ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮ ನಿವೇದನೆ ಇಂದು ಪಾವನವಾಗಿರೊ | ಇಂದಿರಾ ರಮಣನ್ನ ದಿನ ವ್ರತವ ಮಾಡಿ ಪ ಅನುಜ ನಿಜಾಂಗನೆ | ತನಯರು ನೆರೆಹೊರೆ ಮನ ಜನಕೆ | ಸಿರಿ | ದಿನ ತ್ರಯವನು ಅನುಸರಿಸಿರೆಂದು 1 ಏಕಾದಶಿದನ ವಿಕೇತನದಲಿ ಪಾಕ ಮಾಡಿದರದು | ಕಾಕಮಾಂಸ ಲೋಕದೊಳಗೆ ಸರಿ | ಲೋಕದೊಳಗೆ ಎಂದು | ತಾ ಕೂಗಿ ಸುಖದಲ್ಲೀ | ವಾದ ಪೇಳುತಲಿದ್ದು ಏಕ ಭಕುತಿಯಲ್ಲೀ2 ಹರಿದಿನದಲ್ಲಿ ನೀರು ಬೆರಳಲಿ ಸುರಿದಾ | ಭೂಸುರನು ಚಾಂಡಾಲನು ನಿರುತದಲೀ | ವರಗೋಮಾಂಸ ನರಕಾ | ನರಿ ನಾಯಿರಾಸ | ಸೂಕರ ಭಕ್ಷಣಿಗಿಂತ | ಪರಮ ಉತ್ತಮನೆಂದು 3 ಪ್ರಾಣತ್ಯಾಗವಾಗಿ ಹಾನಿ ಪ್ರಾಪುತದಿಂದ | ಏನೇನು ಸಂಕಟ ತಾನೊದಗೆ | ಆನಂದ ಮತಿ ಈವಾ ಶ್ರೀನಾಥನ ದಿವಸ | ಧಾನ್ಯದಲಿಟ್ಟು ನಿದಾನಕೆ ಗತಿ ಎಂದು 4 ಇತರ ದಿವಸದಲ್ಲಿ ಅತಿಶಯದಿಂದಲೀ | ಕೃತ ಕರ್ಮಗಳು ವಿಹಿತವಹುದೂ | ರತಿಪತಿಪಿತನ ಅಪ್ರತಿವಾಸರದಲ್ಲೀ | ಅತಿ ಅವಶ್ಯಕವಾ ವರ್ಜಿತ ಮಾಡಿ ಸಜ್ಜನರು 5 ಎಲೆ ಹಾಕದೆ ಜಾಗರವ ಬೇಸರದಲೆ | ಲವಲವಿಕೆಯಿಂದ ಕವಿಗಳೊಡನೆ | ತವಕದಿಂದಲಿ ಪಾಡುತ ಗಾಯನ ಶುದ್ಧಾ | ಶ್ರವಣ ಮಾಡುತ್ತ ಸದಾ | ಪವನ ಮತದೊಳಿದ್ದು6 ದಶಮಿ ವಂದು ಏಕಾದಶಿ ಎಂಟು ತಿಳಿದು | ದ್ವಾದಶಿ ಐದು ಹ | ದಿನಾಲ್ಕು ಎಸವ ಝವಾ | ಪುಶಿಯಲ್ಲ ಇದು ಸಿದ್ಧಾ ಅಸುಯವ ಬಡದಲೇ | ಕುಶಲದಿಂದಲಿ ವ್ರತ ಚರಿಸುತ್ತಲಿ ಚನ್ನಾಗಿ 7 ಏಳೊಂದು ವತ್ಸರದ ಮೇಲೆ | ವತ್ಸರ ಬಿಟ್ಟು ವಾಲಾಯ ಉಳಿದವರು | ನೀಲವರ್ಣನ ವ್ರತವಾ ಲೀಲೆಯಿಂದಲಿ ಚರಿಸಿ 8 ಆವಾದಾದರ ಬಿಡದಿರೀ | ಕೇವಲ ಸಾಧನವೂ | ಈ ವಾರವು ದೇವೇಶ ವಿಜಯವಿಠ್ಠಲಗೆ ಸಮರ್ಪಿಸೆ | ಸೇವಿಯ ಪಾಲಿಸಿ ಕೈವಲ್ಲ್ಯದಲಿ ಇಡುವಾ 9
--------------
ವಿಜಯದಾಸ
ಒಲಿಸಬೇಕು ಹರಿಯ ನಾವೀಗ ಕೇಶವನನ್ನು ಒಲಿಸಬೇಕು ಹರಿಯ ನಾವೀಗ ಪ ಒಲಿಸಬೇಕು ಹರಿಯ ನಾವು ಪರಮ ಭಕ್ತಿಯ ಸೇವಿಯಿಂದ ಒಲಿಸಬೇಕು ರಂಗನನ್ನು ಮೋಕ್ಷವೀವ ಹರಿಯನು1 ಭಕ್ತಿರಹಿತವಾದ ಪೂಜೆ ಸ್ತೋತ್ರ ಸ್ಮರಣೆ ಭಜನೆಯಿಂದ ಭಕ್ತಿರಹಿತ ಶ್ರವಣದಿಂದ ಹರಿಯು ತಾನು ಒಲಿಯನಯ್ಯ 2 ಭಕ್ತಿಯಿಂದ ಪೂಜೆಮಾಡಿ ಭಕ್ತಿಯಿಂದ ಸ್ತೋತ್ರಪಾಡಿ ಭಕ್ತಿಯಿಂದ ಶ್ರವಣ ಮಾಡಿ ಸೇವೆ ಮಾಡಲೊಲಿಯುತಾನೆ 3 ದೂರ್ವಾಪುರದಿ ನಿತ್ತ ಹರಿಗೆ ಆತ್ಮ ನೇವೇದ್ಯವನು ಮಾಡೆ ಗರ್ವರಹಿತನಾದ ಕೇಶವ ಬೇಗದಿಂದಲೊಲಿಯುತಾನೆ 4
--------------
ಕರ್ಕಿ ಕೇಶವದಾಸ
ವಿಠ್ಠಲನ ಪದವನಜ ತುಂಬೆ ಸೃಷ್ಟಿಯೊಳಗೆ ಎನ್ನ ಬಿಡದೆ ಪೊರೆ ಎಂಬೆ ಪ ಜ್ಞಾನ ಭಕುತಿ ವೈರಾಗ್ಯದಲಿ ಜಾಣ ದಾನ ಮಾಡುವರೊಳಗೆ ಪೂತುರೆ ನೀನೆ ನಿಪುಣ ಮಾನಸದಲಿ ಹರಿಯ ಧ್ಯಾನ ಮಾಡುವ ಆನಂದಮತಿ ವಿಮಲ ಸರ್ವವಿಧಾನ 1 ಮಾತುಮಾತಿಗೆ ನೆನೆಸಿದವರ ಭವದ ಮಾಯಾ ಸೇತುವಿಯ ಕಡಿದು ಸಂತತವಾಗಿ ಸಹಾಯಾ ಪ್ರೀತಿಯಲಿ ಬಂದು ಶ್ರೀ ಹರಿಯ ಪದ ಸೇವಿಯಾ ತಾ ತೋರಿ ತಿಳಿಸುವಾ ಪ್ರಿಯನೆನಿಸುವಾ ಪುರಂದರ ರಾಯಾ 2 ವಜ್ರ ಪಂಜರಾ ಕೂವಾದಿ ಮತಹರ ನಂಬಿದವರಾಧಾರ ಪಾವಮಾನಿಯ ಮತದಲಿಪ್ಪ ಮನೋಹರ ಶ್ರೀ ವಿಜಯನಗರ ಮಂದಿರದೊಳಗುಳ್ಳ ಶ್ರೀ ವಿಜಯವಿಠಲನ್ನ ಪೂಜಿಸುವ ಧೀರ 3
--------------
ವಿಜಯದಾಸ
ಸಿಂದೂರಗಮನೆ ಸಾರೆ ಮಲಗಿರುವನ್ಯಾರೆ ಪ ಸಂದರೀ ಮಂದಿರದೊಳಿವನ್ಯಾರೆ ಸೌಂದರ್ಯದ ಮ್ಯಾರೆ ಛಂದದಲಿ ನೀ ಸಾರೆ ಇಂದು ನಭದಲಿ ಚರಿಸುತಲಿ ಮನ ನೊಂದು ಬೇಸರದಿಂದ ಇಲ್ಲಿಗೆ ಬಂದು ಮಲಗಿಹನೇನೆ ಸುಖದಿ 1 ಶೀಲೆ ನೋಡಿವನ ಮುಖಕಮಲ ಸಂಗರದೊಳತಿ ಚಟುಲ ಸುವಿಶಾಲ ಭುಜಯುಗಲ ಶ್ರೀ ಲಕುಮಿವರ ಪಾಲ ನಯನ ಮರಾಳ ಧ್ವಜರೊಳ ಗಾವನೊ ಇವ ಪೇಳುವದು ಕೀಲಾಲಜಾಂಬಕಿ2 ನಾರಿ ಮಾತನಾಡಿಸೇ ಇವನ ಮನ ಮೋಹದವರನ ಕಮನೀಯ ಗುಣಯುತನ ವಾರಿಜಾಸನ ಮುಖ್ಯ ಸುರಪರಿವಾರ ಸೇವಿಯ ಕೊಳುವ ಕಾರ್ಪರನಾರಸಿಂಹನೆ ಪವಡಿಸಿಹನೆ 3
--------------
ಕಾರ್ಪರ ನರಹರಿದಾಸರು