ಒಟ್ಟು 13 ಕಡೆಗಳಲ್ಲಿ , 10 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಟ್ಹಾಂಗೆ ಇರುವೆನೋ ಹರಿಯೇ ಎನ್ನ ದೊರೆಯೇ ಪ ಸೃಷ್ಟಿವಂದಿತ ಪಾದಪದುಮ ಶ್ರೀ ಹರಿಯೇ ಅ.ಪ. ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪಚಿನ್ನದ ಹರಿವಾಣದಲಿ ಭೋಜನಘನ್ನ ಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ-ದನ್ನ ಕಾಣದೆ ಬಾಯ್ಬಿಡಿಸುವೆಯೋ ಹರಿಯೇ 1 ಕೆÀಂಪಿಲಿ ಪೊಳೆವ ಪೀತಾಂಬರ ಉಡಿಸುವಿಸೊಂಪಿನಂಚಿನ ಶಾಲು ಹೊದಿಸುವಿಯೋಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆಕಪರ್ದಕ ಕೌಪೀನವು ದೊರೆಯದೋ ಹರಿಯೇ 2 ಚಂದ್ರಶಾಲೆಯಲ್ಲಿ ಚಂದ್ರಕಿರಣದಂತೊಪ್ಪುವಚಂದದ ಮಂಚದೊಳ್ಮಲಗಿಸುವಿಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮಮಂದಿರದೊಳು ತೋಳ್ತಲಗಿಂಬು ಹರಿಯೇ 3 ನರಯಾನದೊಳು ಕ್ಷಣ ನರವರನೆನಿಸುವಿವರಛತ್ರ ಚಾಮರ ಹಾಕಿಸುವಿಕರುಣಾನಿಧೇ ನಿನ್ನ ಕರುಣ ತಪ್ಪಿದ ಮ್ಯಾಲೆಚರಣರಕ್ಷೆಯು ದೊರೆಯದು ಶ್ರೀಹರಿಯೇ 4 ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತರಸಂಗವಿರಲಿ ದುಷ್ಟರ ಸಂಗ ಬ್ಯಾಡಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿಭಂಗವ ಪಡಲಾರೆ ಶ್ರೀರಂಗವಿಠಲ ಹರಿಯೇ 5
--------------
ಶ್ರೀಪಾದರಾಜರು
ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ ಪ ಮುಂದರಿತು ಶ್ರೀಹರಿಯ ಭಜಿಸುವುದು ಲೇಸುಅ ಎಲುವುಗಳು ತೊಲೆಜಂತೆ ನರಗಳವು ಬಿಗಿದಂತೆಬಲಿದ ಚರ್ಮವು ಮೇಲು ಹೊದಿಕೆಯಂತೆಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆಕೆಲಕಾಲಕೀ ಕೊಂಪೆ ಕಡೆಗಾಹುದಂತೆ 1 ಕಂಡಿಗಳು ಒಂಬತ್ತು ಕಳಬಂಟರೈವರುಅಂಡಲೆವುದೊತ್ತಿನಲಿ ಷಡುವರ್ಗವುಮಂಡಲಕೆ ಹೊಸಪರಿಯ ಮನ್ಮಥನ ಠಾಣ್ಯವಿದುಮಂಡೆ ಹೋಗುವುದನ್ನು ಅರಿಯದೀ ಕೊಂಪೆ2 ಕೊಂಪೆಯಲಿ ಶೃಂಗಾರ ಕೊಂಡಾಡಲಳವಲ್ಲಕೆಂಪು ಬಣ್ಣಗಳಿಂದ ಚೆನ್ನಾಯಿತುಇಂಪಿನಲಿ ಕಾಗಿನೆಲೆಯಾದಿಕೇಶವನನ್ನುಸೊಂಪಿನಲಿ ನೆನೆನೆನೆದು ಸುಖಿಯಾಗು ಮನುಜಾ 3
--------------
ಕನಕದಾಸ
ಐಸಿರಿಯನೇನೆಂದು ಪಾಡಲಿ ಶ್ರೀಹರಿಯ ಮೈಸಿರಿಯ ಪಾದಾದಿ ಕೇಶ ಪರ್ಯಂತ ಪ ಸಿರಿಯ ಕರಾಬ್ಜ ಪರಾಗದಿಂ ರಂಜಿಪ ಸರಸಿಜ ಕುಂಕುಮರಜ ರಮ್ಯವೆಂದೆನಿಪ ನಿರುತ ಯೋಗೀಂದ್ರ ಹೃತ್ಕಮಲವನರಳಿಪ ತರುಣಾತಪದ ಕಾಂತಿಯೆನೆ ಕಂಗೊಳಿಪ ವರಶ್ರುತಿ ಸೀಮಂತ ಸಿಂಧೂರವೆನೆ ತೋರ್ಪ ಫಣಿ ರತುನಾರತಿಯೆನಿಪ ಸುರುಚಿರ ಶೋಣ ಪ್ರವಾಳವ ಸೋಲಿಪ ಅರುಣಾಂಬುರುಹದಂದದಿ ಥಳಥಳಿಪ 1 ಚರಣತಳಂಗಳೊಪ್ಪುವ ತನಿ ಕೆಂಪಿನ ಶರಣ ಚಿಂತಾಮಣಿಯ ನಸುಗೆಂಪಿನ ಧರಣಿಯನೀರಡಿ ಮಾಡಿದ ಪೆಂಪಿನ ಕರುಣದಿ ಕಲ್ಲ ಪೆಣ್ಮಾಡಿದ ಸೊಂಪಿನ ಕರ ಶಂಖ ಪದ್ಮ ರೇಖಾಂಕಿತದಿಂಪಿನ ಕುರುನೃಪಗರ್ವ ನಿರ್ವಾಹಾಪಗುಂಪಿನ ಸುರಮಣೀಮಕುಟ ನಾಯಕದ ಸೊಂಪಿನ ಪರಮಪಾವನ ಪಾದದುಂಗುಟದಲಂಪಿನ 2 ಕಂಜಭವಾಂಡ ಸೋಂಕದ ಮುನ್ನ ಬೆಳಗುವ ಸಂಜನಿಸಿಹ ಗಂಗೆ ಮುದದಲ್ಲಿ ಮುಳುಗುವ ಭುಂಜಿಸಿತಮಸ ಜಗಂಗಳ ಬೆಳಗುವ ಮಂಜೀರ ಕಡಗ ಭಾಪುರಿಗಳಿಂ ಮೊಳಗುವ ಮಂಜುಳಾಂಗದಿ ನಖಪಂಕ್ತಿಗಳ್ ತೊಳಗುವ ರಂಜನೆಯಿಂ ಶ್ರೀಮದಂಘ್ರಿಗಳೆಸೆವ ವಂಚಿತ ಸೌಮ್ಯ ಜಂಘೆಗಳಿಂ ಸೊಗಯಿಸುವ ಕುಂಜರ ರುಚಿಯ ಪೂರ್ಣೇಂದು ರಂಜಿಸುವ 3 ಅಳವಟ್ಟ ಪೀತಾಂಬರದ ಸುಮಧ್ಯದ ಕಳಕಾಂಚಿದಾಮದುನ್ನತ ಕಟಿತಟದ ನಳಿನಾಲವೋದಿತ ನಾಭಿಪಂಕರುಹದ ಇಳೆಯ ಜನಂಗಳಿಗೆನಿಸುವ ವುದರದ ವಿಳಸದಲಂಕೃತ ಬಾಹು ಚತುಷ್ಟದ - ಮಳ ಶಂಕಚಕ್ರ ಸದಬ್ಜ ಸಂಭೃತದ ಪೊಳೆವ ಕೌಸ್ತುಭಮಣಿ ಶ್ರಿವತ್ಸೋದರದ ತುಳಸಿ ಮಂದಾರ ಮಾಲೆಗಳ ಕಂಧರದ 4 ಘನ ಸೌಭಗ ಗಂಡಮಂಡಲಯುಗ್ಮದ ಮಕರಕುಂಡಲ ಕರ್ಣಯುಗ್ಮದ ವನಜ ನೇತ್ರಂಗಳ ಕರುಣಾಕಟಾಕ್ಷದ ವಿನುತ ಮೌಕ್ತಿಕದಿಂದ ಮೆರೆವ ನಾಸಿಕದ ನಸು ಮೋಹನದಿ ಸಮನಿಪ ಚುಬುಕಾಗ್ರದ ತನಿರಸ ತುಳುಕುವ ಚೆಲುವಿನಧರದ (?)ಲಲಿತ ವದನದ ವರದಂತಪಂಙ್ತಯ ಇನಿಗೆದರುವೆಳನಗೆಯ ಸಿರಿಮೊಗದ 5 ಸಿಂಗಾಡಿಯಿಂ ಮಿರುಗುವ ಪುರ್ಬುಗಳ ಸ - ನಾಸಿಕ ಬೆಳ ದಿಂಗಳ ಪೊಂಗಿನ ಕಸ್ತೂರಿ ತಿಲಕ ರ ತ್ನಾಂಗದ ರಂಗಿನ ಮಕುಟ ಮಸ್ತಕದ ನೀ ಲಾಂಗದಳಾಂಗನೆಯರು ಸುರಪುರ ಮಧ್ಯ ನಿಖಿಳ ಜ ಗಂಗಳ ಹಿಂಗದೆ ಪೊರೆವ ಶ್ರೀ ಲಕ್ಷ್ಮೀಶ ಮಂಗಳೋತ್ತುಂಗ ಮೂರುತಿಗೆ ನಮೋ ನಮೋ 6
--------------
ಕವಿ ಲಕ್ಷ್ಮೀಶ
ಚಂಡನಾಡಿದ ಹರಿ ಚಂಡನಾಡಿದ ಪ ಪುಂಡರೀಕ ಕುಸುಮಮಯದ ಅ.ಪ. ಸಾರ ಸೊಬಗಿನಿಂದ ನೋಡಿ ಕರವ ನೀಡಿ ಪಾರಿಜಾತ ಕುಸುಮಮಯದ 1 ಸೊಂಪಿನಿಂದ ಮಂದಹಾಸ ಪೆಂಪುದೋರೆ ಸಿರಿಯಮ್ಮೆ ಗಂಪಿನಿಂದ ರಮೆಯು ಸಹಿತ ಚಂಪಕದ ಕುಸುಮಮಯದ 2 ಪುಲ್ಲನಯನ ಪರಿಮಳವ ಚೆಲ್ವ ಚಂದ್ರ ಕಿರಣದಂತೆ ಚೆಲ್ವನಾಂತ ಸರಸಮಾನ ಮಲ್ಲಿಗೆಯ ಕುಸುಮಮಯದ 3 ದಿವ್ಯ ಮಾಧುಪ ಝೇಂಕೃತಿಯು ಭವ್ಯಮಾಗೆ ದಿವಿಜರೆಲ್ಲ ದಿವ್ಯಮೆಂದು ಪೊಗಳೆ ಸುಖದಿ ನವ್ಯ ಜಾಜಿ ಕುಸುಮಮಯದ 4 ಶ್ರೀನಿವಾಸ ಸಕಲ ಹೃದಯ ಶ್ರೀನಿವಾಸ ಧೇನುನಗರಶ್ರೀನಿವಾಸ ವೆಂಕಟೇಶ ಶ್ರೀನಿವಾಸ ಕುಸುಮಮಯದ 5
--------------
ಬೇಟೆರಾಯ ದೀಕ್ಷಿತರು
ಪಂಢರಿಯ ಬಿಟ್ಟಲ್ಲಿ ಹೆಂಡತಿಯ ಕರಕೊಂಡುಬಂದ ಕಾರಣ ತಿಳಿಯದೋಹೆಂಡತಿಯ ಕಾಟವೊ ಇದು ನಿನ್ನ ಆಟವೊಭಕ್ತಭೂ'ುಗೆ ಓಟವೊಪಂಢರಿಯ ಬಿಟ್ಟಿಲ್ಲಿ ಬಂದ ಕಾರಣವೇನುಪೇಶಯ್ಯ ಪಾಂಡುರಂಗಾsಚಂದ್ರಭಾಗಾ ತೀರ ಸುಂದರ ಮಂದಿರವುಇಂದಿರಾರಮಣ ನಿನಗಲ್ಲಿ 1ಅರುಣೋದಯಕೆ ನಿತ್ಯ ಪಂಚಾಮೃತದ ಸ್ನಾನನವನೀತ ಬಾು ತುಂಬಾsಜರತಾರಿ ಮುಂಡಾಸು ಭರ್ಜರಿ ನಿಲುವಂಗಿಸೊಂಪಿನಂಚಿನ ಮಡಿಯು ನನಗೆತರತರದ ಪುಷ್ಪಗಳು ಎಳೆ ತುಳಸಿ ವನಮಾಲಿಕೊರಳೊಳಗೆ ವೈಜಯಂತಿಪರಿಮಳದ ಗಂಧ ಕಸ್ತೂರಿ ಫಣಿಯಲಿಟ್ಟುವೈಭವದಿ ಪೂಜಿಸುವರು 2ಅಂದಚೆಂದದ ರತ್ನ ಮುತ್ತಿನಾಭರಣಗಳುತರತರದ ಸೊಗಸಾದ ಪಂಚಪಕ್ವಾನ್ನಗಳುಸರಿಯಾಗಿ ಮಧ್ಯಾಹ್ನ ಮಾಪೂಜೆ ನಡೆಯುವದುಭಕ್ತರಿಗೆ ಲೆಕ್ಕ'ಲ್ಲಾ sಪಾದಕ್ಕೆ ಹಣೆ ಹಚ್ಚಿ ತಿಕ್ಕುವರು ಮೇಲೆದ್ದುನಿಂತುಬಿಡುವರು ಅಲ್ಲಿ ದಬ್ಬಿದರು ಎಚ್ಚರಿಲ್ಲಾಇಂಥ ಭಕ್ತಿಯ ಭಾವ ಇನ್ನೆಲ್ಲಿಯೂ ಕಾಣೆಭಕ್ತವತ್ಸಲ 'ಠ್ಠಲಾs 3ಗೋಧೂಳಿ ಕಾಲಕ್ಕೆ ಪಾದಪೂಜೆಯು ಮಹಾಧೂಪ ದೀಪೋತ್ಸವಗಳುsಆಪಾದಮೌಳಿ ಪರ್ಯಂತ ದರ್ಶನ ಪಾದಸ್ಪರ್ಶದಾ ಆನಂದವೋsರಾತ್ರಿ ಹತ್ತಕ್ಕೆ ಶಯನೋತ್ಸವದ ವೈಭವವುನೋಡಿದವರೇ ಧನ್ಯರುsಸಚ್ಚಿದಾನಂದಮೂರ್ತಿ ಅಲ್ಲಿ ಪ್ರತ್ಯಕ್ಷಭಕ್ತರಿಗೆ ಕಾಣುತಿಹನು 4ಸತ್ಯವಾದೀ ಜಗಕೆ ಪಂಚಭೇದವು ನಿತ್ಯಸರ್ವತ್ರ ತಾರತಮ್ಯಸೃಷ್ಟ್ಯಾದಿ ಅಷ್ಟ ಕರ್ತೃತ್ವ 'ಠ್ಠಲಗುಂಟು'ಠ್ಠಲನೆ ಸವೋತ್ತಮಾsಹರಿಯು ಸರ್ವೋತ್ತಮನು ವಾಯು ಜೀವೋತ್ತಮನುಮೂಲಗುರು ಮುಖ್ಯ ಪ್ರಾಣನುಮಧ್ವಮತವೇ ಮತವು ಸಕಲಶ್ರುತಿಸಮ್ಮತವುನಿತ್ಯ ತತ್ತ್ವಜ್ಞಾನವುs 5ಅಣುರೇಣು ಪರಿಪೂರ್ಣ ಸರ್ವಗುಣ ಸಂಪನ್ನನಿರ್ದೋಷ ನಿರ್'ಕಾರಾsಸರ್ವತಂತ್ರ ಸ್ವತಂತ್ರ ಸರ್ವಾಂತರ್ಯಾ'ುಸರ್ವಜ್ಞ ಸರ್ವಸ್ವಾ'ುsಸಚ್ಚಿದಾನಂದಾತ್ಮ ಪೂರ್ಣಾತ್ಮ ಪರಮಾತ್ಮನಿತ್ಯತೃಪ್ತನು ಶ್ರೀಹರಿsನಿರ್ಗುಣ ನಿರಾಕಾರ ಅ'ುತಗುಣ ಆಕಾರತ್ರಿಗುಣವರ್ಜಿತ ತ್ರಿಧಾಮಾs 6ಕಾರ್ಯಕಾರಣ ಅಂಶಿ ಅಂಶಾವತಾರಅಂತರ್ಯಾ'ುಯಾಗಿ ಇಹನುsಪ್ರೇರ್ಯಪ್ರೇರಕನಾಗಿ ಬಾದ್ಯ ಬಾಧಕನಾಗಿವ್ಯಾಪ್ಯ ವ್ಯಾಪಕನು ತಾನುsಯಾರು ತನ್ನನೆ ನಂಬಿ ಸರ್ವಸ್ವವನು ನೀಡಿದಾಸರಾಗುವರೊ ಅವರನ್ನುsಕ್ಲೇಶಗಳ ಕಳೆದು ಭವಪಾಶ ಬಂಧವ ಬಿಡಿಸಿಶ್ರೀಶ ಕೈಪಿಡಿದು ಪೊರೆವಾs 7'ಷ್ಣು ಸರ್ವೋತ್ತಮತ್ವ ತಿಳಿಯದ ಜ್ಞಾನಶೂನ್ಯರಿಗೆಬೇಸತ್ತು ಇಲ್ಲಿ ಬಂದ್ಯಾ sಭಕ್ತ ಪ್ರಹ್ಲಾದನವತಾರ ರಾಯರು ಇಲ್ಲಿಬಂದದ್ದು ಕೇಳಿ ಬಂದ್ಯಾ sಮಧ್ವಸಿದ್ಧಾಂತ ಪದ್ಧತಿಗೆ ಅನುಸರಿಸಿಪೂಜೆಗೊಂಬಲು ಬಂದೆಯಾsಮುದ್ದುಭೂಪತಿ'ಠಲ ಬಿದ್ದೆ ನಿನಪಾದಕ್ಕೆಉದ್ಧಾರ ಮಾಡೊ ಸ್ವಾ'ು 8ಫಲಶ್ರುತಿಚಿತ್ತನಿರ್ಮಲರಾಗಿ ಭಕ್ತಿಭಾವದಿ ನಿತ್ಯ'ಠ್ಠಲಾಷ್ಟಕ ಪಠಿಸಲು'ಠ್ಠಲನು ಕೈಪಿಡಿದು ಕಷ್ಟಗಳ ಪರಿಹರಿಸಿಇಷ್ಟಾರ್ಥಗಳ ಕೊಡುವನುsಸತ್ಯ'ೀ ಮಾತಿದಕೆ ಸಾಕ್ಷಿ ಬೇಕಾದರೆಪ್ರತ್ಯಕ್ಷ ಪಾಂಡುರಂಗಾsಕಾವೇರಿ ಶ್ರೀರಂಗ ಕಂಬೆವರದರಾಜಗಲಗಲಿಯ ನರಸಿಂಗನೋs 9
--------------
ಭೂಪತಿ ವಿಠಲರು
ಬಂಟನಾಗಿ ಬಾಗಿಲ ಕಾಯ್ವೆ ಹರಿಯ ಪ ವೈಕುಂಠದ ಸೊಂಪಿನ ದಾಸರ ಮನೆಯ ಅ ಹೊರಸುತ್ತು ಪ್ರಾಕಾರ ನಾ ಸುತ್ತಿ ಬರುವೆಬರುವ ಹೋಗುವರ ವಿಚಾರಿಸುತಿರುವೆಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ ಶ್ರೀಹರಿಯ ಸಮ್ಮುಖದ ಓಲಗದೊಳಿರುವೆ 1 ತೊತ್ತು ತೊಂಡನಾಗಿ ಬಾಗಿಲ ಕಾಯ್ವೆಚಿತ್ರದ ಚಾವಡಿ ರಜವನು ಬಳಿವೆಮುತ್ತಿನ ರಂಗವಲ್ಲಿಯನಿಟ್ಟು ಬರೆವೆರತ್ನಗಂಬಳಿ ಹೊತ್ತು ಹಾಸುವೆನು 2 ವೇಳೆವೇಳೆಗೆ ನಾನೂಳಿಗವ ಮಾಡುವೆಆಲವಟ್ಟಿಗೆ ಚಾಮರವ ಬೀಸುವೆತಾಳದಂಡಿಗೆ ಭೃಂಗಿ ಮೇಳಗಳ ಕೂಡಿ ಶ್ರೀಲೋಲನ ಕೊಂಡಾಡಿ ಪಾಡುವೆನು 3 ಎಂಜಲ ಹರಿವಾಣಂಗಳ ಬೆಳಗುವೆಕಂಜನಾಭನ ಪಾದಕಮಲವ ತೊಳೆವೆರಂಜಿಪ ಕುಸುಮದ ಮಾಲೆ ತಂದಿಡುವೆಸಂಜೆಗೆ ಪಂಜಿನ ದಾಸನಾಗಿರುವೆ 4 ಮೀಸಲೂಳಿಗವ ನಾ ಮಾಡಿಕೊಂಡಿರುವೆಶೇಷ ಪ್ರಸಾದವ ಉಂಡುಕೊಂಡಿರುವೆಶೇಷಗಿರಿ ಕಾಗಿನೆಲೆಯಾದಿಕೇಶವನದಾಸರ ದಾಸರ ದಾಸರ ಮನೆಯ 5
--------------
ಕನಕದಾಸ
ಮಾಲೆಯ ಹಾಕುವೆ ಲೀಲೆಯಿಂ ತಳೆವುದು ಶ್ರೀಲಲನಾವರ ಪಾಲಿಸು ಕಂಠವ ಪ ಸಂಪಿಗೆ ಮಲ್ಲಿಗೆ ಮೊಲ್ಲೆಗುಲಾಬಿಯು ಸೊಂಪಿನ ಪಚ್ಚೆಯ ಇಂಪಿನಿಂ ಕಟ್ಟಿದ 1 ಮರುಗ ಸೇವಂತಿಗೆ ಪಾದರಿ ಹೂವಿನ ಮೆರೆವ ಮಂದಾರದ ಪಾರಿಜಾತದ ಸುರ 2 ಸುರಗಿ ಸುಗಂಧರಾಜ ಸುರಹೊನ್ನೆ ದವನವು ಪರಮಗುಣಾಕರ ವರದಹೆಜ್ಜಾಜಿಯ 3
--------------
ಶಾಮಶರ್ಮರು
ಯಂತ್ರೋದ್ಧಾರಕ ಪ್ರಾಣರಾಯ ಎನ್ನ ಚಿಂತೆ ಹರಿಸೋ ಪ. ಅಂತರಂಗದಿ ಹರಿಯ ಧ್ಯಾನವ ಮಾಡಿಸೋ ಅ.ಪ. ನಿನ್ನ ನೋಡಿ ಧನ್ಯಳಾದೆನೊ ಹೊನ್ನು ಹನುಮನೆ ಎನ್ನ ಪಾಪ ಹರಿಸಿ ಕಾಯೊ ಘನ್ನ ಹನುಮನೆ 1 ಒಂದು ಅರಿಯದ ಮಂದಮತಿಯಳ ಬಂದು ಕಾಯೋ ಬಂಧನವ ಬಿಡಿಸಿ ಕಾಯೋ ಸುಂದರಾಂಗನೆ 2 ತುಂಗಾತೀರದಿ ನಿಂತಿರುವಿ ಮಂಗಳಾಂಗನೆ ಮಂಗಳ ರಾಮನ ಧ್ಯಾನವ ಮಾಡಿಸು ಎನಗೆ 3 ಹಂಪಿಯಲಿ ನಿಂತಿರುವಿ ಸೊಂಪಿನಿಂದಲಿ ಸಂಪಿಗೆ ನೆರಳಲಿ ನೋಡಿದಿ ರಾಮರ ಧ್ಯಾನ ಮಾಡುತ 4 ರಾಮ ದೂತನೆ ಎನ್ನ ಮೊರೆಯ ಲಾಲಿಸಿ ಪಾದ ಬೇಗ ತೋರಿಸೊ 5
--------------
ಸರಸಾಬಾಯಿ
ವಾಗ್ದೇವಿ - ನಿಮ್ಮಚರಣ ಕಮಲಂಗಳ ದಯಮಾಡು ದೇವಿ ಪ ಶಶಿ ಮುಖದ ನಸುನಗೆಯ ಬಾಲೆಎಸೆವ ಕರ್ಣದ ಮುತ್ತಿನೋಲೆನಸುನಗುವ ಸುಪಲ್ಲ ಗುಣಶೀಲೆ - ದೇವಿಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೆ 1 ಇಂಪು ಸೊಂಪಿನ ಚಂದ್ರ ಬಿಂಬೆಕೆಂಪು ತುಟಿಗಳ ನಾಸಿಕದ ರಂಭೆಜೊಂಪು ಮದನನ ಪೂರ್ಣ ಶಕ್ತಿ ಬೊಂಬೆ - ಒಳ್ಳೆಸಂಪಗೆ ಮುಡಿಗಿಟ್ಟು ರಾಜಿಪ ಶಾರದಾಂಬೆ2 ಸನ್ನುತ ರಾಣಿವಾಸೆ 3
--------------
ಕನಕದಾಸ
ಶುಭ ವಾಸುದೇವ ಮೂರುತಿಗೆ ಪಕುಂದಣಕೆ ಸರಿಯಾದ ಕಾಯದತಿ ಕಾಂತಿಗೆಸಿಂಧುವನು ಪೋಲ್ವ ಗಂಭೀರ ರಸಕೆಇಂದುಬಿಂಬವ ಜರೆವ ಮುಖದ ಸೊಂಪಿನ ಸಿರಿಗೆಕಂದರ್ಪ ಕೋಟಿ ಲಾವಣ್ಯ ನಿಧಿಗೆ 1ಅಭಯದಾನವ ಕೊಡುವ ಕರಗಳತಿ ಚೆಲು'ಕೆಗೆಶುಭಗಳಿಗೆ ನೆಲೆಯಾದ ನೇತ್ರಗಳಿಗೆ'ಭವಗಳಿಗೆಡೆಬಿಡದ ಮುಗುಳುನಗೆಯೊಗು'ುಗೆಗೆತ್ರಿಭುವನಂಗಳನಳೆದ ಪದ ನಳಿನಗಳಿಗೆ 2ಜ್ಞಾನಮುದ್ರೆಯ ಕರದಿ ಜ್ಞಾನೋಪದೇಶವನುತಾನೆ ಕರೆದಿತ್ತು ಭಕ್ತರ ಸಲಹುತಾ ಮಾನವನು ಕಡೆಗೊತ್ತಿ ಮಾನ್ಯ ತಾನೆಂದೆನಿಪಶ್ರೀನಿಕೇತನ ನಿಜದ ಚಿನ್ಮಯಾತ್ಮಕಗೆ 3ಕಾವೇರಿ ಗಂಗೆಯೊಲು ಕಮಲನಾಭನ ಕಥೆಯ ಪಾವನದ ತೀರ್ಥದಲಿ ಪಾಪವಳಿದು ಜೀವಭಾವವ ಬಿಟ್ಟು ಬ್ರಹ್ಮ ತಾನೇಯಾಗಿಯಾವಗವು ಸುಖಶರಧಿಯಾದ ಚಿನ್ಮಯಗೆ 4ರಾಗಾದಿರ'ತನಿಗೆ ರಾಗಿಗಳ ಸಂಸಾರಸಾಗರವ ದಾಟಿಸುವ ಬೋಧ ಘನಗೆಯೋಗಿಗಳ ಸಂಮತಗೆ ಗುರು ವಾಸುದೇವಗೆಯೋಗೇಶ ತಿರುಪತಿಯ ವೆಂಕಟೇಶ್ವರಗೆ 5ಓಂ ಶ್ರೀವತ್ಸಕೌಸ್ತುಭಧರಾಯ ನಮಃ
--------------
ತಿಮ್ಮಪ್ಪದಾಸರು
ಇನ್ನೇನುಗತಿಎನಗೆಲೊ ಹರಿಯೆ |ನಿನ್ನನು ನೆನೆಯದೆ ಮೋಸಹೋದೆನಲ್ಲ ಪಅಂಕದೊಳಾಡುವ ಶಿಶುವಿನ ಮುದ್ದಿನ |ಬಿಂಕದ ನುಡಿಗಳ ಕೇಳುತಲಿ ||ಕಿಂಕಿಣಿಧ್ವನಿಯನು ಕಿವಿಗೊಟ್ಟು ಕೇಳುತ |ಮಂಕು ಹರಿಣನಂತೆ ಆದೆನಲ್ಲ 1ಪರವನಿತೆಯರ ಲಾವಣ್ಯಕೆ ಲೋಚನ |ಚರಿಸುತಲವರ ಕೂಟಕೆ ಬೆರಸಿ ||ಉರಿವ ಕಿಚ್ಚು ತನಗೆ ಹಿತವೆಂದು ಅದರೊಳು |ಎರಗಿದ ಪತಂಗದಂತಾದೆನಲ್ಲ 2ತೊಡೆಯೆಡೆ ಗುಹ್ಯಕಾಂಬೆನೊ ಕಾಣೆನೋ ಎಂದು |ಮಡದಿಯರಂಗಸಂಗವ ಮಾಡುತ ||ಒಡಲ ತೀಟಕೆ ಪೋಗಿ ಬಡಿಗಲ್ಲ ಕೆಡಹಿಕೊಂ-|ಡಡಗಿದ ಮೂಷಕನಂತಾದೆನಲ್ಲ 3ಸಲೆ ನಿಜ ವೃತ್ತಿಯ ಬಿಟ್ಟು ಪರಾನ್ನವ |ನಲಿದುಂಡು ಹೊಟ್ಟೆಯ ಹೊರೆಯುತಲಿ ||ಬಲೆಯ ತುದಿಯ ಮಾಂಸಕೆ ಬಂದೆರಗುತ |ಸಿಲುಕಿದ ವಿೂನಿ ನಂತಾದೆನಲ್ಲ 4ಲಂಪಟನಾಗಿ ನಾರಿಯರ ಮುಖಾಬ್ಜದ |ಸೊಂಪಿನ ಕಂಪನಾಘ್ರಾಣಿಸುತ ||ಸಂಪಿಗೆ ಹೂವಿನ ಮೇಲೆ ಮಲಗಿ ತನ್ನಸೊಂದಳಿದಳಿಯಂತೆ ನಾನಾದೆನಲ್ಲ 5ಇಂತು ಪಂಚೇಂದ್ರಿಯ ತಮತಮ್ಮ ವಿಷಯಕೆಮುಂತಾಗಿ ತಮ್ಮ ತಾವಲೆಯುತಿರೆ ||ಸಂತತ ತವತಮ ವಿಷಯಕೆ ಎಳಸಲುಕಾಂತಾರದರಸನಂತೆ ಆದೆನಲ್ಲ 6ಕಂದರ್ಪಲೀಲೆಯ ಗೆಲಿದುಳ್ಳ ಭಕ್ತಿಯ |ತಂದು ಪಂಚೇಂದ್ರಿಯಗಳಿಗೆನ್ನಯ ||ತಂದೆಪುರಂದರವಿಠಲನ ನೆನೆದರೆ |ಎಂದೆಂದಿಗೂ ಭವಬಂಧನ ಬಾರದಲ್ಲ 7
--------------
ಪುರಂದರದಾಸರು
ನಿರುತ ನಿನ್ನಯ ಲೀಲೆಯನೆ ಹಾರೈಸುವೆ ಮುದ್ದುತಾರೊ ಕಂದಕಿರುಗುರುಳಿನ ಚೆಲ್ವ ಬಾಲಕರನ್ನನೆ ಮುದ್ದು ತಾರೊ ಪ.ನಿದ್ರೆ ಪೂರಿತವಿಲ್ಲದೆ ನಡೆಯುತ ಬಂದು ಮುದ್ದು ತಾರೊ ಕಂದಮೆದ್ದು ಕಾಯಿ ಕಳಲೆ ಕಿರುನಗೆ ಜೊಲ್ವಾಯ ಮುದ್ದು ತಾರೊ 1ಧುಡುಮೆಂಬ ಕಡೆವ ದನಿಗೆ ದುಡು ದುಡು ಬಂದುಮುದ್ದು ತಾರೊ ಕಂದಉಡುಗೆ ಜಗ್ಗುತ ತೊದಲ್ನುಡಿದು ಮೊಗವ ನೋಡಿ ಮುದ್ದು ತಾರೊ 2ನವನೀತನೀಡಲು ಆಯೆಂಬ ಪುಟ್ಬಾಯ ಮುದ್ದು ತಾರೊ ಕಂದಹವಣಾದ ಸಣ್ಹಲ್ಲು ಎಳೆದುಟಿ ಸೊಂಪಿನ ಮುದ್ದು ತಾರೊ 3ಅಂಬೆಗಾಲಿಕ್ಕುತೆನ್ನನು ಕಂಡು ಕರವೆತ್ತಿ ಮುದ್ದು ತಾರೊ ಕಂದಕಂಬುಕಂದರ ನಿನ್ನ ಮನದಣಿಯಪ್ಪುವೆ ಮುದ್ದು ತಾರೊ 4ಚಿನ್ನರ ಬಡಿದು ನಾನಲ್ಲೆಂದು ಬಾಯಾರ್ವ ಮುದ್ದು ತಾರೊ ಪ್ರಸನ್ನವೆಂಕಟಾಚಲವಾಸವಿಲಾಸನೆ ಮುದ್ದು ತಾರೊ 5
--------------
ಪ್ರಸನ್ನವೆಂಕಟದಾಸರು