ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಮ್ಮಾದೇವಿ ನಮ್ಮ ದೇವರು ಬಂದರು ಕಾಣ ಪ. ಸೋಮಾಸುರನೆಂಬ ದೈತ್ಯನು ಸಾಮಕ ವೇದವನೊಯ್ಯಲು ಮಾ ಸೋಮಾಸುರನೆಂಬವನ ಕೊಂದು ಸಾಮಕವೇದವ ತಂದನು ಮಾ 1 ಗುಡ್ಡವು ಮುಳುಗಿ ಪೋಗಲು ನಮ್ಮದೇವ ಗುಡ್ಡವ ಬೆನ್ನಲ್ಲಿಟ್ಟನು ಮಾ ಗುಡ್ಡದಂಥÀ ದೈತ್ಯರನೆಲ್ಲ ಅಡ್ಡÀಕೆಡಹಿ ಬಿಸುಟನು ಮಾ 2 ಚಿನ್ನಗಣ್ಣಿನವನು ಬಂದು ಕನ್ನೆ ಪೆಣ್ಣನೊಯ್ಯಲು ಮಾ ವರ್ಣರೂಪವ ತಾಳಿ ಅವನ ಭಿನ್ನ ಭಿನ್ನವ ಮಾಡಿದನು ಮಾ 3 ಕಂಭದಿಂದಲೆ ಉದಿಸಿ ನಮ್ಮ ದೇವ ಜಂಭದಸುರನ ಬಡಿದನು ಮಾ ನಂಬಿದ ಪ್ರಹ್ಲಾದನ್ನ ಕಾಯಿದ ಅಂಬುಜನಾಭ ನರಸಿಂಗನು ಮಾ 4 ಬಲು ಮುರುಡನಾಗಿ ಭೂಮಿಯ ಬಲಿಯ ದಾನವ ಬೇಡಿದ ಮಾ ಇಳೆಯ ಈರಡಿಯ ಮಾಡಿ ಬಲಿಯ ಪಾತಾಳಕೊತ್ತಿದ ಮಾ 5 ಕೊಡಲಿಯನ್ನು ಪಿಡಿದು ನಮ್ಮದೇವ ಕಡಿದ ಕ್ಷತ್ರಿಯ ರಾಯರ ಮಾ ಹಡೆದ ತಾಯ ಶಿರವ ತರಿದು ಪಡೆದನಾಕೆÉಯ ಪ್ರಾಣವ ಮಾ 6 ಎಂಟೆರಡು ತಲೆಯ ಅಸುರನ ಕಂಠವ ಛೇದಿಸಿ ಬಿಟ್ಟನು ಮಾ ಒಂಟಿರೂಪವ ತಾಳಿ ಲಂಕೆಯ ಬಂಟ ವಿಭೀಷಣಗಿತ್ತನು ಮಾ 7 ಸೋಳಸಾಸಿರ ಗೋಪಿಯರೊಡನೆ ಕೇಳೀಮೇಳದಲಿಪ್ಪನು ಮಾ ಬಾಲಕನಾಗಿ ಪೆಣ್ಣರೂಪದಲಿ ಶ್ರೀ- ಲೋಲ ಲಕ್ಷ್ಮಿಯ ಅರಸನು ಮಾ 8 ಒಪ್ಪದಿಂದಲಿ ಬಂದು ನಮ್ಮ ದೇವ ಇಪ್ಪೆವನದೊಳಗಿಪ್ಪನು ಮಾ ಸರ್ಪಶರನಾಗಿ ಪೋಗಿ ತ್ರಿಪುರಸಂಹರ ಮಾಡಿದ ಮಾ 9 ಎಲ್ಲಮ್ಮಾ ಎಲ್ಲಮ್ಮಾ ನಮ್ಮದೇವ ಬಲ್ಲಿದ ಕಲ್ಕ್ಯವತಾರನು ಮಾ ಇಳೆಯ ಸ್ವರ್ಗ ಪಾತಾಳಕೊಡೆಯ ಚೆಲುವ ಹಯವದನನು ಮಾ 10
--------------
ವಾದಿರಾಜ
ಪುರಾಣ ಅಕ್ಕರವುಳ್ಳ ನಮ್ಮಕ್ಕ ರುಕ್ಮಿಣಿ ಕೇಳೆ ರಕ್ಕಸಾಂತಕ ಕೃಷ್ಣ ಮತ್ತೆಲ್ಲೆ ಪೋದ 1 ಸತ್ಯಭಾಮೆಯೆ ನಿನ್ನ ಚಿತ್ತದ್ವಲ್ಲಭ ನೀರೊಳು ಪೊಕ್ಕು ವೇದವ ತಂದು ಪುತ್ರಗಿಡಹೋದ 2 ಪನ್ನಂಗಶಯನ ಲಾವಣ್ಯರೂಪನು ಎನ್ನ ಕಣ್ಣಿಗೆ ಮರೆಯಾಗಿ ಇನ್ನೆಲ್ಲೆ ಹೋದ 3 ಪತಿ ಶರಧಿಯೊಳು ಬೆನ್ನಲಿ ಗಿರಿಯೆತ್ತಿ ತನ್ನ ಭಕ್ತರಿಗೆ ಸುಧೆಯ ನೀಡಲು ಹೋದ 4 ವನಜನಾಭನ ಕಾಣದೆ ಘನಕ್ಲೇಶದಿಂದೀಗ ಮನದ ವಿರಹತಾಪವನು ಸೈರಿಸಲ್ಹ್ಯಾಗೆ 5 ಅವನಿ ಕದ್ದವನ ಸಂಹರಿಸಿ ಕೋರೆಗಳಿಂದ ಭುವನಾಧಿಪತಿಯು ಬರುವನೆ ಸತ್ಯಭಾಮೆ 6 ಹಂಬಲ ಬಿಡದರವಿಂದನೇತ್ರನ ಬಿಟ್ಟು ಸುಂದರಾಂಗನ ಕರೆತಂದು ತೋರೆನಗೆ 7 ಕಂಬದಿಂದೊಡೆದು ಕಂದನ ತಂದೀ(ದೆಯ?) ಕರುಳ್ಹಾರ ಕಂದರದಿ ಧರಿಸಿ ತಾ ಬಂದನು ಭಾಮೆ 8 ಸೃಷ್ಟಿಕರ್ತನುಯೆನ್ನ ದಿ(ದೃ?) ಷ್ಟಿಂದೆ ನೋಡದೆ ಎಷ್ಟು ಹೇಳಲೆ ಪ್ರಾಣ ಬಿಟ್ಟು ಹೋಗುವುದೆ 9 ಪುಟ್ಟ ಬ್ರಾಹ್ಮಣನಾಗಿ ದಿಟ್ಟತನದಲಿ ದಾನವ ಕೊಟ್ಟ ಬಲಿ ಪಾತಾಳಕೆ ಮೆಟ್ಟಿ ಬಾಹುವನೆ 10 ತ್ವರಿತದಿಂದಲಿ ಯಾದವರರಸು ಶ್ರೀಕಾಂತನ ಸರಸವಾಡಲೀಗ ಕರೆಸಿ ತೋರೆನಗೆ 11 ಅರಸರ ಕುಲವ ಸಂಹರಿಸಿ ಕ್ಷತ್ರೇರನೆಲ್ಲ ನಿರುತ ನಿಷ್ಠೆಯಲಿ ತಪ ಚರಿಸಿ ಬಾಹುವನೆ 12 ಹೇಮಪುತ್ಥಳಿಗೊಂಬೆ ಸಾಮಜವರದನ ಆ ಮಾಸುರರೊಡೆಯ ಮೇಘಶ್ಯಾಮನ ತೋರೆ13 ಮಾಡಿ ಯುದ್ಧವ ಲಂಕಾ ನೋಡಿ ದಶಶಿರವ ಚೆಂಡಾಡಿ ಜಾನಕಿಯ ಒಡಗೂಡಿ ಬಾಹುವನೆ 14 ವಾಸುದೇವನ ಕಾಣದೊಂದರಘಳಿಗೀಗ ನಾಲ್ಕು ಯುಗವಾಗಿ ತೋರುವುದೆನ್ನ ಮನಕೆ 15 ಶ್ರೀಶ ತಾ ಸೋಳಸಾಸಿರ ಮಂದಿ ಸತಿಯೇರ ವಿ- ಲಾಸದಿಂದಿದ್ದನೀಗಿಂದೀವರಾಕ್ಷ 16 ಸಿರಿವೊಬ್ಬಳಲ್ಲದೆ ಪರನಾರಿಯರ ಕಣ್ಣು ತೆರೆದು ನೋಡುವ ತಾ ಭೂರಮಣನೆಲ್ಲಿಹನೆ 17 ಖರೆಯವೀಮಾತು ತ್ರಿಪುರದ ಸತಿಯರ ಲಜ್ಜೆ ತೊರೆದು ಕೂಡಿದನೆಂಬೋದು ಪರಮ ಮೋಹಕವೆ18 ನಾಡೊಳಗಧಿಕಶ್ವಾರೂಢ ರುಕ್ಮಿಣೀಕಾಂತನ ನೋಡದÉನಜೀವ ನಿಲ್ಲದು ನೀರಜಾಕ್ಷಿ 19 ಬೇಡಿಕೊಂಬುವೆನೆಂ(ಯೆ?)ದು ಭೀಮೇಶಕೃಷ್ಣನ ಕೂಡಿಸುವೆನೆ ಕರೆತಂದು ಕಮಲಾಕ್ಷಿ 20
--------------
ಹರಪನಹಳ್ಳಿಭೀಮವ್ವ
ಶ್ರೀರಂಗ ಬಾರನೆ ಪ. ಕರೆದರಿಲ್ಲಿ ಬಾರನೆ ಕಾಂತೆ ಮುಖವ ತೋರನೆ ಮಧುರ ಪುರದ ಅರಸನೆ ಕೂಡಿ ಎನ್ನ ರಮಿಸನೆ ಅ.ಪ . ಮುನಿಸು ಮನದಲ್ಲಿಟ್ಟನೆ ಮೋಹವನ್ನು ಬಿಟ್ಟನೆಮನದಿ ಛಲವತೊಟ್ಟನೆ ಮನೆಗೆ ಬಾರದೆ ಬಿಟ್ಟನೆ 1 ಎಂತು ನಂಬಿ ಇದ್ದನೆ ಎಂತು ಗುರುತು ಮರೆತನೆಪಂಥವ್ಯಾತಕೆ ಕಲಿತನೆ ಕಾಂತೇರÀ ಕೂಡಿ ಮೆರೆದನೆ 2 ಸೋಳಸಾಸಿರ ಗೋಪಿಸಹಿತ ಜಲದಲಾಡಿ ಪೋದನೆಸೆಳೆದು ಒಬ್ಬಳ ಒಯ್ದನೆ ಚೆಲುವ ಹಯವದನನೆ 3
--------------
ವಾದಿರಾಜ
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲಭಕ್ತವತ್ಸಲ ದೇವನು ಪ ಮಕ್ಕಳ ಚೆಂಡಿಕೆ ಮರದ ಕೊನೆಗೆ ಕಟ್ಟಿಘಕ್ಕನೆ ಕೈ ಚಪ್ಪಾಳಿಕ್ಕಿ ನಗುವ ರಂಗ ಅ.ಪ. ಹೆಣ್ಣುಮಕ್ಕಳು ಬಚ್ಚಲೆಣ್ಣೆ ಮಂಡೆಯೊಳುಬಣ್ಣ ವಸ್ತ್ರವ ಬಿಟ್ಟು ಬರಿಮೈಯೊಳಿರಲುಚೆನ್ನಿಗ ಬಿಸಿನೀರ ಚೆಲ್ಲಿ ಸೀರೆಗಳೊಯ್ದುಉನ್ನಂತವಾದ ವೃಕ್ಷವೇರಿ ಕಾಡುವನಮ್ಮ 1 ಪರಿ ಎಷ್ಟೆಂತೆ ಪೇಳಲೆ2 ಸಡಗರದೊಳು ಸೋಳಸಾಸಿರ ಗೋಪೇರಒಡಗೂಡಿ ಕೊಳಲನು ಪಿಡಿದು ತಾ ಮೊಸರಕಡೆವೊ ಗೊಲ್ಲತಿಯರ ಕೈ ಪಿಡಿದಾಡುವಒಡೆಯನೆ ಇವನಮ್ಮ ಉಡುಪಿನ ಶ್ರೀಕೃಷ್ಣ3
--------------
ವ್ಯಾಸರಾಯರು
ಸೃಷ್ಟಿಯೊಳಗೆ ಶ್ರೀ ಕೃಷ್ಣಮೂರುತಿ ಇನ್ನೆಷ್ಟು ಸ್ತುತಿಸಲಿ ನಾನು ದೃಷ್ಟಿಯಿಂದಲಿ ನೋಡು ಮನಮುಟ್ಟಿ ಭಜಿಸುವೆನು ಸೃಷ್ಟ್ಯಾದಷ್ಟ ಕರ್ತಾ ವಿಠಲಗುಣಶೀಲ ಅಷ್ಟಯತಿಗಳಿಂದ ಇಷ್ಟದಿ ಪೂಜೆಗೊಂಡ ಮದವೋ ಅಟ್ಟಹಾಸದಿಂದಲಿ ಬೆಟ್ಟ ಬೆರಳಿನಿಂದಲಿನೆತ್ತಿದ ಮದವೊ ದಿಟ್ಟಮೂರುತಿ ನಮ್ಮ ಕಾಳೀಮರ್ಧನಕೃಷ್ಣ ಮನೋಭೀಷ್ಟೆಯ ಕೊಡೋ 1 ಇಂದಿರೇಶನೆ ನಿನ್ನ ಒಂದಿನವು ನಾನು ಗೋವಿಂದ ನಿನ್ನಯ ಪಾದಾರವಿಂದವ ಭಜಿಸಲಿಲ್ಲ ಆನಂದ ಮೂರುತಿ ನಿನಗಿಂತ ಸಮಾನ ಅನಿಮಿತ್ತ ಬಂಧುಗಳು ಯನಗಿಲ್ಲ ಎನ್ನಂಥ ಭಕುತರು ನಿನಗನಂತರರಿರುವರು ನಿನ್ನಂಥ ಕರುಣೆ ಇನ್ನಿಲ್ಲ ಜಗದೊಳು ಸರ್ಪಶಯನ ನಮ್ಮ ಕಾಳೀಮರ್ಧನಕೃಷ್ಣ ನಿರುತದಿ ವೊಲಿಯೇ 2 ಸುಂದರಿಯರ ಸೇರಿ ಆನಂದದಿಂದ ಕಳೆದ ಮದವೋ ಸೇವೆಗೊಂಬುವ ಮದವೋ ಸೋಳಸಾಸಿರ ಸುದತಿಯರೊಪ್ಪುವ ಮದವೊ ಮುರಳೀಧರ ನಮ್ಮ ಕಾಳೀಮರ್ಧನಕೃಷ್ಣ ಇಷ್ಟದಿ ಒಲಿಯೆ 3 ಪಾದ ಎಂದಿಗೆ ಲಭ್ಯವೊ ಕಂದನ ನುಡಿ ಕೇಳಿ ಆನಂದ ಪದವಿಯನಿತ್ತು ಮಾನವ ಕಾಯ್ದು ವಸುದೇವ ದೇವಕಿಯ ಬಂಧನವ ಬಿಡಿಸಿದಿ ಆನಂದದಿಂದಲಿ ಅಜಮಿಳಗೊಲಿದು ಮಡುವಿನೊಳಗಿರಲು ಗಜರಾಜ ಮಡದಿಗೆ ಹೇಳದೆ ಗರುಡವಾಹನನಾಗಿ ಬಂದು ಮಕರಿಯನ್ನು ಕೊಂದ ಸಿಂಧುಶಯನ ನಮ್ಮ ಕಾಳೀಮರ್ಧನಕೃಷ್ಣ ಆಪತ್-ಬಂಧೋ 4 ಬಾಲಕತನದಲ್ಲಿ ಏನೇನು ಲೀಲೆಯ ಮಾಡಿದ್ಯೊ ಗೋಪಾಲಕೃಷ್ಣ ಮೂರುತಿ ಎಂದು ವರ್ಣಿಸಲೋ ನಿನ್ನ ಕೀರುತಿ ಗೋವುಗಳ ಕಾಯ್ದುಕೊಂಡು ಎಂದಿಗೆ ಬರುತಿ ನಿನಗೇಕೋ ಇಂಥಾ ಮದವು ಪಾರ್ಥಸಾರಥಿ ಕ್ಷೀರಸಾಗರದಲ್ಲಿ ಲಕ್ಷ್ಮೀ ಸಹಿತವಾಗಿ ಆಲದೆಲೆಯ ಮೇಲೆ ಮಲಗಿರುತ್ತೀ ಥರವಲ್ಲವೋ ನಿನಗಿಂಥ ಮದವು ಬ್ರಹ್ಮಾದ್ಯಮರ ಒಂದಿತ ಮದವು ಜಾರಚೋರ ನಮ್ಮ ಕಾಳೀಮರ್ಧನಕೃಷ್ಣ ಕರುಣಾಸಾಗರ 5
--------------
ಕಳಸದ ಸುಂದರಮ್ಮ
ಸೋಮಾಸುರನೆಂಬ ಅಸುರನು ಸಾಮಕವೇದವ ಒಯ್ಯಲು ಮಾ ಸೋಮಾಸುರದೈತ್ಯನ ಕೊಂದು ಸಾಮಕವೇದವ ತಂದನು ಮಾ 1 ಗುಡ್ಡವು ಮುಳುಗಿ ಪೋಗಲು ನಮ್ಮ ದೇವ ಗುಡ್ಡ ಬೆನ್ನೊಳಗಿತ್ತನು ಮಾ ಗುಡ್ಡದಂಥ ದೈತ್ಯರನೆಲ್ಲ ಅಡ್ಡ ಕೆಡಹಿ ಬಿಸುಟನು ಮಾ 2 ಚಿನ್ನಗಣ್ಣಿನವನು ಬಂದು ಕನ್ನೆ ಹೆಣ್ಣನೊಯ್ಯಲು ಮಾ ವರ್ಣರೂಪವ ತಾಳಿದಸುರನ ಛಿನ್ನಭಿನ್ನವ ಮಾಡಿದನು ಮಾ 3 ಕಂಬದಿಂದಲಿ ಬಂದು ನಮ್ಮ ದೇವ ಇಂಬಾದಸುರನ ಬಗಿದನು ಮಾ ನಂಬಿದ ಪ್ರಹ್ಲಾದನ ಕಾಯ್ದ ಅಂಬುಜನಾಭ ನೃಸಿಂಹನು ಮಾ 4 ಮುರುಡನಾಗಿ ಬಂದು ನಮ್ಮ ದೇವ ಬಲಿಯ ದಾನವ ಬೇಡಿದನು ಮಾ ಇಳೆಯ ಈರಡಿಯ ಮಾಡಿ ಬಲಿಯ ಪಾತಾಳಕ್ಕೊತ್ತಿದನು ಮಾ 5 ಕೊಡಲಿಯನು ಪಿಡಿದು ನಮ್ಮ ದೇವ ಕಡಿದ ಕ್ಷತಿಯರಾಯ (ಯರ?) ನು ಮಾ ಹಡೆದ ತಾಯಿಯ ಶಿರವ ತರಿದು ಪಡೆದನಾಕೆಯ ಪ್ರಾಣ(ಣವ?) ನು ಮಾ 6 ಎಂಟು ಎರಡು ತಲೆಯ ಅಸುರನ ಕಂಠವ ಛೇದಿಸಿ ಬಿಸುಟನು ಮಾ ಒಂಟೀ ರೂಪವ(?) ತಾಳಿದಸುರನ ಗಂಟ ವಿಭೀಷಭಣಗಿತ್ತನು ಮಾ 7 ಸೋಳಸಾಸಿರ ಗೋಪಿಯರೊಡನೆ ಕೇಳಿಮೇಳದೊಳಿದ್ದನು ಮಾ ಬಾಲಕನಾಗಿ ತನ್ನುದರದಲಿ ಲೋಲ ಲಕ್ಷ್ಮಿಗರಸನು ಮಾ 8 ಒಪ್ಪದಿಂದಲಿ ಬಂದು ನಮ್ಮ ದೇವ ಇಪ್ಪ್ಪೆವನದೊಳಗಿಪ್ಪನು ಮಾ ಸರ್ಪಶಯನನಾಗಿ ಪೋಗಿ ತ್ರಿಪುರಸಂಹಾರ ಮಾಡಿದನು ಮಾ 9 ಏನು ಮಾಯನು ಮಾಯನು ಮಾ ನಮ್ಮ ದೇವ ಬಲ್ಲಿದ ಕಲ್ಕ್ಯಾವತಾರನು ಮಾ ಇಳೆಯ ಸ್ವರ್ಗ ಪಾತಾಳಕ್ಕೊಡೆಯ ಚೆಲುವ ಶ್ರೀ ಹಯವದನನು ಮಾ 10
--------------
ವಾದಿರಾಜ
ಬಂದೆನೇಳೆ ಗೋವಿಂದ ನಾ ಇಂದುಮುಖಿ ನಿದ್ರೆ ಬಿಟ್ಟುಬಂದು ನೀ ಬಾಗಿಲ ತೆಗೆಯೆ ಗೋವಿಂದ ನೀ ಗೋವೃಂದವ ಕಾಯಲು ಹೋಗಯ್ಯ ಪ.ಸೋಮಕ ಖಳನ ಕೊಂದು ನೇಮದಿ ವೇದವ ತಂದಶ್ರೀ ಮತ್ಸ್ಯಾವತಾರ ಬಂದೆನೆ ಮತ್ಸ್ಸ್ಯನಾದರೆಆ ಮಹಾಂಬುಧಿಗೆ ಹೋಗಯ್ಯ 1ಸಿಂಧುಮಥÀನ ಕಾಲಕೆ ವೃಂದಾರಕರಿಗÉೂಲಿದಸುಂದರ ಕೂರ್ಮನು ಬಂದೆನೆ ಕೂರ್ಮನಾದರೆಮಂದರಹೊರಲು ಹೋಗಯ್ಯ2ಪ್ರಳಯಾಂಬುಗಿಳಿದೊಬ್ಬನ ಸುಲಭದಿ ಕೋರೇಲಿ ಸೀಳಿದಚೆಲುವ ವರಾಹನು ಬಂದೆನೆ ವರಾಹನಾದರೆಇಳೆಯ ಕೂಡಾಡ ಹೋಗಯ್ಯ 3ಸೊಕ್ಕಿ ಕಂಬವ ಗುದ್ದ್ದಿದ ರಕ್ಕಸನಂತರ ಮಾಲೆಯನಿಕ್ಕಿದ ನರಹರಿ ಬಂದೆನೆ ನರಹರಿಯಾದರೆಚಿಕ್ಕವನೊಳಾಡ ಹೋಗಯ್ಯ 4ಹೋಮವ ಮಾಡಿ ಮೀರಿದ ಭೂಮಿಪನುಕ್ಕ ಮುರಿದನೇಮದ ವಾಮನ ಬಂದೆನೆ ವಾಮನನಾದರೆನೇಮ ನಿಷ್ಠೆಗೆ ನೀ ಹೋಗಯ್ಯ 5ಭೂಭಾರವನಿಳುಹಿ ದ್ವಿಜರ್ಗೆ ಭಾಗ್ಯವ ಕೊಟ್ಟ ಶೌರ್ಯಶೋಭಿತಭಾರ್ಗವಬಂದೆನೆ ಭಾರ್ಗವನಾದರೆಆ ಬಾಲೇರಂಜಿಸ ಹೋಗಯ್ಯ 6ಸೀತೆಗಾಗಿ ರಾವಣನ್ನ ಘಾತಿಸಿದೆ ಕೇಳೆವಾತಜಾತ ವಂದ್ಯ ರಾಮ ಬಂದೆನೆ ರಾಮನಾದರೆ ಸರಯೂ ತೀರದಲ್ಲಿರ ಹೋಗಯ್ಯ 7ಸೋಳಸಾಸಿರ ಗೋಪೇರನಾಳುವ ಪ್ರೌಢ ಕಾಣೆ ಗೋಪಾಲ ಚೂಡಾಮಣಿ ಬಂದೆನೆ ಗೋಪಾಲನಾದರೆ ಗೋಪಾಲೇರೊಡನಾಡ ಹೋಗಯ್ಯ 8ದೃಢದಲ್ಲಿ ತಪವಿದ್ದ ಮಡದೇರ ಮನಗೆದ್ದಕಡುಮುದ್ದು ಬುದ್ಧ್ದ ಬಂದೇನೆ ಬುದ್ಧನಾದರೆ ಮಿಥ್ಯದಸಡಗರದಲ್ಲಿರ ಹೋಗಯ್ಯ 9ಪದ್ಮಗಂಧಿ ನಿನ್ನ ರತಿಗೊದಗಿದೆ ಬಿಂಕವಿನ್ನ್ಯಾಕೆಕುದುರೆಯೇರಿ ಕಲ್ಕಿ ಬಂದೆನೆ ಕಲ್ಕಿಯಾದರೆಕದನಕೆ ಜಾಣ ಹೋಗಯ್ಯ 10ವಲ್ಲಭನ ನುಡಿಕೇಳಿ ನಲ್ಲೆ ಸತ್ಯಭಾಮೆಪಾದಪಲ್ಲವಕೆರಗಿ ನಿಂತಳು ಪ್ರಸನ್ವೆಂಕಟಚೆಲುವ ನೀನೆಂದರಿಯೆನೆಂದಳು 11
--------------
ಪ್ರಸನ್ನವೆಂಕಟದಾಸರು
ಹಣ್ಣು ತಾ ಬೆಣ್ಣೆ ತಾರೆ - ಗೋಪಮ್ಮ-|ಹಣ್ಣು ತಾ ಬೆಣ್ಣೆ ತಾರೆ ಪಅಡವಿಯೊಳಗೆ ಅಸುರನ ಕೊಂದ ಕೈಗೆ |ಮಡುವಿನೊಳಗೆ ಮಕರನ ಸೀಳ್ದ ಕೈಗೆ ||ಪೊಡಿವಿಯೊಳಗೆ ಚೆಂಡನಾಡಿದ ಕೈಗೆ |ಸಡಗರದಲಿ ಭೂಮಿ ಬೇಡಿದ ಕೈಗೆ 1ಶಂಖ ಚಕ್ರಗಳ ಪಿಡಿದಂಥ ಕೈಗೆ |ಶಂಕೆಯಿಲ್ಲದೆ ಮಾವನ ಕೊಂದ ಕೈಗೆ ||ಬಿಂಕದಿಂದಲಿ ಕೊಳಲೂದುವ ಕೈಗೆ |ಪಂಕಜಮುಖಿಯರ ಕುಣಿಸುವ ಕೈಗೆ 2ದಿಟ್ಟತನದಲಿಬೆಟ್ಟವೆತ್ತಿದ ಕೈಗೆ|ಸೃಷ್ಟಿಯ ದಾನವ ಬೇಡಿದ ಕೈಗೆ ||ದುಷ್ಟಭೂಪರನೆಲ್ಲ ಮಡುಹಿದ ಕೈಗೆ |ಕೆಟ್ಟ ದಾನವರನು ಸದೆಬಡಿದ ಕೈಗೆ 3ಕಾಳಿಯ ಮಡುವನು ಕಲಕಿದ ಕೈಗೆ |ಸೋಳಸಾಸಿರ ಗೋಪಿಯರಾಳಿದ ಕೈಗೆ ||ಮೇಳದ ಭಕ್ತರುದ್ಧರಿಸುವ ಕೈಗೆ |ಏಳು ಗೂಳಿಯ ಗೆದ್ದ ಯದುಪನ ಕೈಗೆ 4ಬಿಲ್ಲು - ಬಾಣಗಳನು ಪಿಡಿದಂಥ ಕೈಗೆ |ಮಲ್ಲಸಾಧನೆಯನು ಮಾಡಿದ ಕೈಗೆ ||ಎಲ್ಲ ದೇವರದೇವ ರಂಗನ ಕೈಗೆ |ಬಲ್ಲಿದಪುರಂದರವಿಠಲನ ಕೈಗೆ5
--------------
ಪುರಂದರದಾಸರು