ಒಟ್ಟು 11 ಕಡೆಗಳಲ್ಲಿ , 9 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಸತ್ಯಬೋಧರು ನೋಡಿ ಧನ್ಯನಾದೆ ಸತ್ಯಬೋಧರಾಯಾ ಬೇಡಿದೊರುವ [ಬೇಡಿದ ವರವ] ನೀಡುವ ಪರಮದಯಾಕರನಾ ಪ ರಘುರಾಮನ ಸೇವೆಯನ್ನು ಮಾಡ್ದ ಮಹಿಮನಾ ಪೊಗಳಿ ಪಾಡುವರಿಗೆ ಮುಕ್ತಿ ಪಥವ ತೋರ್ವನಾ 1 ವಿಷವ ಮೆದ್ದು ಹರಿಕೃಪೆಯಿಂ ಜೀರ್ಣಿಸಿದವನಾ ಆಶೀರ್ವದಿಸಿ ಖಂಡೆರಾಯನುದ್ಧರಿಸಿದವನಾ 2 ವರಭೂಸುರರಾಡಿದ ನಿಂದೆಯನು ನುಡಿಯನಾ ತ್ವರದಿ ಕೇಳಿ ತೋರಿದನು ಇವನು ಸೂರ್ಯನಾ 3 ಕೊಡು ಭಕುತಿಯನು ನಿನ್ನೊಳು ಗುರುಸತ್ಯಬೋಧನೆ ಬಿಡಿಸೊ ನಿನ್ನ ಅಡಿಗೆ ಕಟ್ಟಿಕೊಳೈ ಕೊರಳನೆ 4 ಹರಿವಾಯುಗಳಲಿ ಕೊಡು ನೀ ನಿಜ ಭಕುತಿಯನೆ ವರದ ಶ್ರೀ ಹನುಮೇಶವಿಠಲನಡಿ ಸೇವಕನೇ 5
--------------
ಹನುಮೇಶವಿಠಲ
ಅಹಹ ಮರುಳನಾದೆ ಸುಮ್ಮನೆ ಪೂರ್ವ ಮಹಿಮ ಹರಿಯ ಸೇವೆಯನ್ನು ಸಹಿಸಿಕೊಂಡು ಗ್ರಹದೊಳಿರದೆ ಪ. ಇಂದಿರೇಶನಿರವನರಿಯದ ಮೂರ್ಖರಾದ ಮಂದಮತಿಗಳಾದ ಕುಜನರ ಬಂದು ಸೇರಿ ಬುದ್ಧಿಹೀನರೆಂದ ನುಡಿಯ ಕೇಳಿ ಬಹಳ ಮೂರ್ತಿ ಬಿಟ್ಟು 1 ತರಣಿ ತಿಮಿರವಟ್ಟಿಲಿರುವದೆ ಸಿಂಹರಾಜ ಮರಿಯ ಕೂಡೆ ನರಿಯು ಬರುವುದೆ ಮರುಳತನದ ಭಾಗ್ಯವೆಂಬೀ ನರಕ ಪಾತ್ರರಾದ ಜನರು ಪಾದ ಪದ್ಮದಾಸ ಚರಿಯವೆಂದು ತಿಳಿವರುಂಟೆ 2 ನೀರಗುಳ್ಳೆಕಿಂತ ಲಘುತರವಾದ ಸಂಸಾರ ಸಂಬದ್ಧ ಪರಿಸರ ಸೇರಿ ಹಿಂದೆ ನಡೆದ ತಪ್ಪ ನೀರಜಾಕ್ಷ ಕ್ಷಮಿಸಿ ಮಹಾ- ದ್ವಾರದೆಡೆಗೆ ಕರಸಿಕೊಳ್ಳೊ ಭೂರಮೇಶ ವೆಂಕಟೇಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಲ್ಲರೂ ದಾಸರಹರೇ ಪ ಪುಲ್ಲನಾಭನ ದಯವಿಲ್ಲದೆ ಅ.ಪ. ಜ್ಞಾನವಿಲ್ಲ ಭಕುತಿಯಿಲ್ಲ ಧ್ಯಾನ ವೈರಾಗ್ಯ ಮೊದಲೆ ಇಲ್ಲ ಹೀನ ಕರ್ಮಗಳನು ಮಾಡಿ ಶ್ರೀನಿವಾಸನ ಮರೆತವರು 1 ಪರವಧುವಿನ ರೂಪ ಮನದಿ ಸ್ಮರಣೆ ಮಾಡುತ ಬಾಯಿಯೊಳು ಹರಿಯ ಧ್ಯಾನ ಮಾಡುತಿರುವ ಪರಮ ನೀಚರಾದ ಜನರು 2 ಪಟ್ಟೆನಾಮ ಹಚ್ಚಿ ಕಾವಿ ಬಟ್ಟೆಯನ್ನು ಹೊದ್ದುಕೊಂಡು ಅಟ್ಟಹಾಸ ತೋರಿಕೊಳುತ ಗುಟ್ಟು ತಿಳಿಯದಿರುವ ಜನರು 3 ದೊಡ್ಡ ತಂಬೂರಿಯ ಪಿಡಿದು ಅಡ್ಡ ಉದ್ದ ರಾಗ ಪಾಡಿ ದುಡ್ಡುಕಾಸಿಗಾಗಿ ಭ್ರಮಿಸಿ ಹೆಡ್ಡರಾಗಿ ತಿರುಗುವವರು 4 ನೋವು ಬಾರದಂತೆ ಸದಾ ಓವಿಕೊಂಡು ಬರುತಲಿರುವ ದೇವ ರಂಗೇಶವಿಠಲನ ಸೇವೆಯನ್ನು ಮಾಡದಿರುವ 5
--------------
ರಂಗೇಶವಿಠಲದಾಸರು
ಓದಲೇಕೋ ಬರಿದೆ ಓದಲ್ಯಾಕೋ ಪ ಆದಿ ಮಧ್ಯ ಅಂತ್ಯವೆಂಬೊ ನಾದಬಿಂದು ಕಳೆಯನು ಅರಿಯದೆ ಅ.ಪ ಏಳಬೇಕೋ ನಾರಿಯಾಳಬೇಕೋ ಏಳು ಎಂಟು ಆತ್ಮವಿಚಾರ ತಾಳಿ ತತ್ವ ಜ್ಞಾನವನ್ನು ನೀಲಜ್ಯೋತಿಯನ್ನು ಕಾಣದೆ ಜಾಲಾಮಾನಿನಿಯರೊಳು ಬೆರೆದೂ 1 ಓದಬೇಕೋ ಓದದ್ದೋದಬೇಕೊ ಓದಿತಾವೊಂದಕ್ಷರವನ್ನು ಪಾದಸೇವೆಯನ್ನು ಕೊಟ್ಟಾ ಭೋಧಾಚಾರ್ಯನೆಂಬೊ ತುಲಸೀ ಆದಿಪ್ರಣವವನ್ನು ಬಿಟ್ಟುವೋದಲೇಕೊ 2
--------------
ಚನ್ನಪಟ್ಟಣದ ಅಹೋಬಲದಾಸರು
ಕಮಲ ಭಜಿಸೋ ಮೈಲಾರ ಲಿಂಗನ ಪ ಪುರಹರ ಸ್ವರೂಪನೆ ಎಂದು ಧ್ಯಾನಿಸೋ ಪಾತಕ ತಿಮಿರ ಭಾಸ್ಕರನೆಂದು ನೀ ಸ್ಮರಿಸೋ ಶಿರಬಾಗಿ ನಮಿಸೋ ಅ.ಪ ತುರಗವಾಹನವೇರಿ ಬರುತಿಹನ ಧರೆಯೊಳಗೆ ಮೈಲಾಪುರ ಸುಮಂದಿರನೆಂದು ಕರೆಸುವನಾ ಹೊನಕೆರೆಯ ಜಲದಭಿಷೇಕದಿಂದ ರ್ಚನೆಯ ಕೊಂಬುವನ ಶರಣರನ ಪೊರೆವನ 1 ಕಾಲಕಾಲದಿ ಪಾಲಕಿಯ ಉತ್ಸವದಿ ಮೆರೆಯುವನ ಅನು ಗಾಲಭಕುತರ ಮ್ಯಾಳವನು ಪಾಲಿಸಲು ಬಂದಿಹನ ಕೇಳಿ ದ್ವರಗಳ ಕೊಡುವ ಘನ ತ್ರಿಶೂಲ ಧರಿಸಿಹನ ಮಾಳಸಾಕಾಂತನ 2 ನಿಷ್ಠೆಯಿಂದಲಿ ಭಜಿಪ ಭಕುತರನ ರಕ್ಷಿಸಲು ಕೊಪ್ಪರ ಕಟ್ಟಿಯಲಿ ಸೇವೆಯನ್ನು ಕೊಳುತಿಹನ ಸಿರಿ ವಿಷ್ಣು ಭಕುತರ ಮನೆಗಳಲಿ ಪೂಜೆಯನು ಕೊಂಬುವನ ಇಷ್ಟ ಪ್ರದಾತನ3 ಸಂಚರಿಸುತಲಿ ದಿನಕರನು ಮಕರದಿ ಬರಲು ಸಂಕ್ರಮಣ ಉತ್ಸವದಿ ನೋಡಲು ನೆರೆದ ಬಹು ಜನ ರಿಂದ ಸೇವಿತನ ಗಿರಿಶಿಖರ ಗುಂಡಿನ ಮೇಲೆ ದೀಪೋತ್ಸವದಿ ರಾಜಿತನ ಮಹಿಮಾನ್ವಿತನ 4 ವಿನುತ ಶುಭಚರಣ ಸರೋಜ ಕಾರ್ಪರ ನಾರಸಿಂಹನ ಒಲಿಮೆ ಪಡೆ ದಿಹನಾ ರವಿವಾರ ವಾರದಿ ಮಾರ್ತಾಂಡದೇವನ5
--------------
ಕಾರ್ಪರ ನರಹರಿದಾಸರು
ತಾತ್ಸಾರಕಿದು ಕಾಲವಲ್ಲ ರಂಗಯ್ಯ ಶ್ರೀ- ವತ್ಸಲಾಂಛನ ಸುಖ ಚಿನ್ಮಯನೆ ವತ್ಸನ ಧ್ವನಿ ಕೇಳಿ ಒದಗುವ ಗೋವಂತೆ ಭೃತ್ಯರ ಸಲಹುವ ಬಿರುದುಳ್ಳ ನರಸಿಂಹ ಪ. ಹುಚ್ಚಾಗೆಲ್ಲರ ಕಚ್ಚುವ ನಾಯಂತೆ ತುಚ್ಛವಾದ ಬಗುಳುಚ್ಚರಿಸಿ ಇಚ್ಛಾನುಸಾರದಿಂದಿರುವ ಹೂಣನ ಬಾಯಿ ಮುಚ್ಚಿಸಿ ಮೂಲೆಯೊಳ್ಮುರಿದೊತ್ತು ಮುರಹರ 1 ನಿನ್ನ ಸೇವೆಯನ್ನು ನಿರುತದಿ ನಡೆಸುತ ಅನ್ಯರ ಲಕ್ಷಿಸದಿರಲೆನ್ನನು ಭಿನ್ನ ಭಾವದಿ ಭೀತಿ ಬಡಿಸುವ ದುಷ್ಟನ ಇನ್ನುಪೇಕ್ಷಿಸಿ ಸುಮ್ಮನಿರುವೆ ಯಾತಕೆ ಸ್ವಾಮಿ 2 ದುಷ್ಟ ಹಿರಣ್ಯಚರ್ಮಾದಿದಮನ ನಿನ- ಗೆಷ್ಟೆಂದು ಪೇಳಲಿ ವಿಧಿಜನಕ ಸೃಷ್ಟಿಗೊಡೆಯ ವೆಂಕಟೇಶನ ಹೂಣನ ಮಾಧವ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಾಳಲಾರೆ ರಂಗಯ್ಯ ನಾ ತಾಳಲಾರೆ ತಾಳಲಾರೆ ಕರುಣಾಳು ರಾಜೇಂದ್ರನೆ ಖೂಳ ಜನರು ಕೂಡಿ ಪೇಳುವ ನುಡಿಯನ್ನು ಪ. ದೇವ ನಿನ್ನ ಪಾದಾಂಬುಜ ಸೇವೆಯನ್ನು ಭಾವಶುದ್ಧದಿ ಮಾಳ್ವ ಭಾಗ್ಯ ಪೊಂದಿರಲು ಮೂ- ದೇವಿ ಎಂದೆನ್ನನು ಮೂದಲಿಸುವ ಮಾತ 1 ಹೇಡಿ ಜನರು ಮನಕೆ ಬಂದಂ- ತಾಡುತ್ತಿಹರು ರೂಢಿಪ ಮುಖದಿ ನೀ ಮಾಡುವ ಕೃತ್ಯದ ಪ್ರೌಢಿಮೆಯರಿಯದೆ ಮೂಢ ಜನರ ಮಾತ 2 ಹೆತ್ತ ಮಗನು ಹಸ್ತಕನಾಗಿ ಹತ್ತಲಿರಲು ಉತ್ತಮ ಪದವಿಯ ತೊತ್ತಿನ ಕುವರರಿಗಿತ್ತದು ಸರಿಯೆ ಸ- ರ್ವೋತ್ತಮ ದೊರೆಯೆ ನಾ 3 ತೋರೊ ಸೂಕ್ತಿ ತಾತ್ಸಾರವ್ಯಾಕ- ಪಾರ ಯುಕ್ತಿ ಕ್ರೂರ ಮಾನವರಹಂ- ಕಾರ ಖಂಡಿಸಿ ಮುಖ್ಯ ಧಾರುಣಿ ಪರೊಳಂತ:ಪ್ರೇರಿಸುವುದು ಶಕ್ತಿ 4 ಲೋಕನಾಥ ನೀನಹುದೆಂಬ- ದ್ಯಾಕೆ ಗಾಥಾ ಈ ಕಪಟದ ಕೃತ್ಯ ಯಿಕ್ಕಡಿವುತ ಬೇಗ ಸಾಕೆನ್ನ ಭಕ್ತ ಪ- ರಾಕು ವೆಂಕಟನಾಥ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮನುವಂಶ ಜಲಧಿಜಾತೆ ಸೀತೆ ಪೊರೆಯೆ ಜಾನಕಿ ಘನ ಪುಣ್ಯವಿನಯೆ ದಿವ್ಯರೂಪೆ ಜನನಿ ಭಾಮಿನಿ ಪ ರಾಮಚಂದ್ರ ಭಾಸಮಾನ ಹೃದಯ ಕುವಲಯೆ ಕಾಮದಗ್ಧ ದನುಜನಯನ ಕಾಲರೂಪಿಣಿ 1 ಲಕ್ಷ್ಮಣಾದಿ ಭಕ್ತಪಾಲೆ ನಿತ್ಯರೂಪಿಣಿ ಚಿತ್ತದಲ್ಲಿ ನೆಲಸು ದೇವಿ ತತ್ವಭೂಷಿಣೆ 2 ಆದಿಶಕ್ತಿ ಭೇದರಹಿತೆ ಮೋದದಾಯಕಿ ಮಾಧವಾಂಘ್ರಿ ಯುಗಳ ಸೇವೆಯನ್ನು ಕರುಣಿಸು 3 ಭೂಮಿತನಯೆ ಭೂಮ ಮಹಿಮೆ ಕಾಮಿನೀ ರಮೆ ಸಾಮಜಾಕರೋರು ಯುಗಳೆ ರಾಮ ಸುಂದರಿ4 ಪಂಕಜಾದಿ ಕುಸುಮಲೋಲೆ ಶಂಕರೀಪ್ರಿಯೆ ಅಂಕದಲ್ಲಿ ಪೊರೆಯೆ ಮಾತೆ ಪಂಕಜಾನನೆÀ 5
--------------
ಬೇಟೆರಾಯ ದೀಕ್ಷಿತರು
ಯಾಕೆ ಈ ದಾಸನನು ಸಲಹಲೊಲ್ಲೆ ಶ್ರೀಕಾಂತ ಭಕ್ತನನು ಕಾಯಲೊಲ್ಲೆ ಪ ತರಳತನದಲಿ ನಾನು ಪಾಪಗಳ ಮಾಡಿದರೆ ಪರಮಾತ್ಮ ಸದ್ಗುರುವೆ ತಿಳಿದು ಮಾಡಿದನೇ ನಿರುತ ಯೌವನದಲ್ಲಿ ಪಾಪಗಳ ಮಾಡಿದರೆ ಅರಿತು ಮಾಡಿದೆನೆಂದು ಬಗೆದೆಯಾ ಹರಿಯೇ 1 ಈಗ ವಾರ್ಧಿಕ್ಯದಲಿ ಪಾಪಮಾಡಿದೆನೆಂದು ನಾಗೇಶಶಯನನೇ ಮುನಿದೆಯಾ ಹರಿಯೇ ಜಾಗುಮಾಡದೆ ನೀನು ಅಜಮಿಳಗೆ ವಲಿದಂತೆ ಬೇಗನೇ ಸಲಹಯ್ಯ ನಾಮಸ್ಮರಿಸುವೆನೊ2 ಹರಿಸೇವೆಯನ್ನು ನಾ ಭಕ್ತಿಯಲಿ ಗೈವೇ ಹರುಷದಿಂ ಹರಿಯೆಂನ ಪಾಪಗಳ ಕ್ಷಮಿಸುತ್ತ ಸಿರಿ ಚನ್ನಕೇಶವನೆ ಮುನಿಯದಿರು ತಂದೆ 3
--------------
ಕರ್ಕಿ ಕೇಶವದಾಸ
ಯಾಕೆ ಮರುಳಾದೆ ಹೀಂಗೆ ಎಲೆ ಮನವೆ ಕಾಕು ಬುದ್ಧಿಯ ಬಿಡು ಬಿಡು ಸುಮ್ಮನೆ ಪ. ಧನದಾಸೆಯನು ಮರಿ ಮನುಮಥನ ಬಾಣಕಳುಕದಿರು ತೊಳಲದಿರು ನೆಲದಾಸೆಗೆ ನೀನದರ ಅನುವರಿತು ಹರಿಯ ಸ್ಮರಿಸು ಮನವೆ 1 ಅನ್ಯರಾಗುಣ ದೋಷಯಣಿಸದಲೆ ನಿನ್ನಿರವ ನೋಡು ಕಂಡ್ಯಾ ಮನವೆ ಬಂಣಗಾರಿಕೆಯು ಬರಿದೆ ಔದಂಬ್ರ- ಹಣ್ಣಿನಂತೀ ಕಾಯವು ಮನವೆ 2 ತಮ್ಮ ಬುದ್ದಿ ತಲೆಗೆ ಸುತ್ತಿ ಸಂಸಾರ ಭ್ರಮೆಗೊಂಡು ಬಳಲಾದಿರೋ ಕಮಲಪತ್ರಕ್ಕೆ ಒಳಗಿನ ಜಲದಂತೆ ನೆಲಕೆ ನಿರ್ಲೇಪನಾಗೋ ಮನವೆ 3 ಈ ದೇಹ ಸ್ಥಿರವಲ್ಲವೊ ಕಾಲನಾ ಬಾಧೆಗೋಳಗಾಗದಿರೋ ಮನವೆ ಭೇದ ದುರ್ಗುಣವ ತ್ಯಜಿಸು ನೀ ಗೇರುಬೀಜದಂದದಿ ತಿಳಿಯೊ ಮನವೆ 4 ಮಾಡು ಹರಿಸೇವೆಯನ್ನು ಮನದಣಿಯೆ ಬೇಡು ಹರಿಭಕ್ತಿಯನ್ನು ಕೂಡು ಹೆಳವನಕಟ್ಟೆಯ ವೆಂಕಟನ ಬೇಡಿ ಮುಕ್ತಿಯನು ಪಡೆಯೊ ಮನವೆ 5
--------------
ಹೆಳವನಕಟ್ಟೆ ಗಿರಿಯಮ್ಮ
ನಿನ್ನ ನೋಡಿ ಧನ್ಯನಾದೆನೊ - ಹೇ ಶ್ರೀನಿವಾಸ ಪನಿನ್ನ ನೋಡಿ ಧನ್ಯನಾದೆ ಎನ್ನ ಮನದಿ ನಿಂತು ಸುಪ್ರ-ಸನ್ನ ದಯಮಾಡಿ ನೀನು ಮುನ್ನಿನಂತೆ ಸಲಹ ಬೇಕೋ ಅ.ಪಲಕ್ಷ್ಮಿರಮಣ ಪಕ್ಷಿವಾಹನ ಲಕ್ಷ್ಮಿ ನಿನ್ನ ವಕ್ಷದಲ್ಲಿರಕ್ಷಣ ಶಿಕ್ಷಣ ದಕ್ಷ ಪಾಂಡವ ಪಕ್ಷ ಕಮಲಾಕ್ಷ ರಕ್ಷಿಸು 1ದೇಶದೇಶಗಳನು ತಿರುಗಿ ಆಶಾಬದ್ಧನಾದೆ ಸ್ವಾಮಿದಾಸನೆನಿಸಿ ಎನ್ನ ಜಗದೀಶ ಕಾಯೋ ವಾಸುದೇವ 2ಕಂತುಜನಕಕೊಟ್ಟು ಎನಗೆ ಅಂತರಂಗದ ಸೇವೆಯನ್ನುಅಂತರವಿಲ್ಲದೆ ಪಾಲಿಸಯ್ಯಹೊಂತಕಾರಿಪುರಂದರವಿಠಲ
--------------
ಪುರಂದರದಾಸರು