ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯ ಇಂದಿರೆ ರಮಣ ಆಗಲೂ ನೀ ಕಾಯಬೇಕೋ ಅರವಿಂದ ನಯನ ಪ. ಈಗ ಈ ಜನ್ಮದಲ್ಲಿ ಭವ ದಾಟುವಲ್ಲಿ ಅ.ಪ. ಮಾನವ ನಾನಾಗಿ ಪುಟ್ಟಿ ಕಾಲ ಕಳೆದು ದೀನನಾಗೀಗ ಇನ್ನು ನೀನೆ ಗತಿಯೋ ಎನಲು ಶ್ರೀನಾಥ ನಿನ್ನ ನಾಮ ಎನ್ನ ನಾಲಗೆಯಲಿ ನುಡಿಸಿ 1 ಮಾಯಾಪತಿಯೆ ಕೇಳೋ ಆ ಯಮಭಟರು ಎಳೆದು ನೋಯಿಸುತ್ತಿರಲು ಎನ್ನ ಬಾಯಬಿಡುತಲಿ ತೋಯಜಾಂಬಕನೆ ಎನ್ನ ಕಾಯೋ ಎಂದೆನುತ ಒದರೆ ಆ ಯಮಬಾಧೆ ಬಿಡಿಸಿ ಸಾಯದಾ ಸೌಖ್ಯವನಿತ್ತು 2 ವೈಷ್ಣವ ಜನ್ಮವ ನೀನು ಇತ್ತುದು ಪಿರಿಯದಲ್ಲೊ ವೈಷ್ಣವ ಜ್ಞಾನವ ನೀಡೊ ಸುಭಕ್ತಿ ಸಹಿತ ಕೃಷ್ಣಮೂರುತಿಯೆ ನೀನು ಅಷ್ಟದಳÀ ಪದ್ಮದಲಿ ನಿಂತು ಉಷ್ಣ ಶೀತ ದ್ವಂದ್ವ ಸಹಿಷ್ಣುತೆ ವಿರಕ್ತಿಯೊಡನೆ 3 ತ್ರಿಗುಣದಿಂದ ಬದ್ಧವಾದ ವಿಗಡದೇಹ ತೊಲಗುವಂತೆ ಬಗೆಬಗೆಯ ನಿನ್ನ ಲೀಲೆ ಅಂತರದಿ ತಿಳಿಸಿ ಜಗದಾವರಣ ತೊಲಗುವಾಗ ಬಗೆಬಗೆಯ ಲಯದ ಚಿಂತೆ ತಗಲಿ ಮನಕೆ ನಿನ್ನ ಮಹಿಮೆ ಆನಂದವಾಗುವಂತೆ 4 ಗೋಪಾಲಕೃಷ್ಣವಿಠಲ ನೀ ಪರದೈವನೆನಿಸಿ ಆಪಾದಮೌಳಿ ನಿನ್ನ ರೂಪವ ತೋರಿ ಅಪವರ್ಗದಲಿ ಎನಗೆ ಶ್ರೀಪಾದಾಸ್ಥಾನವಿತ್ತು ಈ ಪರಿಯಿಂದ ಉಭಯ ವ್ಯಾಪಾರದಲ್ಲಿ ಹರಿಯೆ 5
--------------
ಅಂಬಾಬಾಯಿ
ಸಿರಿದೇವಿ ವರಬೇಗ ಕರುಣಿಸೊ ದಯದಿಂದ ಶರಣಾಗತ ಪರಿಪಾಲನೆಂಬಿ ಘನ ಬಿರುದಿಹದೊರೆ ನರಹರಿಕರುಣಾಕರ ಪ. ಕರಿರಾಜ ಮೊರೆಯಿಡುವ ಸ್ವರವ ಕೇಳುತಲಂದು ಸಿರಿಯೊಳಗುಸುರದೆ ಗರುಡನ ಪೆಗಲೇರಿ ಸರಸಿ ತಡಿಗೆ ಬಂದು ಕರಿಯನುದ್ಧರಿಸಿದಿ 1 ಘೋರ ಕಿಂಕರರಿದಿರು ಸಾರೆಜಾಮಿಳ ಭಯದಿ ನಾರಾಯಣನೆಂದು ಬೇಡಿದ ಮಾತ್ರದಿ ವಾರಿಜಭವಪಿತ ಪಾರಗಾಣಿಸಿದಿ 2 ತರಳ ಪ್ರಹ್ಲಾದನನು ಹಿರಣ್ಯಕನು ಬಾಧಿಸಲು ಹರಿ ನೀನೆ ಗತಿಯೆನುತಿರೆ ಕಂಭದಿ ಇರವ ತೋರಿ ಬಹು ಪರಿಯಲಿ ಸಲಹಿದಿ 3 ದುರುಳ ಸೀರೆಯ ಸೆಳೆಯೆ ಹರಿಕೃಷ್ಣ ಸಲಹೆನೆ ಸೀರೆಯ ಮಳೆ ಗರದಂದದಲಿತ್ತು ಪರಿಪಾಲಿಸಿದೆ 4 ಎನ್ನ ದುಷ್ಕøತದಿಂದ ನಿನ್ನ ನಾಮದ ಮಹಿಮೆ ಭಿನ್ನವಾಗುವದೆ ನಿನ್ನ ಪದಾಂಬುಜ ವನ್ನು ನಂಬಿದ ಮೇಲಿನ್ನುದಾಸೀನವೆ 5 ಪಾಕಶಾಸನನಘವ ನೀಕರಿಸಿ ಸಲಹಿದನೆ ಭೀಕರವಾಗದೆ ಸಾಕು ಸಾನುಭವ ಕೃಪಣ ದಯಾಕರ ಮೂರುತಿ 6 ಒಳಗೆ ನೀ ತಳಿಸುತಲಿ ಗಳಿಸಿ ಪಾಪಗಳೆನಗೆ ತಳಮಳಗೊಳಿಸುತ ಬಳಲಿಪದುಚಿತವೆ ಉಳುಹಿನ್ನಾದರು ನಳಿನನಾಭ ಹರಿ 7 ಬಡವ ಮಾನವನೊಬ್ಬ ಪಡೆಯ ತನ್ನವರನ್ನು ಕೆಡಲು ಬಿಡನು ಜಗದೊಡೆಯ ನೀ ಎನಗಿರೆ ತಡವ ಮಾಡಿ ಕಂಡ ಕಡೆಯಲಿ ಬಿಡುವುದೆ 8 ನಿನ್ನ ಕಥಾಮೃತಸಾರವನ್ನೆ ಶಿರದಿ ಧರಿಸಿ ಇನ್ನು ಬಳಲಿದರೆ ನಿನ್ನ ಘನತೆಗಿದು ಚೆನ್ನಾಗುವುದೆ ಪ್ರಸನ್ನ ಮುಖಾಂಬುಜ 9 ಮಾನಾಮಾನವ ತೊರೆದು ನಾನಾ ದೇಶದಿ ತಿರಿದು ಶ್ರೀನಿವಾಸ ನಿನ್ನಾನನ ದರುಶನ- ವನು ಮಾಡಿದ ಮೇಲೇನಿದು ತಾತ್ಸಾರ 10 ಆಶಾಪಾಶವ ಬಿಡಿಸಿ ಮನದಾಸೆಗಳ ಪೂರೈಸಿ ದಾಸದಾಸನೆಂಬೀ ಸೌಖ್ಯವನಿತ್ತು ಪೋಷಿಸು ಶೇಷಗಿರೀಶನೆ ತವಕದಿ 11
--------------
ತುಪಾಕಿ ವೆಂಕಟರಮಣಾಚಾರ್ಯ