ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಐ) ಸರಸ್ವತೀ ಕಿಂಕರನ ಧ್ವನಿಗೆ ಕೊಡು ಮತಿಯನು ಪ ಪಂಕಜಾನಾಭನ ಸೊಸೆ ಸರಸ್ವತಿಯೆ ಅ.ಪ. ಪುತ್ಥಳಿ ಬೊಂಬೆ ವಿಕಸಿತ ಸುಲಲಿತಾಂಬೆ ಸುನಿತಂಬೆ ನಿಕುರುಂಬೆ ಸುರರಂಭೆ ದಂತ ದಾಳಿಂಬೆ ಭಕುತಿಯಲಿ ಕಾಂಬೆ ನಿನ್ನ ನಾಮವನುಂಬೆ1 ಗಂಗೆ ಯಮುನೆ ಉಭಯ ಸಂಗಮೆ ಭಕ್ತ ಭಯ ಅಖಿಳ ಧ್ಯೇಯೆ ಮಂಗಳ ಶೋಭನ ಮಣಿಯೆ ಅಭ್ಯುದಯೆ ಅತಿ ಸದಯೆ ರಂಗು ಮಾಣಿಕ ಪ್ರಭೆಯೆ ಸುಜನಾಬ್ಧಿಗೇಯೆ 2 ಪ್ರಯಾಗ ವರಕ್ಷೇತ್ರವಾಸೆ ಪುಣ್ಯಕ್ಷೇತ್ರೆ ಕ್ಷಯ ರಹಿತ ಮುನಿಸ್ತೋತ್ರೆ ಶುಭಚರಿತ್ರೆ ನಯವಿನಯ ನೇತ್ರೆ ಪವಿತ್ರ ಅಜನ ಕಳತ್ರೆ ಸಿರಿ ವಿಠ್ಠಲನ ಪೌತ್ರೆ 3
--------------
ವಿಜಯದಾಸ
2. ಶಾರದೆ ಸರಸ್ವತಿ ಭಾರತಿ ಭಗವತಿ ಪ ಸಿರಿಸೊಸೆ ಪಾವನೆ ಸುರನುತ ಚರಣೆ ಅ.ಪ ಮಧುರ ಸಂಭಾಷಿಣೆ ವಿಧಿವರರಾಣಿ ಬುಧಜನ ತೋಷಿಣೆ ವಿಧುಮುಖಿಜನನಿ 1 ಧವಳಸುಗಾತ್ರೆ ಕಮಲನೇತ್ರೆ ಕವಿಜನ ಸ್ತೋತ್ರೆ ದಿವಿಜೆ ಪವಿತ್ರ 2 ರಾಜರಾಜಾರ್ಚಿತೆ ರಾಜಿಪಸುಚರಿತೆ ಮೂಜಗಭರಿತೆ ಜಾಜಿ ಪಟ್ಟಣವಾಸೆ 3
--------------
ಶಾಮಶರ್ಮರು
ಅಂಬಾ ತ್ರಿಪುರ ಸುಂದರೀ ಅದ್ವೈತಕಾರೀ ಸಾಂಬೆ ಪರಬ್ರಹ್ಮಣಿ ಪ ಶುಂಭಾಸುರ ಮರ್ದಿನೀ ಸಹಜಾನಂದೆಕ್ಯವಾಣಿ ತುಂಬುರಗಾನ ಪ್ರಿಯೆ ಮಹಾಮಾಯೆ ಸುಖದಾಯೆ ಸರಸಿಜದಳಾಯೆ ಅ.ಪ. ತ್ರಿದಶ ವಂದಿತೆ ತ್ರಿಮೂರ್ತಿ ತ್ರೈಲೋಕ್ಯಗಾತ್ರಿ ತ್ರಿಗುಣರಹಿತೆ ಪಾರ್ವತಿ ತ್ರಿಪುರ ಪ್ರಹಾರೆ ದೇವೀ ತ್ರಿಶೂಲಧರ ಸಂಜೀವಿ ತ್ರಿಗುಣ ಸೋಮ ಸೂರ್ಯಗ್ನಿ ನೇತ್ರೆ ಶುಭಗಾತ್ರೆ ಸುಚರಿತ್ರೆ ಸನ್ಮುನಿಸ್ತೋತ್ರೆ 1 ಪರತರದೇವಿ ಪರಮಪಾವನ ಪ್ರಭಾವಿ ಪರಮಾತ್ಮ ಸ್ವರೂಪಿಣಿ ಪರಮಾನಂದೆಕ್ಯವಾಣಿ ಪರಿಪೂರ್ಣಭರಿತೆ ಶರ್ವಾಣಿ ಶಿವರಾಣಿ ಫಣಿವೇಣಿ ನಿತ್ಯಕಲ್ಯಾಣಿ 2 ವರಕೊಡಶಾದ್ರಿ ನಿವಾಸೆ ವರÀಸುಪ್ರಕಾಶೆ ವರ ಸಿಂಹಾ ರೂಢೆ ಮಹೇಶೇ ವರದೇ ಶ್ರೀ ಮೂಕಾಂಬಿಕೇ ವಿನುತಾನಂದೈಕ್ಯರೂಪಿ ಗುರುವಿಮಲಾನಂದ ಸ್ವರೂಪಿ ಸುಪ್ರತಾಪಿ ಸ್ತುತಿ ದೀಪಿ ಮಂತ್ರಕಲಾಪಿ 3
--------------
ಭಟಕಳ ಅಪ್ಪಯ್ಯ
ಜೋ ಜೋ ಜಾನಕಿ ಜೊ ಚಂದಿರ ಮುಖಿ ಮಾಂಗಲ್ಯದಾಯಕಿ ಮಾಡೇ ನಿದ್ರೆ ಜೋ ಜೋ 1 ಆದಿಮಾಯಳೆ ವೇದವೇದ್ಯಳೆ ಆದಿತೇಯನುತೆ ಭೂಮಿಜಾತೆ 2 ಮೃಗಮದಗಂಧಿನಿ ಮಾಧುರ್ಯಭಾಷಿಣಿ ಮಗಳೆ ಜಾನಕಿಯೆ ಕಂಬುಕಂಧರಿಯೇ 3 ಕಂಜಲೋಚನಿ ಕಂಜಭವಜನನಿ ಕುಂಜರಗಮನಿ ಸಂಜೀವನಿ 4 ವಾರಿಜನೇತ್ರೆ ವಾಸುವಸ್ತೋತ್ರೆ ಮಾರಜನನಿ ಲಕ್ಷ್ಮೀನಾರಾಯಣಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ತಾಯಿ ಪಾಲಿಸು ಎನ್ನ ದಯದಿ ಗಾಯತ್ರಿದೇವಿ ಸಿದ್ಧಿಯನಿತ್ತು ಸಲಹಾ ಸಾವಿತ್ರಿ ಪ ಪಾವನ ಸುಚರಿತ್ರೆ ಮಾಯೆ ತ್ರಿಜಗಸ್ತೋತ್ರೆ ಕಾಯೆ ಸಿದ್ಧಿಸಿ ಎನ್ನ ಕಾಯಾ ಮಂಗಲಗಾತ್ರೆ ಅ.ಪ ಸಾರಸಾಕ್ಷಿಯೆ ದಯಾಪಾರಾವಾರಳೆ ನಿನ್ನ ಚಾರುಚರಿತಂಗಳು ಸಾರುವೆ ನಿಜಮಂತ್ರ ಮೂರುಲೋಕದ ಸೂತ್ರಧಾರಿ ನೀ ನಿಜ ಓಂ ಕಾರಿ ಕರುಣಿಸಿ ಸುತನ ಗಾರುಮಾಡದೆ ಪೊರೆ ಅ ಪಾರ ಮಹಿಮಳೆ ಬಾರಿಬಾರಿಗೆ ಸೇರಿ ನಿನ್ನಪಾದ ವಾರಿಜಕೆ ನಾ ಸಾರಿ ಬೇಡುವೆ ಧೀರಳೆ ಸುವಿ ಚಾರಿ ನಿಜಸುಖ ತೋರು ಬೇಗನೆ 1 ಮನುಮುನಿಗಳಿಗೊಲಿದು ಘನಸುಖಸಾಮ್ರಾಜ್ಯ ವನು ಕೊಟ್ಟು ಸಲಹಿದಿ ಕನಿಕರದೊಡನೆ ಮಿನುಗುವ ಶತಕೋಟಿದಿನ ಕರಪ್ರಭಾಮಯೆ ಅನುಪಮುನಿಜಜ್ಞಾನವನು ನೀಡು ಬೇಗನೆ ಚಿನುಮಯಾತ್ಮಳೆ ಘನಕೆ ಘನ ನಿನ್ನ ವರರುಹಂಘ್ರಿಯ ನೆನೆವೆನನುದಿನ ಜನನಿ ಅಣುಗನ ಕೊನೆಯಜಿಹ್ವೆಯೊಳ್ ಪ್ರಣಮ ಬರಿಯಮೈ ಮಣಿವೆ ಕಲ್ಯಾಣೆ 2 ಪನ್ನಂಗಧರ ಸುರಸನುತ ಶ್ರೀರಾಮ ಸುನ್ನತ ಮಹಿಮಂಗಳನ್ನು ಬಲ್ಲವಳೆ ಅನ್ನ ಪೂರ್ಣೆಯೆ ಉಮೆ ಪನ್ನಂಗವೇಣಿಯೆ ಮನ್ನಿಸು ಬಡವನ ಬಿನ್ನಪ ಕರುಣೆ ಭಿನ್ನವಿಲ್ಲದೆ ನಿನ್ನ ಬೇಡುವೆ ಉನ್ನತೋನ್ನತ ಪದವನಿತ್ತು ಧನ್ಯನೆನಿಸೌ ಎನ್ನ ಮನದಿಷ್ಟವನ್ನು ಪಾಲಿಸಿ ವಿಮಲ್ಹøದಯೆ 3
--------------
ರಾಮದಾಸರು
ಬಟ್ಟೆಯ ನೆವದಿಂದ ಬಂದು ತಟ್ಟ ಕವನೆ ಕಂಡು ಕಣ್ಣ ತೆರೆದ ಕೃಷ್ಣವೇಣಿ ನಿಮ್ಮ ಕಂಡೆ ದುಷ್ಟ ಮಾನವರ ಬಾಧೆಗೆ ಅಂಜಿ ಇತ್ತ ಬಂದೆ ಕಷ್ಟ ದುರಿತಗಳ ಕಳೆಯೆ ತಾಯೆ ಪ. ಭೋರಿಡುವ ಮಳೆಗೆ ಹಲ್ಲುಗಿಟಗರಿದು ಶೀತತಲೆ- ಗೇರಿ ಕಂಪಿಸಿ ನಡುಗುತ್ತ ಜಾರಿ ಕೆಸರೊಳು ಬಿದ್ದು ಮತ್ತೇಳುತಲಿ ದಾರಿಯನು ಕೇಳಿಕೊಳ್ಳುತ ಕ್ರೂರವಾಗಿದ್ದ ಜಾಲಿಯ ಮುಳ್ಳನೆ ತುಳಿದು ಹರಿ ನಾರಾಯಣ ಎನ್ನುತ ಹಾರೈಸಿ ನಿಮ್ಮ ದರುಶನಕ್ಕೆ ನಾ ಬಂದೆ ಘೋರ ದುರಿತವನು ಕಳೆಯೆ ತಾಯೆ 1 ನಿತ್ಯ ಕಲ್ಯಾಣಿ ನಿರ್ಜರಸ್ತೋತ್ರೆ ಶುಭಗಾತ್ರೆ ಪ್ರತ್ಯಕ್ಷ ವಿಷ್ಣುಜಾತೆ ಮಾತೆ ವಿಸ್ತರಿಸಲಾರೆ ಶ್ರೀ ವಿಷ್ಣು ಸಂಪ್ರೀತೆ ಸತ್ಪಾತ್ರ ಸಂಪೂಜಿತೆ ಪ್ರೀತೆ ಸತ್ತು ಹುಟ್ಟುವ ಜನ್ಮ ಕೋಟಲೆಯ ಖಂಡ್ರಿಸೆ ಪತಿತ ಪಾವನ ಚರಿತೆ ವ್ಯರ್ಥವಾಯಿತು ಜನ್ಮ ಸಾರ್ಥಕವ ಮಾಡಮ್ಮ ಮುಕ್ತಿಸಾಧನದಾತೆ ಮಾತೆ 2 ಸುರಗಂಗೆ ಕೃಷ್ಣಮಲಾಪಹಾರಿ ಮೂವರು ಕೂಡಿ ಬೆರೆದಿದ್ದ ಸಂಗಮದಲ್ಲಿ ಅರಿಸಿಣ ಅಕ್ಷತೆ ಗಂಧ ಕುಂಕುಮ ತಾಂಬೂಲಗಳ ಹರುಷದಿಂದರ್ಪಿಸುತಲಿ ಥರಥರದಿ ನೆರೆದ ಮುತ್ತೈದೆಯರೆಲ್ಲರು ಮರದ ಬಾಗಿನವ ಕೊಡುತಲಿ ಹರುಷದಿಂದಿಪ್ಪುದನು ಕಂಡೆ ಹೆಳವನಕಟ್ಟೆ ಅರಸು ರಂಗನ ಕೃಪೆಯಲ್ಲಿ ತಾಯೆ 3
--------------
ಹೆಳವನಕಟ್ಟೆ ಗಿರಿಯಮ್ಮ
ಚಂದವೇ ಚಕ್ರವಾಹಿನಿ ಚಿದ್ರೂಪಿಣಿಸಾಂದ್ರಸರ್ವತ್ರ ಸಾಕ್ಷಿಣಿಮಂದಹಾಸ ಮುಖಾಂಬುಜ ಕೋಮಲಸುಂದರಗಾತ್ರೇಸುಮನಸಸ್ತೋತ್ರೆಪವಿಶ್ವಾತ್ಮ ವಿಶ್ವರೂಪಿಣಿ ವಿಶ್ವಂಭರಿವಿಶ್ವಪ್ರಕಾಶಮಣಿವಿಶ್ವಕರ್ತೃ ವಿಶ್ವೇಶ್ವರ ವಿನುತೇವಿಶ್ವಾತೀತೇವಿಶ್ವಭಗಿನೇ1ನಾದ ಬಿಂದು ಕಳಾತೀತೆ ನಾರಾಯಣಿವೇದ ವೇದಾಂತ ವೇದ್ಯೆಭೇದಾತೀತೆ ಯೋಗೀಶ್ವರಭರಣಿಸಾಧು ಜನರಭವಸರ್ವ ಸಂಹಾರಿಣಿ2ಭೀಮ ತೀರದಿ ನೆಲೆಸಿಹ ಸನ್ನುತಿ ಮಧ್ಯಪ್ರೇಮದಿ ನಿಂತಿಹಕಾಮಿತವೀವ ಕರುಣಾಮಯಿಸ್ವಾಮಿ ಚಿದಾನಂದ ಬಗಳ ಸ್ವರೂಪಿಣಿ3
--------------
ಚಿದಾನಂದ ಅವಧೂತರು
ಜೋ ಜೋ ಜಾನಕಿ ಜೊ ಚಂದಿರ ಮುಖಿಮಾಂಗಲ್ಯದಾಯಕಿ ಮಾಡೇ ನಿದ್ರೆ ಜೋ ಜೋ 1ಆದಿಮಾಯಳೆ ವೇದವೇದ್ಯಳೆಆದಿತೇಯನುತೆ ಭೂಮಿಜಾತೆ 2ಮೃಗಮದಗಂಧಿನಿ ಮಾಧುರ್ಯಭಾಷಿಣಿಮಗಳೆ ಜಾನಕಿಯೆ ಕಂಬುಕಂಧರಿಯೇ 3ಕಂಜಲೋಚನಿ ಕಂಜಭವಜನನಿಕುಂಜರಗಮನಿ ಸಂಜೀವನಿ 4ವಾರಿಜನೇತ್ರೆ ವಾಸುವಸ್ತೋತ್ರೆಮಾರಜನನಿ ಲಕ್ಷ್ಮೀನಾರಾಯಣಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ