ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಳಿಸಿದೆ ನಾಕಳತಿ ತಿಳಿಯದೆ ನಿನ್ನಳತಿ ಅಳೆದು ಹಾಕಿ ತೊಳಲಿ ಬಳಲಿದೆ ಚಿತ್ತ ಹೊಲತಿ 1 ಏಸು ಜನ್ಮ ತಾಳಿ ಹೆಸಲಿಲ್ಲ ಮೂಳಿ ಘಾಸಿಯಾದೆ ಸೋಶಿಲಿನ್ನು ಆಶಿಯಲಿ ಬಾಳಿ 2 ವಿಷಯದಾಶಿವಳಗ ವಶವನೀಗೊಂಡಲಗ ಪಶುವಿನಂತೆಗಳದಿ ಜನ್ಮವ್ಯಸನದಾಶಿ ಕೆಳಗೆ 3 ಏನ ನೀನಾದರ ಜ್ಞಾನಹೀನನಾದರೆ ಭಾನುಕೋಟಿ ತೇಜನ ನೀ ಶರಣು ಪುಗು ಇನ್ನಾರೆ 4 ಪಿಡಿದು ನಿಜಖೂನ ಪಡೆದುಕೋ ಸುಜ್ಞಾನ ಬಿಡದೆ ಸಹಲುತ್ಹಾನೆ ಮಹಿಪತಿಯ ಸ್ವಾಮಿ ಪೂರ್ಣ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾರತೀಶನೆ ಉದ್ಧರಿಸುವದೆನ್ನ ಪ ಕಂಸಾರಿ ಪ್ರೀಯ ಸಂ - ಸಾರ ಬಂಧನ ನಿವಾರಿಸೊ ಜವದಿ ಅ.ಪ ಅಂಜನಾದೇವಿಯ ಸಂಜಾತನೆ ಭವ ಭಂಜನ ಹರಿಪದಕಂಜಾರಾಧಕ 1 ಮಾರುತಿ ನಿನ್ನ ಸುಕೀರುತಿ ತ್ರಿಜಗದಿ ಸಾರುತಲಿದೆಯುದ್ಧಾರಕನೆಂದು 2 ಹರಿಕುಲಜಾತನೆ ಹರಿಸಂಪ್ರೀತನೆ ಹರಿಹಯ ವಿನುತನೆ ಹರಿದುರಿತವನು 3 ಕಾಮಿತ ಫಲದ ನಿಸ್ಸೀವÀು ಪರಾಕ್ರಮಿ ಪ್ರೇಮವ ಕೊಡು ಶ್ರೀ ರಾಮನ ಪದದಿ 4 ಕುಂತಿ ಕುಮಾರಾದ್ಯಂತ ವಿದೂರನೆ ಅಂತರಂಗದಿ ಹರಿಚಿಂತನೆಯಕೊಡು 5 ಧರ್ಮಾನುಜಸದ್ಧರ್ಮ ಸ್ಥಾಪಕನೆ ಕಿರ್ಮೀರಾಂತಕ ನಿರ್ಮಲ ಚರಿತ 6 ಭೀಮನೆ ಸುದ್ಗುಣ ಧಾಮನೆ ಕುರುಕುಲ ಸೋಮನೆ ಸುರಮುನಿಸ್ತೋಮನಮಿತನೆ 7 ಅರ್ಜುನಾಗ್ರಜನೆ ದುರ್ಜನ ಶಿಕ್ಷಕ ಧೂರ್ಜಟಿವಂದ್ಯನೆ ಮೂರ್ಜಗ ಕರ್ತಾ 8 ಆರ್ಯನೆ ಕೃತ ಸತ್ಕಾರ್ಯನೆ ಜಗದೊಳು ನಾರ್ಯಕುರುಪನೂರು ಶೌರ್ಯದಿ ತರಿದ 9 ಕರಿವರದನ ಚರಣಾರವಿಂದ ಯುಗ ನಿರುತ ಸ್ಮರಿಪತೆರ ಕರುಣಿಸು ಭರದಿ 10 ದುಷ್ಟದ್ವಂಸಕನೆ ಶಿಷ್ಟಪಾಲಶ್ರೀ - ಕೃಷ್ಣನಂಘ್ರಿಯಲಿ ನಿಷ್ಠೆಯ ತೋರೋ 11 ಮಧ್ಯಗೇಹ ಸುತ ಸದ್ವೈಷ್ಣವ ಯತಿ ಅದ್ವೈತಕರಿ ಹರಿ ಸಿದ್ಧಾಂತ ಕರ್ತಾ 12 ಮಿಥ್ಯಾವಾದಿಬಾಯಿ ಎತ್ತದಂತ ಶ್ರು - ತ್ಯರ್ಥವ ಪೇಳ್ದ ಸಮರ್ಥನಹುದು ನೀ 13 ಹರಿಸರ್ವೋತ್ತಮ ಸಿರಿಯು ಅಕ್ಷರಳು ಸುರರೊಳು ನೀನೆ ಪಿರಿಯನು ಸತ್ಯ 14 ಸದಮಲಚರಿತನೆ ಹೃದಯದ ತಿಮಿರವ ವದೆದು ತರಿವುದಕೆ ಉದಿತ ಭಾಸ್ಕರ 15 ಮೂರು ರೂಪಾತ್ಮಕ ಸಾರಿದೆಯನ್ನಯ್ಯs ಪಾರದುರಿತ ಪರಿಹಾರವ ಗೈಸೊ 16 ಹೇಸಿಕೆ ಭವದಲಿ ನಾಶಿಲುಕಿಹೆ ವರ - ದೇಶ ವಿಠಲನ ಸೋಶಿಲಿ ತೋರೊ 17
--------------
ವರದೇಶವಿಠಲ