ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆ ಮಾಡಿದ ಲೀಲೆ ಬಲು ಸುಖವೊ | ಆನೇನು ದು:ಖವನು ಬಡುವುದಿಲ್ಲವೋ ಜೀಯ |ಪ ತೋಟವನು ಮಾಡಿಸಿ ಅದರೊಳಗೆ ಒಂದು ಫಲ | ನಾಟಿಸಲು ಬೆಳೆದ ಫಲ ಪಕ್ವವಾಗೆ | ನೀಟಾದ ಫಲವೆಂದು ಅರಸು ಕೊಯ್ ತರಿಸಲು ತೋಟಿಗಾಗೇನು ದು:ಖ ಅರಸಿನಿಂಗೇನೈಯ1 ನಿನ್ನ ಸಂಕಲ್ಪನೆ ಸ್ಥಿರವಾಗಿ ಇದೆ ಇದೆ ಅನಂತ ವೇದಗಳು ಪೊಗಳೂತಿವಕೊ ಪನ್ನಗಶಯನನೆ ನೀನು ಮಾಡಿದ ಕ್ಲುಪ್ತ ಅನ್ಯಥಾವಾಗುವದೆ ಅನುಭವಾದಿಗಳಿಗೆ 2 ಸುಖ ದು:ಖವೆ ಎರಡು ನಿನ್ನ ವಶವಾಗಿದೆ ಸಖನಾಗಿ ಸುಖ ಉಣಿಸಲು ಹಿಗ್ಗುವೆ ದು:ಖ ತಂದಿತ್ತರೆ ಅಳಲಿ ಬಳಲುವದ್ಯಾಕೆ ಅಖಿಳ ನೀನಾವದಿತ್ತದೇ ಬಲು ಲೇಸು 3 ನೀನೆ ಕಲ್ಪಿಸಿದರೆ ಸೈರಿಸಲಾರದೆ ವೇಗ | ನಾನು ವ್ಯಧಿಕರಣ ಪೇಳಿದರಾಯಿತೆ | ಆನಂದಕೆ ಹ್ರಾಸ ಬರುವುದೆ ಶಾಶ್ವತ | ಏನಾದರೇನು ನೀನಾಡಿದಾಟವೆ ಸಮ್ಮತ | 4 ಸತ್ಪಾತ್ರರಾ ನೋಡಿ ದಾನವಿತ್ತರೆ ಅವಗೆ | ಉತ್ತಮಾ ಪದ ಉಂಟು ಪುಶಿಯಲ್ಲವೋ | ಸತ್ಪಾತ್ರ ನೀನೆಂದು ಪುತ್ರಾಖ್ಯ ಧನವಿತ್ತೆ | ಉತ್ತುಮಾ ಗತಿ ನೀಯೋ ವಿಜಯವಿಠ್ಠಲ ಕರುಣಿ 5
--------------
ವಿಜಯದಾಸ
ರಕ್ಷಿಸು ಶ್ರೀ ವೆಂಕಟೇಶಾ ನಿನ್ನ ನಂಬಿದೆನೈ ಶ್ರೇಷಗಿರಿವಾಸಾ ಪ ಶ್ರೀ ಹರಿ ಮಲಗಿರಲಂದೂ ತಾಡನೆ ಮಾಡಿದನೆಂದೂ 1 ಅದು ಕೇಳಿ ಸಿರಿದೇವಿ ಸೈರಿಸಲಾರದೆ ತಿಳಿದು ಹರಿಬೇಗಾ ಧರೆಗಿಳಿದನು ಆಗಾ 2 ಸುರಮುನಿವಂದ್ಯ ಶರಣು ಗೋವಿಂದಾ 3 ದೇಶದೇಶಗಳಿಂದಾ ಭಕ್ತಜನರು ಬಂದೂ ಮಹಾನುಭಾವಾ ಪಾಲಿಸುದೇವಾ 4 ಅಪ್ಪಲು ಅಕಿರಸಿ ಒಪ್ಪದಿಂದಲಿಮಾರಿ ಸರಿಯಾರಿಲ್ಲ ಕಂದ್ಯ5 ಮೋಸ ಹೋಗುವನಲ್ಲಾ ಭವಪಾಶ ಬಿಡಿಸಲು ಬಲ್ಲ ಇದಕೆ ಸಂಶಯವಿಲ್ಲ 6 ಬೇರೆ ದೈವಗಳನ್ನ ಬಯಸಲ್ಯಾತಕೆ ಹೇಳು ದೀನ ದಯಾಳೂ ಭಕ್ತಕೃಪಾಳೂ 7 ನಿನ್ನ ಹೊರತು ಪೊರೆವರನ್ಯರಕಾಣೆನು ಘನ್ನ ಮಹಿಮಾ ಮನಮಾಡೋ ಮೋಹನ್ನಾ 8 ಭಕ್ತ ವತ್ಸಲ ನೀನಭಯವಿತ್ತ ಮೇಲೆ ಭಯವ್ಯಾಕೊನಮಗಿನ್ನು ಭಕ್ತರಭಿಮಾನೀ ಸತ್ಯ ನಿನವಾಣೀ ನಿನ್ನ ಸಮರ್ಯಾರೊದಾನೀ 9 ಆದರದಿಂಧ ಪೊರೆವಾಪ್ರೇಮಸುಧೆಯ ಕರೆವಾ ಕನಕಾದ್ರಿಯೊಳಿರುವಾ ಕೀರ್ತಿಯೊಳ್ ಮೆರೆವಾ 10 ವೆಂಕಟವಿಠಲಾ ಕರುಣಾಲವಾಲಾ ಪದ್ಮಿನಿಲೋಲಾ 11
--------------
ರಾಧಾಬಾಯಿ
ನಗಲುಬಹುದು ನಗಲುಬಹುದುನಗು ನಗು ರಂಗಯ್ಯಜಗದ ಮಾತು ಅ‌ಘದ ಧಾತುಬಗೆಯನರಿತು ಮುಗಳುನಗೆಯ ಪ.ಒರೆದು ಒರೆದು ಭಾರತದರ್ಥಅರಿದುಅರಿದುವರಭಾಗವತಪರಿಯ ಪರಿಯ ಪುರಾಣಶ್ರ್ರುತಿಯಪಾರಾಯಣ ಮಾಡಿ ಕುರುಡಬಧಿರನರರ ತೆರದಿಅರಹುಮರಹುಬೆರೆತು ಬೆರೆತು ತರತಮಿಲ್ಲದೆಹರಿಹರಜರು ಬೇರೆಬೇರಿಲ್ಲೆಂಬಪರಮಪಾತಕರಿರವ ನೋಡಿ 1ಮಕ್ಕಳ ಮಡದೇರಕ್ಕರ ಬಡಿಸಿರೊಕ್ಕದ ಮದದಿ ಸೊಕ್ಕಿ ಸಜ್ಜನರಲೆಕ್ಕಿಸದವಗೆ ರಕ್ಕಸರಂತೆನಿಕ್ಕರ ನುಡಿದು ಕಕ್ಕಸದಿಂದಪುಕ್ಕಟೆ ಪುಣ್ಯದ ಲೆಕ್ಕವ ಕಳೆದುಘಕ್ಕನೆ ಜವನೋರಿಕ್ಕಿದ ಬಲೆಗೆಸಿಕ್ಕಿ ಬಳಲುತ ನರ್ಕವನುಂಬಮೂರ್ಖರ ತಾಮಸಮುಖ್ಯರ ನೋಡಿ 2ಸುಂದೋಪಸುಂದ ಜಲಂಧರ ಕೀಚಕಕಂದರದಶಕ ಸೈಂಧವ ಜಟಾದ್ಯರಂದು ಪರಸ್ತ್ರೀಯ ಸೌಂದರ್ಯಕ್ಕೆ ಮತಿಗುಂದಿ ಲಯವಾದರೆಂದುಕೇಳಿಇಂದುಮುಖಿಯರ ಚಂದಕೆ ಹುಚ್ಚಿಟ್ಟುಕಂದರ್ಪವಿಶಿಖವೃಂದ ವಶಾಗಿ ನೂರೊಂದುಕುಲ ಯಮಮಂದಿರ ಹೊಂದಿಪಮಂದರಮದೋನ್ಮತ್ತಾಂಧರ ನೋಡಿ3ಸುರರ ಸಂಪದ ಪರಮಪದಕೆಕಾರಣವಾಗಿರೆ ಸುರೇತರರೆಲ್ಲಇರುಳೆ ಹಗಲೆ ಸೈರಿಸಲಾರದೆಒರಗಿಹೋದ ವಿವರಕೇಳಿದುರುಳಕೌರವರ್ವರ ಪಾಂಡವರಸಿರಿತಮ್ಮದೆಂದ್ಹುರಿದು ಹೋಗಿರೆಪರರ ದ್ರವ್ಯಕ್ಕೆ ಮರುಗಿ ಬಯಸಿನರರು ಕೆಡುವ ಪರಿಯ ನೋಡಿ 4ಪ್ರತಿದಿನ ನಿನ್ನ ಪ್ರತಿಮ ಪೂಜೆ ಸದ್ವ್ರತವ ಮಾಡಿ ಸತ್ಕಥೆಯ ಶ್ರೀಮಧ್ವಮತ ಮಹಿಮೆಯನತಿಕ್ರಮಿಸಿ ಕುತ್ಸಿತವೆನಿಸುವ ಪಥದಲಿಪತಿತರಾಗಿ ಸದ್ಗತಿಯ ಕಾಣದಚತುರ ಪರಿಯ ಅಮಿತ ಭಕ್ಷಕರಸ್ಥಿತಿಯರಿತು ಮಾನಾಥ ಪ್ರಸನ್ವೆಂಕಟಪತಿಯೆ ನೀ ಮಂದಸ್ಮಿತದಲಿ 5
--------------
ಪ್ರಸನ್ನವೆಂಕಟದಾಸರು