ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಏನೊ ನಿನ್ನ ಮತೀ ಮತೀ | ಇದರಿಂದಾಗದು ಗತೀ ಗತೀ ಪ ಸತಿ ಸುತರಿಂದಲಿ ಗತಿಯನ್ನು ಪಡೆದ ಕೇಳ ಬಲ್ಲೆಯಾ ಕಥೀ ಕಥೀ1 ಸಂಚಿತ ಪ್ರಾರಬ್ಧ ಕ್ರಿಯಮಾಣಾ | ತೀರಲಿಲ್ಲವೋ ಮಿತೀ ಮಿತೀ | ಪಂಚ ದಶಾಕ್ಷರೀ ಮಂತ್ರವ ಜಪಿಸಲು | ನೀ ಪರಶಿವನೆಂಬುದೋ ಶ್ರುತೀ ಶ್ರುತೀ 2 ಮೂರ್ತಿ ಭವತಾರಕ ದೇವನ | ಪೂಜಿಸಿ ಮಾಡೊ ಸ್ತುತೀ ಸ್ತುತೀ | ಅರಿಯದಿರ್ದರರ್ಚಕರನು ಸೇವಿಸಿ |ಆಗು ನೀ ಭೂಪತೀ ಭೂಪತೀ 3
--------------
ಭಾವತರಕರು
ಸಿರಿ ಹರಿಯೇ | ಎನ್ನ ದೊರೆಯೇ ಪ ಎದುರಾಳಿ ಜನ ಬಂದು | ಹದನ ಗೆಡಲು ಮನಬದಿಗ ನಾಗಿಹ ನಿನ್ನ | ಹುದುಗಿಸುತಿಹರಯ್ಯ ಅ.ಪ. ಎನ್ನ ಕಂಗಳು ನಿನ್ನಯ | ರೂಪಂಗಳಚೆನ್ನಾಗಿ ನೋಡದೆಲೆ | ವಿಷಯಾನ್ಯವ |ನನ್ನೆಯಿಂದಲಿ ನೋಡಿ | ಧನ್ಯರಾದೆವು ಎಂದುಮನ್ನಿಸುತಿಹವಯ್ಯ | ಘನ್ನ ಗೋಪಾಲನೆ1 ಕರ್ಣಗಳ್ಹದನ ಕೇಳೋ | ಶ್ರೀಹರಿ ನಿನ್ನಗುಣಗಳ ಕೇಳದಲೇ | ಯುವತೀಯರ ||ತನುಗಳೊರ್ಣನೆ ಕೇಳಿ | ಕ್ಷಣ ಕ್ಷಣಕಾನಂದಸೊನೆಯಿಂದ ತೊಯ್ದಂತೆ | ಎಣಿಸುತಿಹವು ಅಯ್ಯ 2 ಪ್ರಾಣ ಛಾದಿಯ ಪೇಳ್ವೆನೊ | ನೀ ಮುಡಿಧೂವಾಘ್ರಾಣಿಸದೆಲೆ ಕನ್ಯೇರು | ಮುಡಿದಿಹ ಪುಷ್ಪ |ಘ್ರಾಣಿಸುತ್ತಲಿ ಬಹು | ಆನಂದ ಪಡುತಲಿನಾನಾ ಜನ್ಮದಿ ದುಷ್ಟ | ಯೋನಿಗೆ ತರುವೋದು 3 ವದನದ ಪರಿಯ ಕೇಳೊ | ನಿನ್ನಯ ಗುಣಮುದದಲಿ ವರ್ಣಿಸದೆ | ಧನಿಕರ ಸ್ತುತೀ ||ವದಗಿ ಪೇಳುತ ಮುಂದೆ | ಉದರ ಕೋಸುಕವಾಗಿವಿಧಿಯ ಮಾರುತ ದುಷ್ಟ | ಸಾಧನವಾಯ್ತಯ್ಯ 4 ಸ್ಪರಿಶೇಂದ್ರಿಯರ ಸಾಧನ | ಕೇಳೆಲೊ ಹರಿಹರಿಭಕ್ತರಾಲಿಂಗನ | ಮಾಡದಲಿದ್ದುಪರಸ್ತ್ರೀಯ ಸ್ಪರಿಶಕ್ಕೆ | ಹರಿಯುವಂತಿಹುದನ್ನಪರಿಹಾರ ಗೈ ಗುರು | ಗೋವಿಂದ ವಿಠಲಯ್ಯ 5
--------------
ಗುರುಗೋವಿಂದವಿಠಲರು
ತಾಯಿ ಸೌಪರ್ಣೀದೇವೀ ನೀ |ಕಾಯದೆ ಜರಿಯಲನ್ಯರಾ ||ನಾನೆಲ್ಲೀ ಕಾಣೆನೆ ಧರೆಯೊಳು |ಮನಸಿರಲೀ ಶ್ರೀ ಅರಸನಲ್ಲೇವೇ ಕೇಳು ಪಕ್ಷೋಣಿಯೊಳಗೆ ಕ್ರಿಯಸ್ತರ |ಆ ನೆಲ್ಲೀ ನೋಡೆ ನಿನ್ನಂತೆ ||ಆ ನಾಗರಾಜನ ಮಾತೆಯ ಸೇವೆಯೊಳಿದ್ದೆ |ನಾನೆಂತು ಮಾಡಲೆ ಸ್ತುತೀಯಾ1ವಾರುಣೀ ಶ್ರೀ ರೇವತಿ |ಯಾ ರೂಪಿ ನಮಸ್ಕರಿಪೇ ||ನಾರಾಯಣನಾ ತೋರಿಸಮ್ಮಾ ದೋಷಗಳ ನೀ |ವಾರಿಸಿ ರಕ್ಷೀಸಬೇಕಮ್ಮಾ 2ಶ್ರೀಸತಿಪಾರ್ವತೀ ದಕ್ಷ |ಧ್ವಂಸೀ ಶುದ್ಧ ಪತಿವೃತೀ ||ಆ ಷಣ್ಮುಖನ ಜನನೀ | ಕಾಣಿಸು ಶ್ರೀ ಪ್ರಾ-ಣೇಶ ವಿಠ್ಠಲಾನ ಕರೂಣೀ 3
--------------
ಪ್ರಾಣೇಶದಾಸರು
ಭಾರತೀ ದೇವೀ ನಿನ್ನನು ದಿನಾ | ಸಾರುವರ ಕಾಯ್ವೀ ||ಮಾರಮಣನಪಾದವಾರಿಜಯುಗದಲೀ |ಚಾರುಭಕುತಿ ಕೊಡು ನಾರೀ ಶಿರೋಮಣಿ ಪಇಂದ್ರಸೇನಳೆವಿಪ್ರಕನ್ನಿಕೆ | ಚಂದ್ರೇ ಶ್ರೀಕಾಳೆ |ನೊಂದೆನೆ ಬಹಭವ| ಬಂಧನದೊಳು ವೇಗಾ |ದಿಂದ ಕಾಯೆ ಕರುಣಾಸಿಂಧುದ್ರೌಪದಿ ದೇವಿ 1ಮಾತೆ ಕೇಳೆಲೆ ಭವಟವಗೆ | ವೀತಿಹೋತ್ರಳೆ ||ಮಾತು ಮಾತಿಗೆ ಜಲಜಾತನಾಭನ ಸ್ತುತೀ |ಆತುಕೊಂಡಿರಲೆ ಶ್ರೀ | ಮಾತರಿಶ್ವನಾ ರಾಣೀ 2ಪತಿತ ಪಾವನೆ | ಶಿವ ಕನ್ಯಾ ಜಗದ್ವಿತತೆ ಜೀವನೆ ||ನುತಿಸಿಬೇಡಿಕೊಂಬೆನೆ | ಕ್ಷಿತಿಯೊಳೆಲ್ಲರೂ ಸನು |ಮತವನೈದಿ ಈ ಕೃತಿಗೆ ಮಂಗಳವೀಯೆ 3ದೋಷ ದೂರಳೇ | ಹರಿಭಕ್ತಿಯಲ್ಲಿ ಮೋಸ ತೋರಳೆ ||ಕಾಶಿ ನಂದನೆಯನ್ನಾ | ಯಾಸ ಬಡಿಸದಲೀ |ಶ್ರೀಶನ ಕಥಿಗೆ ವಿಶೇಷ ಬುದ್ಧಿಯನೀಯೆ 4ಮಾನನಿನ್ನದೆ | ಸತತ ಪೇಳ್ವದೇನು ಮಾಣದೇ ||ಪ್ರಾಣೇಶ ವಿಠಲನ ಧ್ಯಾನದೊಳಿರುವಂತೆ |ಪೋಣಿಸುವದು ಮತಿ ಬಾಣ ವರದ ನುತೆ5
--------------
ಪ್ರಾಣೇಶದಾಸರು