ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟೆಂದು ಸಾರುವೆ ನಿಮ್ಮ ನಾಮ ಮಹಿಮಾ| ಶ್ರೀ ಪರಬೊಮ್ಮಾ ಶಿಷ್ಟ ಜನರ ಸಂಭ್ರಮಾ ಪ ಹರಿಹರಿಯಂದೊದರೆ ಮರೆದರಿದೊಮ್ಮಾ| ಹರದ್ಹರ ದೋಹುದುಪಾಪ ಪುಣ್ಯವು ಮೋಪಾ| ತಿರು ತಿರುಗಿ ಯಾತ್ರೆಗಳಾ ಮಾಡಿದ ಫಲಾ| ಪರತರಾಸುಖ ನೀವುದು ರಕ್ಷಿಸುವುದು 1 ರಮ ರಾಮಯಂದು ಕಾಮಿಕಾಮಿ ಅಂದು| ನಾಮಾ ನೇಮದಿ ನುಡಿಯೆ ಗಿಳಿಯ ಕರಿಯೆ| ಪ್ರೇಮ ಪ್ರೇಮಕರ ತಂದೆ ಗತಿ ನೀಡದೇ| ಸೋಮ ಸೋಮಾರಿ ಕುಲೇಶ ಕೋಟಿ ಪ್ರಕಾಶಾ 2 ಪರಿ ಪರೀವದಾನಂದಾ| ಕರೆ ಕರೆದುಂಡು ನಲಿದರು ನಾರದಾದ್ಯರು| ತರಿಸಿ ತಾರಿಸುತಿಹರು ಸಾಧು ಸಂತರು| ಗುರುವರ ಮಹಿಪತಿ ಜನು ಧನ್ಯನಾದನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಖಾದಿ ಧರಿಸುವ ಜನಕೆ ಕ್ರೋಧವುಂಟೇ ಪ ಕ್ರೋಧ ಜೈಸಿದ ನರಗೆ ಕಲಹಗಳುಂಟೇ ಪಥ್ಯದಿಂದಿರುವವಗೆ ವ್ಯಾಧಿ ಭಯವೇ ನಿತ್ಯ ಉಪವಾಸಿಗೆ ಭತ್ತದಾ ವ್ಯಥೆಯುಂಟೇ ಚಿತ್ತ ಶುದ್ಧಿದ್ದವಗೆ ಮೈಲಿಗೆಯ ಪರವೇ 1 ಆಶೆ ಬಿಟ್ಟವನಿಗೆ ಅರಸರಾಭಯವುಂಟೆ ದಾಸನಾದವನಿಗೆ ದೋಷವುಂಟೆ | ದೇಶ ಉದ್ಧಾರಕಗೆ ಸೆರೆಮನೆಯ ಭಯವುಂಡೆ ಪೂಶರನ ಗೆದ್ದವಗೆ ಕಾಮಿನಿಯ ಭಯವೇ 2 ಗೀತಾರ್ಥ ತಿಳಿದವಗೆ ಪಾತಕದ ಭಯವುಂಟೆ ಶೀತೋಷ್ಣ ಸಹಿಸುವವಗೆ ಛಳಿ ಬಿಸಿಲು ಭಯವೆ | ನೀತಿ ಕೋವಿದರಿಗೆ ಜಾತಿ ಪಕ್ಷಗಳುಂಟೆÉ ದಾತನಿಗೆ ದುರ್ಭಿಕ್ಷು ಭೀತಿ ತಾವುಂಟೆ 3 ವಿದ್ಯಾಭಿಲಾಶೆಗೆ ತೇರ್ಗಡೆಯ ಭಯವುಂಡೆ ಉದ್ಯೋಗವಿದ್ದವಗೆ ಉದರ ಭಯವೇ ಯುದ್ಧ ಶೂರರಿಗೆಲ್ಲ ಮದ್ದುಗುಂಡಿನ ಭಯವೇ ಬುದ್ಧಿವಂತರಿಗೆಂದಿಗಪಮಾನ ಭಯವೇ 4 ನೇಮದಿಂದಲಿ ನಡೆವವಗೆ ಸೋಮಾರಿತನವುಂಟೆ ಭೂಮಾತೆ ಮಕ್ಕಳಿಗೆ ಕ್ಷಾಮವುಂಟೆ ಸಾಮಗಾನವಿಲೋಲ ಶಾಮಸುಂದರವಿಠಲ ನಾಮ ನೆನವವಗೆ ಯಮಧಾಮದಂಜಿಕೆಯೇ 5
--------------
ಶಾಮಸುಂದರ ವಿಠಲ
ಸ್ವಾಮಿಯು ನೀನಲ್ಲವೊ ಪಾಮರನೆ ಪ ಸ್ವಾಮಿಯು ನೀನಾಗೆ ಭೃತ್ಯಾನು ನಿನಗ್ಯಾರು ಈ ಮಾತಿಗೇನೆಂಬೆಯೊ ಸೋಮಾರಿ ಮನುಜನೆ ಅ.ಪ. ನಿತ್ಯತೃಪ್ತನು ದೇವದೇವೋತ್ತಮನವನು ಸತ್ಯ ಸಂಕಲ್ಪನು ಸಕಲ ಜಗವರಿಯೆ ಹೊತ್ತು ಹೊತ್ತಿಗೆ ಗ್ರಾಸಕಿಲ್ಲದವ ಗೃಹಪಾಲ ಸತ್ಯದನುಭವವಿಲ್ಲವೊ ನಿನಗೆ 1 ಸ್ವಾಮಿ ಭೃತ್ಯರಿಗೆ ಬೇಧವಿಲ್ಲೆಂಬುವ ನಿನ್ನ ಭೃತ್ಯ ತಾ ಬರಲು ಕಾಮಾರಿಯಂತೆ ಕೋಪವ ತಾಳುವೆ ನಮ್ಮ ಸ್ವಾಮಿಗೆ ತಾಮಸ ಗುಣವೆಲ್ಲಿಹುದೊ 2 ಕಾಸು ಕೊಟ್ಟರೆ ನೀನು ಹೇಸಿಕ್ಯಾದರು ಬಳಿವೆ ದಾಸ ನೀನಲ್ಲದೆ ಈಶನೆಂತಾದೆಯೊ ವಾಸುದೇವ ನೀನೆಂದು ಘಾಸಿಯಾಗಲು ಬೇಡ ರಂ- ಗೇಶವಿಠಲನ ದಾಸರ ದಾಸ ನೀನಾಗೊ 3
--------------
ರಂಗೇಶವಿಠಲದಾಸರು