ಒಟ್ಟು 10 ಕಡೆಗಳಲ್ಲಿ , 2 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಸುದ್ದಿ ಹೇಳಮ್ಮಇಂದಿರೇಶಗೆ ಹೋಗಿಶ್ರೀಶನ ತಂಗಿಯರು ಮುಯ್ಯಾಸೋಸಿಲೆ ತಂದರೆಂದು ಪ. ಸತ್ಯ ಲೋಕದ ದೊರೆಯುತಾನು ಮತ್ತೆ ಪಾಂಡವರ ಕೂಡಿಅರ್ಥಿಲೆ ಬಂದು ಇಳಿದಾರೆಂದುಸತ್ಯಭಾಮೆಯ ರಮಣಗೆ 1 ಸ್ವರ್ಗದರಸು ಭೀಮರಾಯನ ಅಗ್ರಜಅನುಜರ ಕೂಡಿ ಶೀಘ್ರದಿಬಂದಿಳಿದಾರೆಂದುರುಕ್ಮಿಣಿ ರಮಣಗೆ2 ವೈವಸ್ವತನು ರಾಮೇಶನ ವೈಭವವ ನೋಡುವೆನೆಂದುತಾವಿಭವ ಸಹಿತ ಬಂದು ದೇವಾಧಿ ದೇವನ ಮುಂದೆ3
--------------
ಗಲಗಲಿಅವ್ವನವರು
ಎಂಥ ಧರ್ಮರಾಯ ಸಂತೋಷ ಬಡಿಸುವ ಅನಂತ ಪ್ರಜರಿಗೆಲ್ಲ ಚಿಂತಾಮಣಿಯು ತಾಎಂಥ ಧರ್ಮರಾಯ ಇಂದಿವರಾಕ್ಷಿ ಪ. ಒಡಹುಟ್ಟಿದವರೆಲ್ಲ ಬಿಡದೆ ಸೇವಿಸುವರು ಕಡುಭಕ್ತಿಯಿಂದಲೆ ನಡೆನುಡಿ ಬಿಡದೆ 1 ಹರದೆಯರು ರಾಯಗೆ ಪರಿಪರಿ ಸೇವಿಸಿ ಎರಗೋರು ಕಾಲಕಾಲಕೆ ಪರಮ ಭಕ್ತಿಯಲಿ2 ಭೃತ್ಯರು ರಾಯಗೆ ಅತ್ಯಂತ ಸೇವಿಸಿ ಚಿತ್ತವ ಹಿಡಿಯಲು ಉತ್ತಮನೆಂದು 3 ದಾಸರು ರಾಯಗೆ ಸೋಸಿಲೆ ಸೇವಿಸಿಏಸೇಸು ಕಾಲಕ್ಕೆ ಈ ಸ್ವಾಮಿ ಬಯಸೋರು4 ವಿಪ್ರರು ರಾಯಗೆ ಒಪ್ಪೋದು ದೊರೆತನ ತಪ್ಪದೆ ಇರಲೆಂದು ಗೌಪ್ಯದಿ ಜಪಿಸೋರು 5 ಮಿಕ್ಕ ಜನರಿಗೆ ಸಕ್ಕರೆ ಹೇರಮ್ಮಲಕ್ಷ್ಮಿ ರಮಣಗೆ ಸಖ್ಯನು ರಾಯ 6 ಎಲ್ಲ ಜನಕೆ ರಾಯಬೆಲ್ಲದ ಹೇರಮ್ಮಚಲ್ವ ರಾಮೇಶನ ನಲಿವಿನ ಮುಂದೆ 7
--------------
ಗಲಗಲಿಅವ್ವನವರು
ಕೋಲ ಕೋಲನ್ನ ಕೋಲ ಕೋಲ ಕೋಲನ್ನ ಕೋಲಕೋಲ ಹೊಯ್ದುಪಾಡಿ ನಮ್ಮ ಜಾಣರಂಗಗೆ ಪ. ಲೋಕನಾಯಕ ವ್ಯಾಸ ಮುನಿಗಳಿಗೆ ಏಕೋ ಭಾವದಿಂದ ನಮಿಸಿಹಾಕಿರೆಮ್ಮ ಕೋಲ ಹೊಯ್ದುವಾಕ್ಯಗೆಲಿಸೆಂದು1 ಮಿತ್ರೆ ರುಕ್ಮಿಣಿದೇವಿ ಕರೆದುಮಿತ್ರಾದಿಗಳಿಗೆ ಹೇಳಿದಳುಮುತ್ತಿನ ಕೋಲ ತೊಳಿಯಿರವ್ವಉತ್ತಮ ಜಲದೊಳು 2 ರಾಸ ಕ್ರೀಡೆಯಲ್ಲಿ ವನಿತೆಯರುವಾಸುದೇವ ಪಿಡಿದ ಕೋಲ ಸೋಸಿಲೆ ಪೂಜಿಸಿರಮ್ಮಲೇಸು ಕೊಡಲೆಂದು 3 ಮಂದಗಮನೆಯರೆಲ್ಲ ಕೋಲಿಗೆ ಗಂಧ ಅಕ್ಷತೆ ಏರಿಸಿರೆ ಮುಂದಾಗಿ ಬಲಗೊಳ್ಳಿರೆಲ್ಲವೃಂದಾರಕರನ್ನ4 ನಲ್ಲೆಯರು ಮುತ್ತಿನ ಕೋಲಿಗೆ ಮಲ್ಲಿಗೆ ಸಂಪಿಗೆ ಏರಿಸಿರೆಎಲ್ಲಾ ಫಲಗಳಿಟ್ಟು ಕೈಯ್ಯನಲ್ಲೆಯರು ಮುಗಿದಿರೆ 5 ಜಾಣೆಯರು ನೀವೆಲ್ಲ ಮೊದಲೆವಾಣಿಯ ಬಲಗೊಳ್ಳಿರೆ ಕಲ್ಯಾಣವಾಗಲೆಂದು ಕೈಯ್ಯಮಾಣಗೆ ಮುಗಿದಿರೆ 6 ಮೃಡನ ಮಗನ ಮೊದಲೆ ನೆನೆದುಪಿಡಿಯಿರಮ್ಮ ಕೋಲ ನಿಮ್ಮನುಡಿಯಗೆಲಿಸಲೆಂದು ದ್ರವ್ಯವಕೊಡಿರೆ ದಾನವ 7 ಇಂದು ಗೆಲಿಸೆಂದು 8
--------------
ಗಲಗಲಿಅವ್ವನವರು
ಚಿತ್ತಜನೈಯನ ಕೂಡ ಅರ್ಥಿಲೆ ಹೋಗುವಾಗ ಹಸ್ತಿನಾವತಿಯ ಕಂಡರು ಜತ್ತಾಗಿ ಜನರು ಪ. ನದ ನದಿಗಳ ದಾಟಿ ಮುದದಿಂದ ಮುಯ್ಯಕ್ಕೆ ಬರಲು ಅದ್ಭುತವಾಗಿ ಬೆಳಗೋದೆಅದ್ಭುತವಾಗಿ ಬೆಳಗೋದೆ ನಗರಿಯುಇದೇ ವೈಕುಂಠ ಹೌದೇನ1 ತರಣಿ ತರಣಿ ಸರೋವರ ಇವ ನೋಡಗಗನಕ್ಕೆ ಸರಳಾಗಿ ಬೆಳೆದ ಮರನೋಡ2 ಆಲ ಅಶ್ವತ್ಥ ಶಾಲ ಶಾಬರವೃಕ್ಷ ಸಾಲು ಮಂಟಪ ನೋಡ ಸಾಲು ಮಂಟಪ ಇವ ನೋಡ ದೇವಾಲಯವು ವಿಶಾಲವಾಗಿದ್ದ ಬಗಿ ನೋಡ3 ಪ್ಯಾಟಿ ಬಾಜಾರ ಸಾಲು ಥಾಟಾಗಿ ತೋರುವುದೆ ಕೋಟಿ ಸೂರ್ಯರ ಬೆಳಕಿಲೆಕೋಟಿ ಸೂರ್ಯರ ಬೆಳಕಿಲೆ ಒಪ್ಪೊ ನಗರಿಯ ಮಾಟ ವರ್ಣಿಸಲು ವಶವಲ್ಲ4 ಹತ್ತಿ ಗೋಪುರ ಕೋಟಿ ಹಚ್ಚಿದೆ ಧ್ವಜ ಕೋಟಿಮತ್ತ ಪತಾಕೆಗೆ ಮಿತಿ ಇಲ್ಲಮತ್ತ ಪತಾಕೆಗೆ ಮಿತಿಯಿಲ್ಲ ಹರಿಣಾಕ್ಷಿಸತ್ಯ ಲೋಕವು ಹೌದೇನ5 ಅಟ್ಟಾಲದ ಮ್ಯಾಲೆ ಧಿಟ್ಟಾದ ಗೊಂಬೆಗಳು ಕೃಷ್ಣಗೆ ಕೈಯ್ಯ ಮುಗಿವಂತೆ ಕೃಷ್ಣಗೆ ಕೈಯ್ಯ ಮುಗಿವಂತೆ ನಿಲ್ಲಿಸಿದ್ದುಎಷ್ಟು ವರ್ಣಿಸಲು ವಶವಲ್ಲ6 ಜತ್ತಾದ ಮನೆಗಳಿಗೆ ರತ್ನದ ಶೋಭೆ ನೋಡಹತ್ತು ದಿಕ್ಕುಗಳ ಬೆಳಗೋವೆÉಹತ್ತು ದಿಕ್ಕುಗಳ ಬೆಳಗೋವೆÉ ಸ್ವರ್ಗವಎತ್ತಿಟ್ಟರೇನ ಐವರು7 ಚಂದದ ಮನೆಗಳಿಗೆ ಮುತ್ತಿನ ಹಂದರ ತೋರಣUಳೆಷ್ಟುಶ್ರೀ ಗಂಧದ ಥಳಿಯ ಸೊಬಗೆಷ್ಟುಶ್ರೀ ಗಂಧದ ಥಳಿಯ ಸೊಬಗೆಷ್ಟ ರಂಗವಾಲಿಅಂದವಾಗಿದ್ದ ಜಗುಲಿ ಎಷ್ಟ 8 ತಾರಕ್ಕಿ ಹೊಳವಂತೆ ತೋರೋದೀವಿಗೆ ಎಷ್ಟನೀರೆ ನಿಲಿಸಿದ್ದ ಕನ್ನಡಿ ಎಷ್ಟನೀರೆ ನಿಲಿಸಿದ್ದ ಕನ್ನಡಿ ಎಷ್ಟ ಉಪ್ಪರಿಗಿಏರಿ ನೋಡುವ ಜನರೆಷ್ಟ 9 ಶ್ರೀಶನ ಮುಖವನೆ ಸೋಸಿಲೆ ನೋಡುತ ಈಜಾಡಿ ಸುಖದ ನದಿಯೊಳು ಈಜಾಡಿ ಸುಖದ ನದಿಯೊಳುಬಹುಜನ್ಮಕ ಲೇಸಾದ ಪುಣ್ಯ ಫಲಿಸಿತು10 ಮೇಲಾದ ಮನೆಗಳ ಮ್ಯಾಲೆ ಸಾಲು ಗೊಂಬಿಗಳ ನೋಡ ಶ್ರೀಲೋಲ ರಾಮೇಶಗೆ ಕೈ ಮುಗಿವಂತೆಶ್ರೀಲೋಲ ರಾಮೇಶಗೆ ಕೈ ಮುಗಿದುಹರಿಣಾಕ್ಷಿ ಕಾಲಿಗೆ ಎರಗುವ ಪರಿಯಂತೆ 11
--------------
ಗಲಗಲಿಅವ್ವನವರು
ಬೊಮ್ಮ ಕೃಷ್ಣನ ಹಾಡುತ ಪಾಡುತಜನರೆಲ್ಲ ಉತ್ಕøಷ್ಟರಾಗಿಹರಮ್ಮ ಪ. ಪ್ಯಾಟಿಯ ಎದುರಾಗಿ ಕೋಟೆಬಾಗಿಲ ಕೋಟ ಸೂರ್ಯರ ಬೆಳಕಿಲೆ ಕೋಟ ಸೂರ್ಯನ ಬೆಳಕಿಲೆ ಹೊಳೆವಂಥಹಾಟಕಾಂಬರÀನ ಅರಮನೆ 1 ಪನ್ನಗ ಶಯನನ ಅರಮನೆ2 ಭಾಗವತ ಪ್ರಿಯಸಾಗರ ಶಯನನ ಅರಮನೆ ಸಾಗರ ಶಯನನ ಅರಮನೆಯ ಬಾಗಿಲೊಳು ಹೋಗಿ ಬರುವವರು ಕಡೆಯಿಲ್ಲ3 ನಾಗಶಯನನ ಮನೆ ಬಾಗಿಲು ಮುಂದೆಸೋಂಗ್ಹಾಕಿ ನಿಂತ ಕೆಲವರುಸೋಂಗ್ಹಾಕಿ ನಿಂತ ಕೆಲವರು ಸಭೆಯೊಳು ಹೋಗಬೇಕೆಂಬೊ ಭರದಿಂದ 4 ದಾಸರು ಬಗೆಬಗೆ ಸೋಸಿಲೆ ತಳವೂರಿಶ್ರೀಶ ರಾಮೇಶನ ಅರಮನೆ ಮುಂದೆಶ್ರೀಶ ರಾಮೇಶನ ಅರಮನೆ ಮುಂದಿನ್ನು ಕೂಸೆತ್ತಿಕೊಂಡು ನಿಂತ ಕೆಲವರು5
--------------
ಗಲಗಲಿಅವ್ವನವರು
ಭಾಸ್ಕರ ಗುರುವಿನ ಭಾಸನುದಿನವಿರೆ ಆಶಿನ್ನೊಬ್ಬರದ್ಯಾಕೆ ಲೇಸಾಗಿಹ್ಯ ಘನದಯದಾಸೈನಗಿರೆ ನಾಸ್ತ್ಯೆನಗೆಂಬುವದ್ಯಾಕೆ ಧ್ರುವ ಸೂಸುತ ನಿಜ ನಿಧಾನದ ರಾಶಿರೆ ಕಾಸಿನ ಕಳವಳಿಕ್ಯಾಕೆ ವಾಸವಾಗ್ಹೆಜ್ಜೆಜ್ಜಿಗೆ ಗುರುವಿನ ಆಶ್ರಿನ್ನೊಬ್ಬರದ್ಯಾಕೆ ಗ್ರಾಸಕೆದುರಿಡುತಿರೆ ಎನ್ನೊಡೆಯ ಸೋಸಿಲೆ ಬಯಸುವದ್ಯಾಕೆ 1 ಗುರುದೈವೇ ಗುರುತಾಗಿರಲು ತಾ ಪರದೈವಗಳಿನ್ಯಾಕೆ ಶಿಖಾಮಣಿ ಇರಲು ಶರಣು ಇನ್ನೊಬ್ಬರಿಗ್ಯಾಕೆ ಕರುಣಾಮೃತ ಸುರರಸ ಮಳೆಗರೆವುತಲಿರೆ ಪರರಂಡಲೆವದ್ಯಾಕೆ ಇರುಳ್ಹಗಲೆ ಗುರುದಯ ಕವಚೆನಗಿರೆ ದುರಿತಭವ ಭಯವ್ಯಾಕೆ 2 ಇಹ್ಯಪರಕೆ ಗುರು ನಾಮವೆನಗಿರಲು ಸಾಹ್ಯಮನುಜರದ್ಯಾಕೆ ಸಹಕಾರವೆ ಸದ್ಗುರು ಮೂರ್ತಿರಲು ಸಾಯಾಸವೆನಗ್ಯಾಕೆ ಮಹಿಪತಿಸ್ವಾಮಿ ಶ್ರೀಪತಿ ಸಮರ್ಥಿರೆ ದುರ್ಮತಿಗಳ ಹಂಗ್ಯಾಕೆ ಸಹಿತ ಗುರು ತಾಯಿತಂದೆನಗಿರೆ ಬಾಹ್ಯವಿಹಿತದವನ್ಯಾಕೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭೂಮಂಡಲಕೆ ಮಿಗಿಲೆನಿಸಿದ ತಾಯಿಕಂಡು ಬಂದೆನೆ ಪಾಂಡವರ ಭಾಗ್ಯವ ಪ. ಸಂಭ್ರಮದಿರಾಯನು ತುಂಬಿಸಿದ ಮನೆಯೊಳಗೆ ಉಂಬೊ ಪದಾರ್ಥ ಕೋಟಿ ಫಲಕದಳಿ ತಿಂಬೊ ಪದಾರ್ಥ ಕೋಟಿಷಡ್ರಸವೆಂಬೊ ಪದಾರ್ಥ ಕೋಟಿಈ ತೂಗಿಕೊಂಬ ಮಣಿಮಂಚ ಕೋಟಿ ತಾಯಿ1 ವಿತ್ತ ಕೋಟಿಯು ರಾಶಿ ರಾಯನಚಿತ್ತ ಸಂತೋಷ ರಾಶಿ 2 ಏಸುಮುನಿ ಬಳಗ ದಾಸರು ದಾಸಿಯರು ಬೀಸಿ ತೊಟ್ಟಿಲವ ತೂಗÀುವರುಮಕ್ಕಳನ ಸೋಸಿಲೆ ಕರೆದೊಯ್ಯುವರುಮಂಚದಲಿ ಹಾಸಿಗೆ ಹಾಸುವರು ರಾಯಗೆ ಈ ಬಗೆ ಸೇವಕರು ತಾಯೆ 3 ಎಲ್ಲ ಮನೆಯೊಳಗೆ ಮಲ್ಲಿಗೆ ಸಂಪಿಗೆ ಅಲ್ಲೆ ಕ್ಯಾದಿಗೆದವನವುಬುಕ್ಕಿಟ್ಟು ಅಲ್ಲಲ್ಲೆ ಶ್ರೀಗಂಧವುಎಲಿ ಅಡಕಿ ಅಲ್ಲಲ್ಲಿ ತಬಕಿಹೋದುರಾಯಗೆ ಈ ಬಗೆ ಸೇವಕರು ತಾಯೆ 4 ಆನೆಗಳು ಕಟ್ಯಾವ ಕುದರಿಯ ಸಾಲು ರಥಗಳು ಇಟ್ಟಾವ ಬಿಲ್ಲುಗಳು ಪಲ್ಲಕ್ಕಿ ಧಿಟ್ಟಾದ ವಯಿರಗಳು ರಮೆ ಅರಸಗಿಷ್ಟು ಉಪಚಾರಗಳು ತಾಯೆ 5
--------------
ಗಲಗಲಿಅವ್ವನವರು
ಮಾಧವ ಸರ್ವೇಶ ಗೋವಿಂದಗೆಲಿಸೆಂದು ಕೋಲಸರ್ವೇಶ ಗೋವಿಂದಗೆಲಿಸೆಂದು ವಿಷ್ಣುವಿನ ಸೋಸಿಲೆ ಮೊದಲೆ ಬಲಗೊಂಬೆ ಕೋಲ 1 ಮಧುಸೂದನ ತ್ರಿವಿಕ್ರಮ ವಿಧಿಪಿತ ವಾಮನ ಸುದತೆ ಶ್ರೀಧರ ಋಷಿಕೇಶ ಕೋಲಸುದತೆ ಶ್ರೀಧರ ಋಷಿಕೇಶನ ನೆನೆದರೆ ಹದಕಾನೆ ವರವ ಕೊಡುವೊನು ಕೋಲ 2 ಪದ್ಮನಾಭ ದಾಮೋದರ ಮುದ್ದು ಸಂಕರ್ಷಣವಸುದೇವ ನಮ್ಮ ಗೆಲಿಸೆಂದು ಕೋಲವಸುದೇವನಮ್ಮ ಗೆಲಿಸೆಂದು ಪ್ರದ್ಯುಮ್ನಅನಿರುದ್ಧರ ಮೊದಲೆ ಬಲಗೊಂಬೆ ಕೋಲ 3 ಅಧೋಕ್ಷಜ ಹರುಷಾಗೊ ನಾರಸಿಂಹ ಪುರುಷ ಸೂಕ್ತದಲೆ ಪ್ರತಿಪಾದ್ಯ ಕೋಲಪುರುಷಸೂಕ್ತದಲೆ ಅಚ್ಯುತಹರುಷದಿ ನಮ್ಮ ಗೆಲಿಸೆಂದು ಕೋಲ 4 ಪಾದ ನೆನದೆವ ಪಂಥಗೆಲಿಸೆಂದು 5
--------------
ಗಲಗಲಿಅವ್ವನವರು
ಶ್ರೀಶನ ಸತಿಯರ ಹಾಸ್ಯವ ಮಾಡುತ ಸೋಸಿಲೆ ಕೋಲಹೊಯ್ದೇವ ಕೋಲ ಪ. ಧಿಟ್ಟೆ ನಾನೆಂಬೋದು ಸೃಷ್ಟಿಕರ್ತನೆ ಬಲ್ಲಗಟ್ಯಾಗಿ ನಿನ್ನ ಗುಣಗಳಗಟ್ಯಾಗಿ ನಿನ್ನ ಗುಣಗಳ ವರ್ಣಿಸಲು ಸಿಟ್ಟು ಬಂದಿತು ಸಭೆಯೊಳು1 ಗಂಡನ ಬಳಗವ ಕಂಡರೆ ನಿನಗಾಗದುಲೆಂಡರ ಮನೆಗೆ ನಡೆದ್ಹೋಗಿಲೆಂಡರ ಮನೆಗೆ ನಡೆದ್ಹೋಗಿ ಸೇರಿದ್ದುಪಂಡಿತರು ಕಂಡು ನಗುತಾರೆ 2 ಘಟ್ಯದೆಗಾರಳು ಪೆಟ್ಟಿಗಂಜುವಳಲ್ಲಎಷ್ಟು ಧೈರ್ಯವೆ ಎಲೆನಾರಿಎಷ್ಟು ಧೈರ್ಯವೆ ಎಲೆನಾರಿ ನಿನ್ನ ಕೂಡಕೃಷ್ಣ ಕಡಿ ಬೀಳೋ ತೆರನಂತೆ 3 ಮುದದಿಂದಲೆ ದ್ವಾರಕಾಸದನದೊಳಗ್ಹೋಗಿಕದನವ ಹೂಡಿ ಕೆಡಿಸುವೆಕದನವ ಹೂಡಿ ಕೆಡಿಸುವೆ ನಿನ್ನಗುಣಕೆಮದನನಯ್ಯನೆಂತು ಮನಸೋತ4 ಹಲವು ರಾಯರ ಗೆದ್ದ ಬಲುಧೀರರೆಲ್ಲನಿನ್ನ ಬಲೆಯೊಳು ಬಿದ್ದು ಬಳಲೋರುಬಲೆಯೊಳು ಬಿದ್ದು ಬಳಲೋರು ಇದ ಕಂಡುಬಲರಾಮ ತಾನು ನಗುತಾನ5 ಸುರರು ಜರಿದು ನಾರಿಹರಿಯು ಗುಣಪೂರ್ಣ ನೆನುತಲೆಹರಿಯು ಗುಣಪೂರ್ಣ ನೆನುತಲೆ ಮಲ್ಲಿಗೆಸರವ ಹಾಕಿದಿಯೆ ಕೊರಳಿಗೆ 6 ಕೇಳೆ ರುಕ್ಮಿಣಿ ನಿನ್ನ ಭಾಳ ಚಾಪಲ್ಯ ನೋಡಿಹೇಳ ಕೇಳದಲೆ ಹಿರಿಯರಹೇಳ ಕೇಳದಲೆ ಹಿರಿಯರ ಕೃಷ್ಣಯ್ಯಭೋಳೆ ತನದಿಂದ ಮದುವ್ಯಾದ 7 ಗಂಡನ ಎದುರಿಗೆ ಗಂಡುಗಚ್ಚಿಯ ಕಟ್ಟಿಗಂಡಸಿನಂತೆ ಧನುವೆತ್ತಿಗಂಡಸಿನಂತೆ ಧನುವೆತ್ತಿ ಕಾದಿದಬಂಡುಗಾರತಿಯೆನಿನ ತಂಗಿ8 ಅಕ್ಕ ತಂಗಿಯರ ಶೌರ್ಯ ಶಕ್ಯವೆ ವರ್ಣಿಸಲುನಕ್ಕು ನಾರಿ ಸರಿಯವರುನಕ್ಕು ನಾರಿ ಸರಿಯವರು ರಾಮೇಶಗೆತಕ್ಕವರೇನೆ ಮಡದಿಯರು ಕೋಲ9
--------------
ಗಲಗಲಿಅವ್ವನವರು
ಸಜ್ಜನ ಬಾಲೆಯರ ಲಜ್ಜಗೈಸಿದಿಹೆಜ್ಜೆನಿಕ್ಕಿ ಸಿದೆಯೊ ಕೃಷ್ಣಗೆಜ್ಜೆಕಟ್ಟಿಸಿದ್ಯೊಗೋವಳ ಹೆಜ್ಜೆನಿಕ್ಕಿಸಿದ್ಯೊ ಪ.ಅರಿಷಿಣ ಕುಂಕುಮ ಗಂಧಧರಿಸಿ ಸೀರೆ ಕುಪ್ಪುಸ ಕ್ಯಾದಿಗೆಸರಸದ ಭೂಷಣಗಳಿಟ್ಟುಅರಸೆಯರು ಬಂದಾರೊ ಕುಣಿಯಲು 1ನಾನಾ ಪುಷ್ಪ ಬಳ್ಳಿಯೊಳಗೆಮೀನಾಕ್ಷಿಯರ ಕೂಡಿ ರಮಿಸಿಮಾನವಕಳೆದುಕೊಂಡ್ಯೊಎನುತ ತಾನು ಪಾರ್ಥನಗುತ 2ಇಬ್ಬರಿಬ್ಬರ ನಡುವೆನೀನುಒಬ್ಬನೊಬ್ಬನಾಗಿ ನಿಂತುಕಬ್ಬು ಬಿಲ್ಲಿನಯ್ಯ ಕುಣಿಸಿದಿನಿರ್ಭಯದಿಂದಲೆ ಕೃಷ್ಣ 3ಮಿತ್ರೆಯರಹೆಗಲಲ್ಲೆ ಪರಸ್ಪರಹಸ್ತನಿಟ್ಟು ಹರುಷದಿಂದನರ್ತನ ಮಾಡಿಸಿದವಿಚಿತ್ರ ಪುರುಷನೆ ಕೃಷ್ಣ 4ಕಕ್ಕಸಕುಚದ ಬಾಲೆಯರಚಕ್ರದಂತೆ ನಿಲಿಸಿ ನೀನುಢಕ್ಕಡ ಢಕ್ಕಡ ತಾಥಾಎನುತಲೆ ಧಿಕ್ಕಿಡಿ ಧಿಮಿಕಿಡಿ ಕೃಷ್ಣ 5ಬಗರಿ ಕುಚದ ಬಾಲೆಯರ ಕೂಡನಗಧರÀ ನೀ ಕುಣಿಯಲುನಗಗೀಡಾದಿತಯ್ಯ ಜಗದಿಹಗರಣಪುರುಷನೆ ಕೃಷ್ಣ6ಪುಂಡರಿಕಾಕ್ಷನು ಕೂಡಿಕೊಂಡುಅವರಕುಣಿಸುವಾಗಗಂಡರು ಬಂದರು ತಮ್ಮಹೆಂಡಿರ ನೋಡಲು ಕೃಷ್ಣ 7ಭಾಳಗೋವಳರಿಂದ ಕೂಡಿತಾಳನ್ಹಾಕಿಸಿದಿಯಯ್ಯಾಹೀಂಗೆಭಾಳರೌಸವಕೇಳಿ ಜನರುಮೇಳವಾದರೊ ಗಡನೆ 8ಶ್ರೀಶ ರಾಸಕ್ರೀಡೆ ಮಾಡಿಸೋಸಿಲೆಸುರರೆಲ್ಲ ನೋಡಿಸೂಸಿದರು ಪುಷ್ಪ ಮಳೆಯಆಸಮಯದಲಿ ಕೃಷ್ಣ 9ಚಲುವ ರಾಮೇಶ ತಾನುಜಲಕ್ರೀಡೆಯನ್ನಾಡಿಲಲನೆಯರ ಸಹಿತಾಗಿ ತಾನುಬಲು ಬಲು ಹರುಷದಲೆ ಕೃಷ್ಣ 10
--------------
ಗಲಗಲಿಅವ್ವನವರು