ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಕ್ಕುವ ತುಪ್ಪಕೆ ಕೈಯಿಕ್ಕುವೆ ನಾನು ಪ ಚಕ್ರಧರ ಪರಮಾತ್ಮನೊಬ್ಬನಲ್ಲದಿಲ್ಲವೆಂದು ಅ.ಪ ಕರಿ ಮೊರೆಯಿಡಲು ಕಂಡುನೆರೆದ ಬೃಂದಾರಕರು ಅಂದು ಪೊರೆದರೆ ಬಂದುಕರದಲೊಪ್ಪುವ ಮುತ್ತಿಗೆ ಕನ್ನಡಿಯ ನೋಡಲೇಕೆಭರದಿ ಗಜೇಂದ್ರನ್ನ ಕಾಯ್ದ ಹರಿಯೆ ಪರದೈವವೆಂದು 1 ಮತಾಂತರದಲ್ಲಿ ಭಗವದ್ಗೀತೆಯನದ್ವೈತವೆಂದುವಾತಗುದ್ಧಿ ಕೈಗಳೆರಡು ನೋಯಿಸಲೇಕೆ‘ಏತತ್ಸರ್ವಾಣಿ ಭೂತಾನ್ಯೆಂ’ಬ ಶೃತ್ಯರ್ಥವ ತಿಳಿದುಜ್ಯೋತಿರ್ಮಯ ಕಿರೀಟಿ ಅಚ್ಯುತಾಂತರ್ಯಾಮಿಯೆಂದು 2 ತಾನೆ ಪರಬ್ರಹ್ಮನೆಂಬ ಮನುಷ್ಯಾಧಮನು ತಾನುಜ್ಞಾನಹೀನನಾಗೆ ಲೋಕದಾನವನೆಂದುಭಾನು ಕೋಟಿ ತೇಜೋತ್ತಮ ವರದ ಶ್ರೀಹರಿಯೆಂಬಜ್ಞಾನವೆ ಕೈವಲ್ಯದ ಸೋಪಾನವೆಂದು ಸಭೆಯಲ್ಲಿ 3 ತಪ್ಪಾದ ವಿಚಾರದಿಂದ ತತ್ತರವ ಪಡಲೇಕೆತಪ್ಪು ಶಾಸ್ತ್ರ ವೋದಿ ದೇಹ ದಂಡಿಸಲೇಕೆಕಲ್ಪ ಕಲ್ಪಾಂತರದಲ್ಲಿ ವಟಪತ್ರಶಯನನಾಗಿಮುಪ್ಪು ಮೊದಲಿಲ್ಲದ ಮುಕುಂದನಲ್ಲದಿಲ್ಲವೆಂದು 4 ಶಕ್ತಿ ಶೂನ್ಯನಿವನೆಂದು ಸಂಶಯವ ಪಡಲೇಕೆಕೃತ್ಯದಿಂದ ನೋಡೆ ಶ್ರೀಕೃಷ್ಣನೊಬ್ಬನೆಹತ್ತಾರು ಸಾಸಿರ ನೂರು ಗೋಪಸ್ತ್ರೀಯರನ್ನು ಆಳಿನಿತ್ಯ ಬ್ರಹ್ಮಚಾರಿಯೆನಿಪ ನಿಷ್ಕಳಂಕನೊಬ್ಬನೆಂದು 5
--------------
ವ್ಯಾಸರಾಯರು
ಹರಿಸ್ಮರಣೆ ಪೂರಣ ಕರತನ್ನಿ ಧ್ರುವ ಕರತನ್ನಿರೊ ವರಗುರು ಕೃಪೆಯಿಂದ ಗುರುವರ ಮೂರುತಿ ಕರುಣಾನಂದ 1 ಕರುಣಿಸಿ ನೋಡಲು ಬಾಹುದು ಪುಣ್ಯ ಶರಣ ಜನರಿಗಿದು ತಾರ್ಕಣ್ಯ 2 ತಾರ್ಕಣ್ಯಂಬುದು ತರ್ಕರಹಿತ ಸರ್ಕನೆ ತಿಳಿವದು ತನ್ನೊಳು ಗುರುತ 3 ಗುರ್ತವಾಗಲು ನಿಜ ಹಿತಾರ್ಥ ಅರ್ತವಗಿದು ಸ್ವಸುಖ ಪರಮಾರ್ಥ 4 ಪರಮಾರ್ಥವು ಪರಗತಿ ಸಾಧನ ಪರಲೋಕಕೆ ಐದುವ ಸೊಪಾನ 5 ಸೋಪಾನವೆ ಸುಲ್ಲಭ ಸುಪಥ ಉಪಾಯದಲಿ ತಿಳಿಯಲು ಸ್ವಹಿತ 6 ಸ್ವಹಿತ ಮಾರಿಕೊಂಬುದೇ ಸುಖ ಸಾಹ್ಯ ಮಾಡುವ ಶ್ರೀ ಗುರುಕುಲತಿಲಕಾ 7 ಶ್ರೀಗುರು ಸೇವೆಯ ಮಾಡಿರೊ ಬ್ಯಾಗ ಜಗದೊಳಗಿದು ಮಹಾ ಪುಣ್ಯದ ಯೋಗ 8 ಯೋಗವೆ ಮಹಾ ನಿಜ ಭಕ್ತರ ಪ್ರಾಣ ಸುಗಮ ಸುಪಥ ಸದ್ಗತಿ ಸಾಧನ 9 ಸಾಧನ ಪಡೆವದು ಗುರುದಯ ಕರುಣ ಸದಮಲ ಸುಖ ಸುಜ್ಞಾನದ ಸ್ಪುರಣ10 ಸ್ಪುರಣ ಸುಫಲಿತ ಸುಜನರ ಹೃದಯ ಸುರ ಮುನಿ ಜನರಾನಂದದ ಉದಯ 11 ಉದಯವಾಯಿತು ಮಹಿಪತಿ ಮನದೊಳಗೆ ಸದೋದಿತವಾಯಿತು ಗುರುಕೃಪೆಲೆನಗೆ 12 ಎನ್ನೊಳು ದೋರಿತಾನಂದದಲಹರಿ ತನ್ನಿಂದಲಿ ತಾನೊಲಿದ ಶ್ರೀ ಹರಿ 13
--------------
ಕಾಖಂಡಕಿ ಶ್ರೀ ಮಹಿಪತಿರಾಯರು