ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಾಯವೊ ಹರಿಯೆ ಶ್ರೀನಿವಾಸನೆ ನಿನ್ನ ಧ್ಯಾನಿಸುವವರನು ಪೊರೆವೆ ಸಾನುರಾಗದಲಿ ಪ ಜ್ಞಾನಿಗಳು ಹಗಲಿರುಳು ಮೌನದಿಂದಲಿ ಭಜಿಸಿ ದಾನವಾಂತಕ ನಿನ್ನ ಧ್ಯಾನ ಮಾಡುವರು ಅ.ಪ ಬಡತನದಿ ಬಹು ವ್ಯಥೆಯ ಪಡುತ ಸತಿಸುತರಿರಲು ನುಡಿಯೆ ಭಯ ಭಕ್ತಿಯಲಿ ಒಡೆಯರಿಲ್ಲೆಮಗೆ ಮೃಡಸಖನು ಇಹನೆನಲು ಹಿಡಿಯವಲಿಯ ಕೊಡಲು ಕೆಡದ ಸೌಭಾಗ್ಯವನು ಒಡನೆ ನೀಡಿದೆಯೊ 1 ಅಂದು ದುಶ್ಖಾಸನ ನೃಪನಂದನೆಯ ಬಾಧಿಸುತ ನಿಂದು ಸೀರೆಯ ಸೆಳೆಯೆನೊಂದು ದುಃಖಿಸುತ ಇಂದಿರಾಪತಿ ಕೃಷ್ಣ ಇಂದೆನಗೆ ನೀನೆ ಗತಿ ಎಂದೊಡಕ್ಷಯವಿತ್ತು ಅಂದು ಸಲಹಿದೆಯೊ 2 ಮಡುವಿನಲಿ ಗಜರಾಜ ಪಿಡಿದ ಮಕರಿಗೆ ಸಿಲುಕಿ ಮಡದಿ ಮಕ್ಕಳನಗಲಿ ಕಡೆಗೆ ಸೊಂಡಿಲಲಿ ಪಿಡಿದ ಕುಸುಮವನು ಜಗದೊಡೆಯಗರ್ಪಿತವೆನಲು ದಡದಡನೆ ಬಂದೆಯೊ ಮಡದಿಗ್ಹೇಳದಲೆ 3 ಅಂದು ದೂರ್ವಾಸಮುನಿ ಬಂದು ಶಿಷ್ಯರ ಸಹಿತ ಇಂದೆಮಗೆ ಹಸಿವೆನಲು ನೊಂದು ಶ್ರೀಹರಿಯೆ ತಂದೆ ನೀ ಸಲಹೆನಲು ಬಂದೆ ಬಹಳ್ಹಸಿವೆಯಲಿ ಒಂದು ಪತ್ರದ ಶಾಖ ಉಂಡು ಸಲಹಿದೆಯೊ 4 ಹಿಂದಜಾಮಿಳ ತನ್ನ ಬಂಧುಬಳಗವ ತ್ಯಜಿಸಿ ಅಂದು ಇಹಸುಖದಿ ಆನಂದ ಪಡುತಿರಲು ಬಂದರಾಗ ಯಮಭಟರು ನಿಂದು ಬಾಧಿಸುತಿರಲು ಕಂದನಾರಗನೆನಲು ಅಂದು ಸಲಹಿದೆಯೊ 5 ಚಿಕ್ಕವನು ಪ್ರಹ್ಲಾದ ಮಕ್ಕಳಾಟದ ಧ್ರುವನು ರಕ್ಕಸಾಂತಕನ ಮೊರೆ ಇಕ್ಕಿ ಪ್ರಾರ್ಥಿಸಲು ತಕ್ಕವರಗಳನಿತ್ತು ತಕ್ಕೈಸಿ ಅಣುಗನನು ಮಿಕ್ಕಭಕುತರ ಪೊರೆದೆ ಲಕ್ಕುಮಿಯ ರಮಣ 6 ಈ ಪರಿಯಲಿ ಬಹುಭಕುತರಾಪತ್ತುಗಳ ಹರಿಸಿ ಶ್ರೀಪತಿಯ ರಕ್ಷಿಸಿದಿ ಆಪನ್ನಜನರ ಗೋಪತಿ ಕೃಷ್ಣ ಜಗದ್ವ್ಯಾಪಕನೆ ನೀ ಸಲಹಿ ತಾಪಸರ ಒಡೆಯ ಹೃದ್ವ್ಯಾಕುಲವ ಕಳೆವೆ 7 ಕಾಳಿ ಮಡುವನೆ ಧುಮುಕಿ ಕಾಳಿಂಗನ್ಹೆಡೆ ತುಳಿದೆ ಕಾಳದೇವಿಯರಮಣ ಕಾಲಿಗೆರುಗುವೆನು ಕಾಳಯುಕ್ತಿನಾಮ ಸಂವತ್ಸರದಿ ಸುಜನರಿಗೆ ಭಾಳ ಸುಖಹರುಷಗಳ ಲೀಲೆ ತೋರಿಸುವ 8 ಭ್ರಮಿಸಿ ಇಹ ಸುಖದಿ ಮನ ಶ್ರಮ ಪಡುತಲಿರೆ ದೇವ ರಮೆಯ ರಮಣನೆ ಪೊರೆಯೊ ಮಮತೆಯನು ಬಿಡದೆ ಕಮಲಸಂಭವಜನಕ ಕಮಲನಾಭ ವಿಠ್ಠಲ ಸುಮನಸರ ಒಡೆಯ ಹೃತ್ಕಮಲದಲಿ ಪೊಳೆವ 9
--------------
ನಿಡಗುರುಕಿ ಜೀವೂಬಾಯಿ
ವಾಣೀ ನೀ ತೋರೆ ವಾರಿಜನಾಭನ, ಮಹಾಲಾಭನ್ನ ನಿತ್ಯ ಸುಲಭನ ಭಾನು ಸನ್ನಿಭನ ಪ ಕ್ಷೋಣೀಯೊಳಗಣ ಪ್ರಾಣಶ್ರೇಷ್ಠ - ಜಗ ತ್ರಾಣನ ತೋರಿಸೆ ಭಾನು ಸನ್ನಿಭಳೆ ಅ. ಪ. ಚೈತನ್ಯರಾಣಿ ಪುಸ್ತಕಪಾಣಿ-ಸುನೀಲವೇಣಿ ಅತ್ಯಂತ ಮಹಿಮೆ ಗುಣಗುಣಶ್ರೇಣಿ ತ್ರಿಲೋಕ ಜನನಿ ಸತ್ಯವ ತೋರುತ ನಿತ್ಯೋಪಾದಿಲಿ ಸತ್ಯ ಸಂಕಲ್ಪಳೆ ನಿತ್ಯದಿ ಪೂಜಿಪೆ ತ್ವತ್ಪಾದಾಂಬುಜವಿತ್ತು ನೀ ಸಲಹೆ1 ನಾಲಿಗೆಯಲ್ಲಿ ಬಂದು ನಿಂದು ದಯದಿಂದ ಇಂದು ಶ್ರೀಲೋಲ ಹರಿಯೆ ದೈವವೆಂದು ಕೊಂಡಾಡೆ ಮುಂದು ಕಾಲ ಹಿಂಗಿಸಿ ವಿ- ಶಾಲ ಮತಿಯ ಕೊಟ್ಟು ಆಳುಗಳೊಡನೆ ಸು- ಶೀಲ ಜ್ಞಾನವಿತ್ತು ಆಲಸ್ಯಮಾಡದೆ ಶೀಲ ಮುಕ್ತಿಗನುಕೂಲವಾಗುವುದಕ್ಕೆ2 ಜನ್ಮ ಬಂದಿದೆ ಕಡೆಗೆ ಮಾಡು ದಯದಿಂದ ನೋಡು ಘನ ಕೀರ್ತಿವಂತೆ ಅಭಯವ ನೀಡು, ನಿನಗಲ್ಲ ಈಡು ಕನಸಿಲಿ ಮನಸಿಲಿ ಮನಸಿಜನೈಯನ ನೆನೆಸುವ ಸೌಭಾಗ್ಯವನುದಿನ ಕೊಟ್ಟು ಘನಪ್ರೇರಣೆಯಿಂದ ವಿಜಯವಿಠ್ಠಲನಂಘ್ರಿ ವನಜವ ತೋರಿ ಸನ್ಮೋದವನೀಯೆ3
--------------
ವಿಜಯದಾಸ
ಸನ್ನುತ ವಿಠಲಾ | ಹಿತದಿ ಪೊರೆ ಇವಳಾ ಪ ಮತಿವಂತಳೆಂದೆನಿಸಿ | ಅತಿಶಯದಿ ಹರಿಯೇ ಅ.ಪ. ಹರಿ ಗುರು ಸದ್ಭಕ್ತಿ | ನಿರುತ ಹಿರಿಯರ ಸೇವೆಗೆರಗಲೀಕೆಯ ಮನಸು | ಪರಮ ಪೂರುಷನೇ |ಪರಮಾತ್ಮ ಪರತತ್ವ | ದರಿವು ಆಗುತ ಭವದಪರಿಹರಕೆ ಮಾರ್ಗವನೆ | ತೋರೋ ಗುಣಪೂರ್ಣ 1 ಗಜ ಪಂಚಾಸ್ಯ | ಪರಮ ದಯ ಪೂರ್ಣಹರಿನಾಮ ನಿರುತದಲಿ | ಸ್ಮರಿಪ ಸೌಭಾಗ್ಯವನುಕರುಣಿಸುತ ಪೊರೆ ಇವಳಾ | ಮರುತಾಂತರಾತ್ಮ 2 ಪರಿ ಪರಿ ಪೋಷಿಸಿವಳಾ 3
--------------
ಗುರುಗೋವಿಂದವಿಠಲರು
ಲೋಕಪಾಲಕರು96-1ಪೂರ್ಣ ಸುಗುಣಾಂಬೋಧಿಅನಘಲಕ್ಷ್ಮೀರಮಣಜ್ಞಾನಾದಿನಿಖಿಳಸೌಭಾಗ್ಯದನೆ ಸ್ವಾಮಿಅನವರತಸರ್ವ ದಿಕ್ಪಾಲಕರೊಳಿದ್ದು ನೀಎನ್ನ ರಕ್ಷಿಪ ವಿಭುವೆ ಶರಣು ಮಾಂಪಾಹಿಪಇಂದ್ರಾಗ್ನಿ ಯಮ ನಿಯಯತಿ ವರುಣ ವಾಯುಚಂದ್ರ ನಿಧಿಪತಿ ಈಶಾನಫಣಿಬ್ರಹ್ಮಇಂದಿರಾಪತಿ ಸದಾ ನಿಮ್ಮೊಳು ನಿಂತು ಆನಂದ ಸರ್ವೇಷ್ಟಗಳಈವಸ್ಮರಿಪರಿಗೆ1ವಾಮ ಹಸ್ತದಿ ವಜ್ರಬಲ ಕರವು ಅಭಯದವುಹೇಮವರ್ಣನೆ ಸಹಸ್ರಾಕ್ಷಸುರರಾಜಕಾಮಿತಾರ್ಥವನೀವೆ ಐರಾವತಾರೂಢನಮೋ ಶಚೀಪತಿ ಇಂದ್ರ ಶ್ರೀಶಪ್ರಿಯತರನೆ 2ಹೇಮವರ್ಣಾಂಗನೆ ಸಪ್ತಕರ ಸಪ್ತಾರ್ಚಿನಮೋ ಸ್ವಾಹಾಪತಿ ಅಗ್ನಿ ಮೇಷವಾಹನನೆಕಾಮದನೆ ದುರಿತಹನೆ ಹರಿಣೀಶಪ್ರಿಯಕರನೆನಮೋ ಶ್ರುವಾಶಕ್ತ್ಯಾದಿಧರ ಅಭಯಹಸ್ತ 3ಜ್ಞಾನಸುಖಮಯ ವಿಷ್ಣುಯಜÕನಿಗೆ ಪ್ರಿಯತರನೆಕೃಷ್ಣವರ್ಣನೆ ಲೋಕಕರ್ಮಫಲಪ್ರದನೆದಂಡಧರ ಅಭಯದನೆ ಮಹಿಷವಾಹನ ಯಮನೆಎನ್ನ ಮನ್ನಿಸಿಪೊರೆಇಲಾಪತಿಯೆ ಶರಣು4ಅಸುರರಿಗೆ ಭೀಕರ ಕರಾಲ ವಿರೂಪಾಕ್ಷನೆಅಸಿಧರನೆ ಅಭಯದನೆ ಶರಣು ಮಾಂಪಾಹಿನೃಸಿಂಹಪ್ರಿಯತರನೆ ಕಾಳಿಕಾಪತಿ ಊಧ್ರ್ವಕೇಶ ನಿಋಋತಿನೀಲನರವಾಹ ನಮಸ್ತೆ5ಮೀನ ವಡವಕಮಠಕ್ರೋಡನಿಗೆ ಪ್ರಿಯತರನೆಸ್ವರ್ಣವರ್ಣನೆ ವರುಣ ಪದ್ಮಿನೀರಮಣವನಪತಿಯೆ ಮಕರವಾಹನ ಹವಳಭೂಷಣನೆನಿನಗೆ ನಮೋ ಪಾಶಧರ ಅಭಯದನೆಪಾಹಿ6ನಿಯಮನ ಸುಕರ್ತಾ ಶ್ರೀ ಪುಂಡರೀಕಾಕ್ಷನಿಗೆಪ್ರಿಯತರನೆ ಹರಿಣವಾಹನ ಮೋಹಿನೀಶಶ್ಯಾಮವರ್ಣನೆ ವಾಯು ಜಗತ್ ಪ್ರಾಣರೂಪನೆಕಾಯೆನ್ನ ದಯದಿ ಗದಾಪಾಣಿ ಅಭಯದನೆ 7ಸಾರಾತ್ಮ ಹಯಮುಖ ಧನ್ವಂತರಿ ಪ್ರಿಯತರನೆಸೂರಿಜನ ಚಿಂತ್ಯ ನೀ ಸಿತಕಾಂತಿಕಾಯಪೊರೆಎನ್ನ ಅಭಯದನೆ ರೋಹಿಣೀಪತಿಸೋಮಪುರುಟಭೂಷಣ ಸುಖದ ಕುಮುದಸದ್ಮಸ್ಥ 8ಸೌಭಾಗ್ಯ ಸಾರಾತ್ಮ ಶ್ರೀಯಃಪತಿಗೆ ಪ್ರಿಯತರನೆವಿಪರತ್ನನಿಭ ಯಕ್ಷವೈಶ್ರವಣಪಾಹಿಕುಬೇರ ನಿಧಿಪತಿ ಧನಧಾನ್ಯಾಧಿಪತೇ ನಮೊಸೌಭಾಗ್ಯ ಧನ ಧಾನ್ಯ ಸಮೃದ್ಧಿ ಎನಗೀಯೊ 9ಮನುಜವಾಹ್ಯವು ವರವಿಮಾನದಿ ಕುಳಿತಿಹೆಅನಲಾಕ್ಷಶಂಖಗದಾಧರ ನಮೋಕಿರೀಟಿಎನ್ನ ತಪ್ಪುಗಳನ್ನು ಮನ್ನಿಸಿ ಹರಿಭಕ್ತಿಧನಧಾನ್ಯ ಆರೋಗ್ಯ ಸೌಂದರ್ಯವೀಯೊ 10ನಿರ್ದೋಷಸುಖಮಯ ಜಯೇಶನಿಗೆ ಪ್ರಿಯತರನೆನೀ ದಯದಿ ಸಲಹೆನ್ನ ಈಶಾನಶೂಲಿಸದಾಶಿವನೆ ಭಕ್ತರಿಂ ಅಚ್ಛಿನ್ನ ಸೇವ್ಯನೆಸದಾಅಭಯಎನಗಿತ್ತು ಪೊರೆಯೊ ಗೌರೀಶ11ಆನಂದರೂಪ ಸಂಕರ್ಷಣ ಅನಂತನಿಗೆಅನಂತ ನೀ ಪ್ರಿಯತರನು ಶುಕ್ಲವರ್ಣನಿನ್ನಸತಿವಾರುಣೀಸಮೇತ ಅಭಯದನಾಗಿಎನ್ನಪೊರೆಕೃಷ್ಟಿಧರ ನಮೋ ನೀಲವಾಸ12ಜಗದೀಶ ಭೂರಮಣ ಕೇಶವ ಸುಪ್ರಿಯತಮನೆಜಗದಾದ್ಯ ಬ್ರಹ್ಮ ಸರಸ್ವತೀಸಮೇತಖಡ್ಗಧರ ಅಭಯದನೆ ನಮೋ ರಕ್ತವರ್ಣನೆಮುಗಿದುಕರಶರಣಾದೆಪೊರೆಪಿತಾಮಹನೆ13ಐಶ್ವರ್ಯ ಆಯುಷ್ಯ ನೀತಿ ಜಯ ಅಪಿಪಾಸಪಾವಿತ್ರ್ಯ ಸುಖವಿತ್ತಜ್ಞಾನವಿಜ್ಞಾನಈವೋರು ಇವು ಸರ್ವ ಶ್ರವಣ ಪಠಣವ ಮಾಡೆವಿಶ್ರವ ಕಾಶ್ಯಪ ಲೋಕಪಾಲಕರು ದಯದಿ 14ಇಂದ್ರಾಗ್ನಿ ಯಮ ನಿಋಋತಿ ವರುಣ ಪ್ರವಹಸ್ಥಚಂದ್ರ ವೈಶ್ರವಣ ಈಶಾನ ಅನಂತಸ್ಥಮಂದಜಾಸನಪಿತ ಪ್ರಸನ್ನ ಶ್ರೀನಿವಾಸನುಕುಂದದ ಸೌಭಾಗ್ಯವನುಈವಕರುಣಾಳು15
--------------
ಪ್ರಸನ್ನ ಶ್ರೀನಿವಾಸದಾಸರು