ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿಂದ ಈ ವಿಧ ಸಂಭ್ರಮ ನೋಡುವುದಾನಂದ ಪ ನೋಡಿ ಈ ವಿಧ ಚಂದ ನೋಡಬಾರದೊ ಬೇರೊಂದ ಅ.ಪ ಉತ್ತಮ ಕಲ್ಪದ ಮುತ್ತುರತ್ನಗಳು ಹತ್ತಾರೆಡೆಗಳಲಿ ಉತ್ತಮ ತೀರ್ಥರ ಚಿತ್ತದ ಮೂರುತಿ ಪುತ್ಥಲಿ ರೂಪದಿ ಮತ್ತೆಲ್ಲಿರುವುದೊ 1 ಕಾಲ ನಿಯಾಮಕ ಕಾಲದ ಗತಿಯನು ಪಾಲಿಸುವುದೇ ತರವು ಮೂಲೆ ಮೂಲೆ ಕ್ಷೇತ್ರಗಳನೆ ಬಿಟ್ಟು ಈ ಮೂಲ ಮಂದಿರಕೆ ಬಂದಿರುವಂತಿದೆ 2 ಚಂದ್ರನ ಕುಲದಲಿ ಜನಿಸಿದ ದೇವಗೆ ಚಂದ್ರಿಕೆಯಲ್ಲವೆ ಪ್ರಿಯತಮವು ಚಂದ್ರಿಕಾ ಸೊಬಗಿಲಿ ಮೆರೆದು ನಲಿದ ಶ್ರೀ ಚಂದ್ರಿಕಾಚಾರ್ಯ ಪ್ರಸನ್ನನ ವೈಭವ 3
--------------
ವಿದ್ಯಾಪ್ರಸನ್ನತೀರ್ಥರು
ನಾರೆ ಸಖಿ ಪ. ಪರಮಪುರುಷನಿವ ಕೇಳೆ ಸಖಿಅ.ಪ. ಕೆಂದಾವರೆಯಾ ಕರೆದೊಳು ಕೊಳಲಾ ನಂದದೊಳೂದುವನಾರೆ ಸಖಿ ಇವ ಚಂದ್ರವಂಶೋದ್ಭವ ಗುಣಸಾಂದ್ರ ಶ್ರೀ ಕೃಷ್ಣಾ ನಂದನ ಕಂದನಿವ ಕೇಳೆ ಸಖಿ1 ಕಂಗೊಳಿಸುವ ಬೆಳದಿಂಗಳ ಸೊಬಗಿಲಿ ಶ್ರೀಂಗಾರ ಪುರುಷನಾರೆ ಸಖಿ ಇವ ಮಂಗಳ ಮೂರುತಿ ಜನಂಗಳಿಗೊಡೆಯ ರಂಗನಾಥನಿವ ಕೇಳೆ ಸಖಿ 2 ಕೊರಳೊಳು ಧರಿಸಿಹ ವರ ತುಳಸಿಯ ಸರ ವರ ಕೌಸ್ತುಭಧರನಾರೆ ಸಖಿ ಇವ ಕರೆದಾದರಿಶಿ ಭಕ್ತರ ಸಲಹುವ ವರದ ಶ್ರೀ ಶ್ರೀನಿವಾಸ ಕೇಳೆ ಸಖಿ 3
--------------
ಸರಸ್ವತಿ ಬಾಯಿ