ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣೆಂಬೆ ನಾ ಶರ್ವಾಣಿ ವರನ | ಸಿರಿಪತಿ ಶಾಙ್ರ್ಗಧರನ ವರಸಿಂಧು ನಗರದೊಳು |ಸ್ಥಿರ ಭೋಗಗೊಂಬ ಸಂಗಮನ ಪ ಬಾಲೇಂದು ಮುಡಿದ ಭಸಿತಾಂಗ | ಕಾಳಿಗರ್ಧಾಂಗಾ |ಪಾಲಿಸಿ ಕೊಡುವರೆ ದೊರೆಯ ಪೇಳಲಿಕಿನ್ನಾರನೈದಾರೆ |ಭಾಲಾಕ್ಷನ ಲೀಲಾ ವಿಲಾಸ ಭೋಳಾ ದೇವೇಶ | ಕಾಲಿ ಗೆರಗಿ ಬ್ರಹ್ಮಾದಿಕರು ಕಾಲಾಂತಕನ ವರ ಪಡೆವರು |ನೀಲಕಂಧರನ ನಿಗಮೋದ್ಧಾರನ ಸ್ಥೂಲ ಶರೀರನ ಸುಖಸಂಚಾರನ ಶೀಲಕ ದೂರನ | ಶಾಂತಾಕಾರನ |ಮಾಲಾಧರನ ಮಹಾ ಗುರುಹರನ1 ಕಳೇವರ ತಾಪ ಪಾವಕ ನೇತ್ರನ ಸುರಮುನಿ ಸ್ತೋತ್ರನ ಸುಂದರ ಗಾತ್ರನ ನರಹರಿ ಮಿತ್ರನಹಿಗಳ ಸೂತ್ರನ ಶಿರಕರ ಪಾತ್ರನ ಶಿವಸ್ವತಂತ್ರನ 2 ಅಮಿತ ಭಕ್ತರು ಇಳೆಯೋಳ್ ಇಹರು ನಮಿಸಲು ಸಲಹಿಕಾವನು |ಅಮರರ ಹೊರೆವನ ಅಧಿಕ ಪ್ರಭಾವನ ತಿಮಿರವ ಕಳೆವನ ತೀರದಲಿವನ ಹಿಮಸುತೆ ಜೀವನ ಹಿಡಿದಿಹ ತ್ರಿಭುವನನ | ಶ್ರಮಗಳನಳಿವನ ಶಂಕರ ಭೀಮಾ ಶಂಕರನ 3
--------------
ಭೀಮಾಶಂಕರ
(ವಿಜಯದಾಸರ ಪ್ರಾರ್ಥನೆ) ಜಯ ಜಯ ವಿಜಯೇಂದ್ರ ಜಿತಬುದ್ಧಿ ತಂದ್ರ ನಯ ನೀತ ಗುಣ ಸಾಂದ್ರ ನುತ ರಾಮಚಂದ್ರ ಪ. ಅಷ್ಟಮಹಾಸಿದ್ಧಿಯರಿತ ಗಂಭೀರ ಗಜ ಕುಂಭದಾರ ಕೃಷ್ಣಾರಾಧಕ ಚತು:ಷಷ್ಟಿಕಳಾಧಾರ ಇಷ್ಟ ಸಿದ್ಧಿಗಳ ಪಾಲಿಸು ಬೇಗ ಧೀರ 1 ಶೇಷಾದ್ರಿನಾಥನ ಕರುಣೈಕ ಪಾತ್ರ ವ್ಯಾಸ ಮುನೀಂದ್ರ ಕರಾಬ್ಜಜ ಪುತ್ರ ದೋಷವೆಣಿಸದೆ ಸ್ವೀಕರಿಪುದೇ ಸ್ತೋತ್ರನೀ ಸಲಹುವದಾರಾಧಿತ ಮಾಕಳತ್ರ 2
--------------
ತುಪಾಕಿ ವೆಂಕಟರಮಣಾಚಾರ್ಯ
ನೆನೆಯೋ ನೀ ಎನ್ನ ಮನವೇ| ಅನುಪಮ್ಯ ಶ್ರೀ ಮುಕುಂದನಾ| ಚಕೋರ ಸುನಕ್ಷತ್ರೇಶ ಗೋಪಾಲನಾ| ಶ್ರೀಲೊಲನಾ ನಂದಬಾಲನಾ ಪ ವರಭಕ್ತ ಧೃವಗ ಸ್ಥಿರಪದ ವಿತ್ತನಾ| ಧರಣಿಯ ಭಯಹರ ಪುರುಷೋತ್ತಮನಾ| ಉರಗ ತುಳಿದವನಾ| ಉರಗಶಯನುರಗಾ ಭರಣನ ಸಖನಾ| ಸುನಖನ ಅಬ್ಬ ಮುಖನಾ 1 ದುರಿತ ನಿವಾರಕನಾ| ಕರುಣಾದೀ ಅಹಲ್ಯಯ ನುದ್ಧರಿಸಿದನಾ ಸರಸಿಜ ಸಮಪದ ಸರಸಿಜನಾಭನಾ| ಸರಿಸಿಜ ಪಾಣಿಯ ಸರಸಿಜ ನೇತ್ರನಾ 2 ಸುಚರಿತ್ರನಾ ಮುನಿಸ್ತೋತ್ರನಾ| ಗುರುವರ ಮಹಿಪತಿ ನಂದನ ಜೀವನಾ| ಗಿರಿವರಧಾರನಾ ಕಂಸಾಸುರ ಮರ್ಧನಾ| ಶರಧಿ ನಿವಾಸನಾ| ಹರಿಶತ ಕಿರಣ ಹರಿಸುತ ಪ್ರೀಯನಾ| ಸ್ಮರಸೈಯ್ಯನಾ ಕೃಷ್ಣರೇಯನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಗಣಪತಿ ಸ್ತೋತ್ರನಿರ್ವಿಘ್ನ ನೀಡೋ ನಭದೀಶಾ ಪಗಜಮುಖ ಅಗಜಅಂಗಜಮೃದ್ಭವಗಜವರದನ ನಿಜ ದಾಸ 1ನಾಕಪ ವಂದ್ಯ ಪಿನಾಕಿಧರನುತಏಕದಂತ ದ್ರಿತ ಪಾಶಾ 2ಶಿರಿಗೋವಿಂದ ವಿಠಲನ ದಾಸರಿಗೆಶಿರಿದನಿಖಿಳಭಯನಾಶ 3
--------------
ಸಿರಿಗೋವಿಂದವಿಠಲ