ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರುತೀಯ ತಾರೆ ಶ್ರೀಹರಿಗೆ ಸುರಸಾರ್ವಭೌಮಗೆ ಪ ಬೇಗನೆ ಸಾರಸಾಂಬಕಿಅ.ಪ ಮಾರಜನಕಗೆ ವಾರಿಜಭವ ಕು- ಮಾರ ಜನಕ ಮುಖಾಮರೇಡ್ಯಗೆ ಚಾಪ ಮುರಿದ ಸುಕು- ಮಾರ ಶರೀರ ಸೀತಾರಾಮ ಚಂದ್ರಗೆ 1 ಇಂದಿರವರಗೆ ಮಂದರಧರ ಪು- ರಂದರಾನುಜ ಸಿಂಧುಶಯನಗೆ ಮಂದಯಾನೆ ಛಂದದಿಂದ ಬಂದೀಗ ವಂದೀಶ್ಯಾನಂದಾದಿ ಬೆಳಗಲು 2 ವಾರಣಭಯ ನಿವಾರಣ ಜಗ- ತ್ಕಾರಣಗೆ ಸುಖಪೂರ್ಣದೇಹಗೆ ಸೇರಿ ತನ್ನ ಸೇವಿಪರಘ ದೂರ ಕೊಪ್ಪರ ಶ್ರೀ ನಾರಸಿಂಹನಿಗೆ 3
--------------
ಕಾರ್ಪರ ನರಹರಿದಾಸರು
ತ್ರಿವಿಕ್ರಮರಾಯನ ನಂಬಿರೊಭುವನದೊಳ್ ಭಾಗ್ಯವ ತುಂಬಿರೊಸವೆಯದ ಸುಖವ ಮೇಲುಂಬಿರೊ ವಾ-ಸವನ ಮನ್ನಣೆಯ ಕೈಕೊಂಬಿರೊ ಪ. ವಾದಿರಾಜಗೊಲಿದುಬಂದನ ಚೆಲ್ವಸೋದೆಯ ಪುರದಲ್ಲಿ ನಿಂದನಸಾಧಿಸಿ ಖಳರನು ಕೊಂದನ ತನ್ನಸೇರ್ದಜನರ ಬಾಳ್ ಬಾಳೆಂದನ 1 ಕಾಲಿಂದ ಬೊಮ್ಮಾಂಡ ಒಡೆದನ ಪುಣ್ಯ-ಶೀಲೆ ಗಂಗೆಯನು ಪಡೆದನಪಾಲಸಾಗರವನ್ನು ಕಡೆದನ ಶ್ರುತಿ-ಜಾಲ ಗದೆಯಿಂದ ಹೊಡೆದನ 2 ಇಂದಿರಾದೇವಿಯ ಗಂಡನ ಸುರಸಂದೋಹದೊಳು ಪ್ರಚಂಡನಇಂದ್ರಾದಿ ಗಿರಿವಜ್ರದಂಡನ ಮುನಿವೃಂದಾರವಿಂದಮಾರ್ತಾಂಡನ3 ಕಂಬುಕಂಧರ ಮಂಜುಳಗಾತ್ರನವೃಂದಾರಕರಿಗೆ ನೇತ್ರನ ಜಗಕಿಂದೇ ಸುಪವಿತ್ರನ 4 ವನಿತೆಯರರ್ಥಿಯ ಸಲಿಸದೆ ಮನೆಮನೆವಾರ್ತೆಯ ಹಂಬಲಿಸದೆದಿನ ದಿನ ಪಾಪವ ಗಳಿಸದೆ ಅಂತ-ಕನ ಭಟರಿಂದೆಮ್ಮ ಕೊಲಿಸದೆ 5 ಹರಿಭಕುತರೊಳೆಂದೆಂದಾಡಿರೊ ನರ-ಹರಿಯ ನಾಮಗಳನು ಪಾಡಿರೊಹರಿಯರ್ಚನೆಯನು ಮಾಡಿರೊ ಶ್ರೀ-ಹರಿಯ ಮೂರುತಿಯ ನೋಡಿರೊ 6 ದೂರಕ್ಕೆ ದೂರನು ದಾವನ ಹ-ತ್ತಿರ ಬಂದ ಭಕುತರ ಕಾವನ ಆರಾಧಿಸಲು ಫಲವೀವನ ಹ-ತ್ತಿರ ಸೇರುವ ಭಾವ ದಾವನ 7 ಕಾಮದೇವನ ಪೆತ್ತ ಕರುಣಿಯ ಸುತ್ತಸೇವಿಪರಘತಮ ತರಣಿಯ- - - - - - - - - - - - - - - - - - - -8 ಜಯಿಸಿ ಕಂಸನೆಂಬ ಮಾವನ ಭಯವಿತ್ತು ಭಕುತ ಸಂಜೀವನಹಯವದನನಾಗಿ ಪಾವನ ಶ್ರು-ತಿಯ ತಂದ ದೇವರದೇವನ 9
--------------
ವಾದಿರಾಜ
ಬಾಳು ಬಾಳು ಹರಿ ಪೂಜಾಲೋಲುಪÁಳೊ ಬಾಳೊ ಮುನಿವಾದಿರಾಜಬಾಳೆಂದಕ್ಷತಿನಿಟ್ಟು ದೇವಕ್ಕಳೆಲ್ಲಬಲು ಕೃಪೆಯಲಿ ಹರಸಿದರೊಪ. ಮಕ್ಕಳ ಮ್ಯಾಲೆಂದೆಂದು ಬಲುಅಕ್ಕರುಳ್ಳ ತಾಯಿ ಬಳಗಅಕ್ಷತಿನಿಕ್ಕಿ ಹರಸುವಂದದಿ ದೇ-ವಕ್ಕಳೆನ್ನ ಹರಸಿದರೊ 1 ಸಾಲಿಗ್ರಾಮ ತೀರ್ಥವನು ಮ್ಯಾಲೆಫಲವೀವ ಕ್ಷೇತ್ರವನುಕಾಲಕಾಲದಿ ಹರಿಸ್ಮರಣೆಯ ಬಿಡದಿರುಕೀಳು ಭವವೆಂಬ ಶತ್ರುವನು 2 ತುಲಸಿ ಪದ್ಮಾಕ್ಷಿಯ ಸರವ ನಿನ್ನಕೊರಳ ರವದಲ್ಲಿ ಮೆರೆವಅಲಸದೆ ಹರಿವಾಸರವನೆ ಬಿಡದಿರುಸುಲಭದಿ ಹರಿ ನಿನ್ನ ಪೊರೆವ 3 ಭ್ರಾಮಕರೊಡನಾಡದಿರು ಕಂಡಕಾಮಿನಿಯರ ಕೂಡದಿರುನೇಮನಿಷ್ಠೆಗಳನ್ನು ಬಿಡದಿರು ಎಂದೆಂದುತಾಮಸನಾಗಿ ಕೆಡದಿರು 4 ಹಯವದನಗೆ ನಮಿಸುತಿರು ನಿ-ರ್ಣಯದ ಶ್ರುತಿಯಸೇವಿಸುತಿರುಪ್ರಿಯ ಪುರಾಣಗಳ ಕೇಳುತಿರು ನಿ-ರ್ಭಯದಿಂದವನ ಪೊಗಳುತಿರು 5 ಹರಿಭಕುತರೊಳೆಂದೆಂದಾಡಿರೊ ನರ-ಹರಿಯ ನಾಮಗಳನು ಪಾಡಿರೊ ಹರಿ ಅರ್ಚನೆಯನು ಮಾಡಿರೊ ಶ್ರೀಹರಿಯ ಮೂರುತಿಯನು ನೋಡಿರೊ 6 ದೂರಕ್ಕೆ ದೂರನು ದಾವನ ಹ-ತ್ತಿರ ಬಂದ ಭಕುತರ ಕಾವನಆರಾಧಿಸಲು ಫಲವೀವನ ಹ-ತ್ತಿರ ಸೇರುವ ಭಾವ ದಾವನ 7 ಕಾಮದೇವನ ಪೆತ್ತ ಕರುಣಿಯ ಸುತ್ತಸೇವಿಪರಘತಮ ತರಣಿಯ- - - - - - - - - - -- - - - - - - - - - -8 ಜಯಿಸಿ ಕಂಸನೆಂಬ ಮಾವನ ಆಶಯವಿತ್ತು ಭಕುತ ಸಂಜೀವನಹಯವದನನಾಗಿ ಪಾವನ ಶ್ರು-ತಿಯ ತಂದ ದೇವರದೇವನ9
--------------
ವಾದಿರಾಜ
ಶ್ರೀ ರಘುದಾಂತರ ಚಾರುಚರಣಗಳು ಸೇವಿಪರಘಗಳನು ದೊರಗೈಸಿ ಕೃತಕೃತ್ಯನಾದೆನಾನು ಭವಭಯವೆನಗೇನು ಪ ಹೇಸಿಭವದಿ ಸುಖಲೇಶಕಾಣದಿರಲು ಬೇಸರವಾಗಲು ದೇಶ ದೇಶದೋಳು ಬರುಪರಿಯರಿತಿರುಗಿ ಚರಿಸಿ ತೋಷಬಡದೆ ಭವ ಬಂಧ ಕಡಿದೆ 1 ಹೀನಜನರ ಸಂಸರ್ಗದೋಷವನು ಕಲಿಮಲ ಕಲುಷವನು ದಹಿಪವು ಬಿಡು ಭ್ರಾಂತಿ ನಾನಾತೀರ್ಥ ಕ್ಷೇತ್ರ ಯಾತ್ರೆಫಲವು ಒದಗಿಸಿಕೊಡುತಿಹವು ಗುರುಗಳ ಪದಯುಗವು 2 ಗುರುಪದರಜದ ಮಹಿಮೆಯ ಪರಿಮಿತವು ವರ್ಣಿಸಲಸದಳವು ಶಿರದಿ ಧರಿಸೆಸಾರಿಸಕುಲಪಾವನವು ಎನಿಪುದು ನಿಶ್ಚಯವು ಶರೀರಕೆ ಲೇಪಿಸೆ ಸಕಲವ್ಯಾಧಿ ಭಯವು ಪರಿಹರವಾಗುವವು ನಿರುತಸೇವಿಸೆ ಮುಕುತಿಯೆ ಕರಗತವು ಅಹುದು ಶಾಶ್ವತವು 3 ತಿಳಿ ಮನಸಿಗೆ ತಂದು ಈ ನುಡಿ ಸಿದ್ಧಾಂತ ಕರುಣಿಪ ಕೈಬಿಡದೆ ಮನದಲಿ ಪೊಳೆಯುವನು 4 ಸಂತತ ಲಭಿಸುವವು ಪರಿಶುದ್ಧ ಭಕುತಿಯು ಬಡದಿರು ಸಂಶಯವ ಬಹುದುಃಖವ ಬಡುವ5
--------------
ವರದೇಶವಿಠಲ
ಶ್ರೀ ಶ್ರೀನಿವಾಸ ಭಕುತರ ಪೋಷ ಮಾಂ ಪಾಹಿ ಸುರೇಶ ಪ ಆರಾಧಕ ಪರಿವಾರವ ಪೊರೆಯಲು ಧಾರುಣಿಯೊಳು ಶಿರಿವಾರನಿವಾಸ ಅ.ಪ ವಾರಿಜೋದ್ಭವ ಮುಖಸುರ ಸಂಶೇವ್ಯಫಣಿ ರಾಜ ಸುಶಯ್ಯಾ ಸೇರಿಸೇವಿಪರಘ ತಿಮಿರಕೆ ಸೂರ್ಯ ನೀರದ ನಿಭಕಾಯ ಧಾರುಣಿ ಸುರಪರಿ ಗುರುಮೂರುತಿ ಪ್ರಿಯ 1 ಕಂದರ್ಪನಯ್ಯ ಕವಿಜನಗೇಯ ಬಂಧುರ ಶುಭನಿಲಯ ನಂದನಂದನ ಮಾಮುದ್ಧರ ಕೃಪಯಾನಾಮುಗಿವೆನು ಕೈಯ್ಯಾ ಇಂದಿಗೂ ಬುಧ ಜನರಿಂದ ವೈಭವದಿ ಸ್ಯಂದನವೇರಿದ ಸುಂದರಕಾಯಾ 2 ಇಳಿದೇವಾರ್ಪಿತ ಶ್ರೀ ತುಳಸಿಯ ಹಾರ ಪೀತಾಂಬರಧಾರ ಕುಂಡಲ ಮುಕುಟಾಲಂಕಾರ ಭೂಷಿತ ಶರೀರಾ ಜಲಧಿ ಶಯನ ಮಂಗಳ ರೂಪನೆಭವ ಕಲುಷ ವಿದೂರ 3 ಕೃಷ್ಣರಾಯಾನೆಂಬುವ ಸದ್ಭಕ್ತ ಇರುತಿರಲು ವಿರಕ್ತ ಸಾಷ್ಟಾಂಗ ನಮಸ್ಕøತಿ ಸೇವಾಸಕ್ತ ಗ್ರಾಮವ ರಕ್ಷಿಸುತ ನಿಷ್ಠೆಯಿಂದ ಮನಮುಟ್ಟಿ ಭಜಿಸುತಿರೆ ಥಟ್ಟನೆ ವಲಿದಖಿ ಲೇಷ್ಟ ಪ್ರದಾತಾ 4 ದೇಶಾದಾಗತ ಭಕುತರ ಅಭಿಲಾಷಾ ಪೂರೈಸಲು ಅನಿಶಾ ವಾಸಾ ಮಾಡಿದಿ ಗಿರಿಯೊಳು ಸರ್ವೇಶ ಕೊಡು ಸತ್ಸಹವಾಸ ದೇಶದಿ ಕಾರ್ಪರವಾಸ ಲಕ್ಷ್ಮಿನರಕೇಸರಿ ರೂಪನೆ ಶೇಷಗಿರೀಶ5
--------------
ಕಾರ್ಪರ ನರಹರಿದಾಸರು
ಸಂತಿಯ ಕೆಲವುರ ವಾಸನ ಸ್ತೋತ್ರ (ಲಿಂಗಸುಗೂರಿನ ಹತ್ತಿರವಿರುವ ಸಂತಿಕೆಲೂರ ಗ್ರಾಮದಲ್ಲಿಯ ಪ್ರಾಣದೇವರು) ಸಂತಿಯ ಕೆಲವುರವಾಸ ಭಾರತಿ |ಕಾಂತನು ಶ್ರೀ ಹರಿದಾಸಾ ||ಸಂತಸ ಸೇವಿಪರಘ ಓಡಿಸಿ | ನೀ |ಶ್ಚಿಂತರಮಾಡಿ ಪೊರೆವ ದಯಾಳೋ ಪ ದಾಶರಥಿಯ ಪದಕೆರಗೀ | ನಿಂದುಲೇಸಾಗಿ ತುತಿಸುವ ಯೋಗೀ ||ಸಾಸಿರ ನಾಮನ ರಾಣಿಯಕಂಡು |ತೋಷದಿ ಸ್ವಾಮಿಗೆ ವಾರ್ತಿಯ ಪೇಳಿದ 1 ಕುಂಚಿ ಕುಮಾರಕ ನೆನಸೀ | ಮಹಹಂತ ಕೌರವರನೊರಸೀ ||ಕಾಂತಿಗೆ ಸೌಗಂಧಿಕ ಪುಷ್ಪವ ಮುಡಿಸಿ | ಶ್ರೀಕಾಂತನ ಪ್ರಿಯ ಭೂಭಾರವನಿಳುಹಿದ 2 ಆನಂದ ತೀರಥರಾಗಿ | ಪರಮಾನಂದದಿ ಕುಮತವನೀಗಿ ||ನಂದನ ಸುತ ಶ್ರೀಶ ಪ್ರಾಣೇಶ ವಿಠಲಾ |ನಂದನೆ ಪರನೆಂದು ಡಂಗುರ ಸಾರಿದ 3
--------------
ಶ್ರೀಶಪ್ರಾಣೇಶವಿಠಲರು