ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನ ಘನ ತನ್ನೊಳಗೆ ತುಂಬಿಹದು ನಿನ್ನೊಳಗೆ ದ್ರುವ ಓದಿ ಕೇಳಿ ಮರುಳಾದ್ಯೊ ಮನವೆ ಸಾಧಿಸಲಿಲ್ಲ ಸ್ವರೂಪ ವೇದವೋದಿ ವಿವದಕೆ ನೀನು ಸಾಧಿಸಿದೊ ಬಲುಕೋಪ ಭೇದವಿಡಿದು ಬಾಧೆಗೆ ಗುರಿಯಾಗಿ ಆದಿ ನಿನಗೆ ನೀ ಪಾಪ ಘನಗುರು ಕುಲದೀಪ 1 ದೇಹದ ಒಳಗಿನ ದೇವರ ತಿಳಿಯದೆ ಬಾಹ್ಯ ರಂಜನಗೆದೆರದ್ಯೊ ಸೋಹ್ಯವರಿಯದೆ ಶ್ರೀಹರಿ ಭಕ್ತಿಯ ಅಹಂಭಾವದಿ ಮೆರೆದ್ಯೊ ದೇಹಾಭಿಮಾನದಲಿ ಸೋಹಂಭಾವದ ವಾರ್ತೆಯ ಜರಿದ್ಯೊ ಸವಿ ಸುಖವನು ಮರೆದ್ಯೊ 2 ಕನಸುದೋರುವ ಜನ ಪ್ರಪಂಚವ ನೆನೆಸಿ ಬಯಸುವದ್ಯಾಕೆ ಖೂನ ತಿಳಿಯದೆ ಸತ್ತು ಹುಟ್ಟಿ ಜನಿಸಿ ಬಾಹುದು ಯಾಕೆÉ ಹೀನಯೋನಿಯ ಮುಖದಲಿ ಬೀಳುವ ದಣುವಿಕಿ ನಿನಗಿದು ಬೇಕೆ ಅನುದಿನ ನಿನಗಿದು ತಾ ಸಾಕೆ 3 ಹಾದಿತಪ್ಪಿ ನಡೆವದು ವೇದಾಂತದ ಇದು ನಿನಗುಚಿತೆ ಸಾಧು ಸಜ್ಜನರನುಸರಿಸದೆ ತಾ ಇಹುದೊಂದು ಸ್ವಹಿತೆ ಗಾದಿಯ ಮಾತೆ ಬಂದುದು ಪುರುಷಾರ್ಥೆ 4 ಶರಣ್ಹೊಕ್ಕರ ಕರುಣಿಸಿ ನೋಡುವ ಎರಡಿಲ್ಲದೆ ಗುರುನಾಥ ಕರವಿಡಿದು ಪಾರನೆ ದಾಟಿಸುವಾ ಸುರಮುನಿಜನ ಸೇವಿತ ತರಣೋಪಾಯದ ಸಾಧನದೋರುವ ತರಳ ಮಹಿಪತಿ ದಾತ ಮನವೆ ನಿನಗಿದು ಸುಪಥ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾರ ತಿಳಿಯದೆ ಭೇದಾಭೇದ ವಿದ್ಯಾತಕೆ ಸೂಸುವದ್ಯಾತಕೆ ಹರಿಭಕುತಿಗೆ ಧ್ರುವ ಬಲಮುಣುಗುವದಿದ್ಯಾಕೆ ಬಲುವ ಭಾವದ ಕೀಲ ತಿಳಿಯದೆ ಮಾಲಿಜಪಕೈಯಲ್ಯಾತಕೆ ತಲೆ ಮುಸಕ್ಯಾತಕೆ ಹಲವು ಜನ್ಮ ಹೊಲಿಯು ತೊಳಿಯದೆ ಶೀಲಸ್ವಯಂಪಾಕ್ಯಾತಕೆ 1 ಹರಿಯ ಚರಣಾಂಬುಜನವರಿಯದೆ ಬರಿಯ ಮಾತಿನ್ಯಾತಕೆ ಗುರುವಿನಂಘ್ರಿಯ ಗುರುತವಿಲ್ಲದೆ ಶರಣಸಾವಿರವ್ಯಾತಕೆ ತುರಿಯಾವಸ್ಥೆಯೊಳರಿತು ಕೂಡದೆ ತೋರಿಕೆಯ ಡಂಭವ್ಯಾತಕೆ ತರಣೋಪಾಯದ ಸ್ಮರಣಿ ಇಲ್ಲದೆ ತರ್ಕಭೇದಗಳ್ಯಾತಕೆ 2 ಅಂತರಾತ್ಮದ ತಂತುವಿಡಿಯದೆ ಗ್ರಂಥಪಠಣಗಳ್ಯಾತಕೆ ಕಂತುಪಿತನಾರ್ಚನೆಯನರಿಯದೆ ತಂತ್ರ ಮಂತ್ರಗಳ್ಯಾತಕೆ ಪಂಥವರಿಯದೆ ಪರಮಯೋಗದಾನಂತ ವ್ರತವಿದುವ್ಯಾತಕೆ 3 ಸೋಹ್ಯವರಿಯದೆ ಶ್ರೀಹರಿಯ ನಿಜಬಾಹ್ಯರಂಜನೆವ್ಯಾತಕೆ ಗುಹ್ಯಮಹಾಮಹಿಮೆಯು ತಿಳಿಯದೆ ದೇಹ ಅಭಿಮಾನ್ಯಾತಕೆ ಸಾಹ್ಯವಿಲ್ಲದೆ ಶ್ರೀಹರಿಯ ದೇಹದಂಡದ್ಯಾತಕೆ ಮಹಾವಾಕ್ಯದಿತ್ಯರ್ಥವರಿಯದೆ ಸಾಯಸಬರುವದ್ಯಾತಕೆ 4 ಭಾಗ್ಯಭಕುತಿ ವೈರಾಗ್ಯವಿದು ನಿಜಯೋಗಾನಂದದ ಭೂಷಣ ಶ್ಲಾಘ್ಯವಿದು ತಾ ಇಹಪರದೊಳು ಸುಗಮ ಸುಪಥಸಾಧನ ಸಾರ ಯೋಗಿ ಮಾನಸಜೀವನ ಬಗೆಬಗೆಯಲನುಭವಿಸಿ ಮಹಿಪತಿಯೋಗ್ಯನಾಗೋ ಸನಾತನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು