ಒಟ್ಟು 18 ಕಡೆಗಳಲ್ಲಿ , 4 ದಾಸರು , 14 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅಃ) ಕಾಮದೇವ ಕರುಣದಿಂದಲಿ ಒಲಿದು ಕಂಡನಾತುರದಲಿ ಪ ಇಂದ್ರಸಮಾನ ದೇವತೆಯೆ ರತಿಪತಿಯೇ | ಮಾರ || ಬಂದು ಕಲ್ಪದಲಿ ಸುಂದರನೆನಿಸಿಕೊಂಡಿರ್ದ | ಬಂಧುವೇ ಅಹಂಕಾರ ಪ್ರಾಣನಿಂದಧಿಕನೆ 1 ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ | ಮನದಲ್ಲಿ ಪುಟ್ಟಿಸೆ ಚತುರ ಜನರ || ಮುನಿಗಳೊಳಗೆ ನೀ ಸನತ್ಕುಮಾರನಾಗಿ ಜನಿಸಿ | ಯೋಗ ಮಾರ್ಗದಲ್ಲಿ ಚಲಿಸಿದ ಕಾಮಾ 2 ತಾರಕಾಸುರನೆಂಬ ಬಹು ದುರುಳತನದಲ್ಲಿ | ಗಾರುಮಾಡುತಲಿರಲು ಸುರಗಣವನು || ಗೌರಿಮಹೇಶ್ವರರಿಗೆ ಪುತ್ರನಾಗಿ ಪುಟ್ಟಿ | ಧಾರುಣಿಯೊಳಗೆ ಸ್ಕಂದನೆನಿಸಿದೆ 3 ಮತ್ಸ್ಯ ಉದರದಲಿ | ಪೊಕ್ಕು ಶಿಶುವಾಗಿ ಸತಿಯಿಂದ ಬೆಳೆದು || ರಕ್ಕಸ ಶಂಬರನೊಡನೆ ಕಾದಿ ಗೆದ್ದು ಮರಳಿ | ಚಕ್ಕನೆ ಸಾಂಬನೆನಿಸಿದೆ ಜಾಂಬವತಿಯಲ್ಲ 4 ಜನಪ ದಶರಥನಲ್ಲಿ ಭರತನಾಗಿ ಪುಟ್ಟಿದೆ | ಮನೋ ವೈರಾಗ್ಯ ಚಕ್ರಾಭಿಮಾನಿ || ಎನಗೊಲಿದ ವಿಜಯವಿಠ್ಠಲರೇಯನಂಘ್ರಿ | ಅರ್ಚನೆ ಮಾಡುವ ಸುಬ್ರಮಣ್ಯ ಬಲು ಧನ್ಯ 5
--------------
ವಿಜಯದಾಸ
ಅಂಬಿಕಾ ಕುಮಾರನೆ ಪ ಅಂಬುಜಾಕ್ಷ ಶಂಭುಪುತ್ರ ಸ್ಕಂದನೇ ಅ.ಪ ದುರುಳ ತಾರಕನಾಶನೆ ಶರಜ ವಲ್ಲಿಯರಸ ಗುಹ ಕರುಣಾ ಸಾಗರ ಸ್ಕಂದನೆ 1 ಮೂರ್ತಿ ಸುಬ್ರಹ್ಮಣ್ಯನೆ ಸ್ತೋತ್ರ ಮಾಳ್ವ ಜನರ ಮನದಿ-ಷ್ಟಾರ್ಥವೀವ ಸ್ಕಂದನೆ 2 ವಾಸವಾದಿ ದಿವಿಜನುತ ಪಾವಂ-ಜೇಶ ಪರಮ ಪೂಜ್ಯನೆ | ದಾಸ ಜನರ ಮನಕೆ ಸಂತತ ತೋಷವೀವ ಸ್ಕಂದನೆ 3
--------------
ಬೆಳ್ಳೆ ದಾಸಪ್ಪಯ್ಯ
ಕಾರ್ತಿಕೇಯ ಮಹಾಸೇನ ನಿಜ ಭೃತ್ಯರೊಳಾಗು ಪ್ರಸನ್ನ ಪ. ಚಿತ್ತಸಾಕ್ಷಿ ಹರಿಭಕ್ತಿಜ್ಞಾನಮ- ನಿತ್ತು ಕಾಯೊ ಷಡ್ವದನ ಅ.ಪ. ತಂದೆ ತಾಯಿ ಕುಲಸ್ವಾಮಿ ಹರಿ- ಯೆಂದು ಭಜಿಸುವೆನು ಪ್ರೇಮಿ ಸ್ಕಂದನಾಮಕ ನೀನಂತರ್ಯಾಮಿ ಸುಂದರ ಮಯೂರಗಾಮಿ 1 ಪಾರ್ವತಿ ಶಿವಸಂಜಾತ ಪರಿ- ಪಾಲಿತ ಸುಜನವ್ರಾತ ಸರ್ವಗೀರ್ವಾಣ ಸೇನಾಧ್ಯಕ್ಷ ಸರ್ವೋತ್ತಮ ಹರಿಪಕ್ಷ2 ತಾರಕದ್ಯೆತ್ಯಸಂಹಾರ ಸುವಿ- ಚಾರೈಕಪರಾಧಾರ ಪ್ರಾರಂಭಗೈದ ಕಾರ್ಯ ಸಫಲಿಪುದು ಭಾರ ನಿನ್ನದು ರಣಧೀರ 3 ಪಾವಂಜಪುರನಿವಾಸ ನಃ ಪಾತು ಶಿವಗಣಾಧೀಶ ದೇವ ಲಕ್ಷ್ಮೀನಾರಾಯಣದಾಸ ಪಾವನಚರಿತ ವಿಲಾಸ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕಾರ್ತಿಕೇಯ ಮಹಾಸೇನ ನಿಜ ಭೃತ್ಯರೊಳಾಗು ಪ್ರಸನ್ನಪ. ಚಿತ್ತಸಾಕ್ಷಿ ಹರಿಭಕ್ತಿಜ್ಞಾನಮ- ನಿತ್ತು ಕಾಯೊ ಷಡ್ವದನಅ.ಪ. ತಂದೆ ತಾಯಿ ಕುಲಸ್ವಾಮಿ ಹರಿ- ಯೆಂದು ಭಜಿಸುವೆನು ಪ್ರೇಮಿ ಸ್ಕಂದನಾಮಕ ನೀನಂತರ್ಯಾಮಿ ಸುಂದರ ಮಯೂರಗಾಮಿ 1 ಪಾರ್ವತಿ ಶಿವಸಂಜಾತ ಪರಿ- ಪಾಲಿತ ಸುಜನವ್ರಾತ ಸರ್ವಗೀರ್ವಾಣ ಸೇನಾಧ್ಯಕ್ಷ ಸರ್ವೋತ್ತಮ ಹರಿಪಕ್ಷ 2 ತಾರಕದ್ಯೆತ್ಯಸಂಹಾರ ಸುವಿ- ಚಾರೈಕಪರಾಧಾರ ಪ್ರಾರಂಭಗೈದ ಕಾರ್ಯ ಸಫಲಿಪುದು ಭಾರ ನಿನ್ನದು ರಣಧೀರ 3 ಪಾವಂಜಪುರನಿವಾಸ ನಃ ಪಾತು ಶಿವಗಣಾಧೀಶ ದೇವ ಲಕ್ಷ್ಮೀನಾರಾಯಣದಾಸ ಪಾವನಚರಿತ ವಿಲಾಸ 4
--------------
ತುಪಾಕಿ ವೆಂಕಟರಮಣಾಚಾರ್ಯ
ಕಾರ್ತಿಕೇಯನ ಮಾಡೋ ನೀ ಧ್ಯಾನ ಪ ನೀರಜ ನಯನನ ತಾರಕ ಮಂತ್ರನ ಮಾಡೋ ನೀ ಧ್ಯಾನ 1 ನಿಗಮಗಳಿಗೆಟಕದ | ಜಗದೇಕ ದೇವನ ಅಗಣಿತಮಹಿಮನ | ಮಾಡೋ ನೀ ಧ್ಯಾನ 2 ನಿತ್ಯಾನಂದನ | ಭೃತ್ಯರ ಪೊರೆವನ ಸತ್ಯ ಸ್ವರೂಪನ | ಮಾಡೋ ನೀ ಧ್ಯಾನ 3 ದುಷ್ಟ ಖಳರ ಎದೆ | ಮೆಟ್ಟಿ ಶಿಕ್ಷಿಸುವನ ಕುಷ್ಠ ವಿನಾಶನ | ಮಾಡೋ ನೀ ಧ್ಯಾನ 4 ದಾಸರ ಕಾವ ಪಾವಂ | ಜೇಶನ ಸ್ಕಂದನ ಭೂಸುರ ಪ್ರೀಯನ | ಮಾಡೋ ನೀ ಧ್ಯಾನ 5
--------------
ಬೆಳ್ಳೆ ದಾಸಪ್ಪಯ್ಯ
ಜೋಜೋ ಶಂಕರ ಸುತ ಗುಣಮಾಲಾ | ಜೋಜೋ ಪ ಕುಂದರದನ ಅರವಿಂದಾಕ್ಷ ಜೋಜೋ ಮಂದರಧರ ಸಖ ಸ್ಕಂದನೆ ಜೋಜೋ ವೃಂದಾರಕ ಮುನಿ ವಂದಿತ ಜೋಜೋ 1 ಮೂರ್ತಿ ಕೇಸರಿ ಧರಣಿಸುರಕಲ್ಪ ತರು ಗುಹ ಜೋಜೋ ಜೋಜೋ 2 ವಾಸವನುತ ಸರ್ವ ಪೋಷಕ ಜೋಜೋಸಾಸಿರ ಪೆಸರ ವಲ್ಲೀಶನೆ ಜೋಜೋ | ವಾಸ ಪಾವಂಜೆ ಸರ್ವೇಶನೆ ಜೋಜೋ ದಾಸ ಜನರ ಮನ ತೋಷಕಾ ಜೋಜೋ ಜೋಜೋ 3
--------------
ಬೆಳ್ಳೆ ದಾಸಪ್ಪಯ್ಯ
ತೂಗಿದಳೆ ಸ್ಕಂದನಾ ಪಾರ್ವತೀ ದೇವಿ ಆಗಮಜ್ಞನ ಗುಹನಾ ಪ ನಿತ್ಯ ಭೋಗಿ ಭೂಷಣ ಜನ ಸಾಗರದಂತೆ ಗಂಭೀರನ ಜೋಯೆಂದು ||ತೂಗಿದಳೆ|| ಅ ಮುನಿವರ ವಂದಿತ ಜೋಜೋ | ಅನುಪಮ ಸದ್ಗುಣ ಚಿನುಮಯ ಸರ್ವಜ್ಞಅನಿಮಿಷ ವಂದಿಪ ಅನಘ ಜೋಜೋಯೆಂದು 1 ಭಕ್ತೋದ್ಧಾರ ಕುಮಾರ ಜೋಜೋ ನಾರದಾದಿ ಮುನಿವರ ವಂದಿತ ಮಾರನಾಕಾರದ ಧೀರ ಜೋಜೋಯೆಂದು 2 ಮೂರ್ತಿ ಜೋಜೋ | ಪಾವಂಜೆ ವಾಸನ ಸೇವಕ ದಾಸರ ಕಾವÀ ಮಹಾತ್ಮನನೋವಿ ಜೋಜೋಯೆಂದು ||ತೂಗಿದಳೆ|| 3
--------------
ಬೆಳ್ಳೆ ದಾಸಪ್ಪಯ್ಯ
ಬಾ ಶಿವಪುತ್ರನೆ ಶ್ರೀಶನ ಮಿತ್ರನೆ ಪ ಬಾ ಸುರವಂದ್ಯನೆ ವಾಸುಕಿಗೊಲಿದನೆ | ಬಾ | ಅ ಕುಂದರದಾನನ ಸುಂದರ ಕಾಯನೆ ಬಾ 1 ನೀರಜ ನೇತ್ರನೆ ಮಾರಸ್ವರೂಪನೆ ಬಾ 2 ವಲ್ಲಿಯ ರಮಣನೆ ಖುಲ್ಲರ ದಮನನೆ ಬಲ್ಲಿದರೊಡೆಯನೆ | ಮಲ್ಲ ಸಾಹಸನೆ | ಬಾ | 3 ಶಿಷ್ಟರ ರಕ್ಷನೆ ದುಷ್ಟರ ಶಿಕ್ಷನೆ | ಕುಷ್ಠ ವಿನಾಶನೆ ಇಷ್ಟವ ಕೊಡುವನೆ | ಬಾ | 4 ದೋಷ ವಿನಾಶನೆ ನಾಶ ರಹಿತನೆ ದಾಸರ ರಕ್ಷ ಪಾವಂ | ಜೇಶನೆ ಸ್ಕಂದನೆ | ಬಾ | 5
--------------
ಬೆಳ್ಳೆ ದಾಸಪ್ಪಯ್ಯ
ಲಂಬೋದರನ ಸಹೋದರನೆ ಪ ಶಂಭುಜಕರುಣಾಸಾಗರನೆ ಅ.ಪ ಶೂರಪದ್ಮನ ಎದೆ ಸೀಳಿದನೆ ಮಾರನ ಪೋಲುವ ಸುಂದರನೆ ಧೀರ ಹಿರಣ್ಯಕನಾರಾಧನೆಗೆ ಮೆಚ್ಚಿ ಸೂರೆಯ ಮುಕ್ತಿಯನಿತ್ತವನೆ 1 ವರವಜ್ರ ಶಕ್ತ್ಯಾಯುಧ ಧರನೆ ಸುರಮುನಿ ನಮಿತ ಸರ್ವೇಶ್ವರನೆ ಸುರುಚಿರ ರತ್ನಾಭರಣ ವಿಭೂಷಣನೆ ಶರಣ ರಕ್ಷ ಕುಮಾರಕನೆ2 ದಾಸ ಜನರ ಮನತೋಷಕನೆ ವಾಸುದೇವನ ಸಖ ಷಟ್ಶಿರನೆ ದೋಷವಿನಾಶನೆ ನಾಶರಹಿತ ಪಾವಂಜೇಶನೆ ಕಾರ್ತಿಕೇಯನೆ ಸ್ಕಂದನೆ 3
--------------
ಬೆಳ್ಳೆ ದಾಸಪ್ಪಯ್ಯ
ವಲ್ಲೀದೇವಿಯ ವಲ್ಲಭನೆ ಬಲ್ಲಿದ ಭಕ್ತರ ಸುಲ್ಲಭನೆ ಪ. ಸಲ್ಲಲಿತ ಪಾದಪಲ್ಲವ ಭಜಿಸುವ- ರೆಲ್ಲರ ಮನಸಿನೊಳುಲ್ಲಸನೆಅ.ಪ. ವೃಂದಾರಕಮುನಿವಂದಿತನೆ ಕಂದರ್ಪಾಮಿತಸುಂದರನೆ ಸ್ಕಂದನೆ ಸಚ್ಚಿದಾನಂದನೆ ಪಾರ್ವತೀ- ನಂದನ ಸದ್ಗುಣಮಂದಿರನೆ 1 ತಾರಕದೈತ್ಯ ಸಂಹಾರಕನೆ ಸೇರಿದ ಭಕ್ತೋದ್ಧಾರಕನೆ ಮಾರಾರಿಯ ಸುಕುಮಾರನೆ ಧೀರನೆ ಚಾರು ಮಯೂರ ತುರಂಗಮನೆ2 ಲಕ್ಷುಮಿನಾರಾಯಣ ಪ್ರಿಯನೆ ರಕ್ಕಸರಿಂಗತಿದುಃಖದನೆ ಕುಕ್ಕುಟವಜ್ರಾಭಯಶಕ್ತಿಹಸ್ತನೆ ಪ್ರಖ್ಯಾತ ಪಾವಂಜಾಖ್ಯ ಪುರವರನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸುಬ್ರಹ್ಮಣ್ಯ ಸ್ವಾಮಿ ತೇ ನೌಮಿ ಶರಣಾಗತರ್ಗೆ ನಿರ್ಭಯವ ಪಾಲಿಸು ಪ್ರೇಮಿಪ. ಅಭ್ರವಾಹನಾದಿದೇವ ಸಭ್ಯ ಸಂಭಾವಿತ ಜಗ- ದಭ್ಯುದಯ ತೇಜೋಮಯ ಕರ್ಬುರಾಂತಕ ನಿಶ್ಯೋಕಅ.ಪ. ಭಾವಭಕ್ತಿಭಾಗ್ಯಶೂನ್ಯರು ನಿನ್ನಯ ಪದ ಸೇವೆಗಾಲಸ್ಯವ ಮಾಳ್ಪರು ಕೇವಲ ದುರ್ಜನರು ಬಾರರು ದೇವದೇವ ನಿನ್ನ ಕರು- ಣಾವಲಂಬಿಗಳನೆಲ್ಲ ಕಾವನೆ ಮಹಾನುಭಾವನೆ 1 ಚಂದ್ರಸೂರ್ಯರಿರುವ ತನಕ ಸ್ಥಾನಿಕ ವಿಪ್ರ- ರಿಂದ ಪೂಜೆಗೊಳೈ ಷಣ್ಮುಖ ವಂದನೀಯ ಪಾರ್ವತಿಯ ನಂದನ ನಳಿನಾಯತಾಕ್ಷ ಇಂದುಶೇಖರಕುಮಾರ ಸ್ಕಂದನೆ ನಿತ್ಯಾನಂದನೆ 2 ಪಾವಂಜಾಖ್ಯಸುಕ್ಷೇತ್ರವಾಸ ಪೊರೆಯೊ ಪರಮೇಶ ಕೇವಲ ವಿಜ್ಞಾನಪ್ರಕಾಶ ಭಾವಜೋಪಮ ಲಾವಣ್ಯ ಕೋವಿದಾಗ್ರಗಣ್ಯ ಮಹಾ- ದೇವ ಲಕ್ಷ್ಮೀನಾರಾಯಣನ ಸೇವಕ ಬುದ್ಧಿದಾಯಕ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರನ ಪ್ರಿಯ ಕುವರ ಸರ್ವದುರಿತ ನಾಶ ಶರಜನೇ ಪ ದುರಿತ ನಾಶ ಶರಜನೇ ಕರುಣ ಸಾಗರ ಸ್ಕಂದನೇ ಅ.ಪ ದಿನಪ ತೇಜ ಗಣಪನನುಜ ಮನಸಿಜನ ರೂಪನೇ ಮನಸಿಜನ ರೂಪನೆ ವನಜನಾಭನ ಪ್ರೀಯನೇ 1 ವಜ್ರ ಹಸ್ತ ಬಾಹುಲೇಯನೇ ಹಸ್ತ ಬಾಹುಲೇಯನೇ ಮುಕ್ತಿದಾಯಕ ಸ್ಕಂದನೇ 2 ಖುಲ್ಲ ತಾರಕ ನಾಶನೇ 3 ಖ್ಯಾತ ಅಂಬಿಕ ಜಾತ ಪಾವಂಜೆನಾಥ ದಾಸ ರಕ್ಷನೇ ನಾಥ ದಾಸ ರಕ್ಷನೇ ಪ್ರೀತ ಕಾರ್ತಿಕೇಯನೇ 4
--------------
ಬೆಳ್ಳೆ ದಾಸಪ್ಪಯ್ಯ
ವಲ್ಲೀದೇವಿಯ ವಲ್ಲಭನೆಬಲ್ಲಿದಭಕ್ತರ ಸುಲ್ಲಭನೆಪ.ಸಲ್ಲಲಿತ ಪಾದಪಲ್ಲವ ಭಜಿಸುವ-ರೆಲ್ಲರ ಮನಸಿನೊಳುಲ್ಲಸನೆ ಅ.ಪ.ವೃಂದಾರಕಮುನಿವಂದಿತನೆಕಂದರ್ಪಾಮಿತಸುಂದರನೆಸ್ಕಂದನೆ ಸಚ್ಚಿದಾನಂದನೆ ಪಾರ್ವತೀ-ನಂದನ ಸದ್ಗುಣಮಂದಿರನೆ 1ತಾರಕದೈತ್ಯ ಸಂಹಾರಕನೆಸೇರಿದ ಭಕ್ತೋದ್ಧಾರಕನೆಮಾರಾರಿಯ ಸುಕುಮಾರನೆ ಧೀರನೆಚಾರುಮಯೂರ ತುರಂಗಮನೆ2ಲಕ್ಷುಮಿನಾರಾಯಣ ಪ್ರಿಯನೆರಕ್ಕಸರಿಂಗತಿದುಃಖದನೆಕುಕ್ಕುಟವಜ್ರಾಭಯಶಕ್ತಿಹಸ್ತನೆಪ್ರಖ್ಯಾತ ಪಾವಂಜಾಖ್ಯ ಪುರವರನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸುಬ್ರಹ್ಮಣ್ಯ ಸ್ವಾಮಿ ತೇ ನೌಮಿ ಶರಣಾಗತರ್ಗೆನಿರ್ಭಯವ ಪಾಲಿಸು ಪ್ರೇಮಿ ಪ.ಅಭ್ರವಾಹನಾದಿದೇವ ಸಭ್ಯ ಸಂಭಾವಿತ ಜಗ-ದಭ್ಯುದಯ ತೇಜೋಮಯ ಕರ್ಬುರಾಂತಕ ನಿಶ್ಯೋಕ ಅ.ಪ.ಭಾವಭಕ್ತಿಭಾಗ್ಯಶೂನ್ಯರು ನಿನ್ನಯ ಪದಸೇವೆಗಾಲಸ್ಯವ ಮಾಳ್ಪರುಕೇವಲ ದುರ್ಜನರು ಬಾರರು ದೇವದೇವ ನಿನ್ನ ಕರು-ಣಾವಲಂಬಿಗಳನೆಲ್ಲ ಕಾವನೆ ಮಹಾನುಭಾವನೆ 1ಚಂದ್ರಸೂರ್ಯರಿರುವ ತನಕ ಸ್ಥಾನಿಕ ವಿಪ್ರ-ರಿಂದ ಪೂಜೆಗೊಳೈ ಷಣ್ಮುಖವಂದನೀಯ ಪಾರ್ವತಿಯ ನಂದನ ನಳಿನಾಯತಾಕ್ಷಇಂದುಶೇಖರಕುಮಾರ ಸ್ಕಂದನೆ ನಿತ್ಯಾನಂದನೆ 2ಪಾವಂಜಾಖ್ಯಸುಕ್ಷೇತ್ರವಾಸ ಪೊರೆಯೊ ಪರಮೇಶಕೇವಲ ವಿಜ್ಞಾನಪ್ರಕಾಶಭಾವಜೋಪಮ ಲಾವಣ್ಯ ಕೋವಿದಾಗ್ರಗಣ್ಯ ಮಹಾ-ದೇವ ಲಕ್ಷ್ಮೀನಾರಾಯಣನ ಸೇವಕ ಬುದ್ಧಿದಾಯಕ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ