ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದಾ ನೋಡೇ - ವಿಠಲಾ ಮನೆಗೇಬಂದಾ ನೋಡೇ - ವಿಠಲಾ ಪ ನಂದನ ಕಂದನ ಯಶೋದೆಯಾನಂದ ಅರವಿಂದ ನಯನ ಗೋವಿಂದ ಮುಕುಂದನು ಅ.ಪ. ಇಂದು ಮೌಳಿಯ ಪೋಷಾ ||ತಂದೆ ಸೇವಕ ಭಕ್ತ | ನಿಂದಿರೆ ಪೇಳಲುಅಂದ ಇಟಗಿ ಮೇಲೆ | ನಿಂದ ಆನಂದದಿ 1 ತೊಂಡ ಜನರ ದೋಷ | ಆಹ |ಪಾಂಡವ ಪ್ರಿಯ ಪದ | ಬಂಡುಣಿಯೆನಿಸಿಹಪುಂಡಲೀಕನಿಗೊಲಿಯೆ | ಗೊಂಡು ಮಾನುಷ ವೇಷ 2 ಪುಂಡರೀಕಾಕ್ಷ ಶ್ರೀಶ 3 ಕಾಯ ಅಂಡ ತೊಂಡ ಪ್ರಹ್ಲಾದ ವರದದಂಡ ಕಮಂಡಲಜಿನ | ಭಂಡ ಕ್ಷತ್ರಿಯರ್ಹನನ 4 ಕಾನನ | ಕೌರವರಸು ನೀಗಿ || ಆಹಶೌಂಡನು ತ್ರಿಪುರರ | ಹೆಂಡರ ವಂಚಿಸ್ಯುದ್ದಂಡ ಹಯವನೇರಿ | ರುಂಡ ಮ್ಲೇಂಛರ ತರಿದೆ 5 ಮಕರ ಕುಂಡಲಧಾರೀ | ಶೋಭಿತ | ಪ್ರಖರ ಕಿರೀಟ ಮೌಳೀ ||ವಿಖನಸಾಂಡಾಧಿಪ | ವಿಕಸಿತ ಕೌಸ್ತುಭಪ್ರಕಟ ಕೊರಳ ಮಾಲೆ | ನಿಕಟ ಶ್ರೀವತ್ಸಕೆ 6 ಕೊರಳೊಳು ವೈಜಯಂತೀ | ರೂಪದಿ | ಶಿರಿಯೇ ಶೋಭಿತ ಕಾಂತೀ ||ಧರಸಿಹ ತುಳಸಿಯ | ಪರಿಪರಿ ವನಮಾಲೆಬೆರಳೊಳು ಉಂಗುರ | ವರ ರತ್ನ ಖಚಿತವು 7 ಗೆಜ್ಜೆ ಸರಪಳಿ ಸುಂದರ | ಸೊಂಟವು | ಗೆಜ್ಜೆ ಕಾಲಲಿ ನೂಪುರ ||ಕಜ್ಜಲ ಕಂಗಳು ಗೆಜ್ಜೆ ನಾದದಿ ಒಪ್ಪಬೊಜ್ಜೇಲಿ ಬ್ರಹ್ಮಾಂಡ | ಸಜ್ಜಗೊಳಿಸಿ ಇಹ 8 ನಕ್ರ ಹರಗೆ ಕಟಿತಟವಕ್ರ ಮನದವರ | ಸೊಕ್ಕನು ಮುರಿಯುತಅಕ್ಕರ ಭಜಿಪರ | ಸಿಕ್ಕನು ಬಿಡಿಸುವ 9 ಮಾಸ ಮಾರ್ಗಶೀರ್ಷವು | ನವಮಿ ತಿಥಿ | ಅಸಿತ ತಾರೆಯು ಚಿತ್ತವು ||ವಾಸರ ಭಾರ್ಗವ | ನಿಶಿಯೋಳ್ನಗುತ ಪ್ರ-ವೇಶಿಶಿದನು ಗೃಹ | ವಾಸವಾನುಜ ಶ್ರೀಶ 10 ಭಾವುಕರ ಪರಿಪಾಲ | ಬಂಡಿಯ | ಬೋವನಿದ್ದ ಸುಶೀಲ || ಆಹಾದೇವಾದಿ ದೇವನು | ಮಾವಿನೋದಿಯು ಗುರುಗೋವಿಂದ ವಿಠಲನು | ತೀವ್ರ ಫಲಪ್ರದ 11
--------------
ಗುರುಗೋವಿಂದವಿಠಲರು
ನೀನೆಂನ ಕಾಯಬೇಕೊ ಕೇಶವನೇ ನೀನೆಂನ ಸಲಹಬೇಕು ಪ ನೀನೆಂನ ಕಾಯದಿದ್ದರೆ ಕಾವರಾರಯ್ಯಾ ನಾನಂಬಿ ಮರೆಹೊಕ್ಕೆ ಶರಣರಕ್ಷಕನೇ ಅ.ಪ. ಮುಂದೆ ನೋಡಿದರೆ ಹೆಬ್ಬಾವು ನುಂಗುತಲಿದೆ ಬಂದು ಬಾಂಧವರೆಲ್ಲ ತಲೆಯ ಮೇಲೆರಿವರು ಬಂದೆನ್ನ ಕಾಯ್ವರನೊಬ್ಬ ಕಾಣೆ 1 ನಂಬುತ್ತ ಗಿಡವೇರೆ ಗಿಡವು ಬಾಗುತಲಿದೆ ನಂಬಿದ ಹರಿಗೋಲು ಮುಳುಗುತ್ತಲಿದೆಯೋ ತುಂಬಿದ ಪಟ್ಟಣ ಸೂರೆಯಾಗುತಲಿದೆ ಕಂಬನಿ ನೀಗುವ ಪ್ರಾಣೆಯಕಾಣೆ2 ಪಶುಗಳ ಕಾಯ್ದೆ ನೀ ಬಾಲ ಕ್ರೀಡೆಯೊಳಾಗ ವಿಷದ ಕಾಳಿಂಗನ ಸೊಕ್ಕನು ಮುರಿದೇ ದಶರೂಪಗಳ ತಾಳ್ದು ಸುಜನರ ಪೊರೆದಂತೆ ಶಿಶುವನು ರಕ್ಷಿಸೈ ಚನ್ನಕೇಶವನೇ 3
--------------
ಕರ್ಕಿ ಕೇಶವದಾಸ
ಶರಣಜನರ ಪಾಲ ಹರಿ ದಯಾಸಿಂಧುವೆ ವೆಂಕಟೇಶ ಮರೆಯದೆ ಸಲಹೆನ್ನ ದೀನಜನಾಪ್ತನ ವೆಂಕಟೇಶ ಪ ಕರಿ ಧ್ರುವ ಪ್ರಹ್ಲಾದ ಪಾಂಚಾಲಿ ಪಾಲನೆ ವೆಂಕಟೇಶ ದುರುಳರಕ್ಕಸಹರ ಹರಸುರನಮಿತನೆ ವೆಂಕಟೇಶ ಪರಮಪಾವನ ಸಿರಿಯರ ಸಖಜೀವನೆ ವೆಂಕಟೇಶ ದುರುಳಮಾತ ನೀನಳಿದು ಗೋವಳರ್ಪೊರೆದನೆ ವೆಂಕಟೇಶ 1 ವಸುದೇವ ದೇವಕಿ ಬಸಿರೊಳು ಬಂದನೆ ವೆಂಕಟೇಶ ಕುಶಲದಿ ವಸುಧೆಲಮಮಹಿಮೆ ತೋರ್ದನೆ ವೆಂಕಟೇಶ ಅಸುರ ಕಂಸನ ಕುಟ್ಟಿ ಗೋಕುಲರಿದನೆ ವೆಂಕಟೇಶ ಶಶಿಮುಖಿ ಗೋಪಿಯರಾನಂದಲೀಲನೆ ವೆಂಕಟೇಶ 2 ಮಂದರಧರ ಗೋವಿಂದ ಮುಕುಂದನೆ ವೆಂಕಟೇಶ ಸಿಂಧುಶಯನ ಆನಂದನ ಕಂದನೆ ವೆಂಕಟೇಶ ಇಂದಿರೆಯರ ಬಿಟ್ಟು ಭೂಲೋಕಕ್ಕಿಳಿದನೆ ವೆಂಕಟೇಶ ಸುಂದರಗಿರಿಯ ಭೂವೈಕುಂಠವೆನಿಸಿದನೆ ವೆಂಕಟೇಶ 3 ಬಣಗರಸೊಕ್ಕನು ಕ್ಷಣಕ್ಷಣಕೆ ಮುರಿದನೆ ವೆಂಕಟೇಶ ಮನಮುಟ್ಟಿ ಬೇಡ್ವರ ಮನದಿಷ್ಟವಿತ್ತನೆ ವೆಂಕಟೇಶ ಎಣಿಕೆಗೆ ಮೀರಿದ ದ್ರವ್ಯ ಕೂಡಿಟ್ಟನೆ ವೆಂಕಟೇಶ ಘನಘನಮಹಿಮೆಯ ಭುವನದಿ ತೋರ್ದನೆ ವೆಂಕಟೇಶ 4 ನಂಬಿದೆ ನಿನ್ನ ಪಾದಾಂಬುಜಗಳನ್ನು ವೆಂಕಟೇಶ ಬೆಂಬಲವಿರ್ದು ನೀ ಸಂಭ್ರಮದಿ ಸಲಹೆನ್ನ ವೆಂಕಟೇಶ ನಂಬಿದ ದಾಸರ ಭವಾಂಬುಧಿ ಗೆಲಿಪನೆ ವೆಂಕಟೇಶ ಅಂಬುಜಮುಖಿ ಸೀತಾಪತಿ ಶ್ರೀರಾಮನೆ ವೆಂಕಟೇಶ 5
--------------
ರಾಮದಾಸರು