ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಕ್ಕೊ ಇಲ್ಲೆ ಸಿಕ್ಕಿದ ಶ್ರೀಗುರು ಪರಬ್ರಹ್ಮ ತೆಕ್ಕಿಸಿಕೊಂಬುವ ಬನ್ನಿ ಅಖರದಿ ನಮ್ಮ ಧ್ರುವ ಎಂದಿಗೆ ಬಿಡಬಾರದಿನ್ನು ತಂದೆ ನಮ್ಮಪ್ಪನ ಹೊಂದಿ ಸುಖಿಯಾಗಬೇಕು ಭಕ್ತಪಾಲಿಪನ ವಂದಿಸಬೇಕಿಂದು ಸಹಸ್ರಳದಲಿಪ್ಪನ ಸಂದೇಹವಿಲ್ಲದೆ ನೋಡಿ ಸ್ವರ್ಗಕೆ ಸೋಪಾನ 1 ಹರುಷವಾಯಿತು ಎನಗೆ ಧರೆಯೊಳಿಂದು ನೋಡಿ ಕರುಣಾಳು ಗುರುಮೂರ್ತಿಯ ಸ್ತುತಿಸ್ತವನ ಪಾಡಿ ಎರಡಿಲ್ಲದೆ ಶ್ರೀಚರಣ ವರಕೃಪೆಯ ಬೇಡಿ ಶಿರಸಾ ನಮಿಸಿದೆ ಗರ್ವಾಂಹಕಾರ ಈಡ್ಯಾಡಿ2 ಲೇಸುಲೇಸಾಯಿತು ನಮ್ಮ ವಾಸುದೇವನ ಕಂಡು ಭಾಸ್ಕರಕೋಟಿ ತೇಜನ ಸ್ಮರಣಿಯ ಸವಿಯುಂಡು ವಾಸನೆ ತೃಪ್ತ್ಯಾಯಿತು ಶ್ರೀಯೀಶನಾ ಮನಗಂಡು ದಾಸಮಹಿಪತಿಗಾನಂದವಾಯಿತು ಸದ್ಗತಿ ಸೂರೆಗೊಂಡು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಭಕುತಿಯಲಿ ಮನವಸ್ಥಿರವ ಗೊಳ್ಳಲಿಬೇಕು ಅರತು ಸದ್ಭಾವದಲಿ ದೃಢಗೊಳ್ಳಬೇಕು ಧ್ರುವ ನಿಶ್ಚಯವಿಡಬೇಕು ದುಶ್ಚಲವ ಬಿಡಬೇಕು ನಿಶ್ಚಿಂತದಲಿ ನಿಜಸುಖ ಪಡೆಯಬೇಕು 1 ನಂಬಿನಡಿಯಬೇಕು ಡಂಭಕವ ಬಿಡಬೇಕು ಹಂಬಲಿಸಿ ಅಂಬುಜಾಕ್ಷನ ನೋಡಬೇಕು 2 ವಿಶ್ವಾಸವಿಡಬೇಕು ವಿಷಗುಣವ ಬಿಡಬೇಕು ವಿಶ್ವವ್ಯಾಪಕನ ವಿಶ್ವದಿ ನೋಡಬೇಕು 3 ರತಿ ಪ್ರೇಮ ಬಿಡಬೇಕು ಅತಿ ಹರುಷ ಪಡಬೇಕು ಸ್ತುತಿಸ್ತವನವನು ಪಾಡಿಗತಿ ಪಡೆಯಬೇಕು 4 ಆರು ಜರಿಯಬೇಕು ಮೂರು ಹರಿಯಬೇಕು ಅರಿತು ಗುರುಪಾದ ಮಹಿಪತಿಬೆರೆಯಬೇಕು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವತಾಸ್ತುತಿ ಸರ್ವೋತ್ತಮನ ಸ್ತುತಿಗೆ ಸರಿಬೆಸದಕ್ಷರದೆಣಿಕ್ಯಾಕ ಧ್ರುವ ಯತಿ ಫಲ ಗಣ ಪ್ರಾಸವ್ಯಾಕೆ ಸ್ತುತಿಸ್ತವನ ಕೊಂಡಾಡಲಿಕ್ಕೆ ಹಿತದೋರದು ಮಿತಿ ಮಾಡಲಿಕ್ಕೆ ಅತಿ ಶೋಧಿಸಲಿಕ್ಕೆ 1 ಮುತ್ತಿಗೆ ಬುದ್ಯುಶದೆಂದು ಉತ್ತಮರಪೆಕ್ಷರೆಂದೆಂದು ನೆತ್ತಿಲಿಟ್ಟು ಕೊಂಬರು ಬಂದು ಅತಿ ಪ್ರೀತಿಲೆ ನಿಂದು 2 ಸಾರಸ ಸ್ವಾನಂದದ ಸರಳು ಮತಿ ಹೀನರು ಬಲ್ಲರೇನದರೊಳು ಮಾತಿನ ಮರಳು 3 ಬಾಯಲಿ ಧೂಳಿ ಪರಿ ಸ್ತುತಿಯಲಿ 4 ಮಹಿಪತಿ ಸ್ತುತಿನುಡಿದು ಅಪ್ಪವ್ವನುತಾ ಎನ್ನ ಕಡಿಯ ತಪ್ಪನೆ ತುಸು ಹಿಡಿಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಲಹು ಸಲಹು ಸಲಿಲಜಾಂಬಕ ಸಲಹು ತ್ರಿಭುವನ ಜೀವನಾ| ವಿನುತ ಪದಪಾವನಾ| ನೆಲಿಗೆ ಪಡೆದಿಹೆ ಕಾವನಾ| ಸುಲಭನಾಗ್ಯತಿ ಸಲಿಸುತಿರುತಿಹ|ಒಲಿದು ಭಕ್ತರ ಭಾವನಾ 1 ಕರವ ದರಿತು ಶರಣವ ಬಂದೆನಾ| ಕೊರತೆ ನೋಡದೆ ಹಿಂದಿನಾ| ಅರಹು ಮತಿಯಲಿ ಮಂದನಾ| ಹರಿಯ ಸಾರ್ಥಕ ನರಜನುಮವನು | ಭರದಿ ಮಾಡು ನೀ ಇಂದಿನಾ 2 ಪತಿ ಸಖಗತಿಗೆಳೆಯ ಸುತ|ಪಿತನ ಪರಿಯಲಿ ಲಾಲಿಸಿ| ಶೃತಿ ವಿಹಿತ ತವ ಸ್ತುತಿಸ್ತವ ಪಾಡುತಿಹೆ ನೆರೆಯಲಿ ಬಾಳಸೀ| ಹಿತವನರಿಯದ ಮತಿ ವಿಹೀನೋ|ನ್ಮತರ ಸಂಗವ ಜಾಳಿಸೀ| ಪತಿತನು ದ್ಧರಿಸ್ಸತುಳ ಮಹಿಪತಿ | ಸುತ ಪ್ರಭುವೇ ದಯಪಾಲಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಹರಿ ಹರಿ ಹರಿ ಹರಿಯೆನಬೇಕು ಹರಿ ಸ್ಮರಣೆಯೋಳನುದಿನವಿರಬೇಕು ಧ್ರುವ ಹರಿಯೇ ಶ್ರೀ ಪರಬ್ರಹ್ಮೆನಬೇಕು ಹರಿ ಪರಂದೈವೆವೆಂದರಿಬೇಕು ಹರಿಯೇ ತಾ ಮನದೈವೆನಬೇಕು ಹರಿ ಋಷಿ ಮುನಿಕುಲಗೋತ್ರೆನಬೇಕು 1 ಹರಿಯೇ ತಾಯಿತಂದೆನಬೇಕು ಹರಿಯೇ ನಿಜ ಬಂಧುಬಳಗೆನಬೇಕು ಹರಿಯೇ ಆಪ್ತ ಮೈತ್ರೆನಬೇಕು ಹರಿಕುಲಕೋಟೀ ಬಳಗೆನಬೇಕು 2 ಹರಿಯೇ ಸಲಹುವ ದೊರೆಯನಬೇಕು ಹರಿ ಸುಖ ಸೌಖ್ಯದ ಸಿರಿಯೆನಬೇಕು ಹರಿ ನಾಮವೆ ಧನದ್ರವ್ಯೆನಬೇಕು ಹರಿಸ್ಮರಣೆಯು ಸಂಪದವೆನಬೇಕು 3 ಹರಿದಾಸರ ಸಂಗದಲಿರಬೇಕು ಹರಿಭಕ್ತರ ಅನುಸರಿಸಿರಬೇಕು ಹರಿಚರಣದಿ ರತಿಮನವಿಡಬೇಕು ಹರಿ ನಿಜರೂಪವ ನೋಡಲಿಬೇಕು 4 ಹರಿ ಮಹಿಮೆಯ ಕೊಂಡಾಡಲಿಬೇಕು ಹರಿಸ್ತುತಿಸ್ತವನ ಪಾಡಲಿಬೇಕು ಹರಿತಾರಕ ಪರಬ್ರಹ್ಮೆನಬೇಕು ಹರಿ ಸರುವೋತ್ತಮ ಸ್ವಾಮೆನಬೇಕು 5 ಹರಿಯೇ ಸಕಲ ತಾ ಧರ್ಮನಬೇಕು ಹರಿ ಸರ್ವಮಯ ಪುಣ್ಯಕ್ಷೇತ್ರೆನಬೇಕು ಹರಿಯೇ ಇಹಪರ ಪೂರ್ಣೆನಬೇಕು ಹರಿ ಸದೋದಿತ ಸಹಕಾರೆನಬೇಕು 6 ಹರಿ ಬಾಹ್ಯಾಂತರೇಕೋಮಯವೆನಬೇಕು ಹರಿ ಸಕಲವು ವ್ಯಾಪಕವೆನಬೇಕು ಹರಿಯೇ ಶ್ರೀ ಪರಮಾತ್ಮೆನಬೇಕು ಹರಿ ಮಹಿಪತಿ ಸದ್ಗತಿಯೆನಬೇಕು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು