ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಚಕ್ರವನೇರಿ ಭಾಸಿಪ ಬಾಲ ಸೂರ್ಯನ ವಂದಿಪೆ ಪ ಕಾಲ ರೂಪನೆ ಬಾಲ ಚಂದ್ರನೆ ಪೂಜಿಪೆ ಅ.ಪ. ಸೃಷ್ಟಿ ರೂಪನೆ ವೃಷ್ಟಿದಾಯಕ ಶ್ರೇಷ್ಠ ಭೂಮಿಯ ಪುತ್ರನೆ ಕಷ್ಟಹರ ಸುಜ್ಞಾನ ಮೂರುತಿ ಇಷ್ಟದಾಯಕ ಸೌಮ್ಯನೆ 1 ದೇವಗಣಗುರು ಕ್ಷೇಮದಾಯಕ ಜೀವವರ ಗುರು ಪಾಲಿಸೈ ದೇವಶುಕ್ರನೆ ಕಾವ್ಯರೂಪನೆ ಕಾವ್ಯ ಸೇವನೆ ಪೋಷಿಸೈ 2 ಪುಂಗವರ ಮಹಿಮಾಂಗ ಶನಿ ಸನ್ಮಂಗಳಾತ್ಮಕ ದೇವನೆ ಮಂಗಳವನೆಸಗೆಂದು ವಂದಿಪೆ ರಾಹುವೆ ವರಕೇತುವೆ 3 ಶ್ರೀನಿವಾಸನೆ ಪಾಲಿಸುವುದೆಂದೀ ನವಗ್ರಹ ಭಕ್ತಿಯಿಂಧೇನುನಗರ ಜನೇಶನೇವರ ವೇಂಕಟೇಶನೆ ಪೋಷಿಸೈ 4
--------------
ಬೇಟೆರಾಯ ದೀಕ್ಷಿತರು
ರಾಮ ರಮಾರಮ ರಾಮ ಶ್ರೀರಾಮ ಪ ರಾಮ ಸೀತಾರಾಮ ರಾಮ ಜಯರಾಮ ಅ.ಪ. ಶ್ರೀ ರಘುವಂಶ ಲಲಾಮನೆ ರಾಮ ತಾರಕ ಮಂಗಳ ರಾಮನೆ ರಾಮ ನೀರದ ನಿರ್ಮಲ ಶ್ಯಾಮನೆ ರಾಮ ಸಾರಸಲೋಚನ ಸೌಮ್ಯನೆ ರಾಮ 1 ಕೌಸಲ್ಯದೇವಿ ಕುಮಾರಕ ರಾಮ ಕೋಸಲ ದೇಶಾನಂದಕ ರಾಮ ಆಸುರೀ ತಾಟಕ ಶಿಕ್ಷಕ ರಾಮ ಕೌಶಿಕ ಯಜ್ಞ ಸಂರಕ್ಷಕ ರಾಮ 2 ಮುನಿಪತಿ ಶಾಪ ವಿಮೋಚಕ ರಾಮ ಕಾರ್ಮುಕ ಭಂಜಕ ರಾಮ ಜನಕ ಸುತಾನಂದ ವರ್ಧಕ ರಾಮ ಅನುಪಮ ಲೀಲಾದ್ಯೋತಕ ರಾಮ 3 ಸತ್ಯಪರಾಕ್ರಮ ಸಾತ್ವಿಕ ರಾಮ ಪಿತೃವಾಕ್ಯ ಪರಿಪಾಲಕ ರಾಮ ಉತ್ತಮ ಚರಿತಾದರ್ಶಕ ರಾಮ ಚಿತ್ರಕೂಟಾದ್ರಿ ನಿವಾಸಕ ರಾಮ 4 ಕಾಕುತ್ಥವಂಶ ಸುಧಾರಕ ರಾಮ ಲೋಕೇಶ ಲೋಕ ಮನೋಹರ ರಾಮ ಶ್ರೀಕರಾಶ್ರಿತ ಜನ ಮಂದಾರ ರಾಮ ಶ್ರೀ ಕರಿಗಿರೀಶ ಸುಂದರ ರಾಮ 5
--------------
ವರಾವಾಣಿರಾಮರಾಯದಾಸರು
ವಂದಿಸಿ ಬೇಡುವೆ ನವಗ್ರಹರ ಕುಂದುಗಳೆಣಿಸದೆ ಬಂದು ರಕ್ಷಿಸಲೆಂದು ಪ ಭಾಸುರ ಸೂರ್ಯನು ಭಾಸಿಸಲಿ ತತ್ವವನು ಶ್ರೀ ಸಹೋದರ ಚಂದ್ರ ತೋಷವನು ಸೂಸಿ ಕೊಡಲಿ ಮಂಗಳವನು ಮಂಗಳ ಲೇಸಾದ ಪಾಂಡಿತ್ಯ ಪಂಡಿತನೀಯಲಿ 1 ಹಿಂಗದ ಗೌರವ ತುಂಗ ಶ್ರೀಗುರು ಕೊಡಲಿ ಕವಿ ಕೊಡಲಿ ಭಂಗವಿಲ್ಲದ ಸುಖಸಂಪತ್ತು ಶನಿ ಕೊಡಲಿ ಕಂಗೆಡಿಸುವ ರುಜೆ ರಾಹು ತಪ್ಪಿಸಲಿ 2 ಹಿಡಿದ ಕೆಲಸದಲ್ಲಿ ಹಿಡಿಸಲಿ ಜಯಧ್ವಜವ ಬಿಡದಲೆ ಧ್ವಜಿಯು ಸಡಗರದಿ ಕಡು ನವಗ್ರಹಗಳು ಪಿಡಿಗ್ರಹವಾಗಲಿ ಸಿರಿ ದೃಢದಿ ದಿನದಿನದಿ 3 ತರಣಿ ಕುಮಾರ ಮಣಿ ಹಾರ ದಾರಿದ್ರ್ಯದೂರ ಹರಿಸು ಅರಿಷ್ಟವ ಸುರಿಸು ಮನೇಷ್ಟವ ಎರಗುವೆ ಸಂಕಟಗೊಳಿಸದಿರುತ್ಕಟ 4 ಸಿರಿ ವಾದಿರಾಜರು ಒರೆದ ಗ್ರಹಸ್ತ್ರೋತ್ರವ ನಿರುತದಿ ಪಠಿಸಲು ಗ್ರಹ ಪೀಡೆಯು ಸರಿದು ತಾಂ ಪೋಪುದು ಅರಿಯ ನಿಗ್ರಹವಹುದು ತುರುಗಗ್ರೀವನ ದಯದಿ ಸರ್ವ ಸಂಪದಬಹುದು 5 ಗೀರ್ವಾಣ ಭಾಷೆಯಲಿರುವ ಈ ಸ್ತುತಿಯನ್ನು ಚಾರು ಕನ್ನಡ ಗೀತ ರೂಪದಿಂದ ಸಾರಿದ ಲಕ್ಷ್ಮೀನಾರಾಯಣ ಶರ್ಮನು ಕೋರುವ ಕೃಪೆಯನ್ನು ಸಾಧು ಸಜ್ಜನರನ್ನು 6 ನಮೋ ರವಿ ಸೋಮನೆ ನಮೋ ಕುಜಸೌಮ್ಯನೆ ನಮೋ ಗುರು ಭಾರ್ಗವ ನಮೋ ಶನೈಶ್ಚರನೇ ನಮೋ ರಾಹು ಕೇತುವೇ ನಮೋ ಮೃತ್ಯುದೈವವೇ ನಮೋ ಭೂತಗಣನಾಥ ನಮೋ ಲಕ್ಷ್ಮೀಕಾಂತ 7
--------------
ಲಕ್ಷ್ಮೀನಾರಯಣರಾಯರು
ಶ್ರೀಬುಧಸ್ತೋತ್ರ95ಸೂರಿಸಂಪ್ರಾಪ್ಯ ಶ್ರೀ ನಾರಾಯಣ ಪ್ರಿಯ ಬುಧನೇನಮೋ ನಮೋ ನಮೋ ನಿನಗೆ ಪಸೂರಿಪ್ರಿಯಕರ ವಿದ್ವಾನ್ ನಮೋ ಎನ್ನಕುಂದುನೀಗಿಸಿಪೊರೆಮಹಾದ್ಯುತಿಯೇಅ.ಪಪ್ರಿಯಂಗುಕಲಿಕಾ ಶಾಮರೂಪಿಯೆ ಚಾರ್ವಾಂಗ -- ಬುಧನೇ ನಿನಗೆಣೆಯುಂಟೇಸೌಮ್ಯನೆ ಸೌಮ್ಯಗುಣವಂತನೇ ನಮೋ ಶಶಿಸುತ- ದಯದಿಂ ಪಾಲಯಮಾಂ 1ಅಂಬುವು ಚೂರ್ಣಪಿಂಡೀಭಾವಹೇತುವಾಗಿಹುದು-- ನೀಅಂಬುಅಭಿಮಾನಿ ಮಹ ಪಂಡಿತನಾದುದರಿಂದ ಬೇಡುವೆ -- ನಿನ್ನ ವಿನಯದಲಿ 2ಅಂಬುವತ್ ಜ್ಞಾನಯುಕ್ ಸ್ನೇಹಾನುರಾಗ ಎಂಬ -- ಭಕ್ತಿ ಅಂಬುಜನಾಭ ಬಿಂಬನಲಿಅನುಕಂಪಯಾ ನೀ ಒದಗಿಸೊ ಎನಗೆ ಅಂಭ್ರಣಿಪತಿ- ಶ್ರೀವ್ಯಾಸಗೆ ಪ್ರಿಯನೆ 3ಮೂರ್ಲೋಕದಿ ಖ್ಯಾತ ವಿಧುಕುಲ ಪ್ರವರ ನೀ -- ಬುದ್ಧಿ ಗಾಂಭೀರ್ಯದಿ ಶ್ರೇಷ್ಠನೆಂದುಮಾಲೋಲಆತ್ಮಜನಿನ್ನನು ಬುಧನೆಂದು-- ನಾಮಕರಣವ ಮಾಡಿದನು 4ಹೇಮಗರ್ಭನಪಿತ ಪ್ರಸನ್ನ ಶ್ರೀನಿವಾಸ ಪೂರ್ಣ -- ಹೊಳೆಯುತಿಹ ನಿನ್ನಲ್ಲಿನಾಮಾತ್ಮಿಕ ಉಷ ಶನಿ ಕರ್ಮಪ ಮೊದಲಾದವರಿಗೆ --ವರಬುಧನೇ ನಮೋ ನಮೋ5
--------------
ಪ್ರಸನ್ನ ಶ್ರೀನಿವಾಸದಾಸರು