ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮಿತವನು ಪಡಿಯೋ ಪ ಈ ಮಹಿಯೊಳು ರಘುವೀರ ತೀರ್ಥರ ಕರ- ತಾಮರಸೋದ್ಭವರೆನಿಸಿ ಮೆರೆದ ಗುರು ಅ.ಪ ಧರೆಸುತ ಮಂಡಿತ ಸುರಪುರದಲಿ ದ್ವಿಜ ವರ ಕುಲದಲಿ ಜನಿಸಿಯಳಿಮೇ- ಲಾರ್ಯರ ಬಳಿಯಲಿ ಶಬ್ದಾವಳಿ ಶಾಸ್ತ್ರವ ಪಠಿಸಿ ಇಳಿಸುರನುತ ಕರ ಜಲಜೋದ್ಭವ ರೆನಿಸಿ ಕಲಿತು ಗುರುಮುಖದಿ ಮರುತ ಶಾಸ್ತ್ರವನು ತಿಳಿಸುತ ಬುಧಜನ ರೊಲಿಸಿದಂಥ ಗುರು 1 ಹೇಮಮಂಟಪದಿ ಭೂಮಿ ಸುತಾನ್ವಿತ ರಾಮನ ಪೂಜಿಸು ತಾ ಶ್ರೀಮನ್ಮಧ್ವಕ ರಾಬ್ಜಾದಾಗತ ಸೌಮಿತ್ರಿಯ ಸಹಿತ ಸಾಮವ ಪಠಿಸುವ ಭೂಮಿಸುರಜನ ಸ್ತೋಮದಿ ಶೋಭಿಸುತ ಧೀಮಜನರಿಗೆ ಪ್ರೇಮದಿಂದ ಮೃಷ್ಟಾನ್ನದಾನ ಸನ್ಮಾನ ಮಾಡುತಿಹ 2 ಭೂತಳದಲಿ ಸುಕ್ಷೇತ್ರ ಬಹು ಆರ್ಥ ಯಾತ್ರಿಗಳಾ ಚರಿಸಿ ಭೂತಬಾಧೆ ರೋಗಾತುರ ಜನಗಳ ಭೀತಿಯ ಪರಿಹರಿಸಿ ಶಾಸ್ತ್ರಸುಧಾರಸ ಸತ್ಯಮೋದ ಯತಿ- ನಾಥರಿಂದ ಗ್ರಹಿಸಿ ಖ್ಯಾತ ಕಾರ್ಪರ ಕ್ಷೇತ್ರದಿ ನರಮೃಗನಾಥನ ಪ್ರೀತಿಗೆಪಾತ್ರರೆನಿಸಿರುವ 3
--------------
ಕಾರ್ಪರ ನರಹರಿದಾಸರು
ಜಯಾ ಜಯಾ ಪ ಈ ಮುದ್ದುಮುಖವೊ ಮತ್ತೆ ತನುವಿನ ಕಾಂತಿ ಈ ಬಿಲ್ಲು ಈ ಬಾಣ ನಿಂತಭಾವ 1 ಬಂಟ ಈ ಭಾಗ್ಯ ಆವ ದೇವರಿಗುಂಟು ಮೂಲೋಕದೊಳಗೆ 2 ಜಯ ಇನಕುಲೋದ್ಧರಣ ಜಯ ಮುನಿಕೃತ ಶರಣ ಜಯ ದನುಜವಿದಾರಣ ಜಯ ತಮಹರಣ 3 ಧರೆಯೊಳತಿಭಾರವನು ಇಳುಹಿ ಕಮಲಜ ಮುಖ್ಯ ಸುರರ ಮೊರೆಯನು ಕೇಳ್ದು ನರರೂಪ ತಾಳ್ದು 4 ದಶರಥನ ಗರ್ಭದಲಿ ಜನಿಸಿ ಮುನ್ನ ಮುನಿ ಮನೋರಥ ಕಾಯಿದ ಪುಣ್ಯಚರಿತ್ರ5 ಅಸುರರನು ಅಳಿದು ಅಹಲ್ಯಳಿಗಿತ್ತ ವರವಿತ್ತು ಮಿಥಿಳ ಪುರದಿ ಹರನ ಧನುವನುರೆ ಮುರಿದು 6 ಅತುಳ ಬಲದಲಿ ಸೀತೆಯ ಒಲಿಸಿದ ಭಾರ್ಗವ ಮ- ಹಿತÀಳ ಬಲವಂತ ದೇವೋತ್ತುಂಗ ಜಯತು 7 ಭರದಿಂದಲಯೋಧ್ಯಾಪುರವನು ಶೃಂಗರಿಸೆ ಹರುಷತನದಲಿ ರಾಮಗರಸುತನವೆನಲು 8 ಕಿರಿಯ ಮಾತೆಯು ಬಂದು ಭರತನಿಗೆ ಪಟ್ಟವೆನೆ ಸಿರಿಸಹಿತ ಹೊರಹೊಂಟ ಕರುಣಾಳು ಜಯತು 9 ಅನುಜ ಅವನಿಜೆ ಸಹಿತ ವನವಾಸವ ಮಾಡಿ ವನಜಾಕ್ಷ ಪತಿಯಾಗೆಂದು ರಾಕ್ಷಸಿಯು ಬರಲು 10 ಅನುವಾಯಿತೆಂದು ನಾಸಿಕವ ಹರಿದು ಭಂಗಿಸಿದೆ ಬಿನುಗು ಹೊಮ್ಮøಗವೆಚ್ಚ ಘನಮಹಿಮ ಜಯತು 11 ಜಕ್ಕಿದ ವಾಲಿಯನು ಕೊಂದು ಕುಲಸೈನ್ಯ ಸಹವಾಗಿ ನಿಲ್ಲದೆ ಸೇತುವೆಗಟ್ಟಿ ಅಸುರರೊಡಗೂಡಿ 12 ಖುಲ್ಲ ದಾನವ ಕುಂಭಕರ್ಣ ರಣಮುಟ್ಟಿ ಎಲ್ಲರನು ತರಿದಂಥ ಬಲ್ಲಿದನೆ ಜಯತು 13 ದÉೀವಕ್ಕಳು ಹರುಷದಲ್ಲಿ ಪೂಮಳೆಗರೆಯೆ ಭೂಮಿಜೆಯ ಸಹಿತ ಸೌಮಿತ್ರಿಯೊಡಗೂಡಿ 14 ಕ್ಷೇಮದಿಂದಯೋಧ್ಯಪುರದಿ ಸುಖದಲ್ಲಿರ್ದ ಸ್ವಾಮಿ ಶ್ರೀಹಯವದನ ರಘುಕುಲತಿಲಕನಲ್ಲವೆ 15
--------------
ವಾದಿರಾಜ
ಬಾರೋ ಬೇಗನೆ ಶ್ರೀಧರ ಗುಣಾಕರ ಪ ಬಾರೋ ಬೇಗನೆ ಪಾದವಾರಿಜಕೆರಗುವೆ ಚಾರು ಪರಿಯಂಕಕ್ಕೆಅ.ಪ ಶೌರಿ ಅಗ್ರಜನಾಗಿ ಕ್ರೂರರ ಸದೆದು ಭೂ ಭಾರವನಿಳುಹಿದ ಶೌರ್ಯದ ಮಂಚಕೆ1 ರಾಮನ ಶೇವಿಸಿ ಪ್ರೇಮವನು ಪಡೆದಂಥ ಸೌಮಿತ್ರಿಯೆಂಬ ಸುನಾಮದ ಹಾಸಿಗೆಗೆ 2 ಸಾಸಿರವದನದಿ ಶ್ರೀಶನೆ ತವಗುಣ ಲೇಶ ವರ್ಣಿಸುವಂಥ ಭಾಸುರ ತಲ್ಪಕೆ 3 ಇಂದಿರದೇವಿಯು ನಿಂದಿರುವಳು ತವ ಸುಂದರ ಚರಣಾರವಿಂದವ ತೋರಿಸು 4 ಶರಣರ ಪೊರೆವ ಕಾರ್ಪರನರಶಿಂಹನೆ ಹರಗೆ ಭೂಷಣವಾದ ಉರಗಪರ್ಯಂಕಕೆ5
--------------
ಕಾರ್ಪರ ನರಹರಿದಾಸರು
ಶೇಷದೇವನೆ ಷೋಷಿಸೆನ್ನನು ಶೇಷದೇವಾ ಕರುಣಾ ಸಮುದ್ರಭವ ಪ ಕ್ಲೇಶವ ಕಳಿಯೋ ಸುರೇಶ ಮುಖವಿನುತ ಅ.ಪ ವಾಸುದೇವನ ಶಯ್ಯಾಸನ ರೂಪದಿ ಸೇವಿಸುವಿ ಚರಣ ಸಾಸಿರವದನದಿ ಶ್ರೀಶನ ಶುಭಗುಣಲೇಶ ವರ್ಣಿಸುವ ಭಾಸುರ ವಪುಷಾ 1 ವ್ಯಾಪ್ತನೆ ರಾಮನ ಸೇವಿಸಿ ಪ್ರೇಮವ ಪಡೆದಿಹ ಸೌಮಿತ್ರಿಯ ಶುಭನಾಮದಿ ಮೆರೆದಾ 2 ವಾರುಣೀವರ ಧಾರುಣಿಯೊಳು ಕೃಷ್ಣಾತೀರಕಾರ್ಪರ ನಾರಸಿಂಹನ ಪದಾರವಿಂದಯುಗ ಸೇರಿಸುಖಿಸುತಿಹ ಶೌರಿ ಅಗ್ರಜ3
--------------
ಕಾರ್ಪರ ನರಹರಿದಾಸರು
ಸಾರಿರೈಯ್ಯಾ ಜನರು ಗಂಭೀರ ಗುಣನಿಧಿ ಮುಖ್ಯ ಪ್ರಾಣನ ಪ ರೋಷದಿಲಂಕೆಯವಳಿಸಿ ವಿಭೀಷಣ ನಾಮವೇ ಉಳಿಸಿ || ಔಷಧಗಿರಿ ತಂದಿಳಿಸಿ ಕಾಯದಾ ಸೌಮಿತ್ರಿಯ ಪ್ರಾಣವೆನುಳಿಸಿ1 ಅರಗಿನ ಮನೆಯಿಂದಾ ಐವರನು ಹೊರಡಿಸಿ ತಂದಾ | ಪುರ ಬೋಧನಕ ಬಂದಾ | ಸುರರಾ ಕಾಯದಾ ಕರುಣ ದಿಂದಾ 2 ಹರಿಪರಂ ದೈವೆಂದರಸೀ | ದುರುಳರ ಮತವನು ಪರಿಹರಿಸಿ | ಹೊರೆದನು ಜಗ ಉದ್ಧರಿಸೀ ಎಂ | ದೆರಗಿದ ಮಹಿಪತಿ ನಂದನುದ್ಧರಿಸೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಮದಾನಂದ ತೀರ್ಥ ಹನುಮ | ಭೀಮನಿನ್ನ ಸಮಾನ ಪುರುಷರುಈ ಮೂಜಗದೊಳಿಲ್ಲವೆಂದು ಶ್ರೀ ರಾಮಸಹಭೋಜನವನೀಯನೆ? ಪಹರಿವಿರಿಂಚಿ ಸಹಾಯದಿಂದ | ಹರನುತ್ರಿಪುರವನಳಿಯಲಾಗ |ಬರಿದೆ ಕೊಂಡಾಡಿದರು ಸರ್ವರು |ಅರಿಯದೆಯೆ ನಿನ್ನ ಸಾಹಸ ||ಶರಧಿಲಂಘಿಸಿ ದಾನವರನು ತರೆದುಸೀತೆಗೆ ಉಂಗುರವಿತ್ತು |ಪುರವನುರುಹಿ ಹರಿಯಡಿಗೆ ಆಕುರುಹತಂದು ಮುಟ್ಟಿಸಿದೆಯೊ 1ಸಾಸಿರದ ತನ್ನ ಪೆಡೆಯ ನಡುವೆ | ಈಸುಸಚರಾಚರವನೆಲ್ಲ |ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||ಆ ಶಕುತಿಯನು ತೋರಿಸಲುದಶಾಸ್ಯನೆಳೆಯುವ ಸೌಮಿತ್ರಿಯನುದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು 2ತನ್ನ ಜನನಿಯೊಬ್ಬಳಿಗೆಸುಪರ್ಣಬಳಲಿ ಸುಧೆಯ ತರಲುಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ 3ಸಕಲ ಪ್ಲವಗನಿಕರ ರಾಮನ | ತ್ರಿಕರಣಸೇವೆಯನು ಮಾಡಿ |ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದುಕೇಳಲು ನೀನು ನಾ ||ಲುಕು ಪುರುಷಾರ್ಥಗಳಜರಿದು| ಭಕುತಿಯಕೊಡು ಎನಲು ನವಕನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನುನಿನ್ನ ಪೊಗಳಿದ 4ಶರಧಿಯ ಮಥನದೊಳುದಿಸಿದ |ಗರಳಜಗತ್ತನು ಅಂಜಿಸೆಸಿರಿಯರಸನ ಪೆರ್ಮೆಯಿಂದ | ಸುರಿದುಅದನು ಜೀರ್ಣಿಸಿಕೊಂಡ ||ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆಮರುಳ ಕೌರವರಿಕ್ಕಿದ ವಿಷವ | ಭರದಿಉಂಡು ತೇಗಿದುದರಿದೆ ? 5ಅವನಿಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನುಬವರಮುಖದಿ ನಗುತ ಗೆಲಿದು |ಹವಿಯ ಕೃಷ್ಣಾನಿಗರುಪಿಸಿದಿವಿಜರೆದುರುಗೊಳಲುಅವರ|ನವರತಾರತಮ್ಯದಿ ಮನ್ನಿಸಿ |ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ 6ಸುರಾಸುರರ ಸಂಗ್ರಾಮದಲಿ |ಅರಿವಿಪ್ರಚಿತ್ತಿಯ ನೀನು ಕೊಲ್ಲಲು |ವಿರಿಂಚಿ-ಹರರ ವರದಿಂದವನೆ |ಜರಾಸಂಧನಾಗಿ ಇಳೆಯೊಳು |ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ 7ನಡುಮನೆಯೆಂಬ ಸಾಧುದ್ವಿಜನ | ಮಡದಿಯಬಸಿರಿನಲಿ ಉದಿಸಿಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||ತಡೆದು ಆನಂದ ಶುಭಗುಣಗಳ | ಕಡಲುಹರಿಸರ್ವೋತ್ತಮನೆಂದುಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆಸ್ಥಾಪಿಸಿದೆಯೊ ನೀ 8ಮರುತ ನಿನ್ನವತಾರ ತ್ರಯವ | ನರಿತುಭಜಿಪಗೆ ಶ್ವೇತದ್ವೀಪ |ದರುಶನವನೆ ಮಾಡಿಸಿ ಶ್ರೀ |ಪುರಂದರವಿಠಲೇಶನ |ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |ಪರಮಾನಂದವ ಪಡೆಸಿ ಹೊರೆವೆ |ಪರಿಪರಿಯ ಭೋಗಗಳನಿತ್ತು 9
--------------
ಪುರಂದರದಾಸರು