ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

*ಆರಿಗಾದರು ಪೂರ್ವದ ಕಟ್ಟಳಿಯು ತಪ್ಪುದು ವಿಧಿಬರಹವು ಪ. ಪೊಡವಿಭಾರವ ಪೊತ್ತು ಮೃಡಗೆ ಭೂಷಣನಾಗಿ ಹೆಡೆಯಲ್ಲಿ ಮಾಣಿಕವಯಿಟ್ಟುಕೊಂಡು ಬಿಡದೆ ಶ್ರೀಹರಿಗೆ ಹಾಸಿಗೆ ಆದ ಫಣಿಪಂಗೆ ಅಡವಿಯೊಳಗಣ ಹುತ್ತ ಮನಿಯಾಯಿತೈಯ್ಯಾ 1 ಸುರಪತಿಯಗೆದ್ದು ಸುಧೆಯನೆ ತಂದು ಮತ್ತೆ ಮಾತೆಯ ಸೆರೆಯ ಪರಿಹರಿಸಿ ಬಹುಶಕ್ತನೆನಿಸಿಕೊಂಡ ಹದಿನಾಲ್ಕು ಲೋಕನಾಳುವವನ ಹೊತ್ತು ಇರುವವಗಾಯಿತು ಮನೆಯು ಮರದ ಮೇಲೆ 2 ರಾಮಚಂದ್ರನ ಸೇವೆಮಾಡಿ ಮೆಚ್ಚಿಸಿಕೊಂಡು ರಾವಣನ ಗರ್ವಮುರಿದು ಬಂದೂ ರೋಮರೋಮಕೆ ಕೋಟಿಲಿಂಗಧರಿಸಿದ ಹನುಮಂತಗೆ ಗ್ರಾಮಗಳ ಕಾಯ್ವದಾಯಿತೈಯ್ಯಾ 3 ಮೂರ್ಲೋಕಕಾಧೀಶ ಮುಕ್ಕಣ್ಣ ಶಿವನೆಂದು ಸಾರುತಿದೆ ವೇದ ಸಟೆಯಲ್ಲವಿದು ಪಾರ್ವತಿಗೆ ಪತಿಯಾದ ಕೈಲಾಸವಾಸನಿಗೆ ಊರಹೊರಗಣ ಕಾಡ ಕಾಯ್ವದಾಯಿತೈಯ್ಯಾ 4 ಮೀರಲಳವಲ್ಲಾ ಮುನ್ನಿನಾ ಕರ್ಮವನು ಕಾರಣಕರ್ತನಿಗಲ್ಲದೆ ಮಾರಪಿತ ಹೆಳವನಾಕಟ್ಟೆರಂಗೈಯ್ಯನ ಸೇರದ ಕಾಲವ್ಯರ್ಥವ್ಯಾದಿತೈಯ್ಯಾ 5
--------------
ಹೆಳವನಕಟ್ಟೆ ಗಿರಿಯಮ್ಮ
ಏನುಂಟೇನಿಲ್ಲ ಗುರುಕೃಪೆಯಿಂದ ತನುಮನಿಟ್ಟದೇ ಪಡಕೊಂಬುದು ಚಂದ ಧ್ರುವ ಸುಖ ಸುರುತದೆ ನೋಡಿ ಬಲುಬ್ರಹ್ಮಾನಂದ ಪ್ರಕಟಸಲಿಕ್ಕೆ ಬಾರದು ಮುಖದಿಂದ ಸಕಲವೆಲ್ಲಕೆ ಮೇಲು ತಿಳಿಯಬೇಕಿದೊಂದೆ ಶುಕಾದಿ ಮುನಿಗಳದಾರಿದರಿಂದೆ 1 ಸಿದ್ಧ ಬುದ್ಧ್ದರಿಗೆ ಸಾದ್ಯವದೆ ಸಿದ್ಧ ನೋಡಿ ಬುದ್ಧಿವಂತರಿಗೆ ಒಲಿದುಬಾಹುದು ಕೈಗೂಡಿ ಸನ್ಮಾರ್ಗ ಸುಪಥವಿದೆ ಸದ್ಗುರು ಸೇವೆಮಾಡಿ ಸದ್ಭ್ಬಾವದಿಂದಲಿ ಸ್ವಸುಖವೆ ಸೂರ್ಯಾಡಿ 2 ಭಾಸ್ಕರ ಗುರುದಯದವಗಿನ್ನೇನು ಭಾಸುತೀಹ್ಯದಾವಗಿನ್ನು ನಿಜಕಾಮಧೇನು ವಿಶ್ವದೊಳಗವನೊಬ್ಬ ಸಿದ್ಧತಾನು ದಾಸಮಹಿಪತಿಗಿದೇ ಅಭಿನವಧೇನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧನ್ಯವಾಯಿತು ಜೀವವಿಂದು ಚೆನ್ನಾಗಿ ಪೂರ್ಣ ದಿವಸಕೆ ನಡೆದು ನಾ ಬಂದು ಧ್ರುವ ತೋರುತಿಹುದು ಸಂತೋಷ ಮನದೊಳತಿವುಲ್ಹಾಸ 1 ಕಣ್ಣಾರೆ ಕಂಡೆವು ನಿಧಾನ ಭಿನ್ನವಿಲ್ಲದೆ ಭಾಸ್ಕರ ಗುರುಚರಣ ಮುಕ್ತವಾಯಿತು ಜೀವನ 2 ಪುಣ್ಯಚರಣ ಸೇವೆಮಾಡಿ ಪಾದ ಕೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಂದತೀರ್ಥರಾನಂದದಿ ಭಜಿಸಿರೊ ಬಂದು ಸಲಹಬೇಕೆಂದು ಬೇಡುತ ಪ ಶ್ರದ್ಧೇ ರಮಣನು ಮಧ್ಯಗೇಹರ ಶುದ್ಧಕುಲದೊಳು ಉದ್ಭವಿಸಿದ 1 ಗೋಪ್ರದಾಯಕ ವಿಪ್ರವರ್ಯಗೆ ಕ್ಷಿಪ್ರದಲ್ಲಿ ಸುಪ್ರಜ್ಞೆಯಿತ್ತ 2 ದೂಷ್ಯವಾದ ದುರ್ಭಾಷ್ಯ ಖಂಡಿಸಿ ಶಿಷ್ಯರಿಗೆ ಸದ್ಭಾಷ್ಯ ಪೇಳಿದ 3 ಯವನ ನೃಪತಿಯ ಭವನಕೆ ಪೋಗಿ ಅವನ ಅರ್ಧರಾಜ್ಯವನೆ ತಂದ 4 ದೇವಗಂಗೆಯು ಪಾವನಾಂಶನ ಸೇವೆಮಾಡಿ ತಾ ಪಾವನಳಾದ 5 ಸಿರಿ ಸ್ವಾಮಿ ನೃಹರಿಯ ಪ್ರೇಮಬಲದಿ ನಿಸ್ಸೀಮರಾದ 6
--------------
ವಿದ್ಯಾರತ್ನಾಕರತೀರ್ಥರು
ರಾಘವದೇವ ಬಿಡಬೇಡ ಕೈಬಿಡಬೇಡ ಪ ಆಗಮಾರ್ಚಿತ ಪಾದಪದ್ಮಪಿಡಿದೆ ಬಿಡಬೇಡ ಕೈಬಿಡಬೇಡ ಅ.ಪ ಸೀತಾಕಾಂತನೆ ನಿನ್ನ ಭ್ರಾತಲಕ್ಷ್ಮಣನಂತೆ ಪ್ರೀತಿಸುತೆನ್ನ ಸನಾಥನೆನಿಸು 1 ನಂಬಿಬಂದ ವಿಭೀಷಣನನು ಬಲು ಸಂಭ್ರಮದೊಳು ಲಂಕಾರಾಜನ ಗೈದ2 ಹನುಮನಂದದಿ ಸೇವೆಮಾಡಿ ಮೆಚ್ಚಿಸಲಾರೆ ಕನಿಕರದೆನ್ನೊಳು ಘನಮನ ಮಾಡು 3 ದುಷ್ಟಜನಕೆ ಭಯ ಶಿಷ್ಟಜನಕೆ ಜಯ ಕೊಟ್ಟು ಭಕ್ತರಕಾವ ದಿಟ್ಟಹೆಜ್ಜಾಜೀಶ 4
--------------
ಶಾಮಶರ್ಮರು
ವೃಂದಾವನದ ಸೇವೆಯ ಪ. ವೃಂದಾವನದ ಸೇವೆಮಾಡಿದವರಿಗೆ ಭೂ-ಬಂಧನ ಬಿಡುಗಡೆಯಾಗುವುದು ಅ.ಪ. ಕರವ ಮುಗಿದು ಬೇಗೀ-ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು1 ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-ನ್ನೀರನೆರೆದು ಪ್ರತಿದಿವಸದಲ್ಲಿಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನಸೇರಿಸುವಳು ತನ್ನ ಪದವಿಯನು 2 ಒಡೆಯನ ಮನೆಗೆ ನೀರುತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷಪದವಿಯನು 3 ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ-ರಾಶೆಯಿಂದಲಿ ಮುಕ್ತಿ ದೊರಕುವುದು 4 ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮಎಡಭಾಗದಲಿ ಲಕ್ಷ್ಮಿದೇವಿಯ ಸಹಿತಸಡಗರದಿಂದಲಿ ಹಯವದನನ ಪಾದಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ 5
--------------
ವಾದಿರಾಜ
ಸೇವೆಮಾಡಿ ಹರಿಯ ನವವಿಧಪರಿಯ ಧ್ರುವ ಪಥ ಕೂಡಿ ಗೋವಿಂದನಾಮ ಪಾಡಿ ಅವಿದ್ಯುಪಾಧೀಡ್ಯಾಡಿ 1 ಯುಕ್ತಿಗೆ ವಿವೇಕ ಭಕ್ತ ಸಂರಕ್ಷಕ ಮುಕ್ತಿಗಿಂದಧಿಕ ಭಕ್ತಿನಿಜಸುಖ 2 ಸೇವೆಸುಖ ಹರಿಯ ಮಹಿಪತಿ ದೊರೆಯ ಸೇವಿಸಲೀಪರಿಯ ಭವನಾಶ ಖರಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು