ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

--------ನೆ ಮಾಡುವೆಯಂದರೆ ಅರಸುಳ್ಯ ದ್ವಂದ್ವಪಾದಕೆ ನಾ ವಂದನೆ ಪ ಅಂದು ಜಲದೊಳಾಡಿ ಕೊಂದ ಸೋಮಕನ ವೇದತಂದೂ ------ಗಿತ್ತಾಗೊಂದನೆ ಮಂದರಗಿರಿಯ ನೆತ್ತಿ ಚಂದದಿ --------- ಭೂಮಿ ಮೂಗಿನಿಂದ ಸೀಳಿದ ದೇವಗೆ ವಂದನೆ 1 ತರುಳನಿ ಗೋಸ್ಕರ ಸ್ತಂಭದೊಳಗೆ ಬಂದಾ ನರಹರಿ ರೂಪಗೆ ವಂದನೆ ಮುರುಡನಾಗಿ ದಾನ ಮೂರು ಪಾದವು ಕೇಳಿ ಧರುಣಿಯ ಗೆದ್ದವಗೆ ವಂದನೆ 2 ಪ್ರೇಮಸಲ್ಲದೆ ಪಿತೃವಾಕ್ಯವು ಮನ್ನಿಸಿ ಪಡೆದಮ್ಮನ ಹೊಡೆದಾತಗೆ ವಂದನೆ ತಾಮಸ ದಾನವರಗಳ ಖಂಡಿಸಿದ ಶ್ರೀರಾಮ ದೇವರಿಗೆ ವಂದನೆ 3 ಗೊಲ್ಲರ ಸ್ತ್ರೀಯರ ಕೂಡಿ ಮೆರೆದಾಡುವಂಥ ನಲ್ಲ ಕೃಷ್ಣಗೆ ವಂದನೆ ಎಲ್ಲಾನೂ ತೊರೆದು ಬತ್ತಲಲ್ಲಿ ಇರುವ ನಮ್ಮ ಬೌದ್ಧಾವತಾರಗೆ ವಂದನೆ 4 ಚಲುವ ಅಶ್ವವನೇರಿ ಚರಿಸಿದ ಮಹಾಮಹಿಮ ಕಲ್ಕಿ ಸ್ವರೂಪಗೆ ವಂದನೆ ಸುಲಭದಿ ಭಕ್ತರ ಚನ್ನಾಗಿಸಲಹುವ ಶ್ರೀ ಹೆನ್ನೆ ವಿಠ್ಠಲಗೆ ವಂದನೆ 5
--------------
ಹೆನ್ನೆರಂಗದಾಸರು
ಎಂತು ವರ್ಣಿಸಲಮ್ಮ ನಾನು ಕಂತುಜನಕನಾನಂತನಗಮ್ಯನನÀಂತವತಾರನಪ. ಸಂತತ ಸಜ್ಜನರಂತರಂಗದಲಿ ನಿಂತಿಹ ಲಕ್ಷ್ಮೀಕಾಂತನ ಮಹಿಮೆಯ ಅ.ಪ. ನೀರೊಳಾಡುತ ಭಾರವ ಹೊರೆವ ಧಾರುಣಿಯ ಪೊರೆವ ಘೋರ ರೂಪದಲಿ ಭೂಮಿಯನಳೆವ ಕ್ರೂರನೃಪರಳಿವ ಆ ರಾವಣನ ಬಲವ ಮುರಿವ ಚೋರ ದಿಗಂಬರವ ಚಾರು ಕುದುರೇಯನೇರಿ ಬರುವ ಸುಕು- ಮಾರ ಜಗದೊಳು ಶೂರ ಜಾರುವ ಕಠಿಣಶರೀರದಿ ಭೂಮಿಯ ಸೇರುವ ಕಂಬವಿದಾರಣ ಮಾಡುವ ಮೀರುವಭುವನಕೆ ತೋರುವ ಪರಶುವ ಜಾರ ವಸನಹೀನ ಧೀರ ಸುಅಶ್ವವನೇರಿ ಮೆರೆವನ 1 ನಿಗಮೋದ್ಧರಿಸುವ ನಗವನು ತರುವ ಜಗತಿಯುದ್ಧರಿಸುವ ಮಗುವ ಪಾಲಿಸುವ ಮಾಯದಿ ಬೆಳೆವ ದುಗುಡ ನೃಪಕುಲವ ಬಗಿದು ಭಾಸ್ಕರ ತನಯನಿಗೊಲಿವ ನೆಗಹಿ ಗೋವರ್ಧನವ ಬಗೆಬಗೆ ಮಾತಾಡಿ ಸುಗುಣ ವಾಜಿಯನೇರಿ ಬಂದ ಸಚ್ಚಿದಾನಂದ ಹುಗಿದು ಸೋಮಕನ ಅದ್ರಿಗೆ ಬೆನ್ನಿತ್ತು ಅಗಿದು ಭೂಮಿಯ ನರಮೃಗನಾಗುತ ಗಗನಕೆ ಬೆಳೆದು ಘಾತಿಸಿ ಕ್ಷತ್ರಿಯರ ರಘುವರ ಯದುಪತಿ ವಿಗತವಸನನಾಗಿ ಜಗಕೆ ಬಲ್ಲಿದ ಹಯವೇರಿ ಬರುವನ 2 ನಳಿನೋದ್ಭವನಿಗಾಗಮವನಿತ್ತ ಗಿರಿಯ ನಿಲಿಸಿತ್ತ ಇಳೆಯ ಕದ್ದೊಯ್ದ ದಾನವನಳಿದ ನರಹರಿ ತಾನಾದ ಬಲಿಮುಖವ ಮುರಿದ ಖಳಭೂಪರಳಿದ ದÀಶಶಿರನÀಳಿದ ಕೊಳಲನೂದಿದ ದುಷ್ಟ ಲಲನೇರ ವ್ರತವಳಿದ ಕಲಿಯ ಮರ್ದಿಸಿದ ಹೊಳೆವ ಬೆನ್ನಲಿ ಗಿರಿತಳವೆತ್ತಿದನ ನೆಲನ ಬಗಿದು ಕಂಬದಲಿ ಬಂದವನ ಬೆಳೆದ ಬೊಮ್ಮಾಂಡಕೆ ಭಾರ್ಗವಾಧಿಪನ ಬುದ್ಧ ಕಲ್ಕಿ ಚೆಲುವ ಹಯವದನನ ಬಲ್ಲಿದನ 3
--------------
ವಾದಿರಾಜ
ಕೋಳಿ ಕೂಗಿತು ತಂಪು ಗಾಳಿ ಬೀಸಿತು ಏಳಯ್ಯಾ ಬೆಳಗಾಯಿತು ಪ ಧೀರ ಸೋಮಕನಿರಿದು ಮೇರು ಬೆನ್ನಲಿ ಪೊತ್ತು ಘೋರ ಹಿರಣ್ಯಾಕ್ಷ ಕಶ್ಯಪರ ಶೀಳಿ ಮಾರಿ ಬಲಿಯನ್ನೊತ್ತಿ ಕಂಸ ದಾನವರನಳಿದು ಶೇರಿ ತ್ರಿಪುರರ ದಹಿಸಿ ಕ್ರೂರ ದುಷ್ಟರ ತರಿದು ಭಾರಿ ಆಯಾಸದಲಿ ನಿದ್ರೆ ಹತ್ತಿರೆ ಸ್ವಾಮಿ1 ವೇದವನು ತಂದೆ ಸುರವೃಂದಕಮೃತವನಿತ್ತೆ ಮೇದಿನಿಯ ನೆಲಸಿ ಪ್ರಲ್ಹಾದನಾ ಪೊರೆದೆ ಮೋದಿಗಂಗೆಯ ಜನಿಸಿ ಭೂದಾನ ಮಾಡಿದೆ ಮೋದದಿಂದಜಪದವಿಯ ಆಂಜನೇಯಗಿತ್ತೆ ಪೋದ ಮಕ್ಕಳ ತಂದು ಗುರುಪತ್ನಿಗೇ ನೀಡಿ ವೇದನುತ ನಿರ್ವಸನ ಸುಹಯಾರೂಢನೇ2 ಶರಣಜನ ಬಂದು ಸುಸ್ವರದಿಂದ ಪಾಡುತಿರೆ ಪರಿ ಕಣ್ಣಮುಚ್ಚುವುದೇ ಸರಿಯೆ ಬೆನ್ಮರೆಮಾಡಿ ಮಣ್ಣನಾಡಾಡುವುದೇ ಉರಿಮೋರೆಯಿಂದ ತರಳಾಟ ಆಡುವುದೇ ಪರಶು ಶರ ಚಕ್ರಗಳ ಪಿಡಿದು ಉಡಿಗೆಯ ಮರೆತೆ ಭರದಿ ತುರಗವನೇರು ನರಸಿಂಹ ವಿಠ್ಠಲಾ 3
--------------
ನರಸಿಂಹವಿಠಲರು
ದೇವಿಯನೆತ್ತಿದನಾರೆಲಮ್ಮಾ ನಮ್ಮದೇವ ಸಿರಿಪತಿ ಕಾಣೆಲಮ್ಮಾದೇವಿ ನಮ್ಮ ದೇವರು ಬಂದರು ಕಾಣಮ್ಮ ಪ.ಕಣ್ಣೆವೆ ಇಕ್ಕದೆ ಮಾತಿಗೆ ಮನವಿಟ್ಟಸಣ್ಣದೊಡ್ಡನಾಹನಾರೆಲಮ್ಮಉನ್ಮತ್ತಖಳಸೋಮಕನವೈರಿಹೊಸ ಹೊನ್ನಬಣ್ಣದ ಮಚ್ಛವತಾರಿ ಅಲ್ಲೇನಮ್ಮ 1ಸಾರಿಸಾರಿಗೆ ಉಯ್ಯಾಲಿಡುತಲಿ ಮುಸುಡನುತೋರಿ ಜಾರಿದವನಾರೆಲಮ್ಮಆರಿಗು ಮೀರಿದಮಂದರಬೆನ್ನಲಿಭಾರಾಂತ ಶ್ರೀಕೂರ್ಮನಲ್ಲೇನಮ್ಮ 2ಘರ್ಘರಿಸುತ ಕಾಲಕೆದರಿ ಜಗದಗಲಭೋರ್ಗರೆವುತಲಿಹನಾರೆಲಮ್ಮದುರ್ಘಟ ದೈತ್ಯನ್ನ ದಂಷ್ಟ್ರದಿ ಚುಚ್ಚಿದನಘ್ರ್ಯವರಾಹದೇವನಲ್ಲೇನಮ್ಮ3ಕೂಗುತÀ ಕೊಲ್ಲುತ ಕಿಡಿಯನುಗುಳುತಲಗುಬಗೆದವನಾರೆಲಮ್ಮನೀಗಿದುಷ್ಟನ ಶರಣಾಗತ ಶಿಶುರಕ್ಷಯೋಗಿನರಹರಿ ಅಲ್ಲೇನಮ್ಮ4ಭೂಮಿ ಆಕಾಶಕೆ ಒಬ್ಬನೆ ಹಬ್ಬುತಸೀಮೆಯ ಮುಚ್ಚುವನಾರೆಲಮ್ಮಹೇಮಹೋಮದಿಮತ್ತಬಲಿಯನೊತ್ತ್ಯಾಳಿದಸಾಮದ ವಾಮನನಲ್ಲೇನಮ್ಮ 5ಸಾವಿರ ಕೈಯ್ಯವನಳಿದು ಕಡಿದು ತಾನೆಹೇವದಟ್ಟಿವನಾರೆಲಮ್ಮಈ ವಸುಧೆಯ ಭಾರವಿಳುಹಿದ ವೀರ ಭೂದೇವಕುಲದ ರಾಮನಲ್ಲೇನಮ್ಮ 6ಕರಡಿಕೋಡಗಕೊಂಡು ಕಡಲೊಳಗಾಡಿದಹುರುಡಿಲ್ಲದ ಬಿಲ್ಲನುಳ್ಳನಾರೆಲಮ್ಮಸರಕುಮಾಡಿ ರಕ್ಕಸರನೊದ್ದಸಮೀರಜವರದ ಸೀತಾರಾಮ ಅಲ್ಲೇನಮ್ಮ 7ಬಂಡಿ ಕುದುರಿ ಗೂಳಿ ಹಕ್ಕಿ ಸೀಳಿ ಗೊಲ್ಲಹೆಂಡಿರೊಳಾಡುವನಾರೆಲಮ್ಮಪಾಂಡವಪಾಲ ರುಕ್ಮಿಣಿ ವಿಜಯನುಬಂಡಿಕಾರ ಕೃಷ್ಣನಲ್ಲೇನಮ್ಮ 8ಉಡುಗೆಯನುಡದಂತರಾಟದಿ ಕದ ತಪ? ವಿದ್ದಮಡದೇರ ಕೆಡಿಸಿದನಾರೆಲಮ್ಮಮೃಡಸುರರುಬ್ಬಸಬಡಿಸುವ ಬೌದ್ಧರಕೆಡಿಪ ಮೋಹನ ಬುದ್ಧನಲ್ಲೇನಮ್ಮ 9ವಾಜಿಯನೇರಿ ಠೇವಿಡಿದು ಗಡಬಡಿಸಿಮೂಜಗ ಸುತ್ತುವನಾರೆಲಮ್ಮಮಾಜಿದ ಪುಣ್ಯವನೆತ್ತಿ ಕಲಿಯ ಕೊಂದಸೋಜಿಗದ ಕಲ್ಕಿ ಅಲ್ಲೇನಮ್ಮ 10ಮುಗ್ಧರಾಗಲಿ ಪ್ರೌಢ ಬಂಟರಾಗಲಿ ಕರೆದರೆದ್ದೋಡಿ ಬಂದವನಾರೆಲಮ್ಮಸಿದ್ಧಪುರುಷ ಪ್ರಸನ್ವೆಂಕಟಪತಿಸಾಧಿಸಿ ಪಾಡಿದಲ್ಲಿದ್ದನಮ್ಮ 11
--------------
ಪ್ರಸನ್ನವೆಂಕಟದಾಸರು