ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಯನೆತ್ತಿರೆ ನಾರೇರೆಲ್ಲರು ಪ ಕಾರುಣ್ಯ ಪಾಂಗಳಿಗೆ ಗೌರಿದೇವಿಗೆಅ.ಪ. ದೇವರಾಜ ಸೇವ್ಯಮಾನ ಪಾವನಾಂಘ್ರಿಗೆ ಜೀವಕೋಟಿಗನ್ನವಿತ್ತು ಕಾವ ದೇವಿಗೆ 1 ಸರ್ವ ಸೌಭಾಗ್ಯವೀವ ಶರ್ವಜಾಯೆಗೆ ಪರ್ವತೇಶ ತನಯಳಿಗೆ ಗರ್ವರಹಿತೆಗೆ 2 ರಕ್ಷೌಘ ಧ್ವಂಸಿನಿಗೆ ದಕ್ಷ ಕನ್ಯೆಗೆ ಲಕ್ಷ್ಮೀಕಾಂತನ ಭಗಿನಿ ಲಕ್ಷಣಾಂಗಿಗೆ 3
--------------
ಲಕ್ಷ್ಮೀನಾರಯಣರಾಯರು
ಜಗದಾದಿವಂದ್ಯನಿಗೆ ಶರಣುಪ ಪನ್ನಗಾನಗದೊಡೆಯ ಶರಣು 1 ತವಪದನಖಾಗ್ರಕೆ ಶರಣು2 ಮೂಡಲಾಗಿರಿಗೆ ಶರಣು ಗಿರಿಯ ಅಡಿದಾವರೆಗಳಿಗೆ ಶರಣು3 ನಡೆರ್ವಡಿಗಳಿಗೆ ಶರಣು4 ಮೆಟ್ಟು ಮೆಟ್ಟಲಿಗೆ ಶರಣು ಮನಮುಟ್ಟ ಮೆಟ್ಟಲೇರುತಿಹ ನಿನ್ನಿಷ್ಟ ಭಕ್ತರಿಗೆ ಶರಣು 5 ತನುಕಷ್ಟ ಹರಿಸಿ ಮನತುಷ್ಟಿಯನು ತೋರ್ವ ಬೆಟ್ಟದಂದಕ್ಕೆಲ್ಲ ಶರಣು 6 ಪರಿವಾರಕ್ಕೆಲ್ಲ ಶರಣು7 ಸ್ವರಶಬ್ದವಾಚ್ಯತವ ಶರಣು 8 ಚೆಲ್ವ ಗಾಳಿಗೋಪುರ ದ್ವಾರಕ್ಕೆ ಶರಣು 9 ಲೀಲೆಯಿಂದಲಿ ನಿನ್ನನೋಲೈಪ ಭಕ್ತರ ಪಾದಪಲ್ಲವಂಗಳಿಗೆ ಶರಣು 10 ಗೋವಿಂದ ಸಚ್ಚಿದಾನಂದ ಮುಕುಂದನೆಂದು- ಚ್ಚರಿಪ ಭಕ್ತರಿಗೆ ಶರಣು11 ಹರಿ ಹರೀ ಹರಿ ಎಂದು ಹರಿದಾರಿ ಪಿಡಿದ ವರ ಅಡಿದಾವರೆಗಳಿಗೆ ಶರಣು 12 ಪರಿಪರಿ ಭಾಧೆಯಿಂ ತರಳನ್ನ ಕಾಯ್ದ ಶ್ರೀ ನರಹರಿಯ ಚರಣಾರವಿಂದಕ್ಕೆ ಶರಣು 13 ತಿರುದಾರಿ ಮೊಣಕಾಲ ಮುರಿಗೆ ಶರಣು 14 ಭಕ್ತರಾಪತ್ತಳಿವ ಶಕ್ತಿಸಂಪತ್ತೀವ ಉತ್ತಮೋತ್ತಮ ಭಕ್ತರಾ ಮಂಟಪಕ್ಕೆ ಶರಣು 15 ಭಕ್ತಿಯಿಂದಲಿ ಸಪ್ತಗಿರಿಯ ದಾಟಿದ ಹರಿ- ಭಕ್ತಜನಸಂದೋಹಗಳಿಗೆ ಶರಣು 16 ಭಕ್ತರುಧ್ಧರಿಸಲು ನಿಂದ ಸಮೀರನಿಗೆ ಶರಣು17 ಜೀವರಿವರೆನ್ನುವರು ದರುಶನವನೀಯೆಂದು ಕ- ರವ ಮುಗಿದು ಹರಿಯ ಸ್ತುತಿಸುವಗೆ ಶರಣು 18 ಪಾವನಾ ಮೂರ್ತಿಯನು ಮಾನಸದಿ ಧೇನಿಸಲು ಭಾವಶುಧ್ದಿಯನೀವ ಜೀವೇಶನಿಗೆ ಶರಣು 19 ಸಚ್ಚಿದಾನಂದಾತ್ಮ ಶ್ರೀ ಮುಕುಂದನ ದಿವ್ಯ ಅರಮನೆಯ ಮಹಾದ್ವಾರಕ್ಕೆ ಶರಣು 20 ಸಿರಿ ಅವ್ಯಾಕೃತಾಕಾಶಾವರಣಕ್ಕೆ ಶರಣು 21 ತೀರ್ಥಮಹಿಮೋಪೇತ ಸ್ವಾಮಿಪುಷ್ಕರಣೀ- ತಟವಿರಾಜಿತ ಅಶ್ವತ್ಥವೃಕ್ಷರಾಜನಿಗೆ ಶರಣು22 ಭೂದೇವಿಯಾರಮಣ ಆದಿಭೂವರಹ ಮೂರ್ತಿಯ ಶ್ರೀಪಾದಯುಗ್ಮಕ್ಕೆ ಶರಣು 23 ಬ್ರಹ್ಮಾಂಡದೊಡೆಯನ ದಿವ್ಯ ನಿಲಯದೊಳಿರುವ ಬಹಿರಾವರಣಕ್ಕೆ ಶರಣು 24 ಸರ್ವಗುಣಸಂಪೂರ್ಣ ವೈಕುಂಠಮಂದಿರನ ಸ್ವರ್ಣಮಯ ಸುಪರ್ಣಸ್ಥಂಭಕ್ಕೆ ಶರಣು 25 ಗಮನ ನಿರ್ಗಮನವುಳ್ಳ ಸುಮನಸರ ಭಕ್ತಜನಸಂಘಕ್ಕೆ ಶರಣು26 ಅಂತರಾವರಣಕ್ಕೆ ಶರಣು 27 ಕಾಂಚನರೂಪ ಸುವರ್ಣಮುಖರೀನದಿ ವಿ- ರಾಜಿತ ತೊಟ್ಟಿತೀರ್ಥ ಸಮಸ್ತ ತೀರ್ಥಗಳಿಗೆ ಶರಣು 28 ಸುಮನಸರು ಹೃನ್ಮನದಿ ಧೇನಿಸುವ ಕಾಂಚನ ವಿಮಾನದಲಿ ಬೆಳಗುತಿಹ ಶ್ರೀ ಶ್ರೀನಿವಾಸನಿಗೆ ಶರಣು 29 ಭೂಗಿರಿಯ ಸೇರಿದ ಶ್ರೀಹರಿಗೆ ಶರಣು 30 ವಾರಿಯೊಳಗ್ಯೋಲಾಡಿ ಶ್ರೀಶೈಲದೊಳು ನಿಂ- ತ ಶ್ರೀಲೋ¯ನಾಗಿರ್ಪಗೆ ಶರಣು31 ಶೇಷ್ಠನೆನಿಸಿದ ದಿಟ್ಟ ಮೂರುತಿಗೆ ಶರಣು 32 ಧರೆಯ ಕೆದರೀ ಬಂದು ಗಿರಿಯ ವರಹನ ಬೇಡಿ ಮರುಳುಮಾಡಿದ ಮಾಯಾರಮಣನಿಗೆ ಶರಣು 33 ತರಳರೂಪವ ಕೆಡಿಸಿ ಗಿರಿಯ ಹುದರಯೊಳಡಗಿ ಸುರಜೇಷ್ಠನೆಂದೀಗ ಪೂಜೆ ಗೊಂಬುವಗೆ ಶರಣು 34 ವಟಪತ್ರಶಾಯಿ ನೀ ವಟುವಾಗಿ ಬೇಡಿ ಭ- ವಾಟವಿಯ ದಾಟಿಸಲು ನಿಂದವಗೆ ಶರಣು 35 ಪೆತ್ತಮಾತೆಯ ಹರಿಸಿ ಮೆತ್ತನಿಲ್ಲಿಗೆ ಬಂದು ಉತ್ತಮಾಗತಿಪ್ರದ ಸರ್ವೋತ್ತಮಗೆ ಶರಣು 36 ಕ್ಷಿತಿಸುತೆಯ ಮಾತನು ಹಿತದಿ ಪಾಲಿಸೆ ವೇದ- ವತಿಯ ಪತಿಯಾಗಿ ನಿಂದವಗೆ ಶರಣು 37 ಗುಟ್ಟಾಗಿ ಪಾಲ್ಕುಡಿದು ಪೆಟ್ಟಿನಾ ನೆಪದಲ್ಲಿ ದೃಷ್ಟಿಗೋಚರನಾದ ಬೆಟ್ಟದೊಡೆಯನಿಗೆ ಶರಣು38 ಉತ್ತಮಾಸ್ತ್ರೀಯರಿಗೆ ನಾಚಿ ಬತ್ತಲೆಯಾಗಿ ಹುತ್ತದೊಳು ಅಡಗಿಯೆ ಮೆರೆದವಗೆ ಶರಣು 39 ಸಿರಿಯ ಹಯವನು ಮಾಡಿ ಚರಿಸಿ ಹರಿಸಿಕೊಂಡವನಿಗೆ ಶರಣು 40 ಹಿರಣ್ಯಗರ್ಭನ ಜನಕ ಸನ್ಮಹಿಯ ಸನ್ನಿಧಿಯ ಕನಕಮಯಕವಾಟಕ್ಕೆ ಶರಣು 41 ತಟಿಕ್ಕೋಟಿನಿಭ ಪೂರ್ಣ ಸಂಪೂರ್ಣ ಲಕ್ಷಣ ಸನ್ಮಾಂಗಳಾ ಸುಂದರ ಮೂರ್ತೇ ತವ ಶರಣು42 ಮುಕ್ತಾಮುಕ್ತಗಣ ವಂದಿತಾ ತವ ಶರಣು43 ನಂದಸುನಂದನ ಜಯವಿಜಯಾದಿ ಪಾ- ಸಂಸೇವ್ಯಮಾನ ತವ ಶರಣು44 ಸರ್ವಾಂಗುಳ್ಳಂಗುಷ್ಠದಳ ವಿಲಸಿತ ಸತ್ ಪಾದ- ಪಂಕಜ ಧ್ವಜ ವಜ್ರಾಂಕುಶಾದಿ ಸುಚಿಹ್ನ ಚಿಹ್ನಿತ ತವ ಶರಣು 45 ಗುಲ್ಫಾರುಣನಖ ಧೃತಾ ದೀಧಿತಿಯುಕ್ತ ತವ ಶರಣು 46 ಬೃಹತ್ ಕಟಿತಟಶ್ರೋಣಿ ಕರಭೋರು ದ್ವಯಾನಿಶ್ರ ತವ ಶರಣು 47 ವೈಜಯಂತಿ ವನಮಾಲ ತವ ಶರಣು 48 ಪ್ರಲಯ ಪೀವರಭುಜ ತುಂಗಂಶೋರಸ್ಥ ಲಾಶ್ರಯ ತವ ಶರಣು 49 ನ್ವಿತ ತವ ಶರಣು50 ಚಾರುಪ್ರಸನ್ನವದನ ಮಂದಹಾಸ ನಿರೀಕ್ಷಣ ಸು- ಭದ್ರನಾಸ ಚಾರುಸುಕರ್ಣ ಸುಕಪೋಲಅರುಣ ತವ ಶರಣು 51 ಸಹಸ್ರ ಫÀಣಶಿರೋಮಣಿಪ್ರಭಾನ್ವಿತ ಶೇಷಶೈಲಸ್ಥ ಶಾಂತ ಪದ್ಮಪತ್ರಾಯತೇಕ್ಷಣ ತವ ಶರಣು 52 ಅನಂತವೇದೋಕ್ತ ಮಹಿಮೋಪೇತ ಸರ್ವಸ್ವರವರ್ಣ ಸರ್ವಶಬ್ದವಾಚ್ಯ ಪ್ರತಿಪಾದ್ಯ ಶರಣು 53 ಸಚ್ಚಿದಾನಂದಾತ್ಮ ಸರ್ವಸುಗುಣೋಪೇತ ಸರ್ವ ಹೃತ್ಕಮಲಸ್ಥಿತ ತವ ಶರಣು 54 ಅಣುತ್ರ್ಯಣು ತೃಟಿಲವ ಕ್ಷಣಾದಿಕಾಲ ಮಹ- ತ್ಕಾಲಾತ್ಮಕ ನಿತ್ಯನಿರ್ಮಲಮೂರ್ತೇ ತವ ಶರಣು 55 ಪರ ಮೇಷ್ಟಿವಂದಿತ ತವ ಶರಣು 56 ತೈಜಸ ಪ್ರಾಜ್ಞ ತುರ್ಯಾ ದ್ಯಷ್ಟರೂಪಾತ್ಮಕ ತವ ಶರಣು57 ಕಂಸಾರಿ ಮುರಾರಿ ಶ್ರೀಹರಿಯೆ ಶರಣು58 ಭವರೋಗಭೇಷಜ ಭಕ್ತಜನಬಂಧೋ ಮುಚುಕುಂದವರದ ಗೋವಿಂದ ಶರಣು 59 ಮುಕ್ತಾಮುಕ್ತಾಶ್ರಯ ಭಕ್ತಜನಸಂರಕ್ಷಣಾ ವ್ಯಕ್ತಾವ್ಯಕ್ತ ಮಹಿಮ ತವ ಶರಣು 60 ತತ್ತದಾಕಾರ ಜಗದಾಪ್ತ ಶರಣು 61 ಚೇತನಾಚೇತನ ವಿಲಕ್ಷಣ ಸ್ವಗತಭೇದವಿವ- ರ್ಜಿತ ಪತಿತಪಾವನಮೂರ್ತೇ ತವ ಶರಣು 62 ಕ್ಷರಾಕ್ಷರ ಪರುಷಪೂಜಿತ ಪಾದ ಪುರಾಣಪುರುಷೋತ್ತಮನೆ ಶರಣು 63 ರವಿಕೋಟಿಕಿರಣ ರತ್ನಕನಕಮಯ ಮುಕು- ಟಾನ್ವಿತ ತವಶಿರಸ್ಸಿಗೇ ತವ ಶರಣು 64 ಸುಂದರಾನಂದ ಆನನಕೆ ಶರಣು 65 ಶ್ರೀಲೋಲ ಶರಣು 66 ಪೂವಿಲ್ಲನಾ ಬಿಲ್ಲ ಪೋಲ್ವ ಹುಬ್ಬು ಕಂಜ - ದಳದೋಲ್ ಚಂಪಕಾಮುಗುಳಿಗೆಣೆನಾಸಿಕಕೆ ಶರಣು 67 ಮಕರ ಕರ್ಣಕುಂಡಲಾನ್ವಿತ ತವ ಕರ್ಣಕ್ಕೆ ಶರಣು 68
--------------
ಉರಗಾದ್ರಿವಾಸವಿಠಲದಾಸರು
ಜಲಜಾಪ್ತ ಸಂಕಾಶ ಲಲಿತ ಸನ್ಮøದುಹಾಸ ಕಲಿಕಲುಷ ವಿಧ್ವಂಸ ಪರಮಹಂಸ ಶರಣಜನ ಸಂರಕ್ಷ ಸುರವಿರೋಧಿ ವಿಪಕ್ಷ ಧರ್ಮರಕ್ಷಣ ದೀಕ್ಷ ಶ್ರೀಕಟಾಕ್ಷ ಸರಸಿಜಾಯತನಯನ ಶರದಿಂದುನಿಭವದನ ದುರುಳ ಮ್ಲೇಂಛನಿಹನನ ತುರಗವದನ ಧುರಧೀರ ಶ್ರುತಿಸಾರ ಸುರುಚಿರಾಂಗದ ಹೀರ ವರಹಾರ ಕಂಧರ ಭಯವಿದೂರ ಕಮಲಾಸನಾದಿ ಸಂಸೇವ್ಯಮಾನ ಅಮರಸಂಕುಲತೋಷ ದಿವ್ಯವೇಷ ವಿಮಲ ಶೇಷಾದ್ರೀಶ ಶ್ರೀನಿವಾಸ
--------------
ನಂಜನಗೂಡು ತಿರುಮಲಾಂಬಾ
ಸುವ್ವಿ ಶ್ರೀ ದೇವಿರಮಣ ಸುವ್ವಿ ಸರ್ಪರಾಜಶಯನ ಹರಣ ಸುವ್ವಿ ನಾರಾಯಣ ಪ ಭವ್ಯಚರಿತ ದುರಿತವಿಪಿನ ಹವ್ಯವಾಹನ ಭವೇಂದ್ರಾದಿ ಸೇವ್ಯಮಾನ ಸುಪ್ರಸಿದ್ಧ ಸುಲಭsÀ ಮೂರುತಿ ಅವ್ಯಯಾಮಿತ ಸುಖಾತ್ಮ ದಿವ್ಯ ಮಹಿಮೆ ತುತಿಪೆ ಸುವಿವೇಕಿಗಳಿಗೆ ಕೊಡುವುದಮಿತ ಮೋದವ 1 ವಾಸವಾದ್ಯಮರ ವಾರಾಶಿ ಶಾರದೇಂದು ಮಧ್ವ ದೇಶಿಕಾರ್ಯ ಚಿತ್ತ ಸಿಂಹಪೀಠಮಧ್ಯಗ ದೇಶಕಾಲ ವ್ಯಾಪ್ತ ಸರ್ವೇಶ ಸಾರ್ವಭೌಮ ಶ್ರೀಮ ಹೀ ಸಮೇತ ಕೃಷ್ಣ ಕೊಡಲಿ ಎಮಗೆ ಮಂಗಳ 2 ಕಮಲ ಸಂಭವನ ವೇದ ತಮನು ಒಯ್ಯತಿರಲು ಲಕ್ಷ್ಮೀ ಶರಧಿ ಮಥನದಿ ಕಮಠ ರೂಪಿನಿಂದ ಸುರರಿಗಮೃತವಿತ್ತು ಕಾಯ್ದ ಅಖಿಳ ಸುಮನಸೇಂದ್ರ ಸ್ವಾಮಿ ಕೊಡಲಿ ಎಮಗೆ ಮಂಗಳ 3 ಕನಕ ಲೋಚನನ ಸದೆದು ಮನುಜಸಿಂಹ ವೇಷನಾದ ದ್ಯುನದಿ ಪಡೆದು ಜನನಿ ಕಡಿದು ವನವ ಚರಿಸಿದ ಜನಪ ಕಂಸನ್ನೊದೆದು ತಿರಿಪುರವನಿತೆಯರ ಸುವ್ರ್ರತ ವಿನುತ ಕಲಿ ದೇವರಾಜ ಎಮ್ಮ ಸಲಹಲಿ 4 ಪಾಹಿ ಪಾವನ ಚರಿತ್ರ ಪಾಹಿ ಪದ್ಮ ಪತ್ರನೇತ್ರ ನಿಗಮ ಗಾತ್ರ ಮಾಂ ಪಾಹಿ ಸಜ್ಜನಸುಮಿತ್ರ ಪಾಹಿ ದೋಷದೂರ ಸುಗುಣ ಪಾಹಿ ಜಗನ್ನಾಥ ವಿಠಲ ಜಯ ತ್ರಿಧಾಮಗ 5
--------------
ಜಗನ್ನಾಥದಾಸರು
ಅರ್ಚನೆ ಮಾಡಿರಯ್ಯ ಶ್ರೀ ಭಗವದರ್ಚನೆ ಮಾಡಿರಯ್ಯಅರ್ಚನೆ ಮಾಡುವ ಅರ್ಚಕ ಬುಧರಿಗೆಅರ್ಚಿಪ ಪದದಲ್ಲಿಅಚ್ಯುತದೊರೆವನೆಂದುಪ.ಅಂತರಂಗದ ಶುದ್ಧಿಲಿ ತನ್ನ ಬಾಹ್ಯಂತರ ಪರಿಪೂರ್ಣನಚಿಂತಿಸಿ ಸರ್ವಸ್ವತಂತ್ರ ಶ್ರೀ ಹರಿವೇದತಂತ್ರೋಕ್ತ ಪಥದಿ ನಿರಂತರ ಮರೆಯದೆ 1ಪೃಥುಧ್ರುವ ಅಂಬರೀಶ ಸುಧರ್ಮಜ ದಿತಿಜೋದ್ಭವ ಅಕ್ರೂರಕೃತವರ್ಮ ಸಾತ್ಯಕಿ ಯದುಕುಲ ಸುರಖಷಿಯತಿತತಿ ಅರ್ಚಿಸಿ ಅತಿಧನ್ಯರಾದರೆಂದು 2ಅನಂತಮೂರ್ತಿಯೊಳು ತನಗೊಂದು ಧ್ಯಾನಕ್ಕೆ ತಂದುಕೊಂಡುಆನಂದತೀರ್ಥರ ಸಂತತಿಗಳಿಂದತಾನು ಇಷ್ಟನಾಗಿ ನಾರಾಯಣನಾತ್ಮನೆಂದು 3ಬ್ರಹ್ಮಸ್ತೋತ್ರದಿ ಸಹಸ್ರ ಸನ್ನಾಮಪೂರ್ವಕ ಸ್ತೋತ್ರದಿಶ್ರೀಮತ್ಪಂಚಸೂಕ್ತ ಪಂಚಾಮೃತ ಸ್ನಾನರಮ್ಯಾಯುಧ ಕೌಸ್ತುಭಮಣಿ ಮಾಲೆಯಿಂದ 4ಧ್ಯಾನಾವಾಹನ ಸ್ನಾನ ಸುಪಾದ್ಯಾಚಮನಾಘ್ರ್ಯ ಧೂಪದೀಪ ಪ್ರಸೂನ ತುಳಸಿ ಗಂಧಮೋಘ ನೈವೇದ್ಯದಿಂಮಾನಸಾರ್ಚನೆ ಪ್ರತ್ಯಕ್ಷಾಗಲಿ ಎಂತೆಂದು 5ವೀರಾವರ್ಣದ ಮಧ್ಯದಿ ಶ್ರೀ ಮಧುಕೈಟಭಾಂತಕ ಕೃಷ್ಣನಕೋಟಿಕಾಂಚನ ರತ್ನಾಭರಣವೈಜಯಂತಿಕಿರೀಟಕುಂಡಲದಾಮಹಾರ ನೂಪುರಗಳಿಂದ6ದಿವ್ಯಾಂಬರ ಭೂಷಣ ನವರತುನ ಭವ್ಯ ಮಂಟಪವಸನಅವ್ಯಾಕೃತಾಧ್ಯಕ್ಷ ಶ್ರೀಭೂಮುಕ್ತಾಮುಕ್ತಸೇವ್ಯಮಾನನಾಪಾದ ಮೌಳ್ಯಾಂತ ವೀಕ್ಷಿಸಿ7ಬಹು ನೀರಾಂಜನಗಳಿಂದ ಸದ್ವೇದೋಕ್ತ ಗಹಗಹನ ಸೂತ್ರಂಗಳಿಂದಅಹಿವರಶಯನಜ ಭವಾಹಿಪ ವಿಪ್ರವಂದ್ಯಮಹಿಮನನಂತನೆಂತೆಂದು ಪರವಶದಿಂದ 8ತಾಳದಂಡಿಗೆ ಜಾಗಟೆ ಶಂಖ ಮದ್ದಳೆ ಕಂಸಾಳೆಭೇರಿಆಲಾಬುತಂಬೂರಿಭಾಗವತಗಾನಮೇಳೈಸಿ ತುತೂರಿ ವಾಜಂತ್ರಿ ಘೋಷದಿಂದ 9ಅಲವಬೋಧರು ಪೇಳಿದ ಪೂಜಾವಿಧಿಗಳ ಪ್ರದಕ್ಷಿಣೆ ಪ್ರಮಾಣಲಲಿತ ಗೀತ ನೃತ್ಯ ಬಲು ಪ್ರೇಮದಲಿ ಮಾಡಿಹೊಳೆವ ಬಿಂಬಾತ್ಮನ ಕಾಂಬ ಲವಲವಿಕೆಯಿಂದ 10ಆತ್ಮ ಕರ್ತೃತ್ವನೀಗಿಸರ್ವಾಂತರಾತ್ಮ ಪರಮಾತ್ಮನೆಂದುಆತ್ಮ ಮತ್ತೆ ಜಾÕನಾತ್ಮ ಪ್ರೇರಕ ಪ್ರೇರ್ಯಾತ್ಮ ನಿವೇದನ ಭಕ್ತಿ ನವಕಗಳಿಂದ 11ಸರ್ವೇಂದ್ರಿಯ ಮನಸ್ಥ ಮುಖ್ಯಪ್ರಾಣನೋರ್ವ ನಿಯಂತ್ರಹರಿಸರ್ವ ಪ್ರೇರಕನೆಂಬೊ ವಿಜ್ಞಾನಮಾರ್ಗದಿಸರ್ವಕಾಲದಲಿ ಸರ್ವಸಮರ್ಪಣೆಯೆಂದು 12ಮಂದಜನರು ಭಕ್ತಿಲಿ ದೂರ್ವನೀರಿಂದೆ ಪೂಜೆಯ ಮಾಡಲುತಂದೆ ಪ್ರಸನ್ವೆಂಕಟಕೃಷ್ಣ ಕಾರುಣ್ಯಸಿಂಧುಪ್ರಸನ್ನಾತ್ಮಬಂಧು ಮುಕ್ತಿಯನೀವ13
--------------
ಪ್ರಸನ್ನವೆಂಕಟದಾಸರು