ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ಸುಮಂಲಿ ವರಗುಣಶೀಲೆ ನೀ ಸುಮಂಗಲಿ ಪ ಸತತ ಮಾತಾ ಪಿತರ ವಚನ ಹಿತದಿ ನೀನು ಆಲಿಸುತ | ಪತಿಯು ಪರದೈವವೆಂದು ನೇಮದಿ ತಿಳಿದು ನೀ ಮಾಡುವುದು ವ್ರತ 1 ನಿರುತ ಗೋವು ಭೂಸುರರ ಸೇವಾ ಹರುಷದಲಿ ಶ್ರೀ ಗೌರಿ ಪೂಜಾ ತರುಣಿ ಗೈದು ಜಗದಿ ನೀನು ಪಾದ ಸುಕುಮಾರ ಪಿತನಪಾದ ಭಜಿಸೆ 2 ಕೋಮಲಾಂಗಿ ಸೋಮವದನೆ ಆ ಮಹಾತ್ಮ ಶೀಲೆ ರಾಧಾ ಭಾಮೆ ತಾರಾಸೀತೆಯಂತೆ ಶಿರಿಶಾಮಸುಂದರ ದಯ ಪಡೆಯೆ ನೀ 3
--------------
ಶಾಮಸುಂದರ ವಿಠಲ
ಸಂಪ್ರದಾಯ ಶೃಂಗಾರದಂಥ ಶುಭಾಂಗಿ ನೀ ಏಳು ಕಂಗಳ ನೋಟದ ಕಡು ಚೆಲ್ವೆ ನಿನ್ನ ಪಾ- ದಂಗಳಿಗೆರಗುವೆ ಎನುತ ಮಾಲಕ್ಷುಮಿ(ಯ?) ಅಂಗನೆಯರ್ಹಸೆಗೆ ಕರೆದರು 1 ಅಜನಜನಕನರಗಿಳಿಯೆ ನೀ ಏಳು ಪದಮನಾಭನ ಪಟ್ಟದರಸಿ ನೀ ಏಳು ತ್ರಿಜಗಭೂಷಿತನೆದೆ ಮ್ಯಾಲೆ ಹೊಂದಿರುವಂಥ ಮದಗಜಗಮನೆ ಮಾಲಕ್ಷ್ಮಿ ಬಾರೆನುತಲಿ ಮುದದಿಂದಲಿ ಹಸೆಗೆ ಕರೆದರು 2 ಸೋಮವದನೆ ಸುಗುಣೆ ಜಾಣೆ ನೀ ಏಳು ಕೋಮಲ ಕೋಕಿಲವಾಣಿ ನೀ ಏಳು ಹೇಮಮಾಣಿಕ್ಯ ನಾಗವೇಣಿಯೆ ನಮ್ಮ ಭೀಮೇಶಕೃಷ್ಣನ ನಿಜರಾಣಿ ಮಾಲಕ್ಷುಮಿ ಪಟ್ಟದರಾಣಿ ಬಾ ಹಸೆಗೆ ಕರೆದರು 3
--------------
ಹರಪನಹಳ್ಳಿಭೀಮವ್ವ
ರಾಮ ರಾಮಾಯೆಂದು ಮಾರುತಿಯು ನಡೆದು |ಸೋಮವದನೆ ಜಾನಕಿಯನು ಹುಡುಕಾ ಪಹರಿಯಿಂದ ಗುರುತು ಪಡೆದು ತನ್ನ ಶಿಖದಲಿ |ಧರಿಸಿಕೊಂಡತಿಶಯ ಭಕುತಿಯಲಿ ||ತೆರಳಿ ಮುಂದು ಮುಂದಕೆ ಕಡಲ ಸಮೀಪದಿ ವಾ- |ನರಾಧೀಶ ಮಾಡಿದ ವಾಸವನೂ1ರವಿಜನ ಭಯದಿಂದ ಕಪಿಗಳೆ- |ಲ್ಲವು ಎದೆಯನೊಡೆದು ನಗದೊಳು ಕುಳಿತಿರಲು ||ಪವನಜನು ಬಂದು ವಿಚಾರವ ಮಾಡಲು ಸಾಗ- |ರವ ದಾಟಲೊಬ್ಬಗೊಶವಲ್ಲವೆಂದರೆಲ್ಲರಲ್ಲಿ 2ನಮ್ಮನು ರಕ್ಷಿಸೋ ಕುಲಮಣಿಯೆ ವಾಸುದೇವನ |ಮೊಮ್ಮಗನೆ ಎಂದು ಕಪಿಗಳು ಯಾಚಿಸೆ ||ಗಮ್ಮನೆ ಹಾರಿ ರಕ್ಕಸಿ ಹೊಟ್ಟೆಯ ಹೊಕ್ಕು ದಾಟಿ ಮತ್ತೇ |ಒಮ್ಮೆ ಒಬ್ಬಳನ್ನು ಸೀಳಿ ಪುರಪ್ರವೇಶ ಮಾಡಿದ3ಗಿಡಗಿಡ ಚರಿಸುತ ಸ್ಥಳ ಸ್ಥಳದಲಿ ಬಲು |ಹುಡುಕುತ ಮೂಜಗ ಪೂಜಿತನ ||ಮಡದಿಯಾಕೃತಿಯನು ಕಾಣಲಾಕ್ಷಣದೊಳು |ತಡೆದನಲ್ಲಿಯೇ ಪದಗಳ ಮುಂದಕ್ಕಿಡದಲೇ4ಋಷಿಗಳಂದದಿ ಪ್ರಾಣೇಶ ವಿಠಲನೆನುತಿರೆ |ಶಶಿಮುಖಿಯಳು ಆಂಜನೇಯ ಪದ |ಬಿಸಜಾಂಘ್ರಿಗಳಿಗೆರಗಿ ಜಯ ಜಯವೆಂದು |ಉಸಿರಿದ ರಘುಪತಿಯ ಸುದ್ದಿ ವಿಸ್ತರದಲಿ 5
--------------
ಪ್ರಾಣೇಶದಾಸರು