ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸುವ ಹರಿ ನಿರಂತರವು ಮನವೆ ಪಾದ ಸ್ಮರಣಿಯನು ನೆರೆನಂಬು ಪ ಕಂದ ಪ್ರಹ್ಲಾದನ ತಂದೆ ಭಾಧಿಸಲು ಗೋ ವಿಂದ ಘನ ಸ್ತಂಭದೊಳ್ ಬಂದು ತಾಮುದದಿ ಮಂದ ದನುಜನ ಬಿಡದೆ ಕೊಂದ ಶ್ರೀವರ ಮುಚು ಕುಂದ ವರದ ಯೆಂದು ನೀ ಭಜಿಸು 1 ಛಲದಿಂದ ಮಲತಾಯಿ ಸಲೆ ಧ್ರುವನ ಕಾನನಕೆ ಕಳುಹಲಾಕ್ಷಣವೆ ಶ್ರೀ ನಳಿನನಾಭ ಒಲಿದು ಪೊರಿದನು ಮಹಾಒಳಿತೆಂದು ಅವಗೆ ನಿಶ್ಚಲ ಪದವಿಯನು ಇತ್ತ ಜಲನಿಧಿಶಯನ 2 ಅರಸು ಮುನಿಶಾಪದಲಿ ಕರಿಯಾಗಿ ಜನಿಸಿ ಮ- ಕರ ಬಾಧೆಗೆ ಶಿಲ್ಕಿ ಮೊರೆಯನಿಡಲು ತ್ವರದಿ ಪೊರದಂಥ ಹೆನ್ನೆಪುರ ಲಕ್ಷ್ಮೀನರಶಿಂಹ ಸಿರಿ ಕೃಷ್ಣಾ 3
--------------
ಹೆನ್ನೆರಂಗದಾಸರು
ಭಜಿಸುವೆನು ನಾನಿನ್ನ ಭಕ್ತಾಧೀನ ಅಜಹರನುತ ಅಗಣಿತಚರಿತ ಹರಿ ಪ ಅಂದು ಮುನಿಸತಿ ಶಾಪದಿಂದ ಶಿಲೆಯಾಗಿರೆ ಛಂದದಿ ಚರಣಾರವಿಂದ ಸ್ಪರ್ಶವಾಗಲು ಕುಂದು ಪರಿಹಾರವಾಗಿ ಸುಂದರ ಮಣಿಯಾದಳೆಂದು ನಿಮ್ಮಯ ಪಾದದ್ವಂದ್ವ ಬಿಡದಲೆ ನಾ 1 ಕಂದ ಕರೆಯಲು ಶ್ರೀ ಗೋವಿಂದ ಘನ ಸ್ತಂಭದೊಳ್ ಬಂದು ದೈತ್ಯನ ಕೊಂದ ಇಂದಿರಾರಮಣ ಕಂದರ್ಪ ಜನಕ ಮುಚುಕುಂದ ವರ ಕೃಷ್ಣಾ ಮಂದರಧರ ಸಲಹೆಂದು ಅನವರತ 2 ದೃಢ ಧ್ರುವರಾಯನ ಬಿಡದೆ ಮಲತಾಯಿ ತಾ ಅಡವಿಗೆ ನೂಕಿಸಲು ಕಡು ಮುದದಿ ಕಡಲಶಯನ ಜಗದೊಡಿಯನೆ ಕಾಯ್ದೆ ಗರುಡವಾಹನನೊಡನೆ ನುಡಿಯಯ್ಯ 3 ದುರುಳ ರಾವಣನ ದಶಶಿರಗಳು ಖಂಡಿಸಿ ಶರಣೆಂದು ವಿಭೀಷಣ ಗೇ ಸ್ಥಿರದಿ ಪಟ್ಟವನಿತ್ತು ಪರಮಪುರುಷ ಶಿರಿವರ ನರಹರಿ ಶೌರಿ ಮೊರೆ ಹೊಕ್ಕೆ ರಕ್ಷಿಸೋ ಮುರಹರ ಕರುಣಾಂಬುಧೆ 4 ಕರಿಸರೋವರದಿ ಮಕರಿಯ ಬಾಧೆಗೆ ಸಿಕ್ಕು ಹರಿನೀನೆ ಗತಿಯೆಂದು ಸ್ಮರಿಸುತಲಿರಲು ಭರದಿಪೋಗಿ ಕಷ್ಟಪರಿಹರಿಸಿ ಪೊರೆದಿ ಶ್ರೀಧರವರÀ ಹೆನ್ನೆಯಪುರ ಲಕ್ಷ್ಮೀನರಸಿಂಗ 5
--------------
ಹೆನ್ನೆರಂಗದಾಸರು