ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಕಳ ಕಾಯುವ ಗೊಲ್ಲನ ಪರಿಯಲಿ ತಾ ಕೋಲನು ಪಿಡಿಯನು ಹರಿಯು ಪ ಸಾಕಲು ಬಯಸುವ ಜನರಿಗೆ ದೇವನು ತಾ ಕರುಣಿಸುವನು ಸನ್ಮತಿಯ ಅ.ಪ ಸಂಸಾರದ ಸಾಗರವನು ದಾಟಲು ಹಿಂಸೆಗಳೆಲ್ಲವ ಸಹಿಸುವರ ಸಂಶಯ ಭ್ರಾಂತಿಯ ತೊಲಗಿಸಿ ಪೊರೆಯಲು ಕಂಸಾರಿಯು ತಾ ಕೊಡುವ ವಿವೇಕವÀ 1 ನೀರಿನ ಮೇಲಿನ ಗುಳ್ಳೆಗಳಂದದಿ ಭವ ಭೋಗಗಳು ಯಾರಲಿ ಕರಣವ ತೋರ ಬಯಸುವನೊ ದೂರ ಮಾಡುವನು ಧನಕನಕಗಳ 2 ಶಾಂತಿಯೇ ಸೌಖ್ಯಕೆ ಕಾಣವೆಂಬುವ ಅಂತರಂಗವನು ಗಮನಿಸಿರಿ ಶಾಂತಿಗೆ ಸಾಧನ ಜ್ಞಾನವ ಪಡೆಯಲು ಸಂತತ ಸನ್ಮತಿ ಕೊಡಲಿ ಪ್ರಸನ್ನನು 3
--------------
ವಿದ್ಯಾಪ್ರಸನ್ನತೀರ್ಥರು
ಕಾಯ ಕರವ ಪಿಡಿಯೊ ಗೋಪಾಲ ಪ ಜಾಳು ಜೀವನದ ಗೋಳಿಗೆ ಸಿಲುಕಿದೆ ಕೇಳುವರುಂಟೆ ದಯಾಳು ನೀನಲ್ಲದೆ ಅ.ಪ ತನುಬಲ ಧನಬಲ ಜನಬಲವೆಲ್ಲವು ಅನುಸರಿಸುವುವೇ ಕೊನೆತನಕ ಧನವು ತಪ್ಪಿದರೆ ಜನರು ತ್ಯಜಿಸುವರು ಜನಕ ನೀನಲ್ಲದೆ ಪೊರೆವರ ಕಾಣೆನೊ 1 ಸಟೆಯನಾಡುವುದು ದಿಟವ ತೊರೆಯುವುದು ಕಟುತರ ವಚನಕೆ ನಗುತಿಹುದು ಕಪಟ ಜೀವನವು ತುಟಿಯ ಮೀರಿದ ದಂತಗಳಂತಿರುವುದು 2 ನಿಮಿಷದ ಸೌಖ್ಯಕೆ ವರುಷದ ಕ್ಲೇಶವು ಪುರುಷ ಜೀವನವಿದು ಧರೆಯೊಳಗೆ ಪುರುಷೋತ್ತಮನೆ ಪ್ರಸನ್ನ ಹೃದಯನಾಗಿ ಕಲುಷರಹಿತವಾದ ಹರುಷವÀ ನೀಡೆಲೋ 3
--------------
ವಿದ್ಯಾಪ್ರಸನ್ನತೀರ್ಥರು
ದಯ ಮಾಡೊ ಪ್ರೀಯಾ ದಾಸರ ಶುಭೋ-ದಯ ವಿಜಯರಾಯ ಸಾ |ಹಯವಾಗಿ ಒದಗುವೋಭಯ ನಿವಾರಣ ಮಾಡಿ ಪ ಪ್ರಬಲವಾಗಿಹ ಮೋಹ ನಿಬಿಡವಾದದರಿಂದಅಭಯದಾಯಕ ನಿನ್ನ ಶುಭವಾದ ಪಾದಕ್ಕೆಅಭಿವಂದಿಸದಲೆ ಅಲ್ಪರ ಸೇರಿಅಬಲನಾಗುತಲೆ ಪಾಪದ ವನಧಿUಭೀರ ನೋಡದಲೆ ಬಾಳಿದೆ ಯನ್ನಅಭಿಮಾನದೊಡೆಯನೆ ಅಗಡು ಮಾಡದಲೆ 1 ದುರಿತ ಪರಿ ವರಗಳ ಗರೆವ ಕಾರಣ ನಿನ್ನಬಿರಿದು ನಾ ಬಲ್ಲೆ ಎನ್ನಯ ಭಾರಸರಿ ನಿನ್ನದಲ್ಲೆ ಲೌಕೀಕದಪರಿ ಮತ್ತೊಂದೊಲ್ಲೆ ಇಹಪರದಲ್ಲೆ ಪರಮ ಸೌಖ್ಯಕೆ ನಿನ್ನ ಸ್ಮರಣೆ ವಂದಲ್ಲೆ 2 ಪಾಮರ ಜನರಿಗೆ ಸುಮಾರ್ಗಗೋಸುಗಶ್ರೀಮನೋಹರ ನಿನ್ನ ಪ್ರೇಮದಿಂದಲಿ ಸೃಜಿಸಿಭೂಮಿಯೊಳಿಡಲೂ ಹರಿಯ ದಿವ್ಯನಾಮ ನಾ ಬಿಡಲು ದುರ್ವಿಷಯವಕಾಮಿಸಿ ಕೆಡಲೂ | ಸುಮ್ಮನಿರದೆಯಾಮ ಯಾಮಕೆ ನಿನಗೆ ನಾ ಮೊರೆಯಿಡಲೂ 3 ಜಗದಂತರ್ಯಾಮಿಯ ಹಗಲು ಇರುಳು ಬಿಡದೆಸುಗುಣ ಮಾರ್ಗದಲಿದ್ದು ಬಿಗಿಯಾದ ಕವನಕ್ಕೆಬಗೆ ತೋರಿದವನೆ ಹರಿಯ ಕ್ಷಣ ಅಗಲದಿದ್ದವನೆ ಕಾಮದ ಬಲಿಗೆಸಿಗದೆ ನಡೆವವನೆ ಅನುನಯದಿ ಕರವಮುಗಿದು ಬೇಡುವರಲ್ಲಿ ಮುದದಿಂದ ನಲಿವನೆ 4 ಎನ್ನೊಬ್ಬಗಲ್ಲ ಈ ಬಿನ್ನಪ ಕರುಣಾಳೆನಿನ್ನ ಪೊಂದಿದವರ ಮನ್ನಿಸಿ ಸಲಹಯ್ಯಾಬೆನ್ನು ಬಿಡದಲೆ ವ್ಯಾಸ ವಿಠ-ಲನ್ನ ಪಾಡುತಲೆ ಕಾಲವ ಕಳೆವ ಸನ್ಮಾರ್ಗವನೆ ತೋರೋ ತಡಮಾಡದಲೆ 5
--------------
ವ್ಯಾಸವಿಠ್ಠಲರು
ಮೈಹೋಳು ನೀ ಬಂದು ಮೈಯ ಮರಿಯ ಬ್ಯಾಡವೋ ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ಧ್ರುವ ಮಾಯಾ ಮೋಹದೊಳು ಸಿಲ್ಕಿ ದೇಹ್ಯ ಭ್ರಮೆಯಗೊಂಡು ಕಾಯ ಸೌಖ್ಯಕೆ ಬಾಯಿದೆರಿಯಬ್ಯಾಡವೋ 1 ಹೊನ್ನು ಹೆಣ್ಣು ಮಣ್ಣಿಗಾಗಿ ಬಣ್ಣ ಪರಿಯಲಿನ್ನು ಕಣ್ಣು ಗೆಟ್ಟು ಕರುಡನಂತೆ ದಣಿಯಬ್ಯಾಡವೋ 2 ನಾನು ನೀನು ಎಂಬ ಭಾವ ಮಹಿಪತಿಗಳೆದು ಭಾನುಕೋಟಿತೇಜನಂಘ್ರಿ ಬೆರೆದು ಮನಕೂಡವೂ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೋಜಿಗದಲಿ ಜೀವಿಸುವರು ಸುಜನರು ಪ ಈ ಜಗದಲಿ ದುಷ್ಟ ಗೋಜಿಗೆ ಸಿಲುಕದೆ ಅ.ಪ ಪರರ ವಿಭವಗಳಿಗೆ ಕರಗಲರಿಯರಿವರು ಕೊರೆಯುವ ಬಡತನಕುರಿಯಲರಿಯರು ಹರಿ ಕರುಣದಿ ತಮಗೆ ಸಿರಿಯು ಬಂದೊದಗಲು ಪರಿಪರಿ ವಿಧದಲಿ ಮೆರೆಯದೆ ದೈನ್ಯದಿ 1 ಕೆಡುಕುತನಗಳನು ಅರಿಯರು ಈ ಜನ ಬಡವರ ಸೌಖ್ಯಕೆ ದುಡಿವರು ಮುದದಲಿ ಕಡುದುರುಳರು ನಿಂದೆ ನುಡಿಗಳಾಡುವರೆಂದು ದುಡುಕದೆ ಅವರಲಿ ಕ್ಷಮೆಯ ತೋರುತ ಸದಾ 2 ಪರರಿಗುಪಕೃತಿಯಲರಿಯರು ಮಿತಿಯನು ಪರರಿಗುಪಕೃತಿಗೆ ಜರಿಯರು ಮತಿಯನು ಶರಣ ಪ್ರಸನ್ನನ ಕರುಣವ ಪೊಂದಲು ವರನೀತಿಗಳಲಿ ನಿರತರಾಗುತ ಸದಾ 3
--------------
ವಿದ್ಯಾಪ್ರಸನ್ನತೀರ್ಥರು