ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮಶೋಧನೆ ಆದ ವಿಷಯಗಳು ಬಾಧಿಸದಂತೆನ್ನ ಮಾಧವ ನೀ ಪೊರೆಯೋ ದಯಾನಿಧೇ ಪ ಕ್ರೋಧವ ಬಹುತರ ಸಾಧಿಸಿ ಮನದಲಿ ಖೇದವ ಪೊಂದಿದೆನೊ ರಮಾಧವ ಅ.ಪ ಹೆಜ್ಜೆಯನರಿಯದೆ ಗೆಜ್ಜೆಕಟ್ಟಿಹೆನೆಂದು ಗರ್ಜಿಸುತಿರುವರು ದುರ್ಜನರೆಲ್ಲರು ಮರ್ಜಿಯನರಿಯುವ ಸಜ್ಜನರೆನ್ನನು ವರ್ಜಿಸ ಬಿಡದಿರೊ ಮೂರ್ಜಗದೊಡೆಯನೆ 1 ರೀತಿಯನರಿಯದೆ ಆತುರದಲಿ ಮನ ಸೋತೆನೆನ್ನುತಿಹರೋ ದುರಾತ್ಮರು ಖ್ಯಾತಿಗಾಗಿ ಧನ ಪ್ರೀತಿಗಾಗಿ ಸಭ್ಯ ನೀತಿಯ ಮಾರ್ಗದಿಂದ ಚಲಿಸದೆ ಪೊರೆಯೊ 2 ನಿನ್ನ ನಾನರಿತೆನೊ ಎನ್ನನರಿತು ನೀ ಪ್ರ ಸನ್ನನಾಗಿ ನಿನ್ನ ಸೇವೆಯ ನೀಡಲು ಅನ್ಯರಂತಿರಲಿ ನಿನ್ನ ಮನಕೆ ನಾ ಅನ್ಯನಾಗದಂತೆ ಸತತವು ಕರುಣಿಸೊ 3
--------------
ವಿದ್ಯಾಪ್ರಸನ್ನತೀರ್ಥರು