು ರಂಗ ಶ್ರೀ ನರಸಿಂಗ ನರಸಿಯೆ5
--------------
ಕಾರ್ಪರ ನರಹರಿದಾಸರು
ವಿಜಯರಾಯರ ಪಾದವ ನೀ ಮಾನವ ಪ ವೃಜಿನವೆಲ್ಲವ ಕಳೆದು ಕರುಣದಿ | ಅಜನನಯ್ಯನ ತೋರುವ ಅ.ಪ. ಜಗಕೆ ಹರಿ ಪರನೆಂದು ತಾ ಭುಜ ಯುಗಗಳೆತ್ತಿ ಸಾರಿದಾ || ಭೃಗು ಮುನಿ ಇವರೆಂದು ಭಾವಿಸಿ ಮಿಗೆ ಸುಭಕ್ತಿಲಿ ಸರ್ವದಾ 1 ವರಹಜಾ ತಟದಲ್ಲಿ ಚೀಕಲ | ಪರವಿಗ್ರಾಮದಿ ಜನಿಸಿದ || ಪರಿಪರಿಯಲನುಭವಿಸಿ ಬಡತನ ಭವ ವೈರಾಗ್ಯ ಧರಿಸಿದ 2 ಭಕುತಿ ಪೂರ್ವಕವಾಗಿ ಬಿಡದಲೆ | ಸಕಲಕ್ಷೇತ್ರವ ಚಲಿಸಿದಾ || ಮುಕುತಿ ಸುಖದಾತಾರನಾದ | ಲಕುಮಿ ರಮಣನ ತುತಿಸಿದಾ 3 ತಾ ಸುಸ್ವಪ್ನದೊಳೊಂದು ದಿನ ಶ್ರೀ ವ್ಯಾಸ ಕಾಶಿಗೆ ತೆರಳಿದಾ || ವಾಸುದೇವನ ಕಂಡು ನಮಿಸಿ ಲೇಸು ವರ ಸ್ವೀಕರಿಸಿದಾ 4 ಪುರಂದರಾರ್ಯರ ಕವನಗಳು ಮೂರೆರಡು ಲಕ್ಷಕೆ ತ್ರಯಪದ ಕೊರತೆ ತಾ ಪೂರೈಸಿದ 5 ಬಾಲೆಯೋರ್ವಳು ಬಂದು ಪ್ರಾರ್ಥಿಸೆ ಕೇಳುತಾಕೆಯ ಪತಿಯನು ಕಾಲ ಪಾಶವ ಬಿಡಿಸಿ ಕರುಣದಿ ಪಾಲಿಸಿದ ಸುಮಹಾತ್ಮರ 6 ಶ್ರೀಮನೋಹರ ಶಾಮಸುಂದರ ನಾಮ ಮಹಿಮೆಯ ವಿಧ ವಿಧ ಭೂಮಿ ಸುಮನಸ ಸ್ತೋಮಕನುದಿನ ಪ್ರೇಮದಿಂದಲಿ ಬೀರಿದ 7
--------------
ಶಾಮಸುಂದರ ವಿಠಲ
ಸ್ಮರಿಸೊ ಮಾನವನೆ ಗುರುಚರಣ ಅಂತ: ಕರಣ ಶುದ್ಧಿಯಲಿ ಮರೆಯದೆ ಪ್ರತಿದಿನ ಪ ದುರಿತ ಘನತತಿ ಮರುತ ಶ್ರೀ ರಘುದಾಂತ ತೀರ್ಥರ ಕರಜ ಶ್ರೀ ರಘುವೀರ ತೀರ್ಥರ ಚರಣಯುಗಲವ ಹರುಷದಿಂದಲಿ ಅ.ಪ ಧರೆಯೋಳ್ ಸುಂದರ ಸುರಪುರದಿ ಜನಿಸಿ ಗುರು ವಿಠ್ಠಲಾರ್ಯರ ಚರಣಾನುಗ್ರಹದಿ ವರ ಶಬ್ದ ಶಾಸ್ತ್ರವ ತ್ವರದಿ ಕಲಿತು ತುರಿಯಾ ಶ್ರಮವನೆ ಸ್ವೀಕರಿಸಿ ಗುರುಮುಖದಿ ಮರುತ ಶಾಸ್ತ್ರವನರಿತು ಧರ್ಮದೊಳಿರುತ ವಿಷಯದಿ ವಿರತಿಯಲಿ ಅನವರತ ಪ್ರವಚನ ನಿರತ ಸದ್ಗುಣ ಭರಿತ ಪಾವನ ಚರಿತರಂಘ್ರಿಯ 1 ಹೇಮಾಲಂಕೃತ ರತ್ನನಿಚಯಯುಕ್ತ ಹೇಮ ಮಂಟಪದಿ ಸುಂದರ ಶುಭಕಾಯಾ ಶ್ರೀ ಮನೋಹರ ಕವಿಗೇಯಾ ಬ್ರಹ್ಮ ವ್ಯೋಮ ಕೇಶಾದಿ ನಿರ್ಜರಗÀಣಶೇವ್ಯಾ ಭೂಮಿ ಸುರಜನ ಸ್ತೋಮಕನುದಿನ ಕಾಮಿತಾರ್ಥವ ಗರಿವ ಸೀತಾರಾಮರಂಘ್ರಿಯ ತಾಮರಸವನು ನೇಮದಿಂದರ್ಚಿಪರ ಶುಭಪದ2 ಪರಿಶೋಭಿಸುವ ಕಾಷಾಯ ವಸ್ತ್ರ ವರನಾಮ ಮುದ್ರಾಲಂಕೃತ ತನುಸಿರಿಯ ಗುರು ಅಕ್ಷೋಭ್ಯರ ಶುಭಚರಿಯ ಗ್ರಂಥ ವಿರಚಿಸಿದರು ನವರತುನ ಮಾಲಿಕೆಯ ಧರಣಿಯೊಳು ಸಂಚರಿಸುತಲಿ ಬಲು ಕರುಣದಿಂದಲಿ ಶರಣು ಜನರಘ ಭವ ಭಯಹರಣ ಗುರುವರ ಚರಣಯುಗಲವ3 ವಿನುತ ಸಮೀರ ಕೃತ ಸಾರಶಾಸ್ತ್ರವನೆ ಬೋಧಿಸುತ ಸಜ್ಜನರ ಘೋರ ಸಂಸೃತಿ ಭಯದೂರ ಮಾಡಿ ತೋರಿ ಸನ್ಮಾರ್ಗ ದೀಪಿಕೆಯ ಸುಸಾರ ಸೇರಿದವರಘ ದೂರ ಪರಮೋದಾರ ಗುಣ ಗಂ- ಸೂರಿಜನ ಪರಿವಾರನುತ ಜಿತ- ಮಾರ ಶ್ರೀ ರಘುವೀರ ತೀರ್ಥರ 4 ಶೇಷಾಚಲದಿ ಶಿಷ್ಯಗಣದಿ ಬಂದ ಶ್ರೀ ಸತ್ಯ ಪ್ರಮೋದ ತೀರ್ಥರ ಸ್ವರ್ಣೋತ್ಸವದಿ ತೋಷಬಡಿಸುತ ನಿರ್ಭಯದಿ ಉಪನ್ಯಾಸ ಮಾಡಿದರು ವೀಶಗಮನ ಸುರೇಶ ಭಕುತರ ಸಿರಿ ನರಕೇಸರಿಗೆ ಪ್ರಿಯದಾಸ ಕೊಡಲಿವಾಸ ಕರ್ಮಂದೀಶರಂಘ್ರಿಯ 5
--------------
ಕಾರ್ಪರ ನರಹರಿದಾಸರು