ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯಬೇಕೆನ್ನ ನೀನು ಶ್ರೀ ಗುರು ಎನ್ನ ಧ್ರುವ ಪಕ್ಷ ಪಾಂಡವ ಪ್ರಿಯ ಅಕ್ಷಯಾಪದನಿಶ್ಚಯ ಲಕ್ಷುಮಿ ಸುಹೃದಯ ರಕ್ಷಿಸೊ ನೀ ಎನ್ನಯ್ಯ 1 ಪವಿತ್ರ ಪ್ರಣವರಿಸಿ ಸುವಿದ್ಯದೊಳು ಬೆರಸಿ ಭವ ಭಯವು ಹಿಂಗಿಸಿ 2 ಸೋಹ್ಯ ಸೊನ್ನೆಯದೋರಿ ದಯಮಾಡೊ ಮುರಾರಿ ಸಾಹ್ಯ ಮಾಡೊ ಸಹಕಾರಿ ಮಹಿಪತಿ ಸ್ವಾಮಿ ಶ್ರೀಹರಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯಜಯವೆನ್ನಿರಯ್ಯ ಜ್ಯೋತಿರ್ಮಯಗೆ ಜಯಜಯವೆನ್ನಿರೊ ಜಯಜಯವೆನ್ನಿರೊ ಧ್ರುವ ಕಂಗಳದೆರಸಿ ಅಂತರಂಗದೋರಿದವಗೆ ಮುಂಗಡÀಲೆ ಇದ್ದು ಸುಸಂಗದೋರಿದವಗೆ ಹಿಂಗಿಸೆನ್ನ ಭವಭಯ ಭಂಗಮಾಡಿದವಗೆ ಮಂಗಳಾತ್ಮಕನ ಸಂಗಸುಖ ಬೀರಿದವಗೆ 1 ಆರು ಅರಿಯದ ವಸ್ತು ಸಾರಿದೋರಿದವಗೆ ಶಿರದಲಿ ಕರವಿಟ್ಟು ಕರುಣಿಸಿದವಗೆ ಮೂರುಗುಣಕೆ ಮೀರಿದ ತಾರಕ ಗುರುವಿಗೆ ಸಾರವಾಡದಲಿ ನಿಂದು ಪಾರದೋರಿದವಗೆ 2 ಸೋಹ್ಯ ಸೊನ್ನೆಯದೋರಿಸಿನ್ನು ಸಾಹ್ಯ ಮಾಡಿದವಗೆ ಗುಹ್ಯ ಗುರುತ ತೋರಿದ ಗುರುಮೂರ್ತಿಗೆ ಕೈಪಿಡಿದು ಮಹಿಪತಿಗೆ ದಯಮಾಡಿದವಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು