ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತು ನೀ ಸಾಧಿಸು ಘನಪರಮಾರ್ಥಾ ಪ ಭೇದವರ್ಜಿತನಾಗಿ ಸ್ವಾದ ಸೇವಿಸಬೇಕು ಪಾದ ತೀರ್ಥಾ 1 ಭಕ್ತಿಭಾವಾರ್ಥ ವಿರಕ್ತಿಯಿಂದಾಗಬೇಕು ಮುಕ್ತಿಮಾನಿನಿಗೆ ತಾಂ ಕರ್ತಾ 2 ವರಸಚ್ಚಿದಾನಂದ ಬ್ರಹ್ಮದಿಂದೆಸೆವ ಗುರುವಿಮಲಾನಂದ ಸಮರ್ಥಾ 3
--------------
ಭಟಕಳ ಅಪ್ಪಯ್ಯ
ಏಳಮ್ಮ ಕೊಲ್ಲಾಪುರಧೀಶೆ | ಇನ್ನೂ ಭಾಳ ಹೊತ್ತಾಯಿತು ವೈಕುಂಠವಾಸೆ ಪ. ಸೃಷ್ಟಿಸೆಂದೆನುತ ಆಂಬ್ರಣಿರೂಪದಿಂದ್ಹರಿ ಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕು ಅಷ್ಟ ಭುಜದ ಲಕುಮಿ ಪ್ರಕೃತಿರೂಪಿಣಿಯಾಗಿ ಸೃಷ್ಟಿಕಾರ್ಯಕೆ ಅನುವಾಗಬೇಕು 1 ಸಕಲ ದೇವತೆಗಳ ಸೃಷ್ಟಿ ಮಾಡಲಿಬೇಕು ಮುಕುತಿಯೋಗ್ಯರ ಸೇವೆ ಕೊಳ್ಳಬೇಕು ಸಕಲರೂಪದಲಿ ಶ್ರೀಹರಿಯ ಸೇವಿಸಬೇಕು ಅಕಳಂಕÉ ಆದಿದೇವತೆ ಎನಿಸಬೇಕು 2 ಶ್ರೀ ಪದ್ಮಭವೆ ವೆಂಕಟೇಶನ ಕೂಡುತ ನೀ ಪರಿಪರಿ ಲೀಲೆಗೈಯ್ಯಬೇಕು ಗೋಪಾಲಕೃಷ್ಣವಿಠ್ಠಲನ ವಕ್ಷಸ್ಥಳ ವ್ಯಾಪಿಸಿ ಭಕ್ತರ ಕಾಪಾಡಬೇಕು 3
--------------
ಅಂಬಾಬಾಯಿ
ಪರಮೇಶ್ವರ ಪೂರ್ಣ ತುಂಬ್ಯಾನ ಪರಾಮರಿಸಿ ನಿಮ್ಮೊಳಗೆ ಪರದೆ ಇಲ್ಲದೆ ಪರವಸ್ತುದೋರುವ ಕರುಣಿಸಿ ನಿಮಿಷದೊಳಗೆ ಸದ್ಗುರು ಜಗದೊಳಗೆ ಎರಡಿಲ್ಲದೆ ಗುರುಚರಣಕ ಮನಬೆರೆದನುಭವಿಸುವದಾವಾಗೆ ತ್ರಾಹಿ ತ್ರಾಹಿ 1 ನಿಜಮಾಡುವದೆಲ್ಲ ಡಾಂಭಿಕ ಮಾಡದು ತಾ ನಿಜಸುಖ ಕೂಡಲು ಪುಣ್ಯೊದಗ್ಯಾಗಲು ಗುರುಕೃಪೆ ನೋಡುದು ಕೌತುಕ ಗೂಡಿನೊಳನೇದಾ ತ್ರಾಹಿ ತ್ರಾಹಿ 2 ರಾಜಿಸುತಿಹ್ಯ ಶ್ರೀಪಾದ ಅನುದಿನ ತಾ ಸೇವಿಸಬೇಕು ಸುಬೋಧ ಮಾಜದೆ ಗುರುಚರಣಕ್ಕೆ ತನುಮನಧನ ಭಜಿಸಬೇಕು ಸರ್ವದಾ ರಾಜಯೋಗಪ್ರಸಾದ ತ್ರಾಹಿ ತ್ರಾಹಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು