ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ಕಮಲೇಶ ಸರ್ವೇಶ ಕರುಣಿಸು ಕಮಲೇಶ ಪ. ಶರಣಾಗತ ರಕ್ಷಕ ವೆಂಕಟೇಶ ನಿರುತದಿ ಪ್ರಾರ್ಥಿಪೆ ಲಕ್ಷ್ಮೀಶ ಅ.ಪ. ವೇದ ಶಾಸ್ತ್ರ ಪುರಾಣವನರಿಯೆ ಆದಿ ಮೂರುತಿ ಪ್ರಹ್ಲಾದವರದನೆ ಆದರದಲಿ ನಿನ್ನ ಸ್ತುತಿಸುವೆ ದೇವ ಮೋದದಿಂದಲಿ ಕಾಯೋ ಪಾದಸೇವಕರಾ 1 ಜಪವ ನಾನರಿಯೆ ತಪವ ನಾನರಿಯೆ ಉಪವಾಸ ವ್ರತಮೊದಲರಿಯೆ ದೇವಾ ಅಪರಿಮಿತ ಪಾಪ ಗಳಿಶಿಹೆನೋ ಸುಪವಿತ್ರನನು ಮಾಡೊ ಅಪಾರ ಮಹಿಮಾ 2 ನಿನ್ನ ನಂಬಿಹೆನೊ ಅನ್ಯರನರಿಯೆನೊ ಎನ್ನಪರಾಧವ ಮನ್ನಿಸೊ ದೊರೆಯೆ ಚೆನ್ನಿಗ ಶ್ರೀ ಶ್ರೀನಿವಾಸನ ಸ್ತುತಿಪೆನೊ ಇನ್ನು ಸಂಶಯವ್ಯಾಕೊ ಪನ್ನಗಾದ್ರಿವಾಸ 3
--------------
ಸರಸ್ವತಿ ಬಾಯಿ
ಚಿನ್ನದ ಚಾವಡಿ ಮ್ಯಾಲೆ ಪನ್ನಂಗಶಯನರು ಮಾನ್ಯ ಮಾನ್ಯರು ಮುಕ್ತರು ಮುಕ್ತರನೆ ನೋಡುತಲಿಇನ್ಯಾರ ಭಯವು ನಮಗಿಲ್ಲ 1 ಮುತ್ತಿನ ಚಾವಡಿ ಮ್ಯಾಲೆ ಮುಕ್ತರನೆ ನೋಡುತಲಿ ಲಕ್ಷ್ಮಿನಾರಾಯಣರು ಕುಳಿತಾರೆ ಕುಳಿತು ನೋಡುತಲಿರಲು ಮತ್ಯಾರ ಭಯವೂ ನಮಗಿಲ್ಲ 2 ಯಮಧರ್ಮರಾಯಗೆ ನಮೋ ನಮೋ ನಾನೆಂಬೆ ಘನ ಗುಣ ಮಹಿಮ ನೀನೆಂದು ನೀನೆಂದು ಸ್ತುತಿಪೆನೊ ಅನುಮಾನವೇಕೆ ಸಲಹೆನ್ನ 3 ರಂಗ ರಂಗಾಯೆಂದು ರಂಗನ್ನ ನೆನೆದರೆ ಹಿಂಗೋದು ಸಕಲ ದಾರಿದ್ರ್ಯ ದಾರಿದ್ರ್ಯ ಕಳೆವಂಥ ಮಂಗಳಾಂಗಿಯೆ ಶ್ರೀ ಮಾಲಕ್ಷ್ಮಿ 4 ಸಾಮಜವರದನು ಭೀಮೇಶಕೃಷ್ಣನು ಕಾಮಿತಾರ್ಥಗಳ ಕೊಡುವೋನು ಕೊಡುವಂಥ ಶ್ರೀಹರಿಯೆ ಪ್ರೇಮದಲಿ ಎನ್ನ ಸಲಹಲಿ 5
--------------
ಹರಪನಹಳ್ಳಿಭೀಮವ್ವ
ಶ್ರೀ ಕರಗ್ರಹ ಎನ್ನ ಸಾಕಲಾರದÉ ಹೀಗೆ ನೂಕಿ ಬಿಡುವುದು ನ್ಯಾಯವೆ ಪ. ಬೇಕೆಂದು ನಿನ್ನ ಪದ ನಾ ಕಾಣ ಬಂದರೆ ಈ ಕಪಟತನವು ಸರಿಯೆ ಹರಿಯೆ ಅ.ಪ. ಎಲ್ಲರನು ಸಲಹಿದಂತೆನ್ನ ನೀ ಸಲಹೆನ ನಿಲ್ಲದೆ ನೀರ ಪೊಗುವೆ ಸೊಲ್ಲು ಸೊಲ್ಲಿಗೆ ನಿನ್ನ ಸ್ತುತಿಪೆನೊ ಬಾರೆನಲು ಕಲ್ಲಡೀ ಅವಿತುಕೊಳುವೆ ಖುಲ್ಲನಲ್ಲವೊ ನಾನು ತಲ್ಲಣಿಪೆ ಪೊರೆ ಎನಲು ಹಲ್ಲು ಕೋರೆಯ ತೋರುವೆ ಎಲ್ಲಿ ಹೋಗಲೊ ನಾನು ಇಲ್ಲವೊ ಇನ್ನೊಬ್ಬ ಸೊಲ್ಲು ಕೇಳುವರನರಿಯೆ | ದೊರೆಯೆ 1 ತಡಬಡಿಸುತಿಹೆನೆನ್ನ ಪಿಡಿದು ಕೈ ಸಲಹೆನಲು ಘುಡು ಘುಡಿಸಿಕೊಂಡು ಬರುವೆ ಬಡವನೋ ನಾನು ನಿನ್ನಡಿಯನೇ ನೀಡೆನಲು ಹುಡುಗತನದಲಿ ಬೇಡುವೆ ತಡೆಯಲಾರೆನೊ ಭವದ ದಡವ ಸೇರಿಸು ಎನಲು ಕೊಡಲಿಯ ಪಿಡಿದು ಬರುವೆ ಕಡು ಬವಣೆ ಬಿಡಿಸೆಂದು ಅಡಿಗಡಿಗೆ ಎರಗಲು ಅಡವಿ ಅಡವಿಯ ತಿರುಗುವೆ | ಥರವೇ 2 ಹತ್ತು ನಾಲ್ಕು ಲೋಕಕೆ ತೆತ್ತಿಗನೊ ನೀನೆನಲು ಮುತ್ತ್ಯದೊರೆ ಎಂದೆನ್ನುವೆ ಸುತ್ತಿರುವ ಆವರಣ ಮತ್ತೆ ನೀ ಛೇದಿಸೆನೆ ಬತ್ತಲೆ ನೀ ನಿಲ್ಲುವೆ ಭೃತ್ಯ ನಾ ನಿನಗೆನಲು ಹತ್ತಿ ಕುದುರೆಯ ಓಡುವೆ ನಿತ್ಯ ಮೂರುತಿ ನಿನ್ನ ಕೃತ್ಯವೇ ಹೀಗಿರಲು ಮತ್ತಿನ್ನ ಹ್ಯಾಗೆ ಪೊರೆವೆ | ಕರೆವೆ 3 ದÉೂರೆಯು ನೀ ಜಗಕೆಂದು ಸುರರೆಲ್ಲ ನುಡಿಯುವರೊ ಅರಿಯೆ ನಾನದರ ಮಹಿಮೆ ಸಿರಿಗೊಡೆಯನಾದರೆ ಪೊರೆಯದೆಲೆ ಎನ್ನನು ಕರೆಕರೆಗೊಳಿಸುವರೆ ತಿರಿಯ ಬರಲಿಲ್ಲ ನಾ ಸಿರಿಯ ನೀಡೆಂದೆನುತ ಉರುತರದ ಭಯವೇತಕೆ ಚರಣ ಧ್ಯಾನವನಿತ್ತು ಪರಮ ಭಕ್ತರೊಳಿಡಿಸಿ ದೊರೆಯೆ ನೀ ಸಲಹ ಬೇಕೋ | ಸಾಕೋ4 ಆಪಾರ ಮಹಿಮನೆ ಆರ್ತಜನ ರಕ್ಷಕ ಪಾಪಿ ನಾನಿಹೆನೋ ಈಗ ನೀ ಪಿಡಿದು ಪೊರೆಯದಿರೆ ಕಾಪಾಡುವವರ್ಯಾರೊ ಶ್ರೀ ಪತಿಯೆ ನೀನೆ ತೋರೊ ತಾಪಪಡಲಾರೆ ಭವಕೂಪದೊಳು ಬಿದ್ದಿಹೆನು ನೀ ಕೃಪಾದಿಂದೀಕ್ಷಿಸೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಕಾಪಾಡುವವರನರಿಯೆ ದೊರೆಯೆ 5
--------------
ಅಂಬಾಬಾಯಿ
ನೀನೇ ದಯಾಳು ನಿರ್ಮಲಚಿತ್ತ ಗೋವಿಂದನಿಗಮಗೋಚರ ಮುಕುಂದಪಜ್ಞಾನಿಗಳರಸು ನೀನಲ್ಲದೆ ಜಗಕಿನ್ನುಮಾನದಿಂದಲಿಕಾವದೊರೆಗಳ ನಾ ಕಾಣೆಅ.ಪಬಗೆಬಗೆಯಲಿ ನಿನ್ನ ಸ್ತುತಿಪೆನೊನಗಧರಖಗಪತಿವಾಹನನೆ ||ಮಗುವಿನ ಮಾತೆಂದು ನಗುತ ಕೇಳುತ ನೀನುಬೇಗದಿಂದಲಿ ಕಾಯೋ ಸಾಗರಶಯನನೆ 1ದಾನವಾಂತಕ ದೀನ ಜನ ಮಂದಾರನೆಧ್ಯಾನಿಪರ ಮನದೊಳು ಸಂಚರನೆ ||ಮೌನನಾದೆನು ನಿನ್ನ ಧ್ಯಾನಾನಂದದಿ ಈಗಸಾನುರಾಗದಿ ಕಾಯೊ ಸನಕಾದಿ ವಂದ್ಯನೆ 2ಮಂದರೋದ್ಧರ ಅರವಿಂದ ಲೋಚನ ನಿನ್ನ ||ಕಂದನೆಂದೆನಿಸೂ ಎನ್ನ ||ಸಂದೇಹವೇತಕೆ ಸ್ವಾಮಿ ಮುಕುಂದನೆಬಂದೆನ್ನ ಕಾಯೊ ಶ್ರೀಪುರಂದರವಿಠಲನೆ3
--------------
ಪುರಂದರದಾಸರು