ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಜಾನನಂ ಲೋಕನುತಂ | ಸ್ಮರಾಮಿ ಗೌರಿಕೃತ ಸುತಂ ಸನ್ನುತ ಭಕ್ತಾಶಯದಂ ಪ ಸನಕಾದಿ ಸ್ತುತಂ ಹಿತಂ | ಶುಭಪ್ರದರತಂ ಮತಂ ಅ.ಪ ಕಲ್ಪಭೂಜಂ ಸಾನುಜಂ | ಪಾಶಧರ ಸಾಮಜಂ ಪ್ರಸನ್ನ ಚತುರ್ಭುಜಂ | ಕಾರ್ತಿಕೇಯ ಮಹಾಗ್ರಜಂ ಪರಶಿವ ಕಾಮಿತ ತನುಜಂ | ಫಣಿಬಂಧಯುತಂ ಸೇವ್ಯ ಮಹಾಗಣೇಶ ಪಿತರಜಂ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪ್ರಾಣದೇವ ನೀ ಕಾಯೊ ಕರುಣಿ ಸತತ ಪಾಲಿಸು ಸುಖದಾತ ಪ. ಪ್ರಣಾಪಾನವ್ಯಾನೊದಾನತೋಷ ಭಾರತೀಶ ಅ.ಪ. ತ್ರಿವಿಧ ಜೀವರ ಶ್ವಾಸ ನಿಯಾಮಕನೆ ಶ್ರೀ ಹರಿ ಸೇವಕ ನೀನೆ ಭವ ಇಂದ್ರಾದಿಗಳಿಂದಲಿ ವಂದಿತನೆ ಭಾರತಿಗತಿ ಪ್ರಿಯನೆ ತ್ರಿವಿಧ ಶ್ವಾಸ ಜಪ ನಿರ್ಲಿಪ್ತದಿ ಜಪಿಸಿ ಜೀವರ ಗತಿಗೈಸಿ ನವವಿಧ ಭಕ್ತಿಯ ಹರಿಚರಣದಿ ನಿರುತ ಚರಿಸುವ ಮತಿದಾತ 1 ತತ್ವಾಧೀಶರ ಪ್ರೇರಕ ಮಹಪ್ರಾಣ ಜೀವರ ಸುತ್ರಾಣ ವ್ಯಾಪ್ತಜಗದಿ ಶ್ರೀ ಹರಿ ಲಕುಮಿಯ ಸಹಿತ ಬಳಿತ್ಥಾ ಸೂಕ್ತ ಸ್ತುತ ಸತ್ವ ಗುಣದ ಜೀವರ ಸದ್ಗತಿದಾತ ಸುಜ್ಞಾನ ಪ್ರದಾತ 2 ತ್ರೇತೆಯಲ್ಲಿ ಶ್ರೀ ರಾಮದಾಸ್ಯ ಚರಿಸಿ ದಶಶಿರನನು ಮುರಿಸಿ ಮಾತೆ ಕೊಟ್ಟ ಭಿಕ್ಷಾನ್ನ ಉಂಡು ಸುಖಿಸಿ ಬಕ ಹಿಡಿಂಬಕರೊರಸಿ ಪಾತಕಿ ಮಾಯವಾದಿ ಜೈಸಿ ಸದ್ಗ್ರಂಥವ ರಚಿಸಿ ಖ್ಯಾತ ಗೋಪಾಲಕೃಷ್ಣವಿಠ್ಠಲ ಪ್ರಿಯ ನಮೋ ಚಳ್ಳಕೆರೆನಿಲಯ 3
--------------
ಅಂಬಾಬಾಯಿ
ಬಂದಿದ್ದನೆ ರಂಗ ಬಂದಿದ್ದನೆ ಕೃಷ್ಣ ಬಂದಿದ್ದನೆ ಪ. ಬಂದಿದ್ದನೆ ನಮ್ಮ ಮಂದಿರದೊಳು ಬೆಳ ದಿಂಗಳ ತೆರದೊಳು ಬಂದಿದ್ದನೆ ಅ.ಪ. ಗೆಜ್ಜೆ ಕಾಲ್ಕಡಗ ಸಜ್ಜಿನಿಂದಿಟ್ಟು ಕರ ಕ್ಷಿತಿ ತಳ ವಂದಿತ ಸತಿ ಪದುಮಾವತಿ ಲಕುಮಿ ಸಹಿತ ಕೃಷ್ಣ 1 ರವಿಯ ಕಾಂತಿ ಕೋಟಿ ಪ್ರಭೆ ಕಿರೀಟವು ವರದ ಮಾಧವನು2 ಚತುರ ಹಸ್ತದಿ ಶಂಖ ಚಕ್ರಗದಾ ಪದ್ಮ ಸತಿ ತುಳಸಿಯ ಮಾಲಧರನೆ ಜತೆ ತನ್ನ ಭಕ್ತರ ಹಿತದ ಪೂಜೆಯಗೊಂಡು ವಿತತ ವೈಭವದಿಂದ 3 ವರಪ್ರದ ವೆಂಕಟ ವರಗಳ ನೀಡುತ ತನ್ನ ಚರಣ ತೋರುತ ಭಕ್ತರಿಗೆ ಕೇಸರಿ ತೀರ್ಥವ ಕರುಣದಿ ತೋರುತ ಕರಿವರದ ಕೃಷ್ಣ 4 ಪಂಚಾಮೃತದಭಿಷೇಕವ ಕಂಡೆನೆ ಎನ್ನ ಸಂಚಿತಾರ್ಥದ ಪುಣ್ಯದ ಫಲದಿ ಮಿಂಚಿದ ಪಾಪವ ಕಳೆದರತಿಹರುಷದಿ ಹಂಚಿ ವರದ ಹಸ್ತ ಕಂಚಿ ವರದ ತೋರೆ ಬಂದಿದ್ದನೆ 5 ಕಂಕಣ ಕೈಯೊಳು ಧರಿಸಿಹನೆ ದಿವ್ಯ ಹೇಮ ಶೋಭಿತನೆ ಕಿಂಕರ ವರದ ಮಾಂಗಲ್ಯ ಕಟ್ಟಿದ ಸತಿ ಶಂಕರಾದಿ ಸ್ತುತ ವೆಂಕಟರಮಣನು 6 ಸುರವರÀ ವಂದ್ಯಗೆ ಆರತಿ ಎತ್ತಲು ಕೇಸರಿ ತೀರ್ಥವ ನೀಡಿದನೆ ವರ ಪ್ರಸಾದದ ಮಹಿಮೆಯ ತೋರುತ ಶರಧಿ ಗಂಭೀರನು 7 ಉರುಟಣಿಯ ಮಾಡಿದ ವರಸತಿ ಜತೆಯಲಿ ವರ ಶೇಷಾಚಲನು ತಾನೆ ಹರುಷವ ಬೀರುತ ವರ ಶೇಷನ ಮೇಲೆ ಮೆರೆವ ಶಯನಗೊಂಡು ಹರುಷದಿ 8 ಗಂಧ ಪುಷ್ಪ ತಾಂಬೂಲವಗೊಂಡನೆ ತಂಡ ತಂಡ ಭಕ್ತರ ವಡೆಯ ಉದ್ದಂಡ ಭಕ್ತರಿಗೆ ಉದ್ದಂಡ ವೆಂಕಟ 9 ನಾಟಕಧಾರಿ ತಾ ವಧೂಟಿ ಭೂಪ ಲಕ್ಷ್ಮಿ ಸಹ ನೋಟಕರಿಗೆ ಆನಂದ ತೋರಿದನೆ ಧಾಟಿಧಾಟಿ ರಾಗದಿ ಭಕ್ತರು ಸ್ತುತಿಸೆ ಸಾಟಿಯಿಲ್ಲದ ವೈಭವವ ತೋರುತ ಕೃಷ್ಣ 10 ಕರವ ಮುಗಿದು ಸ್ತೋತ್ರವ ಮಾಡಿದೆನೆ ಎನ್ನ ಕರೆದಾದರಿಸು ಹರಿಗೆ ನಿರುತ ಎಮ್ಮನು ಹಯನೇರಿದನೆ ಭಯಕೃದ್ಭಯ ಹಾರಿ 11
--------------
ಸರಸ್ವತಿ ಬಾಯಿ
ರಾಘವೇಂದ್ರಯತಿಗಳು ಗುರುರಾಯರ ನಂಬಿರೋ ರಾಘವೇಂದ್ರ ಗುರುರಾಯರ ನಂಬಿರೋ ಜಗದೊಳು ಪ. ಗುರುರಾಯರ ನಂಬಿ ವರಗಳ ಬೇಡಿರೊ ನರಹರಿ ಪದ ಧ್ಯಾನಿಪ ಕರುಣವ ಬೀರುವಂಥ 1 ಆದಿ ಪ್ರಹ್ಲಾದರು ಮೋದದಿ ಹರಿಪದ ಆದರದಿಂದ ಜಗಕೆ ಸಾಧಿಸಿ ಬೀರಿದರೊ 2 ದ್ವಿತೀಯ ವ್ಯಾಸರಾಜ ಸ್ತುತ ಬ್ರಹ್ಮಣ್ಯಾರ್ಯ ಕರ ಗತಪುರುಷೋತ್ತಮ ಗುಹ ಪಥದೊಳಗಿಪ್ಪರ 3 ತೃತೀಯ ರಾಘವೇಂದ್ರ ಪತಿತ ಪಾವನ ನಾಮ ರತ್ನ ಖಚಿತವಾಗಿದೆ ಭಕ್ತ ಸುಚರಿತರೆಲ್ಲ ಬೇಗ 4 ಭೂತ ಪ್ರೇತಗಳ ಪ್ರೀತಿಯೊಳಳಿದು ಶ್ವೇತ ಕುಷ್ಠಗಳ ದೂರ ಮಾಳ್ಪವರ 5 ಪಾದ ಪಂಕಜ ದುರಿತ ದೂರ ಶ್ರೀ ಶ್ರೀನಿವಾಸನ ಭಜಿಪ ಗುರು 6
--------------
ಸರಸ್ವತಿ ಬಾಯಿ