ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಸುದೇವನನಾ ಶ್ರೈಸದಿಹ ಉಪಾಸನ್ಯಾತಕೆ ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ಧ್ರುವ ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ ಬದಿಯಲೀಹ್ಯ ವಸ್ತುಗಾಣದ ಜ್ಞಾನವ್ಯಾತಕೆ ಉದರ ಕುದಿಯು ಶಾಂತ ಹೊಂದದ ಸಾಧನ್ಯಾತಕೆ ಬುಧರ ಸೇವೆಗೊದಗದೀಹ ಸ್ವಧನವ್ಯಾತಕೆ 1 ಭಾವ ನೆಲಿಯುಗೊಳ್ಳ ದೀಹ್ಯ ಭಕುತಿದ್ಯಾತಕೆ ಕಾವನಯ್ಯನ ಕಾಣದೀಹ್ಯ ಯುಕತದ್ಯಾತಕೆ ದೇವದೇವನ ಸೇವೆಗಲ್ಲದ ಶಕುತ್ಯದ್ಯಾತಕೆ ಹ್ಯಾವ ಹೆಮ್ಮೆ ಅಳಿಯದೀಹ್ಯ ವಿರುಕಿತ್ಯಾತಕೆ 2 ತತ್ವ ತಿಳಿಯದಿಹದೀ ವಿದ್ವತ್ವವ್ಯಾತಕೆ ಸತ್ವಗುಣದ ಲಾಚರಿಸದಿಹ್ಯ ಕವಿತ್ಯವ್ಯಾತಕೆ ಚಿತ್ತಶುದ್ಧವಾಗದಿಹ ಮಹತ್ವವ್ಯಾತಕೆ ವಿತ್ತ ಆಶೆಯು ಅಳಿಯದಿಹ ಸಿದ್ಧತ್ವವ್ಯಾತಕೆ 3 ನೀತಿಮಾರ್ಗವರಿಯದೀ ಹ ರೀತ್ಯದ್ಯಾತಕೆ ಮಾತುಮಿತಿಗಳಿಲ್ಲದವನು ಧಾತುವ್ಯಾತಕೆ ಅಮೃತ ಊಟವ್ಯಾತಕೆ ಜ್ಯೋತಿ ತನ್ನೊಳರಿಯದಲೆ ಉತ್ತಮದ್ಯಾತಕೆ 4 ನಿತ್ಯ ಶ್ರವಣವ್ಯಾತಕೆ ನೆನವು ನೆಲೆಯಾಗೊಳ್ಳದಿಹ ಮನನವ್ಯಾತಕೆ ತನುವಿನಲ್ಲಿ ಘನವು ಕಾಣದನುಭವ್ಯಾತಕೆ ದೀನಮಹಿಪತಿಸ್ವಾಮಿಗಾಣದ ಜನಮವ್ಯಾತಕೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯನರಿಯದ ಜನುಮ ಧೆರೆಯೊಳಗಧಮಾಧಮ ಹರಿಯ ನೆನೆಯದ ನರನು ಪಾಮರನು ಧ್ರುವ ಹರಿಗೆ ನಮಿಸದ ಸಿರವು ತೋರುವ ಬೆಚ್ಚಿನ ತೆರವು ಹರಿಗೆ ವಂದಿಸದ್ಹಣಿಯು ಹುಳಕ ಮಣಿಯು ಹರಿಗೆ ಮುಗಿಯದ ಕೈಯು ಮುರುಕ ಕೀಲಿಯ ಕೈಯು ಹರಿ(ಯ) ಕೊಂಡಾಡುವ ನಾಲಿಗೆ ಒಡಕ ಸೊಲಿಗೆಯ 1 ಹರಿಯ ಸ್ತುತಿಸದ ಮುಖ ಚೀರುವ ಚಿಮ್ಮಡಿಯ ಮುಖವು ಹರಿಕಥೆ ಕೇಳದ ಕಿವಿಯು ಹಾಳುಗವಿಯು ಹರಿಯ ನೋಡದ ಕಣ್ಣು ತೋರುವ ನವಲ್ಗರಿಗಣ್ಣು ಹರಿಯ ಆರಾಧಿಸದ ಮನವು ಹೀನತನವು 2 ಹರಿಯ ಸೇವೆಗೊದಗದ ಕಾಲು ಮುರುಕ ಹೊರಸಿನ ಕಾಲು ಹರಿಗೆ ಮಾಡದ ಭಕ್ತಿ ಮೂಢ ಯುಕ್ತಿ ಹರಿಯೆ ಶ್ರೀಗುರುವೆಂದು ಗುರುವೆ ಪರದೈವವೆಂದು ಸಲೆಮೊರೆಹೊಕ್ಕಿಹ ಮೂಢ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು