ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಹಾಲಕ್ಷ್ಮಿ ಇಂದಿರೆ ಮುಕುಂದ ಹೃನ್ಮಂದಿರೆ ಪ. ಇಂದಿರೆ ಲೋಕವಿಖ್ಯಾತೆ | ಶ್ರೀ- ನಂದನ ಕಂದನೊಳು ಪ್ರೀತೆ | ಆಹ ಬಂದೆನೆ ಭವದೊಳು ನಿಂದೆನೆ ನಿನ ಪದ ದ್ವಂದ ಸನ್ನಿಧಿಯಲಿ ಇಂದಿರೇಶನ ತೋರೆ ಅ.ಪ. ತ್ರಿಗುಣಾಭಿಮಾನಿಯೆ ದೇವಿ | ನಿನ್ನ ಜಗದೊಳು ನುತಿಪರ ಕಾಯ್ವಿ | ನಿತ್ಯ ನಗಧರನನು ಸೇವಿಸುವಿ | ಲಯ ಜಗ ಸೃಷ್ಟಿ ಸ್ಥಿತಿಯಲ್ಲಿ ದೇವಿ | ಆಹ ಬಗೆ ಬಗೆ ರೂಪದಿ ಸುಗುಣವಂತೆಯಾಗಿ ನಿಗಮಾದಿಗಳಿಂದ ನಗಧರನನು ಸ್ತುತಿಪೆ 1 ಸಕಲಾಭರಣ ರೂಪದಿಂದ | ಹರಿಯ ಅಕಳಂಕ ಭಕ್ತಿಗಳಿಂದ | ಪಂಚ ಪ್ರಕೃತ್ಯಾದಿ ರೂಪಗಳಿಂದ | ನಾನಾ ಸಕಲ ಸಾಮಗ್ರಿಗಳಿಂದ | ಆಹಾ ಮುಕುತಿ ನಾಲ್ಕರಲ್ಲಿ ಭಕುತಿಯಿಂ ಸೇವಿಸುತ ಮುಕುತರಿಂದೋಲಗ ಅಕಳಂಕದಿಂ ಕೊಂಬೆ 2 ಪಾದದಿ ಪಿಲ್ಯೆ ಪಾಡಗವೊ | ಮೋದ ವಾದ ನೆರೆಗೆ ವೈಭವವೂ | ಗಾಂಭೀ- ರ್ಯದ ವಡ್ಯಾಣ ನಡುವು | ಮೇಲೆ ಭಾ- ರದ ಕುಚದ್ವಯ ಬಾಹು | ಆಹ ಶ್ರೀದನ ಪೆಗಲೊಳು ಮೋದದಿಂದೆಸೆವ ಕೈ ಆದರದಲಿ ನಿನ್ನ ಪಾದಸೇವೆಯ ನೀಡೆ 3 ಕರದಲ್ಲಿ ಕಡಗ ಕಂಕಣ | ಬೆರಳ ವರ ವಜ್ರದುಂಗುರಾ ಭರಣ | ನಾಗ- ಮುರಿಗೆ ಸರಿಗೆ ಕಂಠಾಭರಣ | ಬಲ ಕರದಲ್ಲಿ ಪದ್ಮ ಭಕ್ತರನ | ಆಹ ವರದೃಷ್ಟಿಯಿಂದಲಿ ನಿರುತ ಈಕ್ಷಿಸುತ ಪರಿಪರಿ ಬಗೆಯಿಂದ ಪೊರೆವೊ ಸುಂದರಕಾಯೆ4 ಗೋಪಾಲಕೃಷ್ಣವಿಠ್ಠಲನÀ | ನಿಜ ವ್ಯಾಪಾರ ಕೊಡೆ ಎನಗೆ ಮನನ | ಪೂರ್ಣ ರೂಪಳೆ ಮುಖದ ಚಲುವಿನ | ನಿನ್ನ ರೂಪವ ತೋರಿಸೆ ಮುನ್ನ | ಆಹ ತಾಪ ಹರಿಸಿ ಲಕುಮಿ ಶ್ರೀಪತಿ ಪದದಲ್ಲಿ ಕಾಪಾಡು ನಿತ್ಯದಿ 5
--------------
ಅಂಬಾಬಾಯಿ
ರುದ್ರದೇವರ ಪ್ರಾರ್ಥನೆ ಫಾಲಲೋಚನ ಎನ್ನ ಪಾಲಿಸು ಬೇಗ ನೀಲಕಂಧರ ಕರುಣಾಳು ಕೇಳೀಗ ಪ. ಬಂದ ಮೋಕ್ಷಕೆ ಹೇತುವೆಂದು ಪುಟ್ಟಿದ ಮನ ಮಂದಿರ ನೀ ಎನ್ನ ಕುಂದನೆಣಿಸದಿರು 1 ತುಂಬಿತ್ತೆನ್ನುವ ಶಶಿಬಿಂದಾ ಕೂಡಿಟ್ಟಿದೀ- ಡಂಬ ನೀನೆಂತು ತ್ರಯಂಬಕನಾಗುವಿ 2 ರಾಮಚಂದ್ರನ ದಿವ್ಯ ನಾಮಾಮೃತವ ನಿತ್ಯ ನೇಮದಿ ಪನ್ನಂಗ ಲಲಾಮನ ಸೇವಿಸುವಿ 3 ಪಾವನಾತ್ಮಕ ಲಕ್ಷ್ಮಿಧಾಮನ ಸಹಸ್ರ ಸುತ್ರಾಮ ತಾನರಿಯನು 4 ವೈಷ್ಣವಾಗ್ರಣಿ ನೀನು ಕೃಷ್ಣನ ಪ್ರೀತಿಗಾಗಿ ದುಷ್ಟರಿಗೊರವಿತ್ತು ಭ್ರಷ್ಟಗೊಳಿಸುವಿ 5 ಜೇಡಿ ಮೈಯಲಿ ಧರಿಸಿ ಮೂಢರ ಮೋಹಿಸುವಿ ನೋಡುವಿ ಮನದಿ ಗರೂಡಗಮನನ 6 ಪಾದ ಪಂಕಜ ಭಜಿಸುತಕಿಂಕರವರದನಾದ ಶಂಕರರಾಯ 7
--------------
ತುಪಾಕಿ ವೆಂಕಟರಮಣಾಚಾರ್ಯ
ಶೇಷದೇವನೆ ಷೋಷಿಸೆನ್ನನು ಶೇಷದೇವಾ ಕರುಣಾ ಸಮುದ್ರಭವ ಪ ಕ್ಲೇಶವ ಕಳಿಯೋ ಸುರೇಶ ಮುಖವಿನುತ ಅ.ಪ ವಾಸುದೇವನ ಶಯ್ಯಾಸನ ರೂಪದಿ ಸೇವಿಸುವಿ ಚರಣ ಸಾಸಿರವದನದಿ ಶ್ರೀಶನ ಶುಭಗುಣಲೇಶ ವರ್ಣಿಸುವ ಭಾಸುರ ವಪುಷಾ 1 ವ್ಯಾಪ್ತನೆ ರಾಮನ ಸೇವಿಸಿ ಪ್ರೇಮವ ಪಡೆದಿಹ ಸೌಮಿತ್ರಿಯ ಶುಭನಾಮದಿ ಮೆರೆದಾ 2 ವಾರುಣೀವರ ಧಾರುಣಿಯೊಳು ಕೃಷ್ಣಾತೀರಕಾರ್ಪರ ನಾರಸಿಂಹನ ಪದಾರವಿಂದಯುಗ ಸೇರಿಸುಖಿಸುತಿಹ ಶೌರಿ ಅಗ್ರಜ3
--------------
ಕಾರ್ಪರ ನರಹರಿದಾಸರು