ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೆನ್ನ ಗುರು ಮಂತ್ರಾಲಯ ನಿಲಯಾ ಶ್ರೀ ನರಹರಿ ಗತಿ ಪ್ರೀಯಾ ಪ. ಹರಿಶಯ ಮರುತರ ಆವೇಶಕೆ ನಿಲಯಾ ನಂಬಿದೆ ಶುಭಕಾಯಾ ಅ.ಪ. ತರಳತನದಿ ಶ್ರೀ ನೃಹರಿ ಶಾಂತನಾಗೇ ಸುರರೆಲ್ಲರು ನಿಮಗೇ ಎರದÀು ಕೀರ್ತಿ ಹಿರೆತನವಹಿಸಿದ ರಾಗೇ ಅದರಂದದಿ ಈಗೇ ವರ ಯತಿಗಳು ಹರಿದಾಸರು ವಂದಾಗೇ ಅಘ ನೀಗೇ ಧರೆ ಕಲ್ಪ ಧ್ರುಮವೆಂದು ನಿಮ್ಮ ಬಳಿಗೇ ವಪ್ಪಿಸುವರು ಅಡಿಗೇ 1 ಎಮ್ಮ ಗುರುಗಳಿಂದ್ಹೇಳಿದ ನುಡಿ ಮರೆದೇ ನಿಮ್ಮಡಿಗೆರವಾದೇ ಸಮ್ಮತದಲಿ ಮೃತ್ತಿಕೆಯನು ಸೇವಿಸದೇ ಹಮ್ಮಿನಲಿ ಮೈಮರೆದೇ ನಿಮ್ಮ ಸುಕೀರ್ತಿಯ ತಿಳಿಸು ತಿಳಿಯದಾದೇ ಅತಿ ಭಕ್ತಿಯ ಜರಿದೇ ನಿಮ್ಮ ಕರುಣವಿರಲದರಿಂದೀಗರಿದೇ ತನುಮನವಪ್ಪಿಸಿದೇ 2 ಕೃತಿ ದ್ವಿದಳಾತ್ಮಕದಪರಾಧ ಪಡಿಸಿತು ಬಹು ಬಾಧ ಸಂದಿತು ಕಾಲವು ಮುಂದರಿಯುವ ಮೋದ ಸಂದಿಸಿತುತ್ಸಹದಾ ನಂದಕೆ ಕಲಿ ಮಲ ತೊಳೆಯಲು ಮೌನದಾ ಪರಿ ಅರಿತೆ ಸುಭೋಧಾ ಕುಂದೆಣಿಸದೆ ಪೊರೆದೆನ್ನ ನಿಮ್ಮಗಾಧಾ ಕೃಪೆತೋರಲು ಬಹು ಮೋದಾ 3 ಎಲ್ಲಿ ನೋಡಲಲ್ಲಲ್ಲಿ ನಿಮ್ಮ ವಾಸಾ ಪುರಗಳು ಜನ ತೋಷಾ ಸೊಲ್ಲು ಸೊಲ್ಲಿಗೇ ನುತಿಪ ಗಾನ ಘೋಷಾ ಮಹಿಮೆಗಳ ಪ್ರಕಾಶ ವಲ್ಲದಾಯಿತ್ಯಾತಕೊ ಎನಗಭಿಲಾಷಾ ಬಲ್ಲವರೀಪರಿ ಮಾಡುವರೇ ಮೋಸಾ ಸದ್ಭಕ್ತರಲಾಭಾಸಾ 4 ಒಂದು ದಿನದ ಮೃತ್ತಿಕೆ ಜಲ ಸೇವಿಂದ ಪೊಂದಿದೆ ನಿಮ್ಮ ಪದಾ ಒಂದಾಗಲಿ ಗುರುವೆನಿಸಿದರೆಲ್ಲರದಾ ಮನವಮ್ಮನ ವಾದಾ ನಂದವು ಶ್ರೀ ನರಹರಿ ತಾ ಪರಿಕಿಸಿದಾ ನಂದವು ಬಹು ಮೋದಾ ಸಂದಲಿ ಗೋಪಾಲಕೃಷ್ಣವಿಠಲನಿಂದಾ ಎಣಿಸದೆ ಬಹು ಕುಂದಾ 5
--------------
ಅಂಬಾಬಾಯಿ
ಶ್ರೀ ಪತಿಯೆ ನಿನ್ನ ದಯವೆಂತಾಹದೋ ಪಾಪಕರ್ಮವ ಮಾಡಿ ಜೀವಿಸುವೆ ನಿರುತ ಪ ಬಾಲತನವನು ಬಾಲಲೀಲೆಯಿಂದಲಿ ಕಳೆದೆ ಕೀಳು ಜನರೊಡನೆ ಸ್ನೇಹವ ಬೆರಸಿದೆ ಹಾಳು ಹರಟೆಗೆ ಹೊತ್ತು ಸಾಲದೋಯಿತು ಯನಗೆ ಶ್ರೀ ಲೋಲ ನಿನ್ನಡಿಗೆ ದೂರಾದೆ ನಾನು 1 ಬುದ್ಧಿ ಪೂರ್ವಕದಿ ಸದ್ವಿದ್ಯೆಯನು ಕಲಿಯದಲೆ ಶುದ್ಧ ತಾಮಸ ವಿದ್ಯದೊಳು ರಮಿಸಿದೆ ಮಧ್ವಶಾಸ್ತ್ರದಸಾರವನ್ನು ತಿಳಿಯದೆ ನಾನು ಕದ್ದಕಳ್ಳನ ತೆರದಿ ಬಾಳಿದೆನು ಬರಿದೆ 2 ಪ್ರಾಯತನವೆ ವಿಷ ಪ್ರಾಯವಾಯಿತು ಎನಗೆ ಕಾಯಜನ ಉಪಟಳದಿ ಮತ್ತನಾದೆ ತೋಯಜಾಕ್ಷಿಯರ ದುರ್ಮಾಯ ಜಾಲಕೆ ಸಿಲುಕಿ ನೋಯಿಸಿದೆ ನಿಜ ಸತಿಯ ಪರಿಪರಿಯಲಿಂದ 3 ಮದನ ಜನಕನೆ ನಿನ್ನ ಮಧುರನಾಮವ ಮರೆದು ಸುದತಿಯರ ಅಧರಾಮೃತಕೆ ಬೆರೆದು ವಿಧಿಕುಲಾಚರಣೆ ಜರೆದ್ಹÀÀಗಲಿರುಳು ನಾರಿಯರ ವದನವನು ನೋಡಿ ಮೋದಿಪನರಾಧಮನೊಳ್ 4 ಉದರ ಗೋಸುಗ ಪರರ ಹೃದಯ ದ್ರವಿಸುವ ತೆರದಿ ವಿಧ - ವಿಧದಿ, ಆತ್ಮ ಸ್ತೊತ್ರವನೆ ಪೊಗಳಿ ಸದ-ಸದ್ವಿ ವೇಕವನು ತೊರೆದನ್ಯರ್ಹಳಿದು ಬಲು ಚದುರ ನಾನೆಂಧೇಳಿ ಮೋಸಗೊಳಿಸುತ ಜನರ 5 ಸಿರಿ ಚರಣಕ್ಕೆ ಶಿರ ಬಾಗ ದ್ಹರಿ ಭಕುತರಿಗೆ ವಿನಯದಿಂದೆರಗದೆ ನಿರುತದಲಿ ನಾಚಿಕಿಲ್ಲದಲೆ ಭೂದನುಜಯ ವಾನರಿಗೆ ಕರಮುಗಿದು ಜೀವಿಪÀಖೂಳ ಮನುಜನೊಳು 6 ಸತ್ಯಧರ್ಮವÀ ತ್ಯಜಿಸಿ ಮತ್ತೆಯುತ್ತಮರಜಾ - ನ್ನತ್ಯವನು ಸಹಿಸದಲೆ ತತ್ತಳಿಸುವೆ ಪೆತ್ತವರ ಸೇವಿಸದೇ ಮಿಥ್ಯವನೆ ಬೊಗಳಿದು - ಷ್ಕøತ್ಯದಿಂಬಾಳ್ವ ಉನ್ಮತ್ತನರ ಪಶುವಿನೊಳು 7 ಹರಿಗೆರಗದಿರುವÀÀ ಶಿರ ಹರಿಯ ಸ್ಮರಿಸದ ಜಿಂಹೆ ಹರಿವಾರ್ತೆಯಾಲಿಸದ ಕರ್ಣಂಗಳು ಕರ ಹರಿಯ ನೋಡದ ಚಕ್ಷು ಸರುವ ಪರಿಯ ಪವಿತ್ರದೇಹಧರಿಸಿದ ನರಗೆ 8 ವಿತ್ತ ಪಹರಿಸಿ ಪರರ ನಿಂದಿಸಿ ಪರರ ಬಲುವಂಚಿಸಿ ಪರಮೇಷ್ಟಿ ಜನಕನೆ ಪರತರ ಪರಂಜ್ಯೋತಿ ಪರದೈವನೆಂದರಿಯದಿರುವ ಪಾಮರನಿಗೆ 9 ನಾಮಾಡದಿಹ ಪಾಪ ವೀಮಹಿಯೊಳೊಂದಿಲ್ಲ ಸೀಮೆಗಾಣಲು ರವಿಜನಿಗೆ ಸಾಧ್ಯವಿಲ್ಲ ಆ ಮಹಾನರಕÀಂಗಳೆನಗೆÀ ತಕ್ಕವು ಅಲ್ಲ ಸ್ವಾಮಿ ನೀಪೊರೆಯದಿರೆ ಯನಗಾರು ಗತಿಯಿಲ್ಲ 10 ಏನಾದರೊಳಿತೆ ವರದೇಶ ವಿಠಲ ನಿನ್ನಾ ಙÁ್ಞನುಸಾರದಿ ಕರ್ಮಗಳ ಮಾಡಿದೆ ಧೀನರಕ್ಷಕನೆಂಬ ಬಿರಿದು ನಿಜ ವಿದ್ದರಾ - ದೀನನಾದವನನುದ್ಧರಿಸಲರಿಯಾ 11
--------------
ವರದೇಶವಿಠಲ