ಒಟ್ಟು 7 ಕಡೆಗಳಲ್ಲಿ , 3 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ನವಗ್ರಹ ಸ್ತೋತ್ರ) ಸತ್ಕಟಾಕ್ಷವಿರಿಸು ದಕ್ಷನಖವಜ್ರಿರಿಪುಪಕ್ಷದಹಿಸು ವಿರೂಪಾಕ್ಷ ಶರಣು ಪಕ್ಷವೃತ್ವಯನ ಸಂವತ್ಸರಾಖ್ಯ ದಯಮಾಡು ಶರಣೆಂದು ನಮಿಪೆ ನಿನ್ನ 1 ತೇಜೊರಾಶಿಯಾಗಿ ಮೆರೆವ ಕಮಲ ಘೂಕ ತಸ್ಕರರ ಗಣವ ನಾದಿಪತಿ ಗ್ರಹರಾಜ ನಿನ್ನ ಪದವ ವ್ಯಾಧಿಗಳ ಪರಿಹರಿಸು ಪಾವನಾತ್ಮ ಸಲಹೆನ್ನ ನಿರ್ಮಲಾತ್ಮ2 ನೀರುಮರಬಳ್ಳಿಸಕಲೌಷಧಿಗಳ ತಾರೆಗೊಲಿದಾಕೆಯಲಿ ಬುಧನಪಡದೇ ರಾಶಿ ಸಂಚಾರ ಮಾಳ್ಪೆ ಮೋಹದ ಬಲೆಯ ನೀರಜಾಕ್ಷ ಸಮನೋಜ ಮಾದೇವಿಸಹಜ 3 ಗುರುಮಿತ್ರ ಸಜ್ಜನತ್ರ ವ್ಯಾಮೋಹಗೊಳಿಸದಿರು ದಂಡಪಾಣಿ ರಾಜಕರುಣಾ ಪಾತ್ರನೆ ಕಾಮಚಾರಜ ಬಹುವಿಧಾಮಯವ ಪರಿಹರಿಸಿ ನೀ ಮನೋಹರ್ಷ ಪಾಲಿಸು ಧೀರನೆ ಕಮನೀಯ ಕಾಂತಿ ಕುಹಕಜನವಾರಿ4 ಪದುಮಗಳಿಗೆರಗುವೆನು ಪಾಲಿಸೆಂದು ಮಧು ವಿರೋಧಿಯ ಮನೋಭವನಣುಗ ಮಾತಿನಲಿ ಚದುರತೆಯನಿತ್ತು ಚಾತುರ್ಯಗೊಳಿಸು ಸದಯಾವಲೋಕ ನೀನೆಂದು ತಿಳಿದೆ ಮಾತ್ಸರ್ಯವೆಲ್ಲಬಿಡಿಸು ಪಾದ ಸ್ವರ್ಣವರ್ಣ ಸುಲಲಿತಾಂಗ 5 ಮಂತ್ರಜ್ಞ ಚೂಡಾಮಣಿ ಸದುಪಾಯಗಳ ತಿಳಿಸಿ ಸುರರ ಕಾವ ಉದಿತನಾಗಿರೆ ಸಕಲ ಬುಧರಿಗನುಕೂಲ ನಿತ್ಯದಲಿ ನಿಖಿಳ ಗ್ರಹೋನ್ನತ ಶಕ್ತಿಯೇ ಸಕಲಾರ್ಥ ಪಡದೀವನೆ ನಿನ್ನ ನಮಿಸುವೆನು ನೀನೊಲಿದು ಸಲಹೊ6 ಭಾರ್ಗವನೆ ಭಜಿಪೆ ನಿನ್ನ ತಪ್ಪು ಮರತು ಮುಖ್ಯವೆಂಬರ್ಥವರಿತು ಸೇವೆಗನುಕೂಲನಾಗಿರುವೆ ಕುರಿತು ಕಾಪಾಡು ಕರುಣ ವಹಿಸು7 ಮುನಿಸದಿರು ನಮ್ಮಮೇಲೆಂದೆಂದಿಗು ನಿನ್ನ ಘನವ ತ್ಯಜಿಸು ಭಂಗ ಶಕ್ತರಹರೆ ಪೇಳು ಮನ್ನಿಸುವ ಮಮತೆ ತಾಳು ಕನಸಿಲಾದರು ಕ್ರೋಧವಿಡದೆ ಕಾಪುವುದೆಂದು ನಿರುತದಿಂ ಕೈ ಮುಗಿದು ಬೇಡಿಕೊಳುವೆ 8 ವೀರ್ಯ ವಹಿಸಿದ ರಾಹು ಕೇತುಗಳನು ಶೌರ್ಯಾದಿಗಳ ದಯ ಮಾಡಿರಿ ಧಾರವೆಂದಿತ್ತಹರ್ಯಜ್ಞೆಯಿಂದ ನಾರ್ಯತನವೇನಿವರೊಳಿದ್ದರರಿತು ಮಂಗಳವಿತ್ತು ಸೌಖ್ಯ ಪಾಲಿಸಲಿ9
--------------
ತುಪಾಕಿ ವೆಂಕಟರಮಣಾಚಾರ್ಯ
(ಲಿಂಗಸುಗೂರಿನ ಹತ್ತಿರ ಇರುವ ಬಾಗಿಸೋಪಿನ ಗ್ರಾಮದ ಶ್ರೀ ಪ್ರಾಣೇಶನ ಸ್ತೋತ್ರ) ಬಾಗಿ ಸೋಪಿಲಿ ವಾಸವಾಗಿಹ |ಯೋಗಿ ಪ್ರಾಣರಾಯಾ ||ಚಾಗುಮಾಡದೆ ಭಕ್ತರ ದುರಿತವ |ನೀಗಿ ಸಲಹಯ್ಯಾ ಪ ಕಪಿಗಳೆಲ್ಲಾ ಸುಗ್ರೀವನ ಭಯದಿಂ |ತಪಿಸುತಲಿರೆ ಅವರಾ ||ಲಪನ ಕಾಣುತಲೆ ಅಭಯವನಿತ್ತು |ನಿಪೊರೆದೆ ಕಪಿವರಾ 1 ಹಿಂದೆ ಭೂಸುರನು ಚಿಂತಿಸುತಿರಲಾ |ನಂದದಿಂದ ಏನಾ ||ಬಂಧನಾ ಬಿಡಿಸಿದೆ ಬಕನನು ಕೊಂದು |ತಂದೇ ಶ್ರೀಪವನಾ 2 ಈಶನೆ ತಾನೆಂತೆಬುವ ಖಳರಾ ಸೋಸಿನಲ್ಲಿ ಮುರಿದೇ ||ಶ್ರೀಶ ಪ್ರಾಣೇಶ ವಿಠಲರಾಯನೇ |ಪರದೈವವೆಂದೊರದೇ 3
--------------
ಶ್ರೀಶಪ್ರಾಣೇಶವಿಠಲರು
(ಶುಕಾಚಾರ್ಯರ ಸ್ತೋತ್ರ) ಆಚಾರ್ಯನ ನೋಡಿ ಸುಮ್ಮನೆ ಪೇಚಾಡಲು ಬ್ಯಾಡಿ ಪಡದ ಮೃಡಾತ್ಮನ ಪಾಡಿ ಪ. ಬಾಲಕರಂತಿರುವ ಧೂಸರ ಧೂಳಿಯ ಧರಿಸಿರುವಾ ಕೇಳಿದವರಿಗೊರೆವಾ ಭಗವನ್ಮೂಲ ತತ್ವದಿರವಾ ಪರೀಕ್ಷಿತ ಲಾಲಿಸುವಂತೆರ- ಮಾಲಯ ಗುಣವರುಣಾಲಯ ತಿಳಿಸಿದ 1 ವ್ಯಾಪಿಸಿ ಕೊಂಡಿರುವಾ ಸಂಸೃತಿ ತಾಪತ್ರಯ ಭರವಾ ತಾಪಕ ಮತ್ಸರವಾ ಮೋಹ ಮಹಾಪರಾಧದಿರವಾ ದೀಪವು ತಿಮಿರವ ಕಳವಂದದಿ ನಿ- ಲೋಪಗೊಳಿಸುವ ಪರೋಪಕಾರಿಯನು 2 ಭಾಗವತಾಮೃತವಾ ಮುಖದಿ ಸರಾಗದಿ ಧರಿಸಿದನಾ ವಾಗೀಶಾಂಶಕನಾ ಹೊಂದಿರೊ ಗುರುಮುನಿ ಶುಕನಾ ತಾಗುಬಾಗುವೊಳಗಾಗದ ತೆರದಲಿ ನಾಗ ಗಿರೀಂದ್ರನು ನಲಿವನು ಮನದಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಸುಬ್ರಹ್ಮಣ್ಯ ಸ್ತೋತ್ರ) ಬ್ರಹ್ಮಣ್ಯ ಪುಂಜವನ್ನು ಕಾವಾ ಮೊರೆಯ ಕೋಳೂ ಸು- ಬ್ರಹ್ಮಣ್ಯಕ್ಷೇತ್ರಪಾಲದೇವಾ ಪ. ಶ್ರೀಶನ ಕರುಣ ಪೂರ್ಣಪಾತ್ರ ಷಡ್ವಕ್ತಪಾರ್ವ ತೀಶಸಂಪ್ರೀತಿಕಾರಿಪತ್ರ ಸುರನಿಕರ ಭಯತ್ರ ಸೂಸುತ ದೇಹದಿ ವಾಸವಾಗಿಹ ತ್ವ- ಗ್ದೋಷವ ತರಿವ ಮಹಾಸುರ ದಾರಿ1 ಸಾಂಬಾಸನತ್ಕುಮಾರನೆನಿಸಿ ಸಾಂಖ್ಯಾಯೋಗಗಳ ನಂಬಿದ ಭಕ್ತ ಜನಕೆ ಸಲಿಸಿ ದೈತ್ಯರ ಜವಗೆಡಿಸಿ ಜಾಂಬವತೀವದನಾಂಬುಜ ವಿಕಸನ ಕುಂಬುಜನಾಭ ಕುಟುಂಬಾಭರಣೀ 2 ಶೇಷಾದ್ರಿವಾಸಲಕ್ಷ್ಮೀಪತಿಯ ಪೂರ್ಣಾನುಗ್ರಹದಿ ವಾಸುಕಿಗೊಲಿದು ವಿಪ್ರತತಿಯ ಸಲಹುವ ಭೂಪತಿಯ ದೋಷವಾರಿ ಧಾರಾತೀರದಲಿ ನಿವಾಸಗೊಂಡ ನಿನ್ನಾಶ್ರಯ ಕರುಣಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
(ಹಿರಿಯಡ್ಕದ ವೀರಭದ್ರ ಸ್ತೋತ್ರ) ದಕ್ಷಯಜ್ಞ ಭಂಜನ ನಿರಂಜನ ಪ. ಪ್ರಮಥ ಭೂತ ನಾಯಕ ಪ್ರಣತ ಸಿದ್ಧಿದಾಯಕ ಮಣಿದು ಸ್ತುತಿಪೆ ನಿನ್ನನು ಮಾನ ಪೊಂದಿಸೆನ್ನನು 1 ಸಂದಿಗೊಂದಿವೇರಿದಾ ಸರ್ವದಾಪ್ರಕಾರದಾ ವೈರಿ ಸ್ತೋಮವಾ ಮಾನಿಸೊ ನಿರ್ನಾಮವಾ 2 ಶಿವಜಟಾಗ್ರ ಜಾತನ ಶೇಷ ಗಿರೀಶ ದಾಸನೆ ಭವನ ಬೇಗ ತೋರಿಸೊ ಭಯವ ದಾರಿ ಹಾರಿಸೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ದೇವರ ನಾಮ(ಶ್ರೀಶ ಸ್ತೋತ್ರ)38ಶ್ರೀಕರಾರ್ಚಿತ ಶ್ರೀಶ ಶ್ರೀ ಶ್ರೀನಿವಾಸಭಕುತವತ್ಸಲ ನಮೋ ಕಾರುಣ್ಯ ಶರಧೇ ಪಲೌಕೀಕ ವಿಷಯದಲಿ ಕಾಯಮನದಿಂಚರಿಸಿ |ಶ್ರೀಕರನೆ ನಿನ್ನನಾ ಸಂಸ್ಮರಿಸಲಿಲ್ಲಾಲೋಕ ಬಂಧುವೇ ಶರಣು ಶರಣು ಕರುಣಾಂಬುಧಿಯೇನೀಕಾಯಬೇಕೆನ್ನ ತಪ್ಪು ಎಣಿಸದಲೆ 1ನಾರಾಯಣವಾಸುದೇವಸಂಕರುಷಣಪ್ರದ್ಯುಮ್ನ ಅನಿರುದ್ಧ ಆತ್ಮಾಂತರಾತ್ಮಶ್ರೀ ಕೃಷ್ಣ ಕಪಿಲನೆ ಸರ್ವಕರ್ತನು ನೀನೆಸರ್ವ ಪ್ರೇರಕ ಸರ್ವ ಸ್ವಾಮಿ ಮಮ ಸ್ವಾಮಿ 2ವಿಶ್ವವಿಷ್ಣು ವಷಟ್ಕಾರ ಶ್ರೀಭೂರಮಣವಿಶ್ವತೋಮುಖ ಸರ್ವ ವಶಿ ವಿಶ್ವನಾಥವಿಶ್ವಪಾಲಕ ನಮೋ ಶ್ರೀರಾಮ ವಿಧಿತಾತವಿಶ್ವರೂಪನೇ ಶ್ರೀ ಪ್ರಸನ್ನ ಶ್ರೀನಿವಾಸ3
--------------
ಪ್ರಸನ್ನ ಶ್ರೀನಿವಾಸದಾಸರು
ನಿರ್ವೈಷಮ್ಯ ಯಾಚನೆ ಸ್ತೋತ್ರ(ತ್ರಿವಿಕ್ರಮ ದೇವರ ಸ್ತೋತ್ರ)17ವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖ ವಂದ್ಯ ಕರಣ ಸೌಭಾಗ್ಯದನೆಬ್ರಹ್ಮಾಂಡ ಬಹಿರಂತ ವ್ರ್ಯಾಪ್ತ ಸರ್ವೇಶ ಪವಾಮನನು ವಿಶ್ವರೂಪ ಪ್ರಕಟಿಸಿ ದಾನ ವಸ್ತುಭೂಮಿ ದಿವಿಯ ಈರಡಿಯಲಿ ವ್ಯಾಪಿಸಿದ್ದುನೇಮಿ ವಿಪ್ರಚಿತ್ತಿ ಪೇಳ್ದ ಮಾಯಾಜಾಲವು ಅಲ್ಲವಿಷಮ ವಂಚನ ದೋಷಕಿಂಚಿತ್ತು ಇಲ್ಲ 1ಪ್ರಥಮವಾಗಿ ಶ್ರೀ ವಿಷ್ಣುರೂಪ ಒಂದೊಂದಲ್ಲೂಅನಂತರೂಪ ಬಲ ಸುಖಜ್ಞÕನಾದಿ ಪೂರ್ಣವಾಗಿಶಶ್ವಧೇಶ ಪ್ರಕಾರ ಇಹುದೆಂದು ಶಾಸ್ತ್ರ ಸಾರುತಿದೆಸ್ವತಃ ಅವ್ಯಕ್ತಹರಿಪ್ರಕಟಿಸುವ ಸ್ವಇಚ್ಛೆಯಿಂ ಆಗಾಗ2ಅಣೋರಣೀಯಾನ್ ಮಹಿತೋ ಮಹೀಯಾನ್ತನ್ನ ವಾಮನ ರೂಪದಲ್ಲೇ ತನ್ನ ವಿಶ್ವರೂಪತಾನೆ ವ್ಯಕ್ತ ಮಾಡಿದನು ವಿಷ್ಣು ವ್ಯಾಪನ ಶೀಲಗುಣರೂಪಅಭಿನ್ನ ಅವ್ಯಯನು3ಮತ್ತು ಬಲಿರಾಜನಿಗೆ ಶುಕ್ರಾಚಾರ್ಯರುಮೊದಲೇವೆ ಹೇಳಿಹರು ವಾಮನನು ವಿಷ್ಣು ಅವ್ಯಯನುಇಂದ್ರನಿಗೆ ಪುನಃ ರಾಜ್ಯ ಕೊಡಲಿಕ್ಕೆ ದಾನಕೇಳಿಕ್ಷಿತಿದಿವಿಪರ್ವದ ಎರಡು ಪಾದದಿಂ ಅಳೆವನೆಂದು4ಈ ರೀತಿ ಬಲಿರಾಜ ದಾನ ಕೊಡುವ ಪೂರ್ವದಲೆಹರಿವ್ಯಾಪನ ಶೀಲ ಅವ್ಯಯನೆ ವಾಮನ ಎಂದುಅರಿತೇವೆ ಶಕ್ರಸಾಧಕ ದಾನ ಕೊಟ್ಟಿಹನುಮುಚ್ಚುಮರಿ ವಿಷಮ ವಂಚನೆಗೆ ಸಿಲುಕಿ ಅಲ್ಲ 5ಮೋಸಕ್ಕೆ ಓಳಗಾಗಿ ಅಲ್ಲ ಮನಸಾ ತಿಳಿದೇಅಸುರರಿಪು ವಿಷ್ಣುಗೆ ಬಲಿರಾಜ ತಾನೇಶ್ರೀ ಶಾರ್ಪಣ ಜಗತ್ರಯದಾನ ಕೊಟ್ಟಿಹನುಎಂದು ಹೇಳಿ ಕೀರ್ತಿಸಿಹರು ದೇವಗಾಯಕರು 6ಕಿನ್ನರಕಿಂಪುರುಷಗಂಧರ್ವರು ಕೊಂಡಾಡಿದರುಮನಸ್ವಿ ನಾನೇನ ಕೃತಂ ಸುದುಷ್ಕರಂವಿದ್ವಾದದಾದ್ ಯದ್‍ರಿಪವೇ ಜಗತ್ರಯಂಏಕೋನವಿಂ ಶದ ಧ್ಯಾಯ ಶ್ಲೋಕ ಇಪ್ಪತ್ತು 7ಬಲಿರಾಜನೂ ರಾಣಿ ವಿಂದ್ಯಾವಳಿಯೂಅಲ್ಲಿ ಬಂದ ಪ್ರಹ್ಲಾದ ಮಹಾರಾಜನೂಪ್ರಲಂಭನ ವೈಷಮ್ಯ ವಾಮನ ಮಾಡಲಿಲ್ಲಬಲಿಗೆ ಮಹಾನುಗ್ರಹ ಮಾಡ್ಡನೆಂದು ತಿಳಿದಿಹರು 8ಮಧ್ವಸ್ತ ಸರ್ವಸ್ಥ ಮಸ್ತ ವಿಧಿತಾತಜ್ಯೊತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುತ ಪ್ರಸನ್ನಶ್ರೀನಿವಾಸಮುದಜ್ಞಾನ ಧನ ಆಯುರ್ ಭಾಗ್ಯದನೆ ಶರಣು 9|| ಶ್ರೀ ಮಧ್ವೆಶಾರ್ಪಣಮಸ್ತುಃ ||
--------------
ಪ್ರಸನ್ನ ಶ್ರೀನಿವಾಸದಾಸರು