ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟಾ ಹರಿವಿಠಲ | ಪಂಕಕಳೆದಿವನಾ ಪ ಪಂಕಜಾಕ್ಷನೆ ದೇವ | ಕಾಪಾಡ ಬೇಕೋ ಅ.ಪ. ಅಂಧಕಾರದಲಿಪ್ಪ | ಮಂದಮತಿಯುದ್ಧರವಮಂದರೋದ್ಧಾರಿ ಹರಿ | ಮಾಡಿ ಪೊರೆಯಿವನಾ |ನಂದಮುನಿ ಮತ ತಿಳಿಸಿ | ಸಂದೇಹಗಳ ಕಳೆದುಸಂದೋಹ ಸಂಸ್ಥಿತನ | ಉದ್ಧರಿಸೊ ಬೇಕೋ 1 ಸೃಷ್ಟ್ಯಾದಿ ತವ ಮಹಿಮೆ | ನಿಷ್ಠೆಯಿಂದಲಿ ಭಜಿಪಸುಷ್ಠುಮನವನೆಯಿತ್ತು | ಕಾಪಾಡೊ ಹರಿಯೇಕೃಷ್ಣಮಾರುತಿ ಇವನ | ಕಷ್ಟ ಸಂಚಯ ಕಳೆದುಶ್ರೇಷ್ಠ ತವದಾಸ್ಯದಲಿ | ಇಟ್ಟು ಪೊರೆ ಇವನಾ 2 ಸತ್ಸಂಗ ಸದ್ವ್ಯಸನ | ಸನ್ಮಾರ್ಗದಲಿ ಇಟ್ಟುಕುತ್ಸಿತರ ಸಂಗವನು | ದೊರಗೈ ಹರಿಯೇ ಮತ್ಸ ಕೇತನ ಜನಕ | ಭಕ್ತವತ್ಸಲನಾಗಿವತ್ಸನ್ನ ಪೊರೆವವರು | ಮತ್ತಾರು ಇಹರೋ 3 ಹರಿಗುರುಗಳಾ ಸೇವಾ | ಪರಮ ಪ್ರೀತಿಲಿ ಮಾಳ್ವವರಮತಿಯನೇ ಕೊಟ್ಟು | ಪೊರೆಯ ಬೇಕಿವನಾ |ಹರಿಯ ನಾಮಾಮೃತವ | ನಿರುತದಲಿ ಸವಿದುಂಬಪರಮ ಸೌಭಾಗ್ಯವನೆ | ಕರುಣಿಸೋ ಹರಿಯೇ 4 ಸರ್ವಜ್ಞ ಸರ್ವೇಶ | ಸರ್ವ ಸ್ವಾತಂತ್ರನೇಭವವನದಿ ಉತ್ತರಿಸಿ | ಪೊರೆಯ ಬೇಕಿವನಾ |ದುರ್ವಿಭಾವ್ಯನೆ ಗುರು | ಗೋವಿಂದ ವಿಠಲನೇದರ್ವಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು
ಶೇಷವಂದ್ಯ ಹರಿ ವಿಠಲ | ನೀ ಸಲಹೊ ಇವಳಾ ಪ ವಾಸುದೇವನೆ ಕೃಷ್ಣ | ಶ್ರೀಶ ಪುರುಷೋತ್ತಮ ಅ.ಪ. ಸೂಕರ ನೀಚ | ಯೋನಿಗಳಲಿ ಜನಿಸಿಜ್ಞಾನಾನು ಸಂಧಾನ | ಕಾಣದಿದ್ದಾಗ್ಯೂಅನೇಕ ಪೂರ್ವವೆನೆ | ಪುಣ್ಯ ಸಂಚಿತದಿಂದಮಾನವ ಸುಜನ್ಮದೊಳು | ಜನುಮ ಪೊತ್ರಿಹಳೊ 1 ತೈಜಸ ಸೂಚಿ | ವರ ಅಂಕಿತವನಿತ್ತೆಮರುತಾಂತರಾತ್ಮಕನೆ | ಮದ್ಬಿಂಜ ಪೊರೆಯಿವಳಾ 2 ವರಸು ಸೌಭಾಗ್ಯವನೆ | ಪರಿಹರಿಸಿ ದುಷ್ಕರ್ಮನಿರುತ ನಿನ್ನಯ ನಾಮ | ಸ್ಮರಣೆ ಸುಖವಿತ್ತೂಮರುತ ಮತ ತತ್ವಗಳ | ಅರಿವಾಗುವಂತೆಸಗೋಕರಿವರದ ಕಮಲಾಕ್ಷ | ಕಾರುಣ್ಯ ಮಾರ್ತೇ 3 ಪತಿಸುತರು ಹಿತರಲ್ಲಿ | ಕೃತಿರಮಣ ಸುವ್ಯಾಪ್ತಮತಿಇತ್ತು ಪೊರೆ ಇವಳ | ಕ್ಷಿತಿರಮಣ ದೇವಾಮತಿಮತಾಂ ವರರಂಘ್ರಿ | ಹಿತಸೇವೆ ದೊರಕಿಸುತಕೃತ ಕೃತ್ಯಳೆಂದೆನಿಸೊ | ಅತಿ ಚಿತ್ರ ಚರಿತಾ 4 ಕಾವ ಕರುಣಿಯೆ ದೇವ | ಭಾವುಕರ ಪರಿಪಾಲನೀವೊಲಿಯ ದಿನ್ನಿಲ್ಲ | ಆವತ್ರೈ ಜಗದೀನೋವುಸುಖ ದ್ವಂದ್ವಗಳ | ಸಮತೆಯು ಉಂಬಂತೆನಿವೊಲಿಯೊ ದೇವ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಹರಿನಾರಾಯಣ ಎನ್ನಿರೊ ಸಜ್ಜನರು ಶ್ರೀ- ಹರಿಕೃಷ್ಣ ಶರಣೆನ್ನಿರೊ ಪ ಪರಿಪರಿ ದುರಿತಗಳಳಿದು ಪೋಗುವದೆಂದು ನಿರುತವು ವೇದಪುರಾಣ ಪೇಳುವದು ಶ್ರೀ ಅ.ಪ ಹರಿ ಎಂದ ಮಾತ್ರದಲಿ ಹತ್ತಿದ ಪಾಪ ಪರಿಹಾರಾಗುವುದು ಕೇಳಿ ಹರಿದಾಸರೊಡನೆ ಕೂಡಿ ಸತ್ಸಂಗದಿ ಹರಿ ಕೀರ್ತನೆಯನು ಪಾಡಿ ಹರಿಯ ಮಹಿಮೆಯ ಸ್ಮರಿಸುತಲಿ ಹಗ ಲಿರುಳು ಚಿಂತನೆ ಮಾಳ್ಪ ಸುಜನರ ಪರಮ ಕರುಣಾ ಸಾಗರನು ತನ್ನ- ವರೊಳಿರಿಸುತ ಪೊರೆವ ಸಂತತ 1 ಕರಿರಾಜ ಕಷ್ಟದಲಿ ಮೊರೆ ಇಡೆ ಕೇಳಿ ತ್ವರದಿ ಓಡಿ ಬರಲಿಲ್ಲವೆ ಹರಿ ನೀ ರಕ್ಷಕನೆನ್ನಲು ಪಾಂಚಾಲಿಗ- ಕ್ಷಯ ವಸ್ತ್ರವೆನಲಿಲ್ಲವೆ ತರುಳರೀರ್ವರ ಪೊರೆದು ರಕ್ಷಿಸಿ ಕರೆಯೆ ನಾರಗನೆಂದ ದ್ವಿಜನಿಗೆ ನರಕ ಬಾಧೆಯ ಬಿಡಿಸಿ ಸಲಹಿದ ಹರಿಗೆ ಸಮರು ಅಧಿಕರಿಲ್ಲ ಶ್ರೀ 2 ಬಡಬ್ರಾಹ್ಮಣನ ಸತಿಯು ನಯಭಯದಿಂದ ಒಡೆಯರ್ಯಾರಿಲ್ಲೆನಲೂ ಪೊಡವೀಶ ಶ್ರೀಪತಿಯು ಪರಮಾಪ್ತನೆನಲು ಹಿಡಿಯಗ್ರಾಸವ ಕೊಡಲು ನಡೆದು ದ್ವಾರಕ ದೊಡೆಯನಿಗೆ ಒ- ಪ್ಪಿಡಿಯ ಗ್ರಾಸವ ಕೊಡಲು ಭುಂಜಿಸಿ ಕೆಡದ ಸೌಭಾಗ್ಯವನೆ ನೀಡಿದ ಬಿಡದೆ ಕಮಲಾನಾಭ ವಿಠ್ಠಲನ 3
--------------
ನಿಡಗುರುಕಿ ಜೀವೂಬಾಯಿ