ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತೀ ಭವಹಾರಿಯೆ | ಭಕ್ತರಪ್ರಿಯೆ | ಭಾರತೀ ಭವಹಾರಿಯೇ ಪ ಈರೈದು ಇಂದ್ರಿಯಗಳುಗಾರು | ಮಾಡದಂತೆ ಸಾಕಾರವಾಗಿ ಪಾಲಿಸು ಅ.ಪ. ಮತಿವಂತನ ಮಾಳ್ಪುದು | ಇದಕೆ ನಿನ್ನ | ಪತಿಯ ಈಗಲೆ ಕೇಳ್ವುದು | ಕ್ಷಿತಿಯೊಳು ಹೀನರ ಸ್ತುತಿಸಲರಿಯೆ | ಮು- ಕುತಿ ಮಾರ್ಗವ ತೋರಿ ಭಕುತಿ ಬೇಗ ಒದಗಿಸು 1 ಮಹತ್ತತ್ವದಭಿಮಾನಿ ನೀ | ಕಲಿರಹಿತೆ | ಅಹಿಪತಿ ಅಪ್ಪ ಖಗಪ ಜನನೀ || ಮಹಾಪ್ರಮಾಣು ವ್ಯಾಪುತೆ ಸರ್ವಜೀವರ | ದೇಹದಲಿ ನಿಂದು ಶ್ರೀಹರಿ ಆರಾಧನೆಯ ರಹಸ್ಯವ 2 ಶರಣು ಶರಣು ಗುಣಮಣಿ | ಚಂದ್ರಪ್ರಕಾಶೆ | ಪಾವನಿ ಕಲ್ಯಾಣಿ ತರತಮ್ಯ ಭಾವದಿ || ಅರಿದು ಕೊಂಡಾಡುವ ಚಿಂತೆ ಇರಲಿ | ವಿ- | ಸ್ಮರಣೆಯಾಗದಂತೆ ವಿಜಯವಿಠ್ಠಲನ್ನ ನಿರುತ ಪೊಂದಿಸು 3
--------------
ವಿಜಯದಾಸ
ಶ್ರೀ ವಾದಿರಾಜರು ಕರುಣದಿ ನೋಡೋ ಮದ್ಗುರುವರ ವಾದಿರಾಜನಂಬಿದ ಭಕ್ತರ ಸುರತರುವೇ ಪ ಪರಿಪರಿ ಭವಸಾಗರದಲಿ ಮುಳುಗುವತರಳನ ಮರೆವುದು ಥರವೇ ಅ.ಪ. ನಿಗಮ ವಿನುತ ಹಯವದನನಬೇಗ ಒಲಿಸಿದೆ ನೀ ಮುದದಿಯೋಗ ಜಿತಾಸನನಾಗಿರುವನೆ ತಲೆಬಾಗುವೆ ಭಯವಳಿ ತ್ವರಿತ 1 ವಾದದೊಳ್ ವಾದಿಗಳನೆ ಗೆದ್ದು ಗುರುಮತಸಾಧಿಸಿದೆಯೊ ಬಲವಂತಸಾಧು ಸೇವಿತ ನಿನ್ನ ಪಾದವ ನಂಬಿದೆ ಭವಬಾಧೆ ಕಳೆಯೋ ಮಹಂತಕ್ರೋಧ ರಹಿತ ಪಂಚಭೇಧ ಸುಜ್ಞಾನವಬೋಧಿಸುವ ದಯವಂತ 2 ಅತಿ ವಿಮಲನೆ ನಿನ್ನ ಸ್ತುತಿಸಲರಿಯೆ ನಾನುಮತಿವಂತನೆ ಮಹಾದಾತಾಸತತ ಬೇಡುವೆನು ಶ್ರೀಪತಿ ಭಜನೆಗೆ ಮನಜಿತವಾಗಿ ಇರಲಯ್ಯ ತಾತಕ್ಷಿತಿಯೊಳು ಕಂಡ ದುರ್ಮತಿಗಳ ಬಿಡಿಸೋದತಿ ಅಧಿಕವೇನೋ ಅನಾಥನಾಥಪತಿತ ಪಾವನ ರಮಾಪತಿ ವಿಠಲನ ನಿರುತ ನೋಳ್ಪ ಲಾತವ್ಯಬ್ಯಾತ 3
--------------
ರಮಾಪತಿವಿಠಲರು
ಕರುಣಿಸೋ ರಂಗಾ ಕರುಣಿಸೋ ಪಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ ಅ.ಪರುಕುಮಾಂಗದನಂತೆ ವ್ರತವನಾನರಿಯೆನುಶುಕಮುನಿಯಂತೆ ಸ್ತುತಿಸಲರಿಯೆ ||ಬಕವೈರಿಯಂತೆ ಧ್ಯಾನವ ಮಾಡಲರಿಯೆ ದೇವಕಿಯಂತೆ ಮುದ್ದಿಸಲರಿಯೆನು ರಂಗಾ 1ಗರುಡನಂತೆ ಪೊತ್ತು ತಿರುಗಲರಿಯೆ ನಾನುಕರಿರಾಜನಂತೆ ಕರೆಯಲರಿಯೆ ||ಮರಕಪಿಯಂತೆ ಸೇವೆಯ ಮಾಡಲರಿಯೆನುಸಿರಿಯಂತೆ ನಿನ್ನ ಮೆಚ್ಚಿಸಲರಿಯೆ ರಂಗಾ 2ಬಲಿಯಂತೆ ದಾನವ ಕೊಡಲರಿಯೆನು ಭಕ್ತಿಛಲವನರಿಯೆ ಪ್ರಹ್ಲಾದನಂತೆ ||ಒಲಿಸಲರಿಯೆ ಅರ್ಜುನನಂತೆ ಸಖನಾಗಿಸಲಹೋ ದೇವರದೇವಪುರಂದರವಿಠಲ3
--------------
ಪುರಂದರದಾಸರು