ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಡಲೆರಡಂತೆ ಅಸುವೊಂದಂತೆ ನುಡಿಯಿದು ನಿಜವೇ ಪೇಳೇ ಗೋಪಮ್ಮ ಪ ನಡೆ ನುಡಿ ಭಾವಗಳೊಂದೇಯಂತೆ ಹುಡುಗನೇನೇ ಕೃಷ್ಣ ಪೇಳೇ ಗೋಪಮ್ಮ ಅ.ಪ ಸೋದರಿಯರು ಇದ ಹೇಳುವರಮ್ಮ ನಾದ ನರ್ತನ ದೇಹಕಾಂತಿಗಳಲ್ಲಿ ಭೇದವಿಲ್ಲೆಂಬರು ನಿಜವೇನಮ್ಮಾ 1 ಬಾಲೆಯು ತಾನೆ ಗೋಪಾಲನೆನುವಳಂತೆ ಬಾಲಕೃಷ್ಣನು ರಾಧೆ ತಾನೆಂಬನಂತೆ ಬಾಲನಾರಿದರಲ್ಲಿ ಬಾಲೆಯಾರಿವರಲ್ಲಿ ಮೂಲತತ್ವವ ನೀನೆ ಹೇಳೇ ಗೋಪಮ್ಮ 2 ಯುಗ ಯುಗದಲ್ಲಿ ತಾನವತರಿಸುವ ಕೃಷ್ಣ ಜಗದೀಶ್ವರನೆ ತಾದಿಟವಮ್ಮ [ಮಿಗೆ] ಭಾಗ್ಯವೆ ನಿನ್ನದಾಗಿಹುದಮ್ಮ 3 ನಿರುಪಮ ಭಕ್ತಿಯಮೂರ್ತಿಯು ರಾಧೆ ಮುರಳೀಧರನಲಿ ಒಂದಾಗಿಹಳು ಅರಿತುದ ಪೇಳ್ವೆನು ಮಾಂಗಿರಿರಂಗನ ಶರಣರಿಗೀತತ್ವ ಕರಗತವಮ್ಮಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾಕೆಮ್ಮನಗಲಿ ಪರಲೋಕ ಸೇರಿದೆ ಗುರು ಐಕೂರು ನರಸಿಂಹಾರ್ಯ ಪ ಲೌಕಿಕವ ಬಿಟ್ಟು ಸುವಿವೇಕ ನಡೆವ ವಾಕು ಪೇಳ್ವರ ಕಾಣೆ ಲೋಕದೊಳು ನಿನ್ಹೊರತು ಅ.ಪ ಅತಿಮಂದರಾದೆಮಗೆ | ಶ್ರುತಿ ಶಾಸ್ತ್ರ ಪುರಾಣ ಕಥೆ ದಾಸ ಕವಿತೆ ಸತತ ಪೇಳಿ ಮತಿವಂತರೆನಿಸಿ ಸ್ಪÀತ್ವಥ ಪಡಿಸಿ ಮುಂದೆ ಸ ದ್ಗತಿ ಕಾಣಿಸದೆ ಜಗದಿ ಹತಭಾಗ್ಯರನು ಮಾಡಿ 1 ಸಾಧುವರ್ಯನೆ ನಿಮ್ಮ ಪಾದವೇ ಗತಿ ಎಂದು ಸಾದರದಿ ನಿರುತ ನೆರೆನಂಬಿದಂಥ ಸೋದರಿಯರು ಪಂಚ ಭೇದ | ತರತಮಜ್ಞಾನ ಬೋಧಿಸುವರಿಲ್ಲೆಂದು ಖೇದದಿಂದಿರುತಿಹರು 2 ಸೂರಿವರ ನಿನ್ನಗಲಿದಾರಭ್ಯ ಧರೆಯೊಳಗೆ ನೀರಿಂದ ದೂರಾದ ಮೀನಿನಂತೆ ಘೋರ ದುಃಖದಿ ಮುಳುಗಿ ಪಾರುಗಾಣದೆ ದಿಕ್ಕು ತೋರದಾಗಿಹುದೀಗ ಬಾರೋ ಮನಮಂದಿರದಿ 3 ತನುವು ತ್ಯಜಿಸಿದರೇನು | ಅನಿಮಿಷಾಂಶನೆ ನಮ್ಮ ಕನಸು ಮನನಿನೊಳಗೆ ಸುಳಿದಾಡುತ ಕೊನೆಯಲ್ಲಿ ಹರಿನಾಮ | ಅನುಗ್ರಹಿಸುವೆವು ಎಂಬ ಘನ ಅಭಯ ನೀಡೆಂದು ಮಣಿದು ಪ್ರಾರ್ಥಿಪೆನಯ್ಯ 4 ಪುಣ್ಯಪುರುಷನೆ ನಮಗೆ ಇನ್ನಾವ ಬಯಕಿಲ್ಲ ಜನ್ಮ ಜನ್ಮಕೆ ನಿನ್ನ ಚರಣಾಬ್ಜವ ಚನ್ನಾಗಿ ಸೇವಿಸುವ ಘನ್ನ ಸುಖಗರಿಯೆಂದು ನಿತ್ಯ 5 ನಿನ್ನಿಂದ ಸತ್‍ಶ್ರವಣ | ನಿನ್ನಿಂದ ಅಘಹರಣ ನಿನ್ನಿಂದ ಶ್ರೀವಾಯು ಹರಿಯಕರುಣ ನಿನ್ನಿಂದ ಉಪದೇಶ \ ನಿನ್ನಿಂದ ಭವನಾಶ ನಿನ್ನಿಂದ ಬಿಂಬ ದರ್ಶನವು ನಮಗಿನ್ನು 6 ಪಾಮರರ ಅಪರಾಧ ನೀ ಮನಕೆ ತಾರದಲೆ ಹೇಮ ಕಾಮಿನಿ ಭೂಮಿ ಈಮೂರರ ವ್ಯಾಮೋಹವನೆ ಬಿಡಿಸಿ | ಶಾಮಸುಂದರ ಭಕ್ತ ಸ್ತೋಮ ಸಂಗದೊಳಿಟ್ಟು ಪ್ರೇಮದಲಿ ಪಿಡಿಕೈಯ್ಯ 7
--------------
ಶಾಮಸುಂದರ ವಿಠಲ
ರಚ್ಚೆ ಕಟ್ಟೆ ಪುರಾಣ ರಾದ್ಧಾಂತವು -ಇದು ಪ ಹುಚ್ಚುತನದಲಿ ನೀ | ಚೋಚ್ಚ ನುಡಿಗಳನಾಡುವುದು ಅ.ಪ ನವನವ ಆಸ್ತಿಗಳೆಲ್ಲ | ಇವನ ಮನೆಗೆ ಸೇರಿ ಬಂತು 1 ಸೊಟ್ಟಮೂತಿ ನಾಗಪ್ಪನ ಸೋದರಿಯರು ಏನು ಹೇಳಲಿ 2 ಇವನಿಗೆ ಬಂತು ಮತ್ತೆ ನಾವು ಬಡವರು ನಮಗೆಲ್ಲಿಂದ ಬಹುದು? 3 ದುರ್ಯೋಧನ ಯೋಗ್ಯ ಕುಂತೀತರಳರದೇ ಅನ್ಯಾಯ ಕೃಷ್ಣನು ನೆರೆ ಮೋಸಗಾರನು ಭಾರತ ಕಥೆಯೆಂಬುವುದು4 ಮೋಸಗಾರರೀವೂರೆಲ್ಲ ಆಶೆ ಪಾತಕರು 5 ತಂಗಿ ಆಸ್ತಿ ಸೇರಿತಿವಗೆ ಭಂಗಿ ಕೋರ ವೆಂಕಟರಾಯ ಮಂಗಿ ಸಂಗದಿಂದಲೀ ಕಮಂಗನಾನನು 6 ಮಧ್ವರಾಯನ ಮಗನ ಕಥೆ ಏನು ಹೇಳೋಣ 7 ಕಾಸಿದ್ದವರೇನು ಮಾಡಿದರೂ ಮಾಡಬಹುದು 8 ದಾರಿಹೋಕರೆಲ್ಲ ಕೂಡಿ ಭಾರಿ ಭಾರಿ ಮಾತುಗಳಾಡಿ ಸೂರೆಗೊಂಬುವರು ಪಾಪ ಶರಧಿಯನ್ನು 9 ಶರಣರ ದೂರಿಪಾತಕಕ್ಕೆ ಭಾಗಿಗಳಹರು 10
--------------
ಗುರುರಾಮವಿಠಲ