ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತವತ್ಸಲ ಭಾರಕರ್ತಾ | ಕರುಣವಂತ ನಿತ್ಯ ನಿರ್ಮಲ ಸರ್ವ ಶಕ್ತ | ಶಾಂತಾತ್ಮಕ ಪ. ಸುತ್ತ ವಿರಜೆ ಉನ್ಮತ್ತ ಮುಕ್ತರ ನೃತ್ಯ ಗೀತೆ ವೈಚಿತ್ರದೋಲಗವು ಇತ್ತಂಡದಿ ಮೈಹತ್ತಿ ಕುಳಿತ ಸತಿಯ ರೆತ್ತಲಿತ್ತ ಬಂದ ಚಿತ್ರ ಮಹಿಮ ಹೇ ಅ.ಪ. ವಿಹಂಗ ಗಮನ ತು- ರಂಗರೂಪನೆ ಅಂತರಂಗದಿ ನೆಲಸಿ ಸು- ಸಂಗದಿಂದಲಿ ಲಿಂಗ ಭಂಗಗೈಸುತ ಜ- ನ್ಮಂಗಳ ಕಡೆ ಮಾಡು ರಂಗ ಕರುಣಾಪಾಂಗ ಇಂಗಡಲಳಿಯನೆ ತುಂಗ ಮಹಿಮ ನರ- ಸಿಂಗ ನಿನ್ನಯ ಚರಣಂಗಳ ತೋರಿಸೋ ಭಂಗಪಡುವೆ ಭವಹಿಂಗಿಸಿ ಪೊರೆ ಕಾ- ಳಿಂಗ ಮಥನ ಯದುಪುಂಗವ ಕರುಣಿ 1 ಗತಿ ನೀನೆ ಎಂದು ಶ್ರೀಪತಿ ನಿನ್ನ ಮೊರೆಹೊಕ್ಕೆ ಹಿತದಿಂದ ಕಾಯೊ ದ್ರೌಪದಿಯ ಕಾಯ್ದಂಥ ದೈವ ಚ್ಯುತದೂರ ಮುಕ್ತರ ಸ್ತುತಿಪ್ರಿಯ ಶ್ರೀ ವಾಯು- ಪಾದ ಪ್ರತಿ ಕಾಣೆ ನಿನಗೆಣೆ ಕರ್ಮ ಸು- ಪಥ ಕಾಣೆನು ಗತಿಯಿಲ್ಲದೆ ಶ್ರೀ- ಪತಿ ಕೃಪೆ ಮಾಡುತ ತತುವ ಮಾನಿಗಳ ಕೃತಿ ತಿಳಿಸುತ ನಿನ ತುತಿಸುವ ಮತಿಕೊಡು 2 ಗೋಪಿಕಂದನೆ ಬಾಲರೂಪಧಾರಕ ಮಧ್ವ- ರಪಾರ ಸ್ತುತಿ ಕೇಳಿ ಗೋಪೀಚಂದನದಿ ಬಂದು ಪರಿ ನಿಂತ ದೇವಪತಿ ಜನಗಳ ಪೊರೆದು ಕಾಪಾಡುವ ಕರ್ತ ಗೋಪಾಲಕೃಷ್ಣವಿಠ್ಠಲ ಶ್ರೀಪದ್ಮಜಮುಖ ಸುರಾಪ ಧರೇಂದ್ರರು ತಾಪಸಿಗಳೂ ನಿನ್ನ ವ್ಯಾಪಾರ ತಿಳಿಯದೆ ಗೋಪ್ಯಾದಿ ನುತಿಸಿ ಸ್ವರೂಪ ಯೋಗ್ಯತೆಯಂತೆ ವ್ಯಾಪಕ ನಿನ್ನಯ ರೂಪವ ಕಾಂಬರು 3
--------------
ಅಂಬಾಬಾಯಿ
ಭವ ಕಾಮಹರ ನಿನ್ನಂಘ್ರಿ ತಾಮರಸಯುಗಳ ಭಜಿಸುವೆ | ಭಜಿಸಿ ಬಿನ್ನೈಸುವೆ ಶ್ರೀ ಮನೋಹರನ ತೋರಯ್ಯ 1 ಕೃತ್ತಿವಾಸನೆ ಎನ್ನ ಚಿತ್ತದಲಿ ಹರಿಯಪದ ನಿತ್ಯದಲಿ ಭಜಿಪ ಮತಿ ನೀಡೊ | ಮತಿ ನೀಡೊ ಪಾರ್ವತಿ ಚಿತ್ತದೊಲ್ಲಭನೆ ನಮಿಸುವೆ 2 ಸುವರ್ಣಮುಖರಿಯ ತೀರದಲಿ ನೆಲಸಿರುವೆ ಶ್ರೀ ವರಾಹನಂಘ್ರಿ ಭಜಿಸುತ್ತ | ಭಜಿಸುತ್ತ ನೆಲಸಿರುವ ಪಾವನರೂಪ ಸಲಹಯ್ಯ 3 ಕಾಳಸ್ತಿನಿಲಯನೆ ಪೇಳಲಿನ್ನೇನು ನಾ ತಾಳಲಾರೆನು ಈ ಭವಬಂಧ | ಭವಬಂಧ ಬಿಡಿಸುವ ವ್ಯಾಳ ಶಯನನ್ನ ತೋರೈಯ್ಯ 4 ಭಕ್ತರಿಗೊಲಿದು ಅಪಮೃತ್ಯು ಪರಿಹರಿಸಿದೆ ಸತ್ಯ ಸಂಕಲ್ಪ ನಿನ್ನಂಘ್ರಿ | ನಿನ್ನಂಘ್ರಿ ಕಮಲಗಳ ಚಿತ್ತದಲಿ ತೋರಿ ಸಂತೈಸು 5 ಮನಕೆ ಗುರು ನೀನಹುದು ಮನವ ಹರಿಯಲಿ ನೆಲಸೊ ವೈರಿ ಮಮತೆಯಿಂ | ಮಮತೆಯಿಂದಲಿ ನಿತ್ಯ ಮನಶುದ್ಧಿಗೈದು ಕಾಯಯ್ಯ 6 ಶಂಖಚಕ್ರವ ಪಿಡಿದ ಸಂಕರ್ಷಣನ ರೂಪ ನಿತ್ಯ ಭಜಿಸುವೆ | ಭಜಿಸುವೆ ಕೈಲಾಸ ಅಂಕದಲಿ ನೆಲಸಿ ಹರುಷದಿ 7 ನರಸಿಂಹ ರೂಪವನು ಸ್ಮರಿಸುತ್ತ ಮೈಮರೆವೆ ಉರುತರ ಭಾವ ಭಕ್ತಿಯಲಿ | ಭಕ್ತಿಯಲಿ ಭಜಿಪ ನಿನ್ನ ಸ್ಮರಿಸುವರ ಭಯವ ಹರಿಸುವೆ 8 ಶ್ರೀ ರಾಮನಾಮವನು ಪ್ರೇಮದಿಂದುಮೆಗರುಹಿ ಆರಾರು ಅರಿಯದಾನಂದ | ಆನಂದವಿತ್ತೆ ಭವ ತಾರಕವೆಂದು ಕರುಣಾಳೂ 9 ಅಜನ ಭ್ರೂಮಧ್ಯದಲಿ ಜನಿಸಿದೆಯೊ ಜಗದಲ್ಲಿ ಭಂಜನ | ಭಂಜನಗೊಳಿಸಿದೆ ತ್ರಿಜಗದಲಿ ನಿನಗೆ ಸರಿಯುಂಟೆ 10 ಶೇಷ ಪರ್ಯಂಕನಿಗೆ ಹಾಸಿಗೆಯಾಗಲು ತೋಷದಲಿ ತಪವಾಚರಿಸಿದೆ | ಚರಿಸಿ ಸಾಧಿಸಿದೆ ನೀ ಶೇಷ ಪದವಿಯನು ತ್ರಿನೇತ್ರ 11 ಶರಧಿ ಮಥಿಸಲು ಗರಳ ಉದ್ಭವಿಸಿ ಭಯವಾಗೆ | ಭಯವಾಗಿ ಪರಿಹರಿಸಿ ಗರಳವನೆ ಕುಡಿದೆ ಶ್ರೀ ಕಂಠ 12 ಅಸುರರ ವಂಚಿಸಿದ ವಶವಲ್ಲದ ಹೆಣ್ಣು ವಶವಾಗಲೆಂದು ಹಾರೈಸಿ | ಹಾರೈಸಿ ಬಳಲುತಿರೆ ಬಿಸಜಾಕ್ಷ ನಿನ್ನ ಸಲಹಿದ 13 ತಾರಕಾಸುರನಿಂದ ಘೋರಪಡುತಿರೆ ಜಗವು ಮಾರ ಪೂಅಸ್ತ್ರ ಎಸೆಯಲು | ಎಸೆಯಲು ದಹಿಸಿ ಕು- ಮಾರನನು ಪಡೆದೆ ಗಿರಿಜೇಶ 14 ಸ್ತುತಿಪ್ರಿಯ ನಿನ್ನ ನಾ ಸ್ತುತಿಸಲಾಪೆನೆ ಮಂದ ಮತಿ ಎಂದು ನೀನೆ ಸಂತೈಸೊ | ಸಂತೈಸಬೇಕಿನ್ನು ಮತಿಯಿತ್ತು ಹರಿಯ ಪದದಲ್ಲಿ 15 ಶಿರದಲ್ಲಿ ಗಂಗೆ ಚಂದ್ರನ ಮೆರೆಯುವ ಉರಗ ಭೂಷಣನೆ ಕೇಳಿನ್ನು | ಕೇಳಿನ್ನು ಎನ್ನ ಮನ ಮರೆಯದೆ ಹರಿಯ ನೆನೆಯಲಿ 16 ವಿಷ್ಣು ಭಕ್ತರೊಳಗೆ ಶ್ರೇಷ್ಠ ನೀನಹುದಯ್ಯ ಜಿಷ್ಣುವಿಗೆ ಮೆಚ್ಚಿ ಧನುವಿತ್ತೆ | ಧನುವಿತ್ತೆ ಗೋಪಾಲ- ಕೃಷ್ಣವಿಠ್ಠಲನ ತೋರಯ್ಯ 17
--------------
ಅಂಬಾಬಾಯಿ
ಶರಣು ಶರಣುಪರಮಪುರುಷಶರಣು ಭಯಶರ ಖಂಡನಶರಣುಸಿರಿವಿಧಿಮರುತ ಪೂಜಿತಶರಣು ವೆಂಕಟನಾಯಕ ಪ.ಭಾಸಿತ ತಟಿತಮಕರಕುಂಡಲಭಾಸಕರ ಶಶಿಲೋಚನಸಾಸಿರಶತ ವೇದವಂದಿತವಾಸವಾರ್ಚಿತ ಪದಯುಗದೇಶಕಾಲ ಸುವ್ಯಾಪ್ತಾಜಾಂಡ ವಿಶೇಷಸ್ಥಿತಿಲಯಶೀಲನೆತೋಷಮಂದ ಸುಹಾಸವದನನೆಶೇಷಗಿರೀಶ ನಮೋ ಹರೆ 1ಶಂಖ ಚಕ್ರಗದೆ ಪದುಮ ವರಾಭಯಕಂಕಣಕರ ರಾಜಿತಕುಂಕುಮಮೃಗಮದತಿಲಕಧರಾತಂಕಕುಂಭಿಮೃಗಾಧಿಪಕಿಂಕರಾನತ ರಕ್ಷಕರಿಪುಶಂಖ ದೈತ್ಯ ವಿಶಿಕ್ಷಕಪಂಕಜಾನನ ಗರುಡವಾಹನಅಂಕಿತಾಖಿಳ ಭೂಷಣ 2ಜನನ ಮೃತ್ಯುವಿದೂರಅಚ್ಯುತಮುನಿಮನಾಲಯಮಾಧವಕನಕನೇತ್ರವಿದಾರಿ ಪೋತ್ರ್ಯಾಂಗನೆ ವಿಮಲಗುಣ ಪೂರ್ಣನೆದನುಜನಿಕರಾಟವಿ ದಾವಾನಲಸನಕಸನಂದನ ಸ್ತುತಿಪ್ರಿಯಅನವರತವರಸ್ವಾಮಿಪುಷ್ಕರಸನ್ನಿದ ಪ್ರಸನ್ವೆಂಕಟೇಶನೆ 3
--------------
ಪ್ರಸನ್ನವೆಂಕಟದಾಸರು