ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ತಿಳಿವುತದೆ ನಿಮ್ಮಾಟದ ಸುಧ್ಯೇಯ ಧ್ರುವ ನಾಲ್ಕಾರು ಹದಿನೆಂಟು ಮಂದಿಯ ಕೇಳಿದೆ ಸಿಲುಕನೆಂದವರಾಡುದೆ ಮಲಕು ಎಂಬತ್ತು ನಾಲ್ಕು ಲಕ್ಷ ನೂ ಸೋಸಿದೆ ನಿಲುಕಿ ನಿನ್ನ ನೆಲೆ ನಿಜವು ದೋರದೆ 1 ನಾನಾ ಮತ ನಾನಾ ಮಾರ್ಗ ಶೋಧಿಸಿದೆ ಖೂನ ನಿನ್ನದು ತಿಳಿಯದೆ ನಾನು ನಾನೆಂಬವರಿಗೆ ಅನುಸರಿಸಿದೆ ನೀ ನಿಹ ಸ್ಥಳದ ಗಾಳಿಯು ಬೀಸದೆ 2 ಬೀಳದವರ ಕಾಲುಬಿದ್ದು ನಾ ಕೇಳಿದೆ ಸುಳಹು ನಿನ್ನದು ತೋರದೆ ತಲೆ ಕೆಳಗನೆ ಮಾಡಿ ತಪಸವ ಮಾಡಿದೆ ಒಲವು ನಿಮ್ಮದು ಎಂದಿಗೆ ಅಗದೆ 3 ಬಡದ ಬವಣೆ ಬಟ್ಟು ಹುಡುಕದಾ ಹುಡುಕಿದೆ ತುಡಕು ನಿಮ್ಮದು ತಿಳಿಯದೆ ಒಡನೆ ಎನ್ನೊಳು ಬಂದು ಅಡಕವ ಹರಿಸಿದೆ ಬಡವನಾಧಾರೆಂದು ಕೈ ಬಿಡದೆ 4 ಮನೋನ್ಮನವಾಗಿ ಕಂಗಳ ತೆರೆಸಿದೆ ಸ್ವಾನುಭವನೇ ಬೀರಿದೆ ದೀನಮಹಿಪತಿ ಮನೋಹರಣ ಮಾಡಿದೆ ಅನುದಿನ ಘನಸುಖದೊಳಗಿರಿಸಿದೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣದಿ ಭವಾರ್ಣವದಿಂದಾ ದಾಟಿಸುವುದು ಜೀಯಾ ಪ ಯೋನಿ ಮುಖದಿ | ಘಾಶಿಯಾದೆನೋ ವಿಷಯಾಭಿಲಾಷದಿ | ಸೋಸಿದೆನೋ ದು:ಖ ತಾಪವ ಮಾರದೀ | ಮಾಯಾ ಮೋಹದಿ 1 ಧ್ಯಾನ ಮೌನವೆಂಬ ಸಾಧನವನು | ಈ ನಿಯಮ ಯಮ ಯೋಗವನು | ಙÁ್ಞನ ಭಕುತಿ ವೈರಾಗ್ಯವನು | ಏನು ಇಂತರಿಯದ ಮಹಾಪತಿತÀನು 2 ಮುನ್ನ ಮಾಡಿದೆಲ್ಲ ಪರಾಧ ಕ್ಷಮಿಸಿ | ಇನ್ನು ಅಭಯಕರ ಸಿರಸಲಿರಿಸಿ | ಎನ್ನ ಹೃದಯಾಲಂದಃ ಕಾರಹರಿಸಿ | ಸನ್ನುತ ಮಹಿಪತಿ ಎನ್ನ ಭಕ್ತನೆನಿಸಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬರುದೆ ಭ್ರಮೆಯಗೊಂಡ್ಯೊ ಮರುಳ ಮನುಜ ನೀನು ಧ್ರುವ ಎರವ್ಹಿನ ಮನೆಯೊಳು ಮರಹು ಮರೆಯಗೊಂಡು ಗರವು ಹಿಡಿದು ನಿನ್ನ ಕುರುಹು ತಿಳಿಯಲಿಲ್ಲ ಹರೆದು ಭ್ರಾಂತಿಗೆ ಬಿದ್ದು ಸೊರಗಿ ದಣಿದೆಲ್ಲ 1 ಏನು ಮರುಳಗೊಂಡ್ಯೊ ಹೀನಯೋನಿಯ ಮುಖಕೆ ಕಾನನದೊಳು ಪೊಕ್ಕು ಖೂನ ತಿಳಿಯದೆ ನಿನ್ನ ಜನುಮಜನುಮ ಬಂದ್ಯೊ ಜ್ಞಾನಶೂನ್ಯದಲಿ 2 ನಾನು ನನ್ನದು ಎಂದು ಏನು ಗಳಿಸಿಕೊಂಡ್ಯೊ ಸ್ವಾನುಭವದ ಸುಖ ಅನುಭವಿಸದೆ ಹೋಗಿ ಸ್ವಾನ ಸೂಕರಯೋನಿ ಮುಖಸೋಸಿದೆಲ್ಲ 3 ಹೊನ್ನು ಹೆಣ್ಣಿನ ಸವಿಯು ಬಣ್ಣಿಸಿ ನೀ ಬಯಸಿದಲ್ಲ ಮಣ್ಣೇ ಮಾಣಿಕವೆಂದು ದಣ್ಣನೆ ದಣುವರೆ ಕಣ್ಣಗೆಟ್ಟರೆ ಬ್ಯಾಡೊ ತನ್ನೊಳರಿಯದೆ 4 ಮುತ್ತಿನಂಥ ಜನುಮ ವ್ಯರ್ಥಗಳಿಯಬ್ಯಾಡ ಪಾದ ಬೆರ್ತು ಮಹಿಪತಿ ಪೂರ್ಣ ಸಾರ್ಥಕ ಮಾಡಿಕೊಳ್ಳೊ ಗುರುತುವರಿತು ನೀ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೊಂಬು ಕೊಳಲ ತುತ್ತೂರಿ ಊದುತಲಿಕ್ಕುಇಂಬುಕಸ್ತುರಿ ಪರಿಮಳ ಸೂಸುತ ||ಪೊಂಬಟ್ಟೆ ಚೆಲ್ಲಣ ಸೋಸಿದ ಮೊಸರಿನ |ಕುಂಭಒಡೆದು ಕೆಸರಾಗಿದೆಯಮ್ಮ2ಮಿಂಚಿನಂದದಿ ಹೊಳೆಯುತ ಬದಿಯಲಿದ್ದ |ಸಂಚಿತಾರ್ಥಗಳೆಲ್ಲ ಸೂರಾಡಿದ ||ವಂಚನೆಯಿಲ್ಲದೆ ಭಕ್ತರ ಸಲುಹಿದ |ಸಂಚುಕಾರ ಪುರಂದರವಿಠಲನಲ್ಲದೆ 3
--------------
ಪುರಂದರದಾಸರು