ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಭಕುತಿಯಲಿ ಮನವಸ್ಥಿರವ ಗೊಳ್ಳಲಿಬೇಕು ಅರತು ಸದ್ಭಾವದಲಿ ದೃಢಗೊಳ್ಳಬೇಕು ಧ್ರುವ ನಿಶ್ಚಯವಿಡಬೇಕು ದುಶ್ಚಲವ ಬಿಡಬೇಕು ನಿಶ್ಚಿಂತದಲಿ ನಿಜಸುಖ ಪಡೆಯಬೇಕು 1 ನಂಬಿನಡಿಯಬೇಕು ಡಂಭಕವ ಬಿಡಬೇಕು ಹಂಬಲಿಸಿ ಅಂಬುಜಾಕ್ಷನ ನೋಡಬೇಕು 2 ವಿಶ್ವಾಸವಿಡಬೇಕು ವಿಷಗುಣವ ಬಿಡಬೇಕು ವಿಶ್ವವ್ಯಾಪಕನ ವಿಶ್ವದಿ ನೋಡಬೇಕು 3 ರತಿ ಪ್ರೇಮ ಬಿಡಬೇಕು ಅತಿ ಹರುಷ ಪಡಬೇಕು ಸ್ತುತಿಸ್ತವನವನು ಪಾಡಿಗತಿ ಪಡೆಯಬೇಕು 4 ಆರು ಜರಿಯಬೇಕು ಮೂರು ಹರಿಯಬೇಕು ಅರಿತು ಗುರುಪಾದ ಮಹಿಪತಿಬೆರೆಯಬೇಕು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು