ರಾಮನ ನಾಮವ ಪ್ರೇಮದಿ ಭಜಿಸಲು
ರಾಮನು ವಲಿಯುವಾ ಬಿಡದೆ ಪಾಲಿಸುವಾ ಪ
ಕಾಮಿತ ವರಗಳ ನೀಯುತ ಭಜಕರ
ಸ್ವಾಮಿಯು ವಲಿದೆಮ್ಮ ನಿರುತ ಪಾಲಿಸುವಾ ಅ.ಪ.
ತರಳರ ಮಾತಿಗೆ ಸೈಯೆಂದು ನುಡಿಯುತ್ತ
ಪರಮ ಸಾಮ್ರಾಜ್ಯದ ಪದವಿಯ ಕೊಡುತ್ತಾ
ಸರಳರ ಹೃದಯವ ನೀಕ್ಷಿಸಿ ಜವದೊಳು
ಕರೆದು ಸಾಯುಜ್ಯದ ಪದವಿಯ ಕೊಡುವಾ 1
ದುರುಳರ ಸುಖಗಳಿಗಂತಕನಾಗುತ
ಶರಣರ ಪಿಡಿದು ಶಿಷ್ಟರನು ಕಾಯುತ್ತ
ಭರದಿಂದ ಸುಜನರ ಕಷ್ಟವ ತರಿವಾ 2
ಕೌಸಲೆ ಗರ್ಭದಿ ಬಂದ ಶ್ರೀಹರಿ ತಾನು
ವಾಸುಕಿ ಭಾರವ ನಿಳುಹಲಿಕ್ಕೆ
ವಾಸ ಮಾಡುವನೀಗ ವರ ದೂರ್ವಾಪುರದಲ್ಲಿ
ದಾಸನ ಸಲಹುವ ಕೇಶವನೆಂಬ 3