ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾಲವಾಲ ಜಿಷ್ಣುಪರಿಪಾಲ ವಿಷ್ಣು ವಿಶ್ವವ್ಯಾಪಿಸಕಲ ದೃಷ್ಟಾದೀಶ ಕೃಷ್ಣಲೋಲ ಪ. ಪೊಳೆವ ಗರುಡ ಸ್ಕಂಧವೇರಿ ಘಳಿರನೆ ಪೋಗಿ ಜಲಜವ ಹರಿಸೆ ದೈತ್ಯ ಬಲವಕೊಂಡು ಬಂದ ಮುರನ ಥಳಥಳಿಪ ಚಕ್ರದಿಂದ ತಲೆಯ ಭೂಮಿಗಿಳಿಸಿ ಮೆರೆದ 1 ಧುರದಿ ಮಂತ್ರಿ ಸುತರ ತರಿದು ಕರಿಯನೇರಿ ಖತಿಯ ತಾಳ್ದ ನರಕನನ್ನು ನಳಿನಾಂಬಕಿಯ ಕರದಿ ಭಂಗಿಸಿ ಸರಸಿಜ ಸಂಭವದತ್ತ ವರದಿ ಸಕಲ ಸುರರ ಗೆಲಿದ ಗರುವನನ್ನು ನಿಲಿಸಿ ಕ್ಷಣದಿ ಶಿರವ ಚಂಡನಾಡಿದವನೆ 2 ಧಾತ್ರಿದೇವಿ ಬಂದು ನಾನಾ ಸ್ತೋತ್ರ ಗೈಯೈ ಕರುಣದಿಂದ ಪಾತ್ರಗೊಲಿದು ಸತ್ರಾಜಿತನ ಪುತ್ರಿ ಒಡಗೊಂಡು ಸುತ್ರಾಮ ಮಂದಿರವನೈದಿ ಚಿತ್ರ ತಾಟಂಕಗಳ ದಿತಿಗೆ ಪುತ್ರ ತಾನೆಂದಿತ್ತ ಶ್ರೀಕಳತ್ರ ನಿನ್ನ ನಂಬಿರುವೆನು 3 ಸೌಂದರ್ಯಸಾರೈಕ ನಿಲಯಾ ನಂದಬೋಧಾಧಾರಮೂರ್ತಿ ಇಂದಿರಾವತಾರೆ ಭಾಮೆ ಎಂದ ನುಡಿ ಕೇಳಿ ಮಂದಹಾಸದಿಂದ ನಗುತ ಮಂದವಾಯು ಸುಳಿವ ಸುರರ ನಂದನದೊಳಿಂದುಕಿರಣ ಛಂದದೊಳಾನಂದಗೊಂಡ 4 ವಾರಿಜಾಕ್ಷಿಯೆಂದ ನುಡಿಗೆ ಧೀರತನವ ತೋರಿ ದೇವ ಪಾರಿಜಾತ ವೃಕ್ಷವ ಸರ್ಪಾರಿ ಮೇಲಿರಿಸಿ ಸಾರೆ ಸ್ವರ್ಗನಾಥ ಸ್ವಪರಿವಾರ ಸಹಿತ ತಡಿಯೆ ಗೆದ್ದು ದ್ವಾರಾವತಿಗೆ ಪೋಗಿ ಮೆರದ ನೀರಜಾಕ್ಷ ವೆಂಕಟೇಶ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮನ್ನಿಸೆನ್ನ ಮಧುಸೂದನ ಪ. ಮದನನಯ್ಯ ಮೋಹನಕಾಯಉನ್ನತಗುಣನಿಲಯ ಉಡುಪಿನ ಕೃಷ್ಣರಾಯ ಅ.ಪ. ಶ್ರುತಿಗಳ ತಂದೆ ಮುನ್ನ ಸುರಮುನಿಗಳ ಮನ-ಕತಿ ಹರುಷವ ಕೊಟ್ಟೆ ಅಗಣಿತಗುಣರನ್ನಯತಿಗಳ ಪಾಲಿಸಿದೆ ಮುಂದುವರಿವದಿತಿಜರ ಸೋಲಿಸಿದೆ ಈ ಮಹಿಯೊಳುಮತಿವಂತರ ಪೊರೆದೆ ಮಹಿಮೆಯಿಂದ ಮೆರೆದೆ1 ಅಚ್ಚಹಾರಶೋಭಿತ ಕಂಠ ಆಶ್ರಿತರಿಗೆ ನೀ ನಂಟಮೆಚ್ಚಿದ ಪಾರ್ಥನ ಮಿತ್ರನೆನಿಸಿದೆ ಸುಚರಿತ್ರಮೆಚ್ಚಿದ ನಿನ್ನಯ[ಭಕ್ತÀ್ತ]ವೈಕುಂಠದಮುಚ್ಚಳ ತೆಗೆಸಲು ಶಕ್ತ ಅಚ್ಚುತ ನಿನ್ನಅರ್ಚಿಸಿದವ ಕೃತಾರ್ಥ ಅವನೆ ಸರ್ವಸಮರ್ಥ2 ಎಂದೆಂದು ನಿನ್ನವರೊಳು ಎನ್ನ ಕೂಡಿಸೊ ಕೃಪಾಳುವಂದ್ಯ ಗರುಡನ ಸ್ಕಂಧವೇರಿ ಬಹ ಗೋವಿಂದತಂದೆ ನೀನೆ ತಾಯಿ ನೀನೆ ಹಯವದನಬಂಧು ನೀನೆ ಬಳಗ ನೀನೆ ಮತ್ತದರಿಂದಕುಂದುಮಾಡುವುದು ಬಿಡೋ ಕಂಡು ಕರುಣವ ಮಾಡೋ 3
--------------
ವಾದಿರಾಜ