ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭುವನವನಾ ಯಂಧ್ಯಾಗಿದ್ದರೆಕರ|ಸುವದು ನಿರಂತರ ಲೋಕದಲೀ ||ಅವಿದಿತ ನಾನು ಅದನ್ನ ಆಪನಿತು |ವಿವರಿಸುವೆನು ಕಲಿಗಳು ಕೇಳೀ ಪರವಿಮೂಡವ ಮುಂಚೇಳುತ ಶ್ರೀಮಾ |ಧವನ ಸ್ಮರಿಸುತಿರಲದೆ ಭವನಾ ||ಯುವತಿಯರಾ ವ್ಯಾಳ್ಯದಲಿ ಮೊಸರು ಮಥ |ನವ ಮಾಡುತಿಹರು ಅದೆ ಭವನಾ 1ಶಂಖ ಚಕ್ರ ಮೊದಲಾಯುಧ ಧರಿಸದೆ |ಮಂಕುಗಳಿರುತಿಹರದೇ ವನಾ ||ಸಂಕಟ ಚೌತೀ ಶಿವನಿಸಿ ಭೂತ ಶ |ಶಾಂಕನ ಪೂಜಿಪರದೇ ವನಾ 2ಅಂಗನಿಯರು ತಿಲಕಾಯುಧ ಕುಂಕುಮ |ಶ್ರಿಂಗರವಾಗಿ ಹರದೆ ಭವನಾ ||ಅಂಗಣದಲಿ ವೃಂದಾವನ ಗೋವ್ಗಳು |ರಂಗವಲಿಕ್ಕುವರದೆ ಭವನಾ 3ಸರುವರು ಸರ್ವದ ದುಷ್ಟ ಶಬ್ದ ಉ |ಚ್ಚರಿಸುತಲಿಪ್ಪರು ಅದೇ ವನಾ ||ಹರಿಗತಿ ಪ್ರಿಯಕರ ತುಲಸಿಲ್ಲದ ಮಂ |ದಿರವೆ ನಿಶ್ಚಯವಾಗಿ ವನಾ 4ರಾಮಾರ್ಪಿತದನ್ನವ ಹೋಮಿಸಿದ |ಧೂಮ ವ್ಯಾಪಿಸಿಹದದೆ ಭವನಾ ||ಭಾಮಿನಿಯರು ಕೆಲಸವ ಮಾಡುತಖಳ|ಭೀಮನ ಸ್ಮರಿಸುವರದೆ ಭವನಾ 5ದೇವಪೂಜೆ ನೈವೇದ್ಯವು ವೈಶ್ವ |ದೇವ ಯಂಬದಿಲ್ಲದೇ ವನಾ ||ಆವ ಕಾಲಕೂ ವೇದ ವೇದ್ಯ ಭೂ |ದೇವರು ಬರದಿಹದದೇ ವನಾ6ವೇದ ಪುರಾಣದ ಘೋಷವು ಸರ್ವದ |ಭೂ ದಿವಿಜರ ಸಂದಣೆ ಭವನಾ ||ವಾದಿಗಳ ಹಳಿದು ಮಧ್ವರಾಯರಾ |ರಾಧನೆ ಮಾಡುವರದೆ ಭವನಾ 7ಹಿಕ್ಕದೆ ತಲಿ ಕಚ್ಚಿಲ್ಲದೆ ತಿರುಗುತ |ಮಕ್ಕಳನಳಿಸುವರದೇ ವನಾ ||ಸೊಕ್ಕಿಲಿ ಗಂಡತ್ತಿಗಳಿಗೆ ಬೈತಿಹ |ರಕ್ಕಸಿ ಹೆಂಗಸಿಹದೇ ವನಾ 8ತಂಬೂರಿ ತಾಳಂಗಳ ಸುಸ್ವರ |ತುಂಬಹದೆಂದೆಂದು ಭವನಾ ||ಉಂಬುವಾಗಪ್ರತಿಪ್ರತಿ ತುತ್ತಿಗೆ | ಪೀತಾಂಬರನ ಸ್ಮರಿಪರದೆ ಭವನಾ 9ರೌಚ ದಂತ ಧಾವನ ಮೊದಲಾದ ಸ |ದಾಚಾರಿಲ್ಲಲ್ಲದೇ ವನಾ ||ಯಾಚಕರಿಗೆ ತುತ್ತನ್ನವಿಲ್ಲ ಮ |ತ್ತ್ಯೋಚನಿ ಯಾತಕೆ ಅದೇ ವನಾ 10ಹರಿದಿನದಲಿ ಸರ್ವರು ನಿರ್ಜಲ ಜಾ |ಗರವನು ಮಾಡುವರದೇ ಭವನಾ ||ಮರುದಿನ ಭೋಜನ ಸೂರ್ಯೋದಯ ಕಂ |ತರಿಸದೆ ಮಾಡುವರದೆ ಭವನಾ 11ಉದಯಾಗಿ ತಾಸಾದರನ್ನನರ|ಸುದತಿಯರೇಳದ ಮನೇ ವನಾ ||ಪದುಮನಾಭ ನಾಮೋಚ್ಚಾರಣೆ ಯಂ |ಬದು ಎಂದೆಂದಿಲ್ಲದೇ ವನಾ 12ಪ್ರತಿದಿನ ಧರ್ಮಕೆ ಪ್ರತಿಕೂಲಾಗದ |ಸತಿಸುತರಿದ್ದರೆ ಅದೆ ಭವನಾ ||ವೃತಗಳು ಸದ್ದಾನಗಳು ತಿಳಿದನವ |ಕತ ಮಾಡುತಿಹ್ಯರದೆ ಭವನಾ 13ರೊಕ್ಕವಿದ್ದು ಸದ್ವ್ಯಯವಾಗದ ಯಳಿ |ಮಕ್ಕಳಿಲ್ಲದಿಹ ಸದನೇ ವನಾ ||ಮುಕ್ಕುಂದನ ದಾಸರ ನಿಂದಿಸುತಿಹ್ಯ |ಚಿಕ್ಕ ಮತಿಗಳೀಹದೇ ವನಾ 14ಮಾರುತ ಮತವನುಸರಿಸುತಲೀ ವ್ಯವ |ಹಾರ ಮಾಡುವದೆ ಭವನಾ ||ಮಾರುತಿ ಸುತ ಪ್ರಾಣೇಶ ವಿಠ್ಠಲನ ಪ |ದಾರಾಧನೆ ಮಾಡುವರದೆ ಭವನಾ 15
--------------
ಪ್ರಾಣೇಶದಾಸರು
ರಂಗನ ತಂಗಿಯರ ಮಾನಭಂಗ ಮಾಡಿಹರುಷದಿಂದ ತಂಗಿಯರುಕೋಲಹಾಕುತಾರೆ ಬಾರೆ ದ್ರೌಪತಿಪ.ದೊರೆಯರ ಮಗಳೆಂದುಬಹಳೆ ಗರವಿಲಿಂದ ಆಣಿನಿಟ್ಟುಒಳಗೆ ಹೋಗಿಸೇರಿದ್ಯಾಕ ಬಾರೆ ದ್ರೌಪತಿ 1ಒಳ್ಳೆಯವರ ಮಗಳು ನೀನುಭಾಳಮಾತನಾಡಿಗೈಯ್ಯಾಳಿ ತನವತೋರಿಕೊಂಡಿ ಬಾರೆ ದ್ರೌಪತಿ 2ಗುಡ್ಡದಷ್ಟು ರಾಗ ಮಾಡಿಅಡ್ಡಾದಿಡ್ಡಿ ಮಾತನಾಡಿಧಡ್ಡ ತನವ ತೋರಿಕೊಂಡೆಬಾರೆ ದ್ರೌಪತಿ 3ಸರ್ಪನ ಎದುರಿಗೆ ಕಪ್ಪೆದರ್ಪತೋರುವದು ಉಂಟೇನಅರಿಪುರೆಲ್ಲ ನಿನ್ನ ಬುದ್ಧಿಬಾರೆ ದ್ರೌಪತಿ 4ಬರಿಯ ಮಾತಿನ ಜಾಣೆನಿಮ್ಮನ ಕರೆಯ ಬರಲಿಲ್ಲವೆಂದುಕುರಿಯಂತೆ ಕೂಗಿದೆಲ್ಲಬಾರೆ ದ್ರೌಪತಿ 5ನರಿಯ ಸಿಂಹನ ಮರಿಗೆನೀನು ಸರಿ ಗಟ್ಟಿದಂತೆಅದರ ಪರಿಯತಿಳಕೊಳ್ಳಬಾರೆ ದ್ರೌಪತಿ 6ಅಕ್ಕ ರುಕ್ಮಿಣಿಗೆಭಾಳಸೊಕ್ಕಿಲಿಂದ ಆಣಿನಿಟ್ಟೆಬೆಕ್ಕಿನಾಂಗ ಸೇರಿದ್ಯಾಕಬಾರೆ ದ್ರೌಪತಿ 7ನಳಿನಾಕ್ಷಿ ರಾಮೇಶ ನರಸಿಯರಿಗೆತಿಳಿಯದೆ ಆಣಿಯನಿಟ್ಟುಮಾನವಎಂತು ಕಳೆದು ಕೊಂಡೆಬಾರೆ ದ್ರೌಪತಿ 8
--------------
ಗಲಗಲಿಅವ್ವನವರು
ಹುಚ್ಚು ಹಿಡಿಸಿದೆಯಾಮಾಧವ|ನಿಚ್ಚನಿನ್ನ ಪಾದಾಂಬುಜವ ಭಜಿಪರಿಗೆ ಪಮತ್ತಗಜವೆಂಟು ಸೊಕ್ಕಿಲಿ ಕೊಲ್ವವು |ಕುತ್ತಿಗೆ ಮುರಿವರಾರು ಮಂದಿಯೂ ||ಎತ್ತ ಹೋಯಿತೋ ಬುದ್ಧಿ ಕುಳಿತುಕೊಂಡರೆ ಮೇಲೆ |ಹುತ್ತ ಬೆಳದರೆಚ್ಚರಿಕೆಯಿಲ್ಲದಂಥ 1ದಾರಾಸುತರೆನ್ನದಾರೆಂದು ನೋ |ಡರಾಗಾರ ನಮ್ಮದೆಂದು ಪೋಷಿಸರು ||ಆರಣ್ಯದಲಿ ಮುಸುಕಿಕ್ಕಿ ಧ್ಯಾನಿಸುವರು |ಶಾರೀರದ ಪರವಿಯನ್ನು ಬಿಟ್ಟಹರು 2ಬಿದ್ದು ಯದ್ದ ಕಾಳು ಆದುಕೊಂಡುಂಬರು |ಇದ್ದ ಬದುಕು ಜೋಕೆ ಮಾಡೊಲ್ಲರು ||ಪ್ರದ್ಯುಮ್ನ ಪ್ರಾಣೇಶ ವಿಠಲನೇ ಇಂಥ |ಬುದ್ಧಿಯ ಪ್ರೇರಿಸಿ ನೋಡಿ ಹಿಗ್ಗುವೆನೀ 3
--------------
ಪ್ರಾಣೇಶದಾಸರು